ಖಾನಾಪುರ : ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕಾರು, ಸಾರಿಗೆ ಸಂಸ್ಥೆ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಾರು ಚಾಲಕ ಮಹಾರಾಷ್ಟ್ರ ಮೂಲದ ಭಿಕಾಜಿ ಸಾವಂತ(46) ಮೃತರು. ತಾಲ್ಲೂಕಿನ ತೋರಾಳಿ ಗ್ರಾಮದ ನಿವಾಸಿ ಪ್ರಕಾಶ ಪಾಟೀಲ ಸೇರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹತ್ತಕ್ಕೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. …
Read More »ಜೈಲಿನಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು, ಪತ್ನಿ, ಪುತ್ರ, ಪುತ್ರಿಯರು ಭೇಟೆ
ಬೆಳಗಾವಿ : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು, ಪತ್ನಿ, ಪುತ್ರ, ಪುತ್ರಿಯರು ಇಂದು ಭೇಟೆಯಾದರು. ಧಾರವಾಡ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿನಯ್ ಕುಲಕರ್ಣಿಯನ್ನು ಭೇಟಿ ಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡುವಂತೆ ಮಧ್ಯಾಹ್ನ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಆಗಮಿಸಿದ ಕುಟುಂಬಸ್ಥರಿಗೆ ಸಂಜೆ 4 ರಿಂದ …
Read More »ಕೋವಿಡ್ ತಡೆ ಜಾಗೃತಿ ಅಭಿಯಾನ ರ‍್ಯಾಲಿಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಚಾಲನೆ
ಬೆಳಗಾವಿಯಲ್ಲಿ ಕೋವಿಡ್ ತಡೆ ಜಾಗೃತಿ ಅಭಿಯಾನ ರ‍್ಯಾಲಿಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಚಾಲನೆ ಕೋವಿಡ್ 19 ಸಾಂಕ್ರಾಮಿಕ ರೋಗ ಪ್ರಸಾರ ತಡೆಗೆ ಜಾಗೃತಿ ಅಭಿಯಾನದ ಅಂಗವಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ರ್ಯಾಲಿಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ರೆಡ್ ಕ್ರಾಸ್ ಸೊಸೈಟಿ, ಹೋಂ ಗಾಡ್ರ್ಸ್, ಆರೋಗ್ಯ ಇಲಾಖೆ ಸಹಯೋಗದಲ್ಲಿ ರ್ಯಾಲಿ ಆಯೋಜಿಸಲಾಗಿತ್ತು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕೋವಿಡ್ 19 ಸಾಂಕ್ರಾಮಿಕ ರೋಗ …
Read More »ನಮ್ಮ ಸಾಹುಕಾರ್ ಪಡೆಯ 2021 ಹೊಸ ವರ್ಷದ ಕ್ಯಾಲೆಂಡರ್.
ನಮ್ಮ ಸಾಹುಕಾರ್ ಪಡೆಯ 2021 ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಸಾಹುಕಾರ್ ಪಡೆ ಕರ್ನಾಟಕ ಜಾಲತಣವನ್ನು ಉದ್ಘಾಟನೆ ಮಾಡಿದ ನಮ್ಮ ರಮೇಶ್ ಅಣ್ಣ ಜಾರಕಿಹೊಳಿ ಸಾಹುಕಾರ್ ಹಾಗು ಅಮರನಾಥ್ ಜಾರಕಿಹೊಳಿ ಸಾಹುಕಾರ್ ರವರು ಉದ್ಘಾಟನೆ ಈ ಸಂದರ್ಭದಲ್ಲಿ ಸಾಹುಕಾರ ಪಡೆ ಕರ್ನಾಟಕ ಗೌರವ ಅಧ್ಯಕ್ಷರು ದೋಡ್ಡಯ್ಯ ಎಮ್. ಎಚ್. ಹಾಗೂ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರು ಶೇಖರ.ಎಸ್ ರಾಜ್ಯ ಕಾರ್ಯದರ್ಶಿಗಳು ದೀಪು.ಎಮ್. ಮತ್ತು ಚೇತನ ಹಾಗೂ ಸಾಗರ್ …
Read More »ಕಲ್ಯಾಣ ಕರ್ನಾಟಕದ ಜನರಿಗೆ ಭರ್ಜರಿ ಸಿಹಿಸುದ್ದಿ
ಬೆಂಗಳೂರು : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಘೋಷಣೆಯಾಗಿರುವ 1,100 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲು ಯೋಜನಾ ಇಲಾಖೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ. ಕಲ್ಯಾಣ ಕರ್ನಾಟಕದ ಜನರಿಗೆ ಇದು ಭರ್ಜರಿ ಸಿಹಿಸುದ್ದಿಯಾಗಿದೆ. ಸದನದಲ್ಲಿ ಪೂರಕ ಅಂದಾಜು ವಿಷಯದ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಅನುದಾನದ ಬಗ್ಗೆ ಪ್ರಸ್ತಾಪಿಸಿದರು. ಅನುದಾನ ಘೋಷಣೆಯಾದರೂ ಬಿಡುಗಡೆಯಾಗದಿರುವುದರಿಂದ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ತಕ್ಷಣ ಅನುದಾನ ಬಿಡುಗಡೆಗೆ ಕ್ರಮ …
Read More »ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಂಗಳೂರು : ಕುತೂಹಲ ಮೂಡಿಸಿರುವ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಬೆಳಗಾವಿ ಭಾಗದಲ್ಲಿ ಸತೀಶ್ ಜಾರಕಿಹೊಳಿ ಅವರು ಸಾಕಷ್ಟು ಪ್ರಭಾವ ಹೊಂದಿದ್ದು, ಹೀಗಾಗಿ ಸತೀಶ್ ಜಾರಿಕಿಹೊಳಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಮವಾರ ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಕಾಂಗ್ರೆಸ್ …
Read More »ನಿಪ್ಪಾಣಿ ನಗರಸಭೆಯಲ್ಲಿ ಪತ್ರಕರ್ತರನ್ನು ಹೊರಗಿಟ್ಟುಸಾಮಾನ್ಯ ಸಭೆ: ಪತ್ರಕರ್ತರ ಧರಣಿ
ಬೆಳಗಾವಿ : ಪತ್ರಕರ್ತರನ್ನು ಹೊರಗಿಟ್ಟು ಸಾಮಾನ್ಯ ಸಭೆ ನಡೆಸುತ್ತಿರುವುದನ್ನು ಖಂಡಿಸಿ ಪತ್ರಕರ್ತರು ನಗರಸಭೆಯ ಹೊರಗೆ ಬುಧವಾರ ಧರಣಿ ನಡೆಸಿದರು. ನಗರಸಭೆಯಲ್ಲಿ ಸಾಮಾನ್ಯ ಸಭೆ ನಡೆಸಿದ್ದರು. ಈ ವೇಳೆ ಪ್ರತ್ರಕರ್ತರನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಪತ್ರಕರ್ತರು ನಗರಸಭೆ ಎದುರು ಧರಣಿ ನಡೆಸಿ, ಧಿಕ್ಕಾರ ಕೂಗಿದ್ದಾರೆ. ಲೋಕಸಭೆ, ವಿಧಾನಸಭೆ ಅಧಿವೇಶನದಲ್ಲಿಯೂ ಪತ್ರಕರ್ತರಿಗೆ ವರದಿ ಮಾಡಲು ಅವಕಾಶ ಇರುತ್ತದೆ. ಹಾಗಾದರೆ ನಿಪ್ಪಾಣಿ ನಗರಸಭೆಯಲ್ಲಿ ಏಕಿಲ್ಲ. ನಗರಸಭೆ ಅಸ್ತಿತ್ವಕ್ಕೆ ಬಂದಾಗಿನಿಂದ ಮೊದಲ ಸಲ …
Read More »ಆಟವಾಡಲು ಹೋದ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ
ಬೆಳಗಾವಿ: ಸಂಬಂಧಿಕರ ಜಮೀನಿನಲ್ಲಿ ಆಟವಾಡಲು ಹೋದ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಬೆಕ್ಕಿನಕೇರಿಯಲ್ಲಿ ನಡೆದಿದೆ. ಮೃತ ಬಾಲಕರನ್ನು ಲೋಕೇಶ ವಿಠಲ (10) ಹಾಗೂ ನಿಕೀಲ (7) ಎಂದು ಗುರುತಿಸಲಾಗಿದೆ. ಬಾಳು ಮಲ್ಲಪ್ಪ ಗಾವಡೆ ಎಂಬುವವರ ಜಮೀನೊಂದರಲ್ಲಿ ಆಟವಾಡಲೆಂದು ಮೂವರು ಬಾಲಕರು ಹೋಗಿದ್ದಾರೆ. ಈ ವೇಳೆಮೀನು, ಏಡಿ ಹಿಡಿಯಲೆಂದು ಬಾವಿಯತ್ತ ಸಾಗಿದ ಇಬ್ಬರು ಬಾಲಕರು, ಏಕಾಏಕಿ ಬಾವಿಗೆ ಬಿದ್ದಿದ್ದಾರೆ. ಇನ್ನೋರ್ವ ಬಾಲಕ ರಕ್ಷಣೆಗಾಗಿ ಕೋಗಿದ್ದಾನೆ. ಗ್ರಾಮಸ್ಥರು ಬಂದು …
Read More »ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅವರ ಮಾತನ್ನು ಯಾರು ಕೇಳ್ತಾರೆ..? : ಸಿಎಂ ವ್ಯಂಗ್ಯ
ಬೆಂಗಳೂರು, ಡಿ.8- ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದು ಕಪ್ಪು ಪಟ್ಟಿಯನ್ನಾದರೂ ಧರಿಸಲಿ, ಬಿಳಿ ಪಟ್ಟಿಯನ್ನಾದರೂ ಧರಿಸಲಿ. ಅದನ್ನು ಯಾರು ಕೇಳುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಸಂಬಂಧ ವಿಧಾನಸೌಧದ ಬಳಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರ ಪ್ರತಿಭಟನೆಯನ್ನು ಯಾರು ಕೇಳುತ್ತಾರೆ ಎಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿರುವ ಸರ್ಕಾರ. ರೈತರಿಗೆ …
Read More »ಛಲದಂಕ ಮಲ್ಲ” ರಮೇಶ ಜಾರಕಿಹೊಳಿ:ಅಶೋಕ ಚಂದರಗಿ
ಛಲದಂಕ ಮಲ್ಲ” ರಮೇಶ ಜಾರಕಿಹೊಳಿಯವರ ಕಿರೀಟಕ್ಕೆ ಮತ್ತೊಂದು ಗರಿ: ಭದ್ರಾ ಮೇಲ್ದಂಡೆ ಯೋಜನೆಗೆ ” ರಾಷ್ಟ್ರೀಯ ಯೋಜನೆ” ಪಟ್ಟ:ಕೃಷ್ಣಾ ಮೇಲ್ದಂಡೆ ಯೋಜನೆಗೂ ” ದಿಲ್ಲಿಯ ದಾರಿ” ಸುಗಮವಾಗುವದೆ? ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಶ್ರೀ ರಮೇಶ ಜಾರಕಿಹೊಳಿಯವರ ಕಾಲ್ಗುಣವೊ, ಕೈಗುಣವೊ, ಮುಖದ ಲಕ್ಷಣವೊ ಗೊತ್ತಿಲ್ಲ.ಆದರೆ ಅವರು ಈ ಖಾತೆಯನ್ನು ವಹಿಸಿಕೊಂಡ ನಂತರ ನೀರಾವರಿ ಯೋಜನೆಗಳಲ್ಲಿ ಲಾಟರಿ ಮೇಲೆ ಲಾಟರಿಯನ್ನು ಕರ್ನಾಟಕವು ಹೊಡೆದೇ ಹೊಡೆಯುತ್ತಿದೆ! ದೀರ್ಘ ಕಾಲದಿಂದ ಮುಂದೆ ಸಾಗದೇ ಬಸವಳಿಯುತ್ತಿದ್ದ …
Read More »