ಬೆಂಗಳೂರು – ಕರ್ನಾಟಕ ವಿಧಾನಸಭೆಯ ಎಸ್ಟಿಮೇಟ್ ಕಮಿಟಿ (ಅಂದಾಜುಗಳ ಸಮಿತಿ) ಅಧ್ಯಕ್ಷರನ್ನಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನೇಮಕಮಾಡಲಾಗಿದೆ. ಒಟ್ಟೂ 17 ಜನರ ಸಮಿತಿಯನ್ನು ನೇಮಕ ಮಾಡಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ. ಎಸ್.ಎ.ರವೀಂದ್ರನಾಥ, ದುರ್ಯೋಧನ ಐಹೊಳೆ, ವೀರಣ್ಣ ಚರಂತಿಮಠ, ಶಿವರಾಜ ಪಾಟೀಲ, ಹಾಲಪ್ಪ ಆಚಾರ, ಅಮೃತ ದೇಸಾಯಿ, ಮಹಾಂತೇಶ ದೊಡ್ಡಗೌಡರ್, ಸುನೀಲ ನಾಯ್ಕ, ಅಮರೇಗೌಡ ಬಯ್ಯಾಪುರ, ಶರಣ ಬಸಪ್ಪ ದರ್ಶನಾಪುರ, …
Read More »ಚಿನ್ನ ಕಳವು ಮಾಡಿದವನೂ, ಅದನ್ನು ಖರೀದಿವನೂ, ಅರೆಸ್ಟ್….
ಬೆಳಗಾವಿ- ಖಾನಾಪೂರ ಪೋಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ಚಿನ್ನ ಕಳ್ಳತನ ಮಾಡಿದವನನ್ನು,ಜೊತೆಗೆ ಕಳವು ಮಾಡಿದ ಚಿನ್ನವನ್ನು ಖರೀಧಿ ಮಾಡಿದ ಜ್ಯುವಲರಿ ವ್ಯಾಪಾರಿ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಚಿನ್ನದ ಆಭರಣ ಕದ್ದು ಅದನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ ಅವನ ಬಳಿಯಿದ್ದ 26,5300 ಮೌಲ್ಯದ ಚಿನ್ನಾಭರಣಗಳು ವಶಪಡಿಸಿಕೊಂಡಿದ್ದಾರೆ ಕಳ್ಳತನ ಆರೋಪಿಗೆ ಸಹಾಯ ಮಾಡಿದ್ದ ಕಳುವಾದ ಚಿನ್ನವನ್ನು ಖರೀಧಿ ಮಾಡಿದ್ದ ಜ್ಯುವೆಲರಿ ಶಾಪ್ ಮಾಲೀಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಳಗಾವಿಯ ವಡಗಾಂವ ಗಲ್ಲಿಯ …
Read More »ವೀರಶೈವ ಮಹಾಸಭಾ ಯುವ ಘಟಕಕ್ಕೆ ಸುರೇಶ ಅಂಗಡಿ ಅಣ್ಣನ ಮಗ
ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಸಹೋದರ ಹಾಗೂ ಬಿಜೆಪಿ ಮುಖಂಡ ಮೋಹನ ಅಂಗಡಿ ಅವರ ಪುತ್ರ ಚೇತನ ಅಂಗಡಿ ಅವರನ್ನು ನೇಮಕಗೊಳಿಸಲಾಗಿದೆ ಎಂದು ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ವೀರಶೈವ ಬಾಂಧವರನ್ನು ಅದರಲ್ಲೂ ಮುಖ್ಯವಾಗಿ ಸಮಾಜದ ಯುವ ಪೀಳಿಗೆಯನ್ನು ಒಗ್ಗೂಡಿಸುವುದು, ಅವರಿಗೆ …
Read More »ಭಾರತೀಯ ಜನತಾಪಾರ್ಟಿ ರಾಜ್ಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ನಡೆಯಲಿದೆ.
ಬೆಳಗಾವಿ – ಭಾರತೀಯ ಜನತಾಪಾರ್ಟಿ ರಾಜ್ಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ನಡೆಯಲಿದೆ. ಅಂದು ಇಡೀ ದಿನ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರತಿ 3 ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆ ನಡೆಯಬೇಕು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಸಭೆ ನಡೆದಿರಲಿಲ್ಲ. ಕಳೆದ ವಾರ ಮಂಗಳೂರಿನಲ್ಲಿ ಸಭೆ ನಡೆದಿತ್ತು. ಬೆಳಗಾವಿ ಲೋಕಸಭಾ ಉಪಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕಾರಿಣಿ ಬೆಳಗಾವಿಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಲೋಕಸಭಾ ಚುನಾವಣೆ ಪೂರ್ವತಯಾರಿಯ ಭಾಗವಾಗಿ …
Read More »ಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳ ಮುನ್ನಡೆ:ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳ ಮುನ್ನಡೆಯನ್ನು ದೊರಕಿಸಿಕೊಡುವುದಾಗಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು ಸೋಮವಾರ ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ‍್ಸ್ ಸಭಾ ಭವನದಲ್ಲಿ ಅರಭಾವಿ ಮಂಡಲದಿಂದ ನಡೆಯುತ್ತಿರುವ ಪ್ರಶಿಕ್ಷಣ ವರ್ಗ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನೀಡಿರುವ ಮುನ್ನಡೆಗಿಂತ …
Read More »ವಿದ್ಯುತ್ ಕದ್ದಾಲಿಕೆ ಆರೋಪ1. 51 ಲಕ್ಷ ರೂ. ದಂಡ:ಹೆಸ್ಕಾಂ ಇನ್ಸಪೆಕ್ಟರ್ ಟಿ.ಬಿ.ನೀಲಗಾರ
ಬೆಳಗಾವಿ: ವಿದ್ಯುತ್ ಕದ್ದಾಲಿಕೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ವರಿಗೆ ಹೆಸ್ಕಾಂ ಅಧಿಕಾರಿಗಳು 1. 51 ಲಕ್ಷ ರೂ. ದಂಡ ವಿಧಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಸಾನಿಕೊಪ್ಪ ಗ್ರಾಮದ ಅಶೋಕ ಟೊಲ್ ನಾಕಾ ಎಂಬುವವರ ಹೆಸ್ಕಾಂ ಅಧಿಕಾರಿಗಳು ನ. 2 ದಾಳಿ ನಡೆಸಿದ್ದರು. ದಾಳಿ ವೇಲೆ ವಿದ್ಯುತ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗೆ 1,51,200 ರೂ. ಗಳ ದಂಡ ವಿಧಿಸಿದ್ದಾರೆ. ಎಇಇ ಎ. ಆಯ್.ನೀರಲಕಟ್ಟಿ, ಹೆಸ್ಕಾಂ ಇನ್ಸಪೆಕ್ಟರ್ ಟಿ.ಬಿ.ನೀಲಗಾರ ನೇತೃತ್ವದ ತಂಡ …
Read More »ನವ್ಹೆಂಬರ್ 14 ರಂದು ಡಿಸಿಸಿ ಬ್ಯಾಂಕ್ ಅದ್ಯಕ್ಚ ಉಪಾದ್ಯಕ್ಷರ ಚುನಾವಣೆ….
ಬೆಳಗಾವಿ – ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆ ಮುಗಿದಿದ್ದು,ನವ್ಹೆಂಬರ್ 14 ರಂದು ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನವ್ಹೆಂಬರ್ 14 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು ಮದ್ಯಾಹ್ನ 3-00 ಗಂಟೆಗೆ ನಿರ್ದೇಶಕ ಮಂಡಳಿಯ ಸಭೆ ಆರಂಭವಾಗಲಿದ್ದು,ನಾಮ ಪತ್ರ ವಾಪಸ್ ಪಡೆಯಲು 30 ನಿಮಿಷ ಕಾಲಾವಕಾಶ ನೀಡಿದ ಬಳಿಕ ಚುನಾವಣೆ ನಡೆಯಲಿದೆ. ಹಾಲಿ ಅದ್ಯಕ್ಷ ರಮೇಶ್ ಕತ್ತಿ …
Read More »ಬೆಂಗಳೂರಿನಲ್ಲಿ ತಿಂಗಳು ಕಾಲ ಫಲಾನುಭವಿಗಳ ವಸತಿ ಸೌಕರ್ಯಕ್ಕಾಗಿ ಸತತವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್: ಬಾಲಚಂದ್ರ ಜಾರಕಿಹೊಳಿದ
ಗೋಕಾಕ : 2019ರ ಅಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಮನೆಗಳು ಸಂಪೂರ್ಣ ಕುಸಿತಗೊಂಡಿದ್ದು, ಅಂತಹ ಮನೆಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಹೈಡ್/ಡೆಲಿಟ್ ಆದ ಫಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಪರಿಹಾರವನ್ನು ದೊರಕಿಸಿಕೊಡಲು ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆಂದು ಜಿಪಂ ಸದಸ್ಯ ಗೋವಿಂದ ಕೊಪ್ಪದ ತಿಳಿಸಿದರು. ಈ ಬಗ್ಗೆ ರವಿವಾರ ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ …
Read More »ಗೋಕಾಕ ನಗರ ಠಾಣೆ ಗೆ ನೂತನ P.S.I. ಆಗಮನ ಮಾಧ್ಯಮ ಮಿತ್ರ ಹಾಗೂ C.P.I.ಅವರಿಂದ ಸನ್ಮಾನ
ಗೋಕಾಕ ನಗರ ಠಾಣೆಗೆ ನೂತನವಾಗಿ ಆಗಮಿಸಿದP.S.I. K.B. ವಾಲಿಕರ ಅವರನ್ನ ನಗರ ಠಾಣೆಯ C.P.I. ಗೋಪಾಲ ರಾಠೋಡ ಅವರು ಇಂದು ಹೂ ಗುಚ್ಛ ನೀಡಿ ಸ್ವಾಗತ ಕೋರಿದರು. ಅದೇರೀತಿ ಮಾಧ್ಯಮ ಮಿತ್ರರು ಕೂಡ ನೂತನವಾಗಿ ಆಗಮಿಸಿದ ಕೆ. ಬಿ . ವಾಲಿಕರ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಸನ್ಮಾನಿಸಿ ಅಭಿನಂದಿಸಿದರು. ಗೋಕಾಕ ನಗರದಲ್ಲಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಇವರು ಯಶಸ್ವಿ ಯಾಗಲಿ ಎಂದು ಇವರ …
Read More »ಬಿಜಗುಪ್ಪಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿ ಭಗ್ನವಾಗಿದೆ.
ರಾಮದುರ್ಗ– ಬಿಜಗುಪ್ಪಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿ ಮೂರ್ತಿ ಭಗ್ನವಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಬಸವಣ್ಣನವರ ಮೂರ್ತಿಯ ಕೈಯನ್ನು ಕಿಡಿಗೇಡಿಗಳು ಮುರಿದಿದ್ದಾರೆ. ಸುದ್ದಿ ತಿಳಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿ ಪರಿಶೀಲಿಸಿದರು. ಒಂದು ವಾರದ ಒಳಗಾಗಿ ಆರೋಪಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಒಂದು …
Read More »