Breaking News

ಬೆಳಗಾವಿ

ವ್ಯಾಯಾಮ ಪರೀಕರ ವಿತರಣೆ ಸನ್ಮಾನ್ಯ ಶ್ರೀ ರಮೇಶ ಅಣ್ಣಾ ಜಾರಕಿಹೊಳಿ

ಮನುಷ್ಯ ಆರೋಗ್ಯಯುತವಾಗಿದ್ದಾಗ ಮಾತ್ರ ಸಮಾಜ ಸ್ವಾಸ್ಥ್ಯವಾಗಿರುತ್ತದೆ. ಆದ್ದರಿಂದ ಯುವಕರು ಯೋಗ, ವ್ಯಾಯಾಮ, ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಅವರು ಕರೆ ನೀಡಿದರು. https://youtu.be/-mjImckkvpc     ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಗೋಕಾಕ್ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ವ್ಯಾಯಾಮ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಆರೋಗ್ಯವಂತ ಸಮಾಜವಿದ್ದರೆ ಮಾತ್ರ ದೇಶ ಅಭಿವೃದ್ಧಿ ಆಗುತ್ತದೆ. ಇದನ್ನು ಗಮನಿಸಿಯೇ ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವಕ್ಕೇ ಪರಿಚಯಿಸಿದ್ದಾರೆ. ಸಾಂಕ್ರಾಮಿಕ ಕೋವಿಡ್ …

Read More »

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 15 ಸ್ಥಾನಗಳಿಗೆ ಕತ್ತಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆ

ಬೆಳಗಾವಿ : ಹುಕ್ಕೇರಿ ತಾಲ್ಲೂಕಿನ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 15 ಸ್ಥಾನಗಳಿಗೆ ಕತ್ತಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿದ್ದಾರೆ.  ರಾಜಕೀಯ ಜಟಾಪಟಿ ಸಾಕ್ಷಿಯಾಗಿದ್ದ ಹುಕ್ಕೇರಿ ತಾಲ್ಲೂಕು ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಕಳೆದ ಎರಡು ದಶಕದಿಂದ ಕತ್ತಿ ಸಹೋದರರ ತಂಡ ಗೆಲುವು ಸಾಧಿಸುತ್ತಾ ಬಂದಿದೆ. ಈ ಬಾರಿಯೂ ಸಹ ಶಾಸಕ ಉಮೇಶ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ  …

Read More »

ಕೊರೋನಾ ವಾರಿಯರ್ಸ್‍ಗಳಿಗೆ ಪ್ರೋತ್ಸಾಹಧನ ಮತ್ತು ಅಧಿಕಾರಿಗಳಿಗೆ ಸ್ಮಾರ್ಟಫೋನ್ ಗಿಫ್ಟ್ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಕೊರೋನಾ ವಾರಿಯರ್ಸ್‍ಗಳಿಗೆ ಪ್ರೋತ್ಸಾಹಧನ ಮತ್ತು ಅಧಿಕಾರಿಗಳಿಗೆ ಸ್ಮಾರ್ಟಫೋನ್ ಗಿಫ್ಟ್ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಮತ್ತು ಗೋಕಾಕ ತಾಲೂಕುಗಳ ಅರಭಾವಿ ಮತಕ್ಷೇತ್ರದ ಕೊರೋನಾ ವಾರಿಯರ್ಸ್‍ಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ. ಗೋಕಾಕ : ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಹಗಲಿರುಳು ಜೀವದ ಹಂಗು ತೊರೆದು ರಾಜ್ಯದಲ್ಲೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉಭಯ ತಾಲೂಕುಗಳ ಕೊರೋನಾ ವಾರಿಯರ್ಸ್ ಅವರಿಗೆ ಕೋಟಿ ಕೋಟಿ ವಂದನೆಗಳನ್ನು ಸಲ್ಲಿಸುವುದಾಗಿ ಶಾಸಕ ಹಾಗೂ …

Read More »

ಕಾಂಗ್ರೆಸ್ ಭವನ ಕ್ಯಾಂಟಿನ್ ನನ್ನು ಶಾಸಕ ಸತೀಶ ಜಾರಕಿಹೊಳಿ ಇಂದು ಉದ್ಘಾಟಿಸಿದರು.

ಬೆಳಗಾವಿ: ಇಲ್ಲಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಂಗ್ರೆಸ್ ಭವನ ಕ್ಯಾಂಟಿನ್ ನನ್ನು ಶಾಸಕ ಸತೀಶ ಜಾರಕಿಹೊಳಿ ಇಂದು ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಮೂರು ಉದ್ದೇಶದಿಂದ ಕಾಂಗ್ರೆಸ್ ಕಚೇರಿಯಲ್ಲಿ ಕ್ಯಾಂಟಿನ್ ತೆರೆ ಯಲಾಗಿದೆ. ಸಾಮಾನ್ಯ ಜನರು, ಕಾರ್ಯಕರ್ತರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ಹಾಗೂ ಕಾಂಗ್ರೆಸ್ ಮಹಾನ್ ನಾಯಕರ ಇತಿಹಾಸ ತಿಳಿಸಿಕೊಡುವ ಉದ್ದೇಶದಿಂದ ಕ್ಯಾಂಟಿನ್ ತೆರೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ …

Read More »

ರೈತರ ಶ್ರೇಯೋಭಿವೃದ್ಧಿಗೆ ಅನುದಾನ ಒದಗಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ ರೈತರ ಶ್ರೇಯೋಭಿವೃದ್ಧಿಗೆ ಅನುದಾನ ಒದಗಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ಹಿಂಗಾರು ಹಂಗಾಮಿಗೆ ನೀಡಲಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು. ‘ಸಕಾಲದಲ್ಲಿ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಯಂತ್ರೋಪಕರಣಗಳನ್ನು ನೀಡಲಾಗುತ್ತಿದ್ದು ರೈತರು ಸದ್ಬಳಕೆ ಮಾಡಿಕೊಂಡು, ಆರ್ಥಿಕ …

Read More »

ಅಕ್ಟೋಬರ್ 31 ರಂದು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸರಳ ಮತ್ತು ಅರ್ಥಪೂರ್ಣವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ  ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 31 ರಂದು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸರಳ ಮತ್ತು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಅವರು ತಿಳಿಸಿದರು. ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಷಿ ವಾಲ್ಮೀಕಿ  ಜಯಂತಿಯ ದಿನದಂದು ಕಿಲ್ಲಾಕೋಟೆ ಬಳಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, …

Read More »

ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ  ವಾಲ್ಮೀಕಿ ಮಹರ್ಷಿ ಮೂರ್ತಿ ಆದಷ್ಟು ಬೇಗ ಎರಡು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದು

ಬೆಳಗಾವಿ: ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ  ವಾಲ್ಮೀಕಿ ಮಹರ್ಷಿ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಸತೀಶ್ ಜಾರಕಿಹೊಳಿ ಶನಿವಾರ  ಅಡಿಗಲ್ಲು ಕಾರ್ಯಕ್ರಮವನ್ನು ನೆರವೇಸಿದರು. ಶಿವಾಜಿ ಪ್ರತಿಮೆ ಸ್ಥಾಪನೆ ವಿವಾದಕ್ಕೆ ಇಡಾಗಿದ್ದ ಮಣಗುತ್ತಿ ಗ್ರಾಮದಲ್ಲಿ,  ಮೂರು ಗ್ರಾಮಗಳ ಗ್ರಾಮಸ್ಥರ ಮುಖಂಡರೊಂದಿಗೆ ಚರ್ಚಿಸಿ, ಒಮ್ಮತ ಅಭಿಪ್ರಾಯದಿಂದ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಸಮಾರಂಭವನ್ನು ನಡೆಯಿತು. ಇದೇ ವೇಳೆ  ಮಾತನಾಡಿದ ಅವರು, ಗ್ರಾಮದ ಹಿತದೃಷ್ಟಿಯಿಂದ  ಧರ್ಮದಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲರೂ ಗ್ರಾಮದ ಅಭಿವೃದ್ಧಿಗೆ …

Read More »

ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದು: ರಕ್ಷಣಾ ವೇದಿಕೆಯ ಪ್ರತಿಭಟನೆ

ಗೋಕಾಕ : ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಆಚರಿಸುವ ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ, ಸರ್ಕಾರ, ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಗಡಿ ಜಿಲ್ಲೆ ಬೆಳಗಾವಿಯಲ್ಲಿಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಜಿಲ್ಲಾಡಳಿ ಸರಳ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಿದೆ. ಇದು ಕನ್ನಡಿಗರ ಸಂತೋಷದ ವಿಷಯವಾಗಿದೆ.  ಜಿಲ್ಲೆಯಲ್ಲಿ ಎಂಇಎಸ್ …

Read More »

ಅಥಣಿ ತಾಲ್ಲೂಕಿನ ಸತ್ತಿ ಹೊರವಲಯದಲ್ಲಿ ಅಬಕಾರಿ ದಾಳಿ 1.31 ಕೆ ಜಿ ಗಾಂಜಾ ವಶ ಒಬ್ಬನ ಬಂಧನ

    ಅಥಣಿ ತಾಲೂಕಿನ ಸತ್ತಿ ಗ್ರಾಮದ ದೇವಪ್ಪ ಈರಪ್ಪ ರುದ್ರಗೌಡರ ಇವರ ಸ್ವಂತ   ಜಮೀನಿನಲ್ಲಿ ದಿನಾಂಕ : 17-10-2020 ರಂದು ಸ್ವಂತ ಲಾಭಕ್ಕಾಗಿ ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದ ಬಗ್ಗೆ ಬಂದ ಖಚಿತ ಮಾಹಿತಿ  ಮೇರೆಗೆ ಡಾ : ವೈ ಮಂಜುನಾಥ ಅಬಕಾರಿ ಜಂಟಿ ಆಯುಕ್ತರು , ಬೆಳಗಾವಿ ವಿಭಾಗ ರವರ ಮಾರ್ಗದರ್ಶನದಲ್ಲಿ ಕೆ ಅರುಣಕುಮಾರ ಅಬಕಾರಿ ಉಪ ಆಯುಕ್ತರು ಬೆಳಗಾವಿ ಉತ್ತರ ಜಿಲ್ಲೆ …

Read More »

ಯಲ್ಲಮ್ಮನ ದರ್ಶನಕ್ಕೆ200 ರೂಪಾಯಿ ನೀಡಲು ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಳಗಾವಿ: ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ಭಕ್ತರ ಬಳಿ ಮಧ್ಯವರ್ತಿಗಳು 200 ರೂಪಾಯಿ ನೀಡಲು ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಚ್ಚರಿಯ ಸಂಗತಿಯೆಂದರೆ ಇದೆಲ್ಲಾ ಲಂಚಾವತಾರಗಳು ಪೊಲೀಸರ ಎದರೇ ನಡೆಯುತ್ತಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ಕೊರೊನಾ ಹಿನ್ನೆಲೆಯಲ್ಲಿ ಅಕ್ಟೋಬರ್ 31ರವರೆಗೆ ಮುಚ್ಚಲಾಗಿದೆ. ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಸವದತ್ತಿ ಮತ್ತು ಜೋಗುಳಬಾವಿಯಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು ಪೊಲೀಸರನ್ನು ಸಹ …

Read More »