ಭಾರೀ ಮಳೆಯ ನೀರಿನಿಂದ ಮುಳುಗಡೆಯಾದ ಗೋಕಾಕ – ಶಿಂಗಳಾಪುರ ಸೇತುವೆ ಮೇಲೆ ಬೈಕ್ ಸವಾರರು ಯಾವುದೇ ಭಯವಿಲ್ಲದೇ ಸಂಚಾರ ಮಾಡುತ್ತಿದ್ದು, ಜೀವವನ್ನು ಲೆಕ್ಕಿಸದೇ ಮುಳುಗಡೆಯಾಗಿರುವ ಸೇತುವೆಯ ಮೇಲೆ ಎಗ್ಗಿಲ್ಲದೇ ಸಂಚಾರ ನಡೆಸಿದ್ದಾರೆ. ವಿಪರೀತ ಮಳೆಯಿಂದಾಗಿ ಮುಳುಗಡೆಯಾದ ಗೋಕಾಕ- ಶಂಗಳಾಪೂರ್ ಸೇತುವೆ ಮೇಲೆ ಭಯವಿಲ್ಲದೇ ವಾಹನ,ಹಾಗೂ ಬೈಕ್‌ಗಳ ಸವಾರರು ಸಂಚಾರ ಮಾಡುತ್ತಿದ್ದಾರೆ. ಗೋಕಾಕ ಪಟ್ಟಣದ ಹೊರವಲಯದಲ್ಲಿರುವ ಈ ಸೇತುವೆ ಮಳೆ ಹೆಚ್ಚಾಗಿ ಸುರಿದಿದ್ದರಿಂದ ಗರಿಯುವ ನೀರಿನ ಪ್ರಮಾಣ ಹೆಚ್ಚಾಗಿ ಸೇತುವೆ ಜಲಾವೃತಗೊಂಡಿದೆ. …
Read More »B.I.M.S ಆಸ್ಪತ್ರೆಯಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳ : ರೆಡ್ ಹ್ಯಾಂಡ್‍ಆಗಿ ಹಿಡಿದು ಪೊಲೀಸರಿಗೆ ಒಪ್ಪಸಿದ ಸಿಬ್ಬಂದಿ,
ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ರೋಗಿಗಳ ಸಂಬಂಧಿಗಳು ಹಾಗೂ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ರೋಗಿಗಳ ಸಂಬಂಧಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಹಣ, ಮೊಬೈಲ್ ಕದಿಯುತ್ತಿದ್ದ ಆರೋಪದ ಹಿನ್ನೆಲೆ ನಿನ್ನೆ ರಾತ್ರಿ ಆರೋಪಿ ಮಾರುತಿ ಮಂಗಸೂಳಿ ಎಂಬಾತನನ್ನು ಹಿಡಿದು ಎಪಿಎಂಸಿ ಪೊಲೀಸರ …
Read More »ನಿರಂತರ ಮಳೆಖಾನಾಪುರ ತಾಲೂಕಿನ ಪ್ರಾಥಮಿಕ ಶಾಲೆಯ ಗೋಡೆಯೂ ತೇವಗೊಂಡು ಕುಸಿತ
ಬೆಳಗಾವಿ: ಕಳೆದೊಂದು ವಾರದಿಂದ ಕುಂದಾನಗರಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಖಾನಾಪುರ ತಾಲೂಕಿನ ಗುರ್ಲಗಂಜಿ ಗ್ರಾಮದ ಶಾಲಾ ಕೊಠಡಿಯೊಂದು ಕುಸಿದು ಬಿದ್ದಿದೆ. ಇನ್ನೊಂದೆಡೆ, ಮುಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಯೂ ತೇವಗೊಂಡು ಕುಸಿತವಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಖಾನಾಪೂರ ತಾಲೂಕಿನಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಶಾಲಾ ಗೋಡೆಗಳು ಮಳೆ ಅಬ್ಬರಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ …
Read More »ಕುಸಿಯುತ್ತಿದೆ ದೊಡ್ಡ ಕೆರೆ ತಡೆಗೋಡೆ
ಎಂ.ಕೆ.ಹುಬ್ಬಳ್ಳಿ: ಬೆಳೆದ ಗಿಡಕಂಟಿಗಳು, ತಿಪ್ಪೆ ಗುಂಡಿಗಳು, ಬೀಳುತ್ತಿರುವ ತಡೆಗೋಡೆಗಳು, ತ್ಯಾಜ್ಯಗಳನ್ನು ಎಸೆಯುವ ಜಾಗೆಯಾಗಿದೆ ಇಟಗಿ ಗ್ರಾಮದ ದೊಡ್ಡ ಕೆರೆ. ಒಂದು ಕಾಲಕ್ಕೆ ಈ ಕೆರೆ ನೀರನ್ನು ದೇವರ ಪೂಜೆಗೂ, ದಿನಬಳಕೆಗೂ ಉಪಯೋಗಿಸುತ್ತಿದ್ದರು ಎಂದರೆ ಈಗ ಯಾರೂ ನಂಬಲು ಸಾಧ್ಯವಿಲ್ಲ. ಸಣ್ಣ ನೀರಾವರಿ ಇಲಾಖೆ ಉಸ್ತುವಾರಿಯಲ್ಲಿರುವ ಸುಮಾರು 53 ಎಕರೆ 15 ಗುಂಟೆ ಈ ಕೆರೆಯತ್ತ ಯಾವೋಬ್ಬ ಅಧಿ ಕಾರಿಗಳು ಗಮನ ಹರಿಸುತ್ತಿಲ್ಲ. ಮಳೆಗಾಲ ಮುಗಿದು ಮತ್ತೆ ಮತ್ತೆ ಬಂದರೂ, ಕೆರೆ …
Read More »ಅಮರನಾಥದಲ್ಲಿ ಹವಾಮಾನ ವೈಪರೀತ್ಯಕ್ಕೆ ಹೈರಾಣಾದ ಬೆಳಗಾವಿಯ ಪ್ರವಾಸಿಗರು
ಬೆಳಗಾವಿ: ಪ್ರಸಿದ್ಧ ಯಾತ್ರಾ ಸ್ಥಳ ಅಮರನಾಥ ದರ್ಶನಕ್ಕೆ ತೆರಳಿರುವ ಬೆಳಗಾವಿಯ 32 ಜನರ ತಂಡ ಹವಾಮಾನ ವೈಪರೀತ್ಯದಿಂದಾಗಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶೇಷನಾಗದಿಂದ ಮರಳಿ ಪೆಹಲಗಾಮ್ ಎಂಬ ಪ್ರದೇಶಕ್ಕೆ ವಾಪಸ್ಸಾಗಿದ್ದು, ಮೇಘ ಸ್ಪೋಟ ಆಗಿ ಗುಡ್ಡ ಕುಸಿತಗೊಂಡಿರುವ ಮಾರ್ಗ ಬಂದ್ ಮಾಡಿದ್ದರಿಂದ ದರ್ಶನಕ್ಕಾಗಿ ಇನ್ನೂ 2-3 ದಿನ ಕಾಯಬೇಕಾಗಿದೆ. ಶೇಷನಾಗ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ಆಮ್ಲಜನಕ ಕೊರತೆ ಉಂಟಾಗುತ್ತಿದ್ದು, ಹೀಗಾಗಿ ಆರೋಗ್ಯದಲ್ಲಿ ಏರುಪೇರು …
Read More »ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಉಪನದಿಗಳಿಗೆ ಉಂಟಾದ ಭೀಕರ ಪ್ರವಾಹದ ಸಂತ್ರಸ್ತರ ಕಣ್ಣಿರೂ ಮಾತ್ರ ಇನ್ನೂ ನಿಂತಿಲ್ಲ
ಚಿಕ್ಕೋಡಿ: ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಉಪನದಿಗಳಿಗೆ ಉಂಟಾದ ಭೀಕರ ಪ್ರವಾಹದ ಸಂತ್ರಸ್ತರ ಕಣ್ಣಿರೂ ಮಾತ್ರ ಇನ್ನೂ ನಿಂತಿಲ್ಲ. ಪ್ರವಾಹದಲ್ಲಿ ಕೊಚ್ಚಿ ಹೋದ ರಸ್ತೆ, ಬ್ರಿಡ್ಜ್ಗಳ ಕಾಮಗಾರಿ ಮುಕ್ತಾಯಗೊಂಡಿವೆ. ಆದರೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಇದರಿಂದ ನದಿ ತೀರದ ಜನ ಸಂಕಷ್ಟ ಪಡುವಂತಾಗಿದೆ. ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಪಾರ …
Read More »ಧಾರವಾಡ ಯುವತಿಯ ಹೃದಯ ಬೆಳಗಾವಿ ಯುವಕನಿಗೆ ಕಸಿ
ಬೆಳಗಾವಿ: ಮಿದುಳು ನಿಷ್ಕ್ರಿಯವಾದ ಯುವತಿಯೊಬ್ಬರ ಹೃದಯವನ್ನು ಧಾರವಾಡದಿಂದ ಬೆಳಗಾವಿಗೆ ಝೀರೊ ಟ್ರಾಫಿಕ್ ನಲ್ಲಿ ಸಾಗಿಸಲು ಕ್ಷಿಪ್ರ ಸಿದ್ಧತೆ ನಡೆಸಲಾಗಿದೆ. ಅಪಘಾತದಿಂದ ಗಾಯಗೊಂಡ ಯುವತಿಯೊಬ್ಬರು ಧಾರವಾಡ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಮಿದುಳು ನಿಷ್ಕ್ರಿಯವಾಗಿದ್ದು, ಹೃದಯ ಬಡಿದುಕೊಳ್ಳುತ್ತಿದೆ. ಇದೇ ಕಾಲಕ್ಕೆ ಹೃದ್ರೋಗದಿಂದ ಬಳಲುತ್ತಿರುವ ಯುವಕ ಬೆಳಗಾವಿಯ ಕೆಎಲ್‌ಇಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಯುವಕನಿಗೆ ಹೃದಯ ಕಸಿ ಮಾಡಬೇಕಾಗಿದೆ. ಹೀಗಾಗಿ, ಧಾರವಾಡದ ಯುವತಿಯ ಹೃದಯವನ್ನೇ ಬೆಳಗಾವಿಯ ಯುವಕನಿಗೆ ಕಸಿ ಮಾಡಲು ಯುವತಿ ಪಾಲಕರು ಸಮ್ಮತಿಸಿದ್ದಾರೆ. …
Read More »ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ.: ಗೋವಿಂದ ಕಾರಜೋಳ
ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರವಾಹ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯಕ್ಕೆ ಒಳಹರಿವು ಪ್ರಮಾಣ ತುಂಬಾ ಕಡಿಮೆ ಇದೆ. ಎರಡು ದಿನಗಳ ಹಿಂದೆ 30 ಟಿಎಂಸಿ ಅಡಿಯಷ್ಟು ನೀರು ಅಲ್ಲಿ ಸಂಗ್ರಹವಾಗಿದೆ. ಅದರ ಸಂಗ್ರಹಣಾ ಸಾಮರ್ಥ್ಯ ಒಟ್ಟು 105 ಟಿಎಂಸಿ ಅಡಿ. ಅದು ಸಂಪೂರ್ಣ ತುಂಬುವವರೆಗೆ ನೀರನ್ನು ಹೊರ ಬಿಡುವುದಿಲ್ಲ. …
Read More »ಸುರಿಯುತ್ತಿರುವ ಮಳೆ ಮಾಣಿಕಬಾಗ್ ಸರ್ವೀಸ್ ರಸ್ತೆ ಕುಸಿದಿದ್ದು ಟ್ರಕ್‍ನ ಚಕ್ರಗಳು ಸಿಲುಕಿಹಾಕಿಕೊಂಡಿವೆ.
ಬೆಳಗಾವಿಯಲ್ಲಿ ಹಳೆಯ ಪುನಾ ಬೆಂಗಳೂರು ರಸ್ತೆಯ ಬ್ರಿಡ್ಜ್ ಕೆಳಗಡೆ ಇರುವ ಮಾಣಿಕಬಾಗ್ ಸರ್ವೀಸ್ ರಸ್ತೆ ಕುಸಿದಿದ್ದು ಭಾರೀ ಟ್ರಕ್‍ನ ಚಕ್ರಗಳು ರಸ್ತೆ ಕುಸಿತದಲ್ಲಿ ಸಿಲುಕಿಹಾಕಿಕೊಂಡಿತ್ತು. ಹೌದು ಬೆಳಗಾವಿ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಕುಸಿಯುತ್ತಿವೆ. ಬೆಳಗಾವಿಯ ಹಳೆಯ ಪುನಾ ಬೆಂಗಳೂರು ರಸ್ತೆಯ ಬ್ರಿಡ್ಜ್ ಕೆಳಗಡೆ ಇರುವ ಮಾಣಿಕಬಾಗ್ ಸರ್ವೀಸ್ ರಸ್ತೆ ಕುಸಿದಿದ್ದು ಟ್ರಕ್‍ನ ಚಕ್ರಗಳು ಸಿಲುಕಿಹಾಕಿಕೊಂಡಿವೆ. ಭಾರೀ ಲೋಡ್‍ನ್ನು ಹೊತ್ತು ಸಾಗುತ್ತಿದ್ದ ಟ್ರಕ್‍ನ ಹಿಂದಿನ ಚಕ್ರಗಳು ರಸ್ತೆ ಕುಸಿದು ಸಿಲುಕಿಹಾಕಿಕೊಂಡಿತ್ತು …
Read More »12 ಕ್ವಿಂಟಾಲ್ ರೇಶನ್ ಅಕ್ಕಿ ಜಪ್ತಿ ವಶಕ್ಕೆ ಪಡೆದುಕೊಳ್ಳುವಲ್ಲಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಠಾಣೆ ಪೊಲೀಸರು ಯಶಸ್ವಿ
ಟ್ರಕ್‍ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ರೇಶನ್ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಗಾಂಧಿನಗರದಿಂದ ಕೊಲ್ಲಾಪುರಕ್ಕೆ ರೇಶನ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಂಕೇಶ್ವರ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಗಳು 12 ಕ್ವಿಂಟಾಲ್ ಅಕ್ಕಿಯನ್ನು ಟ್ರಕ್ ಸಮೇತ ಜಪ್ತಿ ಮಾಡಿದ್ದಾರೆ. ಏಂ 24 1751 ಅಶೋಕ್ ಲೈಲೆಂಡ್ ಟ್ರಕ್ ಇದಾಗಿದೆ. ಬೆಳಗಾವಿ ತಾಲೂಕಿನ ಬಸವಣ್ಣ ಕುಡಚಿ …
Read More »