Breaking News

ಬೆಳಗಾವಿ

ರಮೇಶ್ ಜಾರಕಿಹೊಳಿ ಅವರ ಸವಾಲಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿರುಗೇಟು

ಬೆಳಗಾವಿ: ಮಹದಾಯಿ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾನೂನುಬಾಹಿರವಾಗಿ ನಡೆದುಕೊಂಡಿಲ್ಲ ಎಂಬ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸವಾಲಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿರುಗೇಟು ನೀಡಿದ್ದಾರೆ. ಮಹದಾಯಿ ಯೋಜನೆ ವಿಚಾರದಲ್ಲಿ ಕರ್ನಾಟಕ ಕಾನೂನು ಬಾಹಿರವಾಗಿ ನಡೆದುಕೊಂಡಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದೂರಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಗೋವಾ ಸಿಎಂ, ಮಹದಾಯಿ ಪ್ರದೇಶದಲ್ಲಿ ಕರ್ನಾಟಕ ಸರ್ಕಾರ ಕಾಮಗಾರಿ ಆರಂಭಿಸಿದ ಬಗ್ಗೆ …

Read More »

ರಾಜ್ಯದ ಹಿತದಿಂದ ಈ ಕುರಿತು ಮಾಧ್ಯಮಗಳಲ್ಲಿ ಮಾತನಾಡುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ : ಮಹದಾಯಿ ವಿಚಾರದಲ್ಲಿ ಕಾನೂನು ಬದ್ಧವಾಗಿ ನಾವು ನಮ್ಮ ಸರ್ಕಾರ ತಯಾರಿದ್ದು, ನಮ್ಮ ರಾಜ್ಯದ ಹಿತದಿಂದ ಈ ಕುರಿತು ಮಾಧ್ಯಮಗಳಲ್ಲಿ ಮಾತನಾಡುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ರಮೇಶ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.     ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಅವರ ಹೇಳಿಕೆ ಕುರಿತು ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಗೋವಾದವರು ಯಾವುದೇ ರೂಪದಲ್ಲಿ ಬಂದರೂ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ. ಪಾಪ ಅವರಿಗೆ ಅನಿವಾರ್ಯವಿದೆ. …

Read More »

ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದ ಪೊಲೀಸರ ಸೈಕಲ್ ಜಾಥಾ

ಬೆಳಗಾವಿ: ಕೆಎಸ್‍ಆರ್ ಪಿ ಉತ್ಸವದ ಅಂಗವಾಗಿ ಇಂದು ಬೆಳಗಾವಿಯಲ್ಲಿ ಸೈಕಲ್ ಜಾಥಾ ನಡೆಯಿತು. ಹಿರಿಯ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಸೈಕಲ್ ಓಡಿಸಿ ಎಲ್ಲರ ಗಮನ ಸೆಳೆದರು. ಅನೇಕ ಪೊಲೀಸ್ ಅಧಿಕಾರಿಗಳು ಸೈಕಲ್ ಓಡಿಸಿ ಅಲೋಕ್ ಕುಮಾರ್ ಅವರಿಗೆ ಸಾಥ್ ನೀಡಿದರು.   ಇಂದು ಬೆಳಗ್ಗೆ ಬೆಳಗಾವಿಯ ಸುವರ್ಣ ಸೌಧದಿಂದ ಪ್ರಾರಂಭವಾದ ಸೈಕಲ್ ಜಾಥಾ ಬೆಳಗಾವಿಯ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆಯಿತು. ಸೈಕಲ್ ಜಾಥಾದಲ್ಲಿ ಬೆಳಗಾವಿ ಪೊಲೀಸ್ …

Read More »

ನೆಲಸಮಗೊಳಿಸಿರುವ ಬಡವರ ಮನೆ ನಿರ್ಮಿಸಿ ಕೊಡಿ : ಅಶೋಕ ಪೂಜಾರಿ

ಗೋಕಾಕ : ತಾಲ್ಲೂಕಿನ ಧುಪದಾಳ ಗ್ರಾಮದಲ್ಲಿ ನೆಲಸಮ ಮಾಡಿದ ಬಡವರ ಮನೆಗಳನ್ನು ಸರ್ಕಾರದಿಂದ ಶೀಘ್ರದಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧುಪದಾಳ( ನವಿಲಮಾಳ) ಸಮೀಪದಲ್ಲಿರುವ ಸರ್ವೆ ನಂ.173/1ರಲ್ಲಿ 140 ಎಕರೆ ಜಮೀನು ಪಾಳು ಬಿದ್ದಿದೆ. ಈ ಜಾಗದಲ್ಲಿ ವಸತಿ ರಹಿತ ಬಡವರು, ಕೂಲಿ ಕಾರ್ಮಿಕರು , ಗೋಕಾಕ್ ಮಿಲ್ ಕಾರ್ಮಿಕರು ಸುಮಾರು 8 ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದಾರೆ. …

Read More »

ಖಾನಾಪುರ : ಮಗಳ ಗಂಡನನ್ನ ಕೊಚ್ಚಿ ಕೊಲೆಗೈದ ಪಾಪಿ ಮಾವ

ಕಕ್ಕೇರಿ : ಕೌಟುಂಬಿಕ ಕಲಹದಿಂದ ಅಳಿಯನನ್ನ ಕೊಚ್ಚಿ ಕೊಲೆಗೈದಿರುವ ಘಟನೆ ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಬಿಷ್ಟಪ್ಪ ಕೊನಸಕುಂಪಿ(43) ಕೊಲೆಯಾದ ದುರ್ದೈವಿ. ಸೋಮವಾರ ರಾತ್ರಿ ಬಿಷ್ಟಪ್ಪ ತನ್ನ ಹೆಂಡತಿಯ ತಂದೆಯೊಂದಿಗೆ ಜಗಳವಾಡಿದ್ದಾನೆ. ಬಳಿಕ ರಾತ್ರಿ ಭತ್ತದ ರಾಶಿ ಕಾಯಲು ಕಣದಲ್ಲಿ ಹೋಗಿದ್ದಾನೆ. ಈ ವೇಳೆ ಮಾವ ಮಲಗಿದ್ದ ಬಿಷ್ಟಪ್ಪ ನ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಂದು ಹಾಕಿ, ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಹೆಸರು ತಿಳಿದು …

Read More »

ಕಬಡ್ಡಿ ಸ್ಪರ್ಧೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಆಟ : ರಾಹುಲ್ ಜಾರಕಿಹೊಳಿ

ಕಬಡ್ಡಿ ಕ್ರೀಡೆಯನ್ನ ಉಳಿಸುವ ಜವಾಬ್ದಾರಿ ಗ್ರಾಮೀಣ ಪ್ರದೇಶದ ಯುವಕರ ಮೇಲಿದೆ ಸವದತ್ತಿ: ‘ ನಶಿಸಿ ಹೋಗುತ್ತಿರುವ ಕಬಡ್ಡಿ ಕ್ರೀಡೆಯನ್ನ ಮತ್ತೆ ಜನಪ್ರಿಯಗೊಳಿಸುವ ಜವಾಬ್ದಾರಿ ಗ್ರಾಮೀಣ ಪ್ರದೇಶ ಯುವಕರ ಮೇಲಿದೆ’ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಸಿಂದೋಗಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ, ಮಾತನಾಡಿದರು. ‘ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಬೇಕು. ಇದರಿಂದ ನಶಿಸಿ ಹೊಗುತ್ತಿರುವ …

Read More »

ವಿಕಲಚೇತನ ಫಲಾನುಭವಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ  ಮಂಗಳವಾರ ತಮ್ಮ ಕಾರ್ಯಾಲಯದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಿದರು.

ಗೋಕಾಕ : ವಿಕಲಚೇತನ ಫಲಾನುಭವಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ  ಮಂಗಳವಾರ ತಮ್ಮ ಕಾರ್ಯಾಲಯದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಜಿ.ಪಂ ಸದಸ್ಯ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಅರೆನ್ನವರ, ಪೌರಾಯುಕ್ತ ಶಿವಾನಂದ ಹಿರೇಮಠ, ಸದಸ್ಯರುಗಳಾದ ಅಬ್ಬಾಸ ದೇಸಾಯಿ, ಪ್ರಕಾಶ ಮುರಾರಿ, ಸಂತೋಷ ಮಂತ್ರಣವರ , ಸಿದ್ದಪ್ಪ ಹುಚ್ಚರಾಯಪ್ಪಗೋಳ, ಶ್ರೀಶೈಲ ಯಕ್ಕುಂಡಿ, ಮುಖಂಡರುಗಳಾದ ಅಬ್ದುಲವಹಾಬ ಜಮಾದಾರ, ದಾದಾಪೀರ ಶಾಬಾಶಖಾನ, ದುರ್ಗಪ್ಪ ಶಾಸ್ತ್ರಿಗೋಲ್ಲರ, ಬಸವರಾಜ ದೇಶನೂರ, …

Read More »

ಯಾವುದೇ ಕಾರಣಕ್ಕೂ ಮುಂಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ.:ಬಸವರಾಜ ಬೊಮ್ಮಾಯಿ

ಬೆಳಗಾವಿ:  ಯಾವುದೇ ಕಾರಣಕ್ಕೂ ಮುಂಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು  ಸಮರ್ಥ ನಾಯಕರಾಗಿದ್ದು, ಮುಂದಿನ 3 ವರ್ಷದ ಅವರೇ ಸಿಎಂ ಆಗಿರಲಿದ್ದಾರೆ.  ಮುಂದಿನ  ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸುತ್ತೇವೆ ಎಂದು ಹೇಳಿದರು.

Read More »

ಯಲ್ಲಾಮ್ಮ ದೇವಿದರ್ಶನ ಮುಂದಿನ ವರ್ಷ

ಸವದತ್ತಿ: ಬೆಳಗಾವಿ ಜನರ ಆರಾಧ್ಯ ದೇವತೆ ಯಲ್ಲಾಮ್ಮ ದೇವಿ ವರ್ಷದ 12 ತಿಂಗಳು ಈ ದೇವಸ್ಥಾನ ಭಕ್ತರಿಂದ ತುಂಬಿ ಇರುತಿತ್ತು, ಈ ಒಂದು ಯಲಮ್ಮ ದೇವಿಯ ದರ್ಶನ ವನ್ನಾ ಈ ಕ ರೋ ನಾ ಮಹಾಮಾರಿ ಬಂದಾಗಿನಿಂದ ಈ ದೇವಿಯ ದರ್ಶನ ವನ್ನಾ ಎಲ್ಲಾ ಭಕ್ತಾದಿಗಳಿಗೆ ದರ್ಶನ ಭಾಗ್ಯ ವನ್ನಾ ಬಂದ್ ಮಾಡಲಾಗಿದೆ. ಬೆಳಗಾವಿ ಅಷ್ಟೇ ಅಲ್ಲದೆ ಕರ್ನಾಟಕದ ವಿವಿಧ ಭಾಗಗಳಿಂದ , ಹಾಗೂ ಮಹಾರಾಷ್ಟ್ರ ದಿಂದ ಕೂಡ ಈ …

Read More »

ದೇವಸ್ಥಾನ ಜಮೀನು ವಿವಾದ: ಬೆಳಗಾವಿಯಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಸ್ಥಿತಿ ಚಿಂತಾಜನಕ

ಬೆಳಗಾವಿ : ತಾಲ್ಲೂಕಿನ ಗೌಂಡವಾಡ ಗ್ರಾಮದ ಕಾಳಬೈರವನಾಥ್ ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಐದು ಜನರ ಗುಂಪು ಓರ್ವ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಗೌಂಡವಾಡ ಗ್ರಾಮದ ಸತೀಶ್ ಪಾಟೀಲ(34) ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ನಿನ್ನೆ ರಾತ್ರಿ 9.30 ರ ಸುಮಾರಿಗೆ ಬೆಳಗಾವಿ ನಗರದ ಮರಾಠ ಮಂಡಳ ಕಾಲೇಜ್ ಸಮೀಪವಿರುವ ತಮ್ಮ ಅಂಗಡಿಯನ್ನು ಬಂದ್ ಮಾಡಿಕೊಂಡು ಮನೆಗೆ …

Read More »