ಗೋಕಾಕ : ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ವದಡಿ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಯಾರೂ ನಂಬಬಾರದು. ಕಾರ್ಖಾನೆ ಈಗಲೂ ನಮ್ಮ ಆಡಳಿತದಲ್ಲಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು. ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಟ್ರ್ಯಾಕ್ಟರ್ ಮಾಲೀಕರು ಹಾಗೂ …
Read More »ಮುಳ್ಳೂರು ಘಾಟ್ ಮಾರ್ಗದಲ್ಲೆ ಪ್ರಯಾಣ: ಆತಂಕ
ರಾಮದುರ್ಗ (ಬೆಳಗಾವಿ ಜಿಲ್ಲೆ): ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ವಾಹನಗಳು ಅಪಾಯಕಾರಿಯಾದ ರಸ್ತೆಯಲ್ಲೇ ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ‘ಮೃತ್ಯುಕೂಪ’ ಎಂದೇ ಅಪಖ್ಯಾತಿ ಹೊಂದಿದ್ದ ಇಲ್ಲಿನ ಮುಳ್ಳೂರು ಘಾಟ್‌ನಲ್ಲಿ ವಾಹನಗಳಲ್ಲಿ ಹೋಗುವವರು ಕೈಯಲ್ಲಿ ಜೀವ ಹಿಡಿದುಕೊಂಡೆ ಪ್ರಯಾಣಿಸಬೇಕಿತ್ತು. ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಪಘಾತಗಳಾಗಿ ಸಾವು-ನೋವು ಸಂಭವಿಸಿರುವ ಘಾಟ್ ಸುಧಾರಣೆಗೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಹೊಸ ಮಾರ್ಗ ನಿರ್ಮಿಸುವಂತೆ ಬೇಡಿಕೆ ಇತ್ತು. ಹಿಂದಿನ ಶಾಸಕ ಅಶೋಕ ಪಟ್ಟಣ ಅವರ ಪ್ರಯತ್ನದಿಂದ ರಾಜ್ಯ ಸರ್ಕಾರದಿಂದ ವಿಶೇಷ …
Read More »ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಮುನ್ಸೂಚನೆ ಬೆಳಗಾವಿ ಜಿಲ್ಲೆಯ ಜನರಿಗೆ ಆತಂಕ ಶುರು
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಜನರಿಗೆ ಆತಂಕ ಶುರುವಾಗಿದೆ. ಜುಲೈ 9ರಿಂದ 15ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ನದಿ ಪಾತ್ರದ ಜುಗುಳ, ಮಂಗಾವತಿ, ಶಹಾಪೂರ ಕುಸನಾಳ, ಮೊಳವಾಡ, ಉಗಾರ್ ಕೆಎಚ್, ಬಣಜವಾಡ ಹಾಗೂ ಕಿತ್ತೂರ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ …
Read More »ನಾಗಾಲ್ಯಾಂಡ್ ಗಡಿಯಲ್ಲಿ ಬೆಳಗಾವಿ ಯೋಧನ ವೀರಮರಣ..
ಬೆಳಗಾವಿ : ನಾಗಲ್ಯಾಂಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ್ಯದ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋಕಾಕ್ ತಾಲೂಕಿನ ಶಿವಾಪುರದ ಯೋಧ ಮಂಜುನಾಥ ಗೌಡನ್ನವರ (38) ಮೃತಪಟ್ಟಿರುವ ಯೋಧ. ಕರ್ತವ್ಯದಲ್ಲಿದ್ದ ಇವರು ಗಸ್ತು ತಿರುಗುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 18 ವರ್ಷದಿಂದ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ ನೇಮಕಗೊಂಡು, ನಾಗಲ್ಯಾಂಡ್ ಗಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಸ್ತು ತಿರುಗುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ಅಪಘಾತ ಸಂಭವಿಸಿ ದುರ್ಘಟನೆ ನಡೆದಿದೆ. …
Read More »ಲಂಚ ಪಡೆಯುತ್ತಿದ್ದ ಪಿಎಸ್‌ಐ, ಇಬ್ಬರು ಸಿಬ್ಬಂದಿ ಎಸಿಬಿ ಬಲೆಗೆ
ಚಿಕ್ಕೋಡಿ: ಅನಧಿಕೃತ ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದೀರಿ ಎಂದು ಹೆದರಿಸಿ, ಮಾಲೀಕನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸದಲಗಾ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳು ಭ್ರಷ್ಟಾಚಾರ ನಿಗೃಹ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. ಗುರುವಾರ ರಾತ್ರಿ ಠಾಣೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪಿಎಸ್‌ಐ ಕುಮಾರ ಹಿತ್ತಲಮನಿ ಹಾಗೂ ಕಾನ್ಸಟೇಬಲ್ ಮಾಯಪ್ಪಾ ಗಡ್ಡೆ ಮತ್ತು ಶ್ರೀಶೈಲ ಮಂಗಿ ಅವರನ್ನು ವಶಕ್ಕೆ …
Read More »ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ವರ್ಚುವಲ್ ಸಭೆ
ಬೆಳಗಾವಿ: ಕಾರ್ಯಕರ್ತರ ಸಹನೆ, ಸಹಕಾರ ಹಾಗೂ ಅವರ ನಿಸ್ವಾರ್ಥ ಸೇವೆಯಿಂದ ಬಿಜೆಪಿ ಪಕ್ಷ ಇಂದು ಪ್ರಪಂಚದಲ್ಲಿಯೆ ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿದ ಸಮರ್ಥ ಪಕ್ಷ ಎನ್ನುವದು ಜಗಜ್ಜನಿತವಾಗಿದೆ ಎಂದು ಉಪಸಭಾಪತಿ ಆನಂದ ಮಾಮನಿ ಹೇಳಿದರು. ನಗರದ ಗೋಮಟೇಶ್ವರ ಸಭಾ ಭವನದಲ್ಲಿ ಶನಿವಾರ ನಡೆದ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ವರ್ಚುವಲ್ ಸಭೆಯನ್ನು ಉದ್ಘಾಟಸಿ ಮಾತನಾಡಿ, ಚುನಾವಣೆಗೆ ಮಾತ್ರ ಸೀಮಿತವಾಗದೆ ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸುವದೆ ಪಕ್ಷದ ಸಿದ್ದಾಂತವಾಗಿದೆ. ಬಿಡುವಿಲ್ಲದೆ ದೇಶದ ಜನರ …
Read More »ಬೆಳಗಾವಿ: “ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದು ಹೋದ ಅಧ್ಯಾಯ” ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ: “ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದು ಹೋದ ಅಧ್ಯಾಯ” ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾಡಿದ್ದು ನಿಜ. ಆದರೆ ನನ್ನ ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ ಹಿನ್ನೆಲೆ ರಾಜೀನಾಮೆ ವಿಚಾರ ಕೈಬಿಟ್ಟಿದ್ದೇನೆ” ಎಂದರು. ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ …
Read More »ಬೈಕ್ ಅಪಘಾತ : ಸ್ಥಳದಲ್ಲಿಯೇ ಇಬ್ಬರ ಸಾವು.
ಚಿಕ್ಕೋಡಿ : ಬೈಕ್ ಸವಾರರಿಬ್ಬರು ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ನಾಗರಮುನ್ನೊಳ್ಳಿ ಟೋಲ್ ಗೆಟ್ ಹತ್ತಿರ ನಡೆದಿದೆ. ಮೃತರನ್ನು ಸಿದ್ದಾರ್ಥ ಅಶೋಕ ಖೇಮಲಾಪೊರೆ(24) ಮತ್ತು ಪ್ರಮೋದ ಕರೇಪ್ಪ ನಾಯ್ಕ(24) ಅಂತಾ ತಿಳಿದು ಬಂದಿದೆ. ನಿಪ್ಪಾಣಿ ಸಮೀಪದ ಸ್ತವನಿಧಿಗೆ ದೇವರಿಗೆಂದು ಹೋಗಿ ವಾಪಸ್ಸು ತಮ್ಮೂರಾದ ಬೆಲ್ಲದ-ಬಾಗೇವಾಡಿಗೆ ಬರುವಾಗ ನಾಗರಮುನ್ನೊಳ್ಳಿ ಟೋಲ್ ಗೇಟ್ ಹತ್ತಿರ ಮಳೆಯಾದ ಕಾರಣ …
Read More »ಬೆಳಗಾವಿ ಮಹಾನಗರ ಪಾಲಿಕೆಯಿಂದ 58 ವಾರ್ಡುಗಳ ವಾರ್ಡ್ ವಾರು ಅಂತಿಮ ಮತದಾರರ ಪಟ್ಟಿ ಪ್ರಕಟ
ಬೆಳಗಾವಿ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ 58 ವಾರ್ಡುಗಳ ವಾರ್ಡ್ ವಾರು ಅಂತಿಮ ಮತದಾರರ ಪಟ್ಟಿಯನ್ನು ಜುಲೈ 9 2021ರಂದು ಪ್ರಕಟಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ ದಿನಾಂಕ: 01-01-2021ರ ಅರ್ಹತಾ ದಿನಾಂಕಕ್ಕೆ ಪರಿಷ್ಕರಣೆ ಯಾದ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ದಿನಾಂಕ 18-01-2021ರ ಮತದಾರರ ಪಟ್ಟಿಯ ಡೇಟಾ ಪಡೆದುಕೊಂಡು ಬೆಳಗಾವಿ ಮಹಾನಗರಪಾಲಿಕೆಯ 58 ವಾರ್ಡಗಳು ವಾರ್ಡವಾರು ಕರಡು ಮತದಾರರ ಪಟ್ಟಿಯನ್ನು ಸಿದ್ದಪಡಿಸಿ ದಿನಾಂಕ 28-06-2021ರಂದು ಮಾನ್ಯ …
Read More »ಜಲಾಶಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದರೆ ಕ್ರಮ ಕೈಗೊಳ್ಳಬೇಕು: ಎಂ.ಬಿ.ಪಾಟೀಲ್
ಬೆಂಗಳೂರು: ಯಾವುದೇ ಆಣೆಕಟ್ಟು ಸುತ್ತಮುತ್ತ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು. ಕೆಆರ್ ಎಸ್ ಪುರಾತನ ಜಲಾಶಯ. ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಗಾರರೊಂದಿಗೆ ಅವರು ಮಾತನಾಡಿದರು. ಅಂಬರೀಶ್ ಕಾಲದಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂಬ ಜೆಡಿಎಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂಬರೀಶ್ ನನ್ನ …
Read More »