Breaking News

ಬೆಳಗಾವಿ

ಯುವ ಜನತೆ ಕ್ರೀಡೆಯಲ್ಲಿ ಹೆಚ್ಚಿಗೆ ಭಾಗವಹಿಸಬೇಕು, ಶಿಕ್ಷಣ ಹಾಗೂ ಕ್ರೀಡೆಗೆ ಒತ್ತು ನೀಡಿ ನಮ್ಮ ನಾಡಿಗೆ ಕೀರ್ತಿ ತರಬೇಕು ಎಂದು ರಾಹುಲ್ ಜಾರಕಿಹೊಳಿ.ಹೇಳಿದರು

ಗೋಕಾಕ: ಅಗಸ್ಟ್ 28 ರಿಂದ 30 ರವರೆಗೆ ನವದೆಹಲಿಯಲ್ಲಿ ನಡೆದಂತಯ ಯೂತ್ ಗೇಮ್ಸ್ ಫಡೇರೆಷಣ ಆಫ್ ಇಂಡಿಯಾ ದ ಯುತ್ ಗೇಮ್ಸ್ ಆಲ್ ಇಂಡಿಯಾ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗೋಕಾಕದ ಯುವಕರು ವಿಜೇತರಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಭೇಟಿಯಾದರು. ಇಲ್ಲಿನ ಹಿಲ್ ಗಾರ್ಡನ್ ಕಛೇರಿಯಲ್ಲಿ ಬುಡೊಬಾಸ್ ಇಂಟರ್ ನ್ಯಾಶನಲ್ ಕರಾಟೆ ಡು ಅಕಾಡೆಮಿ ಗೋಕಾಕದ ತರಬೇತಿಗಾರರಾದ ದುರ್ಯೋಧನ ಕಡಕೋಳ ಹಾಗೂ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಮಹೇಶ್ …

Read More »

ಗೋಕಾಕ ಮತ್ತೆ ಸರಣಿ ಕಳ್ಳತನ….

    ಗೋಕಾಕ: ನಗರದ ಕಿಲ್ಲಾ ಆಚಾರ ಗಲ್ಲಿಯಲ್ಲಿ ಸೋಮವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಬೀಗ ಹಾಕಿರುವ ಮನೆಗಳಲ್ಲಿ ಕಳ್ಳತನ ನಡೆದಿವೆ. ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪದೇ ಪದೆ ಕಳ್ಳತನಗಳು ನಡೆಯುತ್ತಿದ್ದುದರಿಂದ ನಗರದ ಜನರಲ್ಲಿ ಆತಂಕ ಮೂಡಿದೆ. ಕಳ್ಳರು 12 ಸಾವಿರ ರೂ. ದೋಚಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಮೊದಲು ವಿವೇಕಾನಂದ ನಗರದಲ್ಲಿ ಸರಣಿ ಕಳ್ಳತನ ನಡೆದಿತ್ತು. ಕಳ್ಳರನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಕಳ್ಳರು ಈಗಾಗಲೇ …

Read More »

ಸೇವಾದಳವನ್ನು ನಾಡಿನಾದ್ಯಂತ ಕಟ್ಟಿದ ಡಾ.ಎನ್.ಎಸ್.ಹರ್ಡೀಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ‘ಎಂದು ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಗೋಕಾಕ : ‘ ಸೇವಾದಳವನ್ನು ನಾಡಿನಾದ್ಯಂತ ಕಟ್ಟಿದ ಡಾ.ಎನ್.ಎಸ್.ಹರ್ಡೀಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ‘ಎಂದು ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.   ಘಟಪ್ರಭಾದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸೇವಾದಳದ ಪ್ರಪ್ರಥಮ ಮಹಿಳಾ ಸಮರ್ಥ್ 5 ದಿನದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.   ‘ಸೇವಾದಳ ಕೇಂದ್ರದಲ್ಲಿ ಹೆಚ್ಚು ಹೆಚ್ಚು ಕಾರ್ಯಕರ್ತರಿಗೆ ತರಬೇತಿ ನೀಡುವುದರ ಮೂಲಕ …

Read More »

ಅಭಿವೃದ್ಧಿ ಕಾರ್ಯಗಳೇ ನಮ್ಮ ಸಾಧನೆಯನ್ನು ಹೇಳುತ್ತವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

    ಬೆಳಗಾವಿ: ನಗರದ 45ನೇ ವಾರ್ಡ್ ನ ಹಿಂಡಾಲ್ಕೊ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶ್ರೀ ನಾಯ್ಕ್ ಪರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಮತಯಾಚನೆ ಮಾಡಿದರು.   ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಉಸ್ತುವಾರಿ ಸಚಿವ ಹಾಗೂ ಫೀರೋಜ್ ಸೇಠ್ ಶಾಸಕರಾಗಿದ್ದ ಸಂದರ್ಭದಲ್ಲಿ ಸಮೀಪದ ಬಸವನಕೊಳ್ಳ ಅರಣ್ಯಭೂಮಿಯಲ್ಲಿ ನೀರಿನ ಶುದ್ಧೀಕರಣ ಘಟಕ ನಿರ್ಮಿಸುವ ಮೂಲಕ 45ನೇ ವಾರ್ಡ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ …

Read More »

ಕಾಂಗ್ರೆಸ್ ಪಕ್ಷದಿಂದಜಯಶ್ರೀ ಮಾಳಗಿ ಹಾಗೂಜಯರಾಜ ಹಲಗೆಕರ್ ಉಚ್ಛಾಟನೆ

ಬೆಳಗಾವಿ – ಮಹಾನಗರ ಪಾಲಿಕೆ ಚುನಾವಣೆಗೆ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. 12ನೇ ವಾರ್ಡ್ ನಿಂದ ಸ್ಪರ್ಧಿಸಿರುವ ಜಯಶ್ರೀ ಮಾಳಗಿ ಹಾಗೂ 29ನೇ ವಾರ್ಡ್ ನಿಂದ ಸ್ಪರ್ಧಿಸಿರುವ ಜಯರಾಜ ಹಲಗೆಕರ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ ಆದೇಶ ಹೊರಡಿಸಿದ್ದಾರೆ.

Read More »

ಬೆಳಗಾವಿ ಪಾಲಿಕೆ ಚುನಾವಣೆ: ಬಿಜೆಪಿ ಘಟಾನುಘಟಿ ನಾಯಕರಿಂದ ಪ್ರಚಾರ, ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯ

ಬಹಿರಂಗ ಪ್ರಚಾರಕ್ಕೆ ಮಂಗಳವಾರ (ಆಗಸ್ಟ್ 31) ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಚುರುಕಿನ ಪ್ರಚಾರ ನಡೆಸಿದರು. ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳ ಹಲವು ಹಿರಿಯ ನಾಯಕರು ನಗರದಲ್ಲಿ ಸಂಚರಿಸಿ, ಮತಭಿಕ್ಷೆ ಕೇಳಿದರು. ಬೆಳಗಾವಿ: ಬಿಜೆಪಿ ಮತ್ತು ಕಾಂಗ್ರೆಸ್ ಹುರಿಯಾಳುಗಳ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಸೆ.3ರಂದು ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಮಂಗಳವಾರ (ಆಗಸ್ಟ್ 31) ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಚುರುಕಿನ ಪ್ರಚಾರ ನಡೆಸಿದರು. ಬಿಜೆಪಿ …

Read More »

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜನರು ಚಿರಂಜೀವಿಗಳಾಗಿದ್ದರಾ?: ಈಶ್ವರಪ್ಪ

ಬೆಳಗಾವಿ: ಉಚಿತ ಶವಸಂಸ್ಕಾರ ಮಾಡುವ ಬಿಜೆಪಿ ಪ್ರಣಾಳಿಕೆ ಬಗ್ಗೆ ವ್ಯಂಗವಾಡಿರುವ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜನರು ಚಿರಂಜೀವಿಗಳಾಗಿದ್ದರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಯಾರು ಸತ್ತೇ ಇಲ್ಲ, ಶವಸಂಸ್ಕಾರ ಮಾಡಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರದಲ್ಲಿ ಸಾವು ಖಚಿತ ಅಂತಾ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತ …

Read More »

ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ 7 ಜನರನ್ನು ಪಕ್ಷದಿಂದ ಉಚ್ಛಾಟನೆ

– ಬೆಳಗಾವಿ :ಮಹಾನಗದರ ಪಾಲಿಕೆ ಚುನಾವಣೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ 7 ಜನರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.                     ಬಿಜೆಪಿ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ ಈ ಕುರಿತು ಪ್ರಕಟಣೆ ನೀಡಿದ್ದಾರೆ. 7 ಬಂಡಾಯ ಅಭ್ಯರ್ಥಿಗಳನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದ್ದಾರೆ. ಉಚ್ಛಾಟನೆಗೊಂಡವರ ವಿವರ ಇಲ್ಲಿದೆ –  ವಾರ್ಡ್ ನಂ.41ರ ದೀಪಕ್ ಜಮಖಂಡಿ, …

Read More »

ಈ ಬಾರಿ ಬಿಜೆಪಿಗೆ ಜನರಿಂದ ತಕ್ಕ ಪಾಠ.!ಸತೀಶ್ ಜಾರಕಿಹೊಳಿ

ಬೆಳಗಾವಿ: ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ಜನರ ಸಮಸ್ಯೆ ಕೇಳಲು ಬಾರದೆ ಇದೀಗ ಚುನಾವಣೆ ಪ್ರಚಾರಕ್ಕೆ ಜನರ ಬಳಿ ಓಡೋಡಿ ಹೋಗುತ್ತಿದ್ದಾರೆ ಅಂತ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ಜಿಲ್ಲೆಯಿಂದ 4 ಮಂದಿ ಸಚಿವರಿದ್ದಾರೆ. ಆದ್ರೆ ಇವರೆಲ್ಲರೂ ಕೋವಿಡ್ ಹಾಗೂ ಪ್ರವಾಹ ವೇಳೆ ಸಮಸ್ಯೆಗಳ ನಿರ್ವಹಣೆ ಬಗ್ಗೆ ಒಂದು ಸಭೆಯನ್ನೂ ನಡೆಸಲಿಲ್ಲ. ಕನಿಷ್ಟಪಕ್ಷ ಜನರಿಗೆ …

Read More »

ಮೂಡಲಗಿ ಅತ್ಯಾಚಾರ ಪ್ರಕರಣ ಕುರಿತು ಜೈ ಭೀಮ್ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ವಾಣಿ ವತಿಯಿಂದ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಕ್ರಮ ಕೈಗೊಳ್ಳುವ ಮನವಿ

ಈ ಮೇಲಿನ ವಿಷಯದಂತೆ ನಾವು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಜುಲೈ-2021 ತಿಂಗಳಲ್ಲಿ 16 ವರ್ಷದ ಅಪ್ರಾಪ್ತ ಪರಿಶಿಷ್ಟ ಜಾತಿಯ ಬಾಲಕಿ ಮೇಲೆ 5 ಜನ ಅನ್ಯಜನಾಂಗದ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಮಾಡಿರುತ್ತಾರೆ. ಬಳಿಕ ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದ ಕಾಮುಕರನ್ನು ಈಗಾಗಲೇ 4 ಜನ ಕಾಮುಕರನ್ನು ಘಟಪ್ರಭಾ ಪೊಲೀಸರು ಬಂಧಿಸಿರುತ್ತಾರೆ. ಇನ್ನುಳಿದ ಕಾಮುಕನನ್ನು ತಕ್ಷಣವೇ ಬಂಧಿಸುವುದಾಗಲೆ …

Read More »