ಕೊಡಿಹಳ್ಳಿ ಚಂದ್ರಶೇಖರ್ ಮುಷ್ಕರ ಹಿಂಪಡೆದ ಹಿಂಪಡೆಯಲು ನಿರ್ಧಾರ ಮಾಡಿದ್ದಾರೆ ಈ ಸಂಬಂಧ ಅವರು ಹೇಳಿಕೆಯನ್ನು ನೀಡಿದ್ದಾರೆ. ಕಳೆದ 5 ದಿನಗಳಿಂದ ಸಾರಿಗೆ ನೌಕರರ ಮುಷ್ಕರ ಜನರ ಆಕ್ರೋಶಕ್ಕೆ ಮಣಿದು ಕೋಡಿಹಳ್ಳಿ ಚಂದ್ರಶೇಖರ್ ಇಂದು ಮುಷ್ಕರವನ್ನು ವಾಪಸ್ ಪಡೆದು ಅಂತ್ಯಗೊಳಿಸಿದ್ದಾರೆ. ಮುಖಂಡರ ಜೊತೆ ಚರ್ಚಿಸಿ ಹಿಂಪಡೆದಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು . ನಿನ್ನೆಯಿಂದ ಅವರ ವಿರುದ್ಧ ಅನೇಕ ಟೀಕೆಗಳು ಕೇಳಿಬಂದಿದ್ದವು. ರಾಜಕಾರಣಿಗಳು ಜನಸಾಮಾನ್ಯರೂ ಕೂಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ …
Read More »ಬೆಳಗಾವಿಯಲ್ಲಿ ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭ
ಬೆಳಗಾವಿಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಬೆಳಗಾವಿಯಿಂದ ರಾಮದುರ್ಗಕ್ಕೆ ಮೊದಲ ಬಸ್ ತೆರಳಿದೆ. ಸಂಚರಿಸುತ್ತಿರುವ ಬಸ್‌ನಲ್ಲಿ ಇಬ್ಬರು ಪೇದೆಗಳ ನಿಯೋಜನೆ ಮಾಡಲಾಗಿದೆ. ಆಯಾ ಠಾಣಾ ವ್ಯಾಪ್ತಿ ಪೊಲೀಸರಿಂದ ಸರ್ಕಾರಿ ಬಸ್‌ಗೆ ಎಸ್ಕಾರ್ಟ್ ಭದ್ರತೆ ಒದಗಿಸಲಾಗಿದೆ. ಬಳಿಕ ಆಯಾ ಠಾಣಾ ವ್ಯಾಪ್ತಿಯ ಪೊಲೀಸರಿಂದ ಬಸ್‌ಗಳಿಗೆ ಭದ್ರತೆ ನೀಡಲಾಗುತ್ತದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆಗಮಿಸಿ, ಕರ್ತವ್ಯಕ್ಕೆ ಹಾಜರಾಗಿ ಬಸ್ ಆರಂಭಿಸುವಂತೆ ಸಾರಿಗೆ ಸಿಬ್ಬಂದಿಗೆ ಮನವಿ ಮಾಡಿದರು. ಪ್ರಯಾಣಿಕರು ತೆರಳುವ ಬಸ್‌ಗಳಿಗೆ …
Read More »ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಬಳಸಿದರೆ ಕಾನೂನು ಕ್ರಮ : ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆ
ಬೆಳಗಾವಿ : ಜಿಲ್ಲೆಯಲ್ಲಿ ಜರಗುತ್ತಿರುವ ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ಪಕ್ಷದ ಆಧಾರ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ. ಕಾರಣ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಕಾನೂನು ಉಲ್ಲಂಘನೆಯಾಗದಂತೆ ತಡೆಯಲು ಈ ಕೆಳಕಂಡ ಅಂಶಗಳನ್ನು ಗಮನಕ್ಕೆ ತರಲಾಗಿದೆ. 1) ರಾಜಕೀಯ ಪಕ್ಷಗಳು ಸಭೆ, ಸಮಾರಂಭ ಎರ್ಪಡಿಸಿ, ವೇದಿಕೆಯ ಮೇಲೆ ಪಕ್ಷದ ಭಾವುಟ, ಬ್ಯಾನರ್‌ಗಳನ್ನು ಬಳಸುವಂತಿಲ್ಲ. 2) ಸ್ಪರ್ಧಿಸುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ/ಬೆಂಬಲಿತ ಅಭ್ಯರ್ಥಿ …
Read More »ಅನೈತಿಕ ಸಂಬಂಧ ; ಬೆಳಗಾವಿಯಲ್ಲಿ ಇಬ್ಬರು ಏಕಕಾಲಕ್ಕೆ ನೇಣಿಗೆ ಶರಣು
ಬೆಳಗಾವಿ : ಅನೈತಿಕ ಸಂಬಂಧ ಹೊಂದಿದ್ದವರಿಗೆ ಮನೆಯವರು ಹೇಳಿದ ಬುದ್ಧಿವಾದದಿಂದ ಬೇಸರಗೊಂಡು ಏಕಕಾಲಕ್ಕೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಬೆನ್ನಾಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಶಿವಾಜಿ ಗಾಡಿವಡ್ಡರ್ (31), ಜಯಶ್ರೀ ಗಾಡಿವಡ್ಡರ್ (35) ಆತ್ಮಹತ್ಯೆಗೆ ಶರಣಾದವರು. ಶಿವಾಜಿ ಜೋಗ್ಯಾನಟ್ಟಿ ಸಮೀಪದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದು, ಜಯಶ್ರೀ ಎಂಬ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಮನೆಯವರಿಗೆ ಗೊತ್ತಾಗಿದೆ. …
Read More »2023 ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಯರಗಟ್ಟಿ: 2023 ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಲಲಿಅ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅಭಿವೃದ್ದಿ ಕಾಮಗಾರಿಗಳು ನಡೆದಿದ್ದವು. ಆದ್ರೆ ಬಿಎಸ್ ವೈ ಸರ್ಕಾರದಲ್ಲಿ ಯಾವುದೆ ಕೆಲಸಗಳು ನಡೆಯುತ್ತಿಲ್ಲ. ಕೆಲವು ಕಾಮಗಾರಿಗಳ ಅನುದಾನವು ವಾಪಸ್ ಹೋಗಿದೆ. ಜನತೆ ಬೇಸತ್ತು ಹೋಗಿದ್ದು ಮುಂದಿನ ಚುನಾವಣೆಯಲ್ಲಿ …
Read More »ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ
ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಪಟ್ಟಣ ಗಂಗಾನಗರದ ಡಾ: ಅಂಬೇಡ್ಕರ ಭವನದಲ್ಲಿ ಶನಿವಾರದಂದು ಜರುಗಿತು ಪದಾಧಿಕಾರಿಗಳ ಆಯ್ಕೆ: ತಾಲೂಕಾ ಗೌರವಾಧ್ಯಕ್ಷ-ಮರೇಪ್ಪ ವಾಯ್.ಮರೆಪ್ಪಗೋಳ, ಸಂಚಾಲಕ-ಯಲ್ಲಪ್ಪ ಸಂ.ಸಣ್ಣಕ್ಕಿ, ಸಂಘಟನಾ ಸಂಚಾಲಕರು- ಲಕ್ಕಪ್ಪ ಯ.ತೆಳಗಡೆ, ಸುರೇಶ ದೇ.ಸಣ್ಣಕ್ಕಿ, ಸಹ ಸಂಚಾಲಕರು-ಸಿದ್ದಪ್ಪ ಯ.ಹಾದಿಮನಿ, ಖಜಾಂಚಿ-ರಾಮಪ್ಪ ಸಂ.ಬಂಗೆನ್ನವರ, ಅಲ್ಪಸಂಖ್ಯಾತರ ಘಟಕದ ಸಂಚಾಲಕ-ವಿಜಯ ಜಾ.ಮೂಡಲಗಿ, ಸಂಘಟನಾ ಸಂಚಾಲಕರು-ಅಶೋಕ ಸಿ.ಮೂಡಲಗಿ, ಲಾಲಸಾಬ ಬ.ಸಿದ್ಧಾಪೂರ, ಸಹ …
Read More »ದೇಶದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸರ್ವೇಯಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರಕ್ಕೆ ಮೊದಲ ಸ್ಥಾನ ಇದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಸವದತ್ತಿ: ‘ ದೇಶದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸರ್ವೇಯಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರಕ್ಕೆ ಮೊದಲ ಸ್ಥಾನ ಇದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಒಡೆಯರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಗ್ರಾಮ ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ‘ ಪಕ್ಷವೆಂದ್ರೆ ಗುಂಪುಗಾರಿಕೆ ಎನ್ನುವುದು ಸಹಜ. ಸವದತ್ತಿ ಅಷ್ಟೇ ಅಲ್ಲ, ನಮ್ಮ ಪಕ್ಷದಲ್ಲಿಯೂ ಇದೆ, ಎಲ್ಲ ಪಕ್ಷದಲ್ಲಿಯೂ …
Read More »ಪೊಲೀಸ್ ಇಲಾಖೆ ‘ ಒಂದೇ ದೇಶ, ಒಂದೇ ತುರ್ತು ಕರೆ-112’ ಎಂಬ ಉದ್ದೇಶದಿಂದ ಜನರ ರಕ್ಷಣೆಗೆ ತುರ್ತು ಸೇವಾ ಸ್ಪಂದನ ಸಹಾಯ ವ್ಯವಸ್ಥೆ
ಬೆಳಗಾವಿ : ಪೊಲೀಸ್ ಇಲಾಖೆ ‘ ಒಂದೇ ದೇಶ, ಒಂದೇ ತುರ್ತು ಕರೆ-112’ ಎಂಬ ಉದ್ದೇಶದಿಂದ ಜನರ ರಕ್ಷಣೆಗೆ ತುರ್ತು ಸೇವಾ ಸ್ಪಂದನ ಸಹಾಯ ವ್ಯವಸ್ಥೆ ಕಲ್ಪಿಸಲಿದ್ದು, ಸೇವೆ ನೀಡಲು ಸಿದ್ದವಾಗಿರುವ ವಾಹನಗಳಿಗೆ ಬೆಳಗಾವಿ ಕಮೀಷನರ್ ಡಾ.ಕೆ.ತ್ಯಾಗರಾಜನ್ ಅವರು ಭಾನುವಾರ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಪೊಲೀಸ್, ಅಗ್ನಿ, ವೈದ್ಯಕೀಯ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ತ್ವರಿತ ಸೇವೆ ನೀಡಲು ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಸ್ಥಾಪಿಸಲಾಗಿದೆ. …
Read More »ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಮಕ್ಕಳು ಹಾಗೂ ಕುಟುಂಬ ಸಮೇತರಾಗಿ ಸಾರಿಗೆ ನೌಕರರು ಪ್ರತಿಭಟನೆ
ಬೆಳಗಾವಿ: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಬೆಳಗಾವಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅರೆಬೆತ್ತಲಾಗಿ, ತಲೆಯ ಮೇಲೆ ಇಟ್ಟಿಗೆ ಹೊತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಮಕ್ಕಳು ಹಾಗೂ ಕುಟುಂಬ ಸಮೇತರಾಗಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ತಲೆಯ ಮೇಲೆ ಇಟ್ಟಿಗೆ ಹೊತ್ತು, ಮಂಡಿಯಲ್ಲಿ ನಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಒಂದೆಡೆ ಪ್ರತಿಭಟನಾ ನಿರತ ಸಾರಿಗೆ ನೌಕರರು, ಮಕ್ಕಳನ್ನು ಹೆಗಲ …
Read More »ಮೂರು ದಿನದಲ್ಲಿ ಸಾರಿಗೆ ಇಲಾಖೆಗೆ 17 ಕೋಟಿ ಲಾಸ್
ಮೂರು ದಿನದಲ್ಲಿ ಸಾರಿಗೆ ಇಲಾಖೆಗೆ 17 ಕೋಟಿ ಲಾಸ್ ಬೆಂಗಳೂರು: ಕಳೆದ ಮೂರು ದಿನಗಳಿಂದ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದಿಂದಾಗಿ ರಾಜ್ಯಾದ್ಯಂತ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಆದಾಯಕ್ಕೆ ಭಾರೀ ನಷ್ಟ ಉಂಟಾಗಿದೆ. ರಾಜ್ಯದಾದ್ಯಂತ ಪ್ರತಿ ದಿನ ಸಾರಿಗೆ ಇಲಾಖೆಗೆ ಸುಮಾರು 7 ಕೋಟಿ ರೂ. ಆದಾಯ ಬರುತ್ತಿತ್ತು. ಆದ್ರೆ ಮುಸ್ಕರ್ ಆರಂಭದ ಮೊದಲ ದಿನ ರಾಜ್ಯಾದ್ಯಂತ 1464 ಬಸ್ ಗಳು ಸಂಚಾರ ಮಾಡಿದ್ದು, ಒಟ್ಟು 4.5 ಕೋಟಿ ರೂ. …
Read More »