ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಲೋಕಾಯುಕ್ತ ಬಿ.ಎಸ್. ಪಾಟೀಲ್ ಬೆಂಗಳೂರು: ಲೋಕಾಯುಕ್ತರಾಗಿ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದ್ದು, ನೂತನ ಲೋಕಾಯುಕ್ತರಿಗೆ ರಾಜ್ಯಪಾಲ ಥಾವತ್ ಚಂದ್ ಗೆಹ್ಲೋಟ್ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್ ಅವರು ಕನ್ನಡ ಭಾಷೆಯಲ್ಲಿ, ಭಗವಂತ ಮತ್ತು ಸತ್ಯ-ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಗಮನಾರ್ಹವಾಗಿತ್ತು.
Read More »ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿಯಲ್ಲಿ ಎರಡು ಗುಂಪುಗಳ ಮಧ್ಯ ಗಲಾಟೆ: ಇಬ್ಬರಿಗೆ ಗಾಯ
ವಯಕ್ತಿಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಹೊಡೆದಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳವಾಗಿದ್ದು. ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Read More »ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಮತಾ ಎಣಿಕೆ ಆರಂಭ..
ಬೆಳಗಾವಿ – ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕ, ವಾಯವ್ಯ ಪದವೀಧರ ಹಾಗೂ ಪಶ್ಚಿಮ ಶಿಕ್ಷಕ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆಗೆ ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಸಕಲ ಸಿದ್ಧತೆಗಳಾಗಿದ್ದು, ಮತ ಎಣಿಕೆ ಇನ್ನೇನು ಆರಂಭವಾಗಲಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. ಮತ ಎಣಿಕೆಗೆ ಉಸ್ತುವಾರಿಗಳಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಡಾ.ರವಿಶಂಕರ ಜೆ, ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಮುನೀಶ್ ಮೌಜ್ಗಿಲ್ ಹಾಗೂ ವಾಯವ್ಯ ಪದವೀಧರ ಕ್ಷೇತ್ರಕ್ಕೆ ರಾಜೇಂದ್ರ ಕುಮಾರ …
Read More »ಬೆಳಗಾವಿ ಬಳ್ಳಾರಿ ನಾಲೆಯ ಸೇತುವೆ ಕಾಮಗಾರಿಯು ಅತ್ಯಂತ ತ್ವರಿತವಾಗಿ ನಡೆಯುತ್ತಿದೆ.
ಬೆಳಗಾವಿಯ ಬಸವನಕುಡಚಿಯ ಹೊಲಗದ್ದೆಯಲ್ಲಿರುವ ಬಳ್ಳಾರಿ ನಾಲೆಯ ಸೇತುವೆ ಕಾಮಗಾರಿಯು ಅತ್ಯಂತ ತ್ವರಿತವಾಗಿ ನಡೆಯುತ್ತಿದೆ. ಪ್ರತಿ ವರ್ಷ ಮಳೆಯ ಆರ್ಭಟಕ್ಕೆ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಪ್ಲಾಸ್ಟಿಕ್ ಬಾಟಲಿಗಳು ನಾಲಾದಲ್ಲಿ ಜಲಾವೃತವಾಗಿವೆ. ಇಂಜೆಕ್ಷನ್ ಸೂಜಿ ಗದ್ದೆಯಲ್ಲಿ ಹರಡಿ ರೈತರ ಕಾಲಿಗೆ ಚುಚ್ಚುತ್ತಿದೆ. ಗ್ರಾಮಸ್ಥರು ಕಳೆದ 20 ವರ್ಷಗಳಿಂದ ಹಲವು ಬಾರಿ ದೂರು ನೀಡಿದರೂ ಆಡಳಿತ ಗಮನಕ್ಕೆ ತಂದರೂ ಕೂಡ ಯಾವುದೇ ಕೆಲಸವಾಗಿಲ್ಲ. ಹೀಗಾಗಿ ಕುಡಚಿ ಗ್ರಾಮದಲ್ಲಿ ಶಾಸಕ ಅನಿಲ್ ಬೆನಕೆ …
Read More »ಬೆಳಗಾವಿಗೆ ಮಂಜೂರಾಗಿದ್ದ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಪೀಠ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಿರುವುದು ದುರ್ದೈವ
ಬೆಳಗಾವಿಗೆ ಮಂಜೂರಾಗಿದ್ದ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಪೀಠ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಿರುವುದು ದುರ್ದೈವದ ಸಂಗತಿ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ತಿಳಿಸಿದ್ದಾರೆ. ಬೆಳಗಾವಿಗೆ ಯಾವುದೇ ಒಂದು ಸರಕಾರಿ ಯೋಜನೆ ಪಡೆಯಬೇಕೆಂದರೆ ಹೋರಾಟದ ಮೂಲಕವೆ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಎಟಿ ಪೀಠ ಸ್ಥಾಪನೆ ಮಾಡುವಾಗ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಳಾಂತರವಾಗುವಾಲು ಹೋರಾಟ, ಬೆಳಗಾವಿಗೆ ಏಮ್ಸ್ ಬರಬೇಕೆಂದು ಹೋರಾಟ ನಡೆಸಲಾಗುತ್ತಿದೆ. ಇದರ ನಡುವೆಯೇ ಬೆಳಗಾವಿಗೆ ಮಂಜೂರಾಗಿದ್ದ …
Read More »ನಕಲಿ ಎಸಿಬಿ ಅಧಿಕಾರಿಗಳನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸರಕಾರಿ ಅಧಿಕಾರಿಗಳಿಗೆ ಫೋನ್ ಮಾಡಿ ಅಕೌಂಟ್‍ಗೆ ಹಣ ಹಾಕುವಂತೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಎಸಿಬಿ ಅಧಿಕಾರಿಗಳನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಾವು ಎಸಿಬಿ ಅಧಿಕಾರಿಗಳೆಂದು ನಂಬಿಸಿ ಸರಕಾರಿ ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿದ್ದ ಮೂವರು ಖದೀಮರನ್ನು ಬೆಳಗಾವಿಯ ಸಿಎಎನ್ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರ್‍ಪಡಿಸಿದ್ದಾರೆ. ಬಂಧಿತರನ್ನು ಚಿಕ್ಕೋಡಿಯ ಸದಲಗಾ ಮೂಲದ 56ವರ್ಷದ ಮುರಗೆಪ್ಪ ನಿಂಗಪ್ಪ ಪೂಜಾರ್, …
Read More »ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟ್ಟಿದ್ದಾರೆ. ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ. ಬೆಳಗಾವಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚುನಾವಣೆಯಲ್ಲಿ ಹಣ ಹಂಚಿದ್ರು, ಹೆಂಡಾ ಹಂಚಿದ್ರು ಅನ್ನೋಕಿಂತಲೂ. ವಿಧಾನಸಭೆಯಲ್ಲಿ ಜೆಡಿಎಸ ಶಾಸಕ ಶ್ರೀನಿವಾಸ ಅವರೇ ಹೇಳಿದ್ರು. ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ಬೀಳಿಸಲು …
Read More »ರಾತ್ರಿಯಿಂದ ಜಿಲ್ಲೆಯಲ್ಲಿ 144ಸೆಕ್ಷನ್ ಜಾರಿ
ಬೆಳಗಾವಿ: ವಿಧಾನ ಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕಕರ ಮತಕ್ಷೇತ್ರಗಳ ಮತದಾನ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆ ಜೂನ್ 15 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಶಾಂತಿಯುತ, ಸುವ್ಯವಸ್ಥಿತ ಮತ ಎಣಿಕೆ ಪ್ರಕ್ರಿಯೆ ಕಾರಣಕ್ಕಾಗಿ ಜೂನ್ 14ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 15ರ ಮಧ್ಯರಾತ್ರಿ 12 ಗಂಟೆಯವರೆಗೆ ಮತ ಎಣಿಕಾ ಕೇಂದ್ರ ಜ್ಯೋತಿ ಪದವಿ ಪೂರ್ವ ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿ …
Read More »ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯುವಕ
ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಓರ್ವ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ದೇಸೂರ ರೈಲು ನಿಲ್ದಾಣದ ಬಳಿ ನಡೆದಿದೆ. ದೇಸೂರ ರೈಲು ನಿಲ್ದಾಣ ಹಾಗೂ ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜ್ ರೈಲ್ವೇ ಗೇಟ್ ಹತ್ತಿರ ಈ ಘಟನೆ ಸಂಭವಿಸಿದೆ. ಅಂದಾಜು 25 ವಯಸ್ಸಿನ ಯುವಕನಾಗಿದ್ದು. 5.7 ಅಡಿ ಎತ್ತರ, ಸಾದ ಗೆಂಪು ಬಣ್ಣ, ಮೈಯಿಂದ ತೆಳ್ಳಗೆ, ಉದ್ದು ಮುಖ, ನೀಟಾದ ಮೂಗು, ತಲೆಯಲ್ಲಿ 2 ಇಂಚ ಕಪ್ಪು ಕೂದಲು …
Read More »ಮತಗಟ್ಟೆಯಲ್ಲಿ ಸಿಬ್ಬಂದಿ ಜೊತೆ ಮಾತನಾಡಿ, ಫೋನ್ ಬಳಕೆ ಮಾಡಿ, ಮಾಸ್ಕ್ ಹಾಕಿಲ್ಲ ಎಂಬ ಆರೋಪ ಶಾಸಕ ಅನಿಲ ಬೇನಕೆ ಮೇಲೆ..?
ಬೆಳಗಾವಿ: ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಬಿರುಸುಗೊಂಡಿದ್ದು, ಈ ನಡುವೆ ಬಿಜೆಪಿ ಶಾಸಕ ಅನಿಲ್ ಬೆನಕೆ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಮತಗಟ್ಟೆಗೆ ಆಗಮಿಸಿದ ಶಾಸಕ ಅನಿಲ್ ಬೆನಕೆ ಮತಗಟ್ಟೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ ಅಲ್ಲದೇ ಮೊಬೈಲ್ ನಲ್ಲಿಯೂ ಮಾತನಾಡಿದ್ದಾರೆ. ಈ ಮೂಲಕ ಶಾಸಕರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಮತಗಟ್ಟೆಗೆ ಮೊಬೈಲ್ ಫೋನ್ …
Read More »