ಬೆಳಗಾವಿ: 2015ರಿಂದ 2020ರ ಅವಧಿಯಲ್ಲಿ ಶ್ಲಾಘನೀಯ ಕಾರ್ಯನಿರ್ವಹಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿಗೆ ಮುಖ್ಯಮಂತ್ರಿಯವರ ಚಿನ್ನದ ಪದಕವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಮಂಗಳವಾರ ಪ್ರದಾನ ಮಾಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಸಮಾರಂಭದಲ್ಲಿ, ಇಲ್ಲಿನ ಅಗ್ನಿಶಾಮಕ ಠಾಣೆಯ ಪ್ರಕಾಶ್ ಶಿಂಧೆ, ರಾಜ್ಯ ವಿಪತ್ತು ಸ್ಪಂದನಾ ಪಡೆ ‘ಸಿ’ ಕಂಪನಿಯ ಅಜಿತ ದುಂಡಪ್ಪ ಹಾಗೂ ಕಿರಣ ಕುರಬೇಟ ಪದಕಕ್ಕೆ …
Read More »ತಂದೆಯ ಪಾರ್ಥಿವ ಶರೀರವನ್ನು ಯೊಧನ ಮಗ ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ್ದಾನೆ.
ಬೆಳಗಾವಿ: ನಾಗಾಲ್ಯಾಂಡ್ನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಅಪಘಾತವಾಗಿ ಮೃತಪಟ್ಟಿದ್ದ ಯೋಧನ ಪಾರ್ಥಿವ ಶರೀರ ಇಂದು (ಜುಲೈ 13) ಸ್ವಗ್ರಾಮಕ್ಕೆ ಆಗಮಿಸಿದೆ. ತಂದೆಯ ಪಾರ್ಥಿವ ಶರೀರವನ್ನು ಯೊಧನ ಮಗ ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ್ದಾನೆ. ಜಿಲ್ಲೆಯ ಗೋಕಾಕ್ ತಾಲೂಕಿನ ಶಿವಾಪುರ ಗ್ರಾಮದ ಮಂಜುನಾಥ ಗೌಡನ್ನವರ ಮೃತ ಯೋಧ. ಗ್ರಾಮಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಪಾರ್ಥಿವ ಶರೀರ ಬರುವ ದಾರಿಯಲ್ಲಿ ಹೂವನ್ನು ಹಾಕಿ, ಕೈಯಲ್ಲಿ ದೇಶದ ಭಾವುಟ …
Read More »ಅಂಬರೀಷ್ ಅವರ ಅಂತಿಮ ಸಂಸ್ಕಾರದ ಸಲುವಾಗಿ ವೆಚ್ಚ ಮಾಡಿರುವ ಹಣ ಎಷ್ಟು ಎಂಬುದು ಸರ್ಕಾರದ ಬಳಿ ಮಾಹಿತಿ ಇಲ್ಲ: ಭೀಮಪ್ಪ ಗಡಾದ
ಬೆಳಗಾವಿ : ಮಾಜಿ ಸಚಿವ ದಿ. ಅಂಬರೀಷ್ ಅವರ ಅಂತಿಮ ಸಂಸ್ಕಾರದ ಸಲುವಾಗಿ ವೆಚ್ಚ ಮಾಡಿರುವ ಹಣ ಎಷ್ಟು ಎಂಬುದು ಸರ್ಕಾರದ ಬಳಿ ಮಾಹಿತಿ ಇಲ್ಲ. ಈ ಮಾಹಿತಿ ಯಾರ ಬಳಿ ಇದೆ ಎಂಬುದೂ ಮುಖ್ಯ ಕಾರ್ಯದರ್ಶಿಯವರ ಕಚೇರಿಯವರಿಗೆ ಗೊತ್ತಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ. ಅಂಬರೀಷ್ ಅವರ ವೈದ್ಯಕೀಯ ಉಪಚಾರಕ್ಕಾಗಿ ಸರ್ಕಾರದಿಂದ ವೆಚ್ಚ ಮಾಡಿದ ಹಣ, ಹಾಗೂ ಅಂತಿಮ ಸಂಸ್ಕಾರಕ್ಕೆ ವೆಚ್ಚ ಮಾಡಿರುವುದು ಹಾಗೂ …
Read More »ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ
ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ. ಚಿಕ್ಕೋಡಿ ಗ್ರೇಡ್ 2 ತಹಸಿಲ್ದಾರ ಜಮಾದಾರ ಎನ್ನುವಾತ ಮಾನಗೇಡಿ ಕೃತ್ಯ ಮಾಡಿದಾತ. ತಾಲೂಕಿನ ಮಹಿಳೆಯೊಬ್ಬಳ ಪತಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ತನಗೆ ವಿಧವಾ ಮಾಸಾಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದಾಳೆ. ಆಕೆಯ ಪುತ್ರ ಈ ಸಂಬಂಧ ಹಲವು ಬಾರಿ ತಹಸಿಲ್ದಾರ ಕಚೇರಿಗೆ ಬಂದಿದ್ದಾನೆ. ಆದರೆ ಕೆಲಸ ಮಾಡಿಕಕೊಡದ ಜಮಾದಾರ, ತಾಯಿಯನ್ನು ಕಚೇರಿಗೆ …
Read More »ಸೌಭಾಗ್ಯ ಲಕ್ಷ್ಮೀ ಶುಗರ್ಸ ನಿಂದ ಸಕ್ಕರೆ ವಿತರಣೆ ಕಾರ್ಯಕ್ರಮ
ಗೋಕಾಕ: ಸೌಭಾಗ್ಯ ಲಕ್ಷ್ಮೀ ಶುಗರ್ಸ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ನಾವು ರೈತ ಬಾಂಧವರಿಗೆ ತಿಳಿಸುವುದು ಏನೆಂದರೆ ಈ ವರ್ಷ ನಾವು ನಮ್ಮ ಕಾರ್ಖಾನೆಗೆ ಕಬ್ಬು ಕಳುಹಿಸಿದ ಎಲ್ಲಾ ರೈತ ಬಾಂಧವರಿಗೆ ಪ್ರತಿ ಟನ್ ಗೆ ಅರ್ಧ ಕೇಜಿಯಂತೆ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನಾ ಯರಗಟ್ಟಿ, ಗೋಕಾಕ, ಹಾಗೂ ಮಮದಾಪೂರ ಈ ರೀತಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಮೂರು ಝೋನ್ ಗಳಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. …
Read More »ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಳಗಾವಿ ಯೋಧನ ಅಂತ್ಯಕ್ರಿಯೆ
ಗೋಕಾಕ : ಕಳೆದ ನಾಲ್ಕೈದು ದಿನಗಳ ಹಿಂದೆ ನ್ಯಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಪಘಾತದಲ್ಲಿ ಅಸುನೀಗಿದ್ದ ಗೋಕಾಕ ತಾಲ್ಲೂಕಿನ ವೀರಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಜರುಗಿತು. ಶಿವಾಪುರ ಗ್ರಾಮದ ಯೋಧ ಮಂಜುನಾಥ ಗೌಡಣ್ಣವರ (38) ಯೋಧ ಅಫಘಾತದಲ್ಲಿ ಸಾವನ್ನಪ್ಪಿದ್ದರು. ಮೃತ ಯೋಧನ ಪಾರ್ಥಿವ ಶರೀರ ಬೆಂಗಳೂರಿನಿಂದ ಇಂದು ಬೆಳಿಗ್ಗೆ 7 ಗಂಟೆಗೆ ಯೋಧನ ಸ್ವಗ್ರಾಮ ಗೋಕಾಕ್ ತಾಲ್ಲೂಕಿನ ಶಿವಾಪುರ ಗ್ರಾಮಕ್ಕೆ ರಸ್ತೆ ಮೂಲಕ ಕರೆತರಲಾಯಿತು. …
Read More »ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವನ್ನು ಬದಲಾಯಿಸುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ :ಜಿಲ್ಲಾಧಿಕಾರಿಗೆ ಮನವಿ
ಬೆಳಗಾವಿ – ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವನ್ನು ಬದಲಾಯಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆಯ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಗಳು ಹಾಗೂ ಬೆಳಗಾವಿ ನಗರ ಪೋಲಿಸ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವು ಮಳೆ, ಗಾಳಿಗೆ ನಾಶಗೊಳುತ್ತಿದೆ. ಈ ಕಾರಣದಿಂದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕೂಡಲೇ ಎಚ್ಚೆತುಕೊಂಡು ಬಾವುಟ ಬದಲಾವಣೆ ಮಾಡಬೇಕು. ಬಾವುಟ ನಾಶಗೊಳ್ಳುತ್ತಿರುವುದರಿಂದ ಬೆಳಗಾವಿ ಸಮಸ್ತ ಕನ್ನಡಿಗರ ಭಾವನೆಗೆ ದಕ್ಕೆ ಉಂಟಾಗುತ್ತಿದೆ. …
Read More »ನೀರಾವರಿ ಯೋಜನೆಯಿಂದ ರೈತರ ಅಭಿವೃದ್ಧಿ-ಸಚಿವೆ ಶಶಿಕಲಾ ಜೊಲ್ಲೆ
ಚಿಕ್ಕೋಡಿ – ನಿಪ್ಪಾಣಿ ತಾಲೂಕಿನ ಸಮಗ್ರ ಅಭಿವೃದ್ಧಿ ಜೊತೆಗೆ ರೈತರ ಅಭಿವೃದ್ಧಿಗೆ ಕೂಡ ಆದ್ಯತೆ ನೀಡಲಾಗಿದೆ. ಕಳೆದ ೩೦-೩೫ ವರ್ಷಗಳಿಂದ ನೀರಿಲ್ಲದೆ ಒಣಗುತ್ತಿರುವ ಬರಡು ಭೂಮಿ ನೀರಾವರಿ ಯೋಜನೆಯಿಂದ ಹಸಿರಿಕರಣವಾಗಲಿದೆ. ಗಂಗಾಕಲ್ಯಾಣ ಯೋಜನೆಯಿಂದ ರೈತರ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಸಮೀಪದ ಸೌಂದಲಗಾ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ೧.೫ ಕೋಟಿ ವೆಚ್ಚದಲ್ಲಿ ಗಂಗಾಕಲ್ಯಾಣ ನೀರಾವರಿ ಯೋಜನೆಯನ್ನು …
Read More »ಮರ್ಡರ್ ಮಾಡಿದ್ದ ಐವರು ಖದೀಮರನ್ನು ಪೊಲೀಸರು ಒದ್ದು ಒಳಗೆಹಾಕಿದ್ದಾರೆ
ಕಿತ್ತೂರು – ಕ್ಷುಲ್ಲಕ ಕಾರಣಕ್ಕೆ ದಾಬಾ ಮಾಲಿಕನನ್ನು ಮರ್ಡರ್ ಮಾಡಿದ್ದ ಐವರು ಖದೀಮರನ್ನು ಪೊಲೀಸರು ಒದ್ದು ಒಳಗೆಹಾಕಿದ್ದಾರೆ. ಕೊಲೆಯಾಗಿರುವ ಪ್ರಕಾಶ ತನ್ನ ಮುದ್ದಾದ ಮಕ್ಕಳೊಂದಿಗೆ ಇದ್ದ ಚಿತ್ರ ಖರೀದಿಸಿದ್ದ ಹೂವಿನ ಹಣ 1500 ರೂಗಳನ್ನು ಹೂವಿನ ವ್ಯಾಪಾರಿಗೆ ಕೊಡು ಎಂದು ಹೇಳಿದ್ದಕ್ಕೆ ಐವರು ಸೇರಿ ದಾಬಾ ಮಾಲಿಕ ಪ್ರಕಾಶ ಬಸವರಾಜ ನಾಗನೂರು (35) ಅವರನ್ನು ಕೊಲೆ ಮಾಡಿದ್ದರು. ಮಹಮ್ಮದಶಫೀ …
Read More »ಎರಡು ವರ್ಷದೊಳಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆ ಮಾಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಪಣ
ಗೋಕಾಕ : ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ವದಡಿ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಯಾರೂ ನಂಬಬಾರದು. ಕಾರ್ಖಾನೆ ಈಗಲೂ ನಮ್ಮ ಆಡಳಿತದಲ್ಲಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು. ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಟ್ರ್ಯಾಕ್ಟರ್ ಮಾಲೀಕರು ಹಾಗೂ …
Read More »