Breaking News

ಬೆಳಗಾವಿ

ಬೆಳಗಾವಿ: ಬೆಳಗಾವಿಯ ಬೂತರಾಮನಹಟ್ಟಿಯ ಸರಕಾರಿ ಶಾಲೆ ಎಲ್ಲದಕ್ಕೂ ಪ್ರಭುದ್ಧ

ಬೆಳಗಾವಿ: ಬೆಳಗಾವಿಯ ಬೂತರಾಮನಹಟ್ಟಿಯ ಸರಕಾರಿ ಶಾಲೆ ಎಲ್ಲದಕ್ಕೂ ಪ್ರಭುದ್ಧ ಮಕ್ಕಳು ಖುಷಿಯಿಂದ ಸೈ ಎಂದು ಈ ಒಂದು ಶಾಲೆಗೆ ಬರುತ್ತವೆ ಎಂಬ ಮಾತುಗಳು ಕೂಡ ಕೇಳಿ ಬರುತ್ತೆ . ಇನ್ನು ಇವತ್ತು ಈ ಶಾಲೆ ಬಗ್ಗೆ ಯಾಕೆ ಹೇಳೋದು ಅಂದ್ರೆ ಇಲ್ಲಿನ ಶಾಲೆಯ ಆಡಳಿತ ಮಂಡಳಿಯವರು ಬೆಳಗಾವಿ ವಿಧಾನ ಪರಿಷತ್ ಸದಸ್ಯರಾದ   ಶ್ರೀ ಲಖನ ಜಾರಕಿಹೊಳಿ ಅವರಿಗೆ ಭೇಟಿ ಮಾಡಿ ನಮ್ಮ ಶಾಲೆಗೆ ಮಕ್ಕಳಿಗೆ ಬೆಂಚಗಳ ಅವಶ್ಯಕತೆ ತುಂಬಾ …

Read More »

ಘಟಪ್ರಭಾ : ಬೈಕ್ ಕಳುವು ಆರೋಪಿ ಅರೆಸ್ಟ್

ಘಟಪ್ರಭಾ: ಬೈಕ್ ಗಳನ್ನು ಕಳುವು ಮಾಡುತ್ತಿದ್ದ ಆರೋಪಿಯೊಬ್ಬನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.   ಇಷ್ಟಕ್ಕೂ ಈತನ ಬಳಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದು ಬರಿ ಒಂದೆರಡು ಬೈಕ್ ಗಳಲ್ಲ. ಬರೊಬ್ಬರಿ 11 ಬೈಕ್ ಗಳು !   ಪೊಲೀಸರು ಈತನನ್ನು ವಿಚಾರಣೆಗೆ ಗುರಿಪಡಿಸಿದ್ದು ಘಟಪ್ರಭಾ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read More »

B.J.P. ಪಕ್ಷದ ವಿರುದ್ಧ ಇಷ್ಟೊಂದು ಆಕ್ರೋಶ ಎಂದೂ ವ್ಯಕ್ತವಾಗಿರಲಿಲ್ಲ: ಅಭಯ್ ಪಾಟೀಲ

ಬೆಳಗಾವಿ: ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ಸರ್ಕಾರ ಏನು ಮಾಡುತ್ತಿಲ್ಲ ಅನೋ ಭಾವನೆ ತಪ್ಪು. ಭಾರತದ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಬೇಕು. ಈ ರೀತಿಯ ಮಾಡುವವರನ್ನು ಎನ್​ಕೌಂಟರ್ ಮಾಡಬೇಕೆಂದು ಬಿಜೆಪಿ ಶಾಸಕ ಅಭಯ್ ಪಾಟೀಲ ಆಗ್ರಹಿಸಿದರು. ನಾನು 32 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈವರೆಗೆ ಪಕ್ಷದ ವಿರುದ್ಧ ಇಷ್ಟೊಂದು ಆಕ್ರೋಶ ಎಂದೂ ವ್ಯಕ್ತವಾಗಿರಲಿಲ್ಲ. ಇದೇ ಮೊದಲು ಆಕ್ರೋಶ ವ್ಯಕ್ತವಾಗಿದ್ದು ಸತ್ಯವು‌ ಇದೆ. ಪಕ್ಷಕ್ಕಾಗಿ ಶ್ರಮ‌ ವಹಿಸುತ್ತಾರೆ. ಕುಟುಂಬ, …

Read More »

ಇಸ್ಟೀಟ್ ಅಡ್ಡೆ ಮೇಲೆ ಬೈಲಹೊಂಗಲ ಪೊಲೀಸ್ ಭರ್ಜರಿ ದಾಳಿ

ಬೈಲಹೊಂಗಲ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಗ್ಯಾಂಬ್ಲಿಂಗ್ ಅಡ್ಡೆಯನ್ನು ಭೇದಿಸಿದ್ದಾರೆ. ಹೌದು ನಿನ್ನೆ ತಡರಾತ್ರಿ ಬೈಲಹೊಂಗಲ ಪಟ್ಟಣದಲ್ಲಿ ಖಚಿತ ಮಾಹಿತಿ ಮೇರೆಗೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಇಸ್ಪೀಟ್ ಆಡುತ್ತಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1,10,320 ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ

Read More »

ಬೆಳಗಾವಿ ಡಿಸಿ ಕಚೇರಿ ಆವರಣ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಟ್ಟ ಡಿಸಿ ನಿತೇಶ ಪಾಟೀಲ್

ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಡಿಸಿ ಕಚೇರಿ ಸುತ್ತಲೂ ವಿವಿಧ ಅಭಿವೃದ್ಧಿ ಮಾಡಲು ಡಿಸಿ ನಿತೇಶ ಪಾಟೀಲ್ ದೃಢವಾದ ಹೆಜ್ಜೆ ಇಟ್ಟಿದ್ದಾರೆ. ಹೌದು ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಳಗಾವಿಯ ಡಿಸಿ ಕಚೇರಿಗೆ ವಿವಿಧ ತಾಲೂಕುಗಳ ಗ್ರಾಮಗಳಿಂದ ದಿನನಿತ್ಯ ಸಾವಿರಾರು ಜನರು ಬರುತ್ತಾರೆ. ಅನೇಕ ಜಿಲ್ಲಾಧಿಕಾರಿಗಳು ಬೆಳಗಾವಿಗೆ ಬಂದು ಹೋಗಿದ್ದಾರೆ. ಆದರೆ ನಿತೇಶ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡ ತಕ್ಷಣವೇ ತಮ್ಮ ಕಚೇರಿ ಸುತ್ತಮುತ್ತಲಿನ ಅಂಗಡಿ, …

Read More »

ಹೂಲಿಕಟ್ಟಿಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ

ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ‌ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಚಿರತೆ ಹೆಜ್ಜೆ ಗುರುತು ಪತ್ತೆಯಾಗಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ‌ ಆತಂಕ ಮನೆ ಮಾಡಿದೆ. ಹೂಲಿಕಟ್ಟಿ ಗ್ರಾಮದಲ್ಲಿ ನೆಲದ ಮೇಲೆ ಚಿರತೆ ಹೆಜ್ಜೆ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸವದತ್ತಿ ವಲಯ ಅರಣ್ಯ ಅಧಿಕಾರಿಗಳು ಚಿರತೆಯ ಹೆಜ್ಜೆಯನ್ನು ಗುರುತು ಮಾಡಿದ್ದಾರೆ. ವಿಶೇಷ ತಂಡ ರಚಿಸಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ …

Read More »

ಎಸಿಬಿಗೆ ಭ್ರಷ್ಟಾಚಾರ ಪ್ರಕರಣದ ತನಿಖಾ ವಿಧಾನವೇ ಗೊತ್ತಿಲ್ಲ: ಹೈಕೋರ್ಟ್ ಚಾಟಿ

ಬೆಂಗಳೂರು: ಎಸಿಬಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೇಗೆ ಸರಿಯಾಗಿ ತನಿಖೆ ನಡೆಸಬೇಕೆನ್ನುವ ವಿಧಾನವೇ ಸರಿಯಾಗಿ ತಿಳಿದಿಲ್ಲ. ತನಿಖಾ ಪದ್ಧತಿಯಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮತ್ತೊಮ್ಮೆ ಚಾಟಿ ಬೀಸಿದೆ. ಹೈಕೋರ್ಟ್​​ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಎಸಿಬಿಯು ತನಿಖೆಯಲ್ಲಿ ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇಂತಹ ತಪ್ಪುಗಳನ್ನು ನೋಡಿಕೊಂಡು ನ್ಯಾಯಾಲಯ ಸುಮ್ಮನೆ ಕೂರಲಾಗದು ಎಂದು ಎಸಿಬಿಯನ್ನು ತರಾಟೆಗೆ ತಗೆದುಕೊಂಡರು. ತಮ್ಮ ಮೇಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಎಸಿಬಿ ಸರಿಯಾಗಿ ತನಿಖೆ …

Read More »

ಬೆಳಗಾವಿ ನಗರದಲ್ಲಿ ಮಹಿಳಾ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರ ಬಂಧನ

ಬೆಳಗಾವಿ: ತಾಲೂಕಿನ ಹಿಂಡಲಗಾ-ಸುಳಗಾ ರೋಡ್​ನಲ್ಲಿರುವ ಅಂಬಿಕಾ ಲಾಡ್ಡ್ & ಬೋರ್ಡಿಂಗ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಮಹಿಳಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನಗರದಲ್ಲಿ ಮಹಿಳಾ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಗರದ ಹಿಂಡಲಗಾ – ಸುಳಗಾ ರೋಡನಲ್ಲಿರುವ ಅಂಬಿಕಾ ಲಾಡ್ಡ್ & ಬೋರ್ಡಿಂಗ್​ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 4 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಹಿಳಾ ಪೊಲೀಸ್ …

Read More »

ಬೆಳಗಾವಿಯಲ್ಲಿ ಉದ್ಧವ್ ಠಾಕ್ರೆ ಅವರ ಹುಟ್ಟು ಹಬ್ಬ ಆಚರಣೆ

ಬೆಳಗಾವಿಯ ಶಿವಸೇನಾ ವತಿಯಿಂದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಜನುಮ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಳಗಾವಿಯ ಟಿಳಕ ಚೌಕ್‍ನಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಹುಟ್ಟು ಹಬ್ಬವನ್ನು ಸ್ಥಳೀಯ ಹಿರಿಯ ನಾಗರಿಕ ಮಹಾದೇವ ಅವರ ಕೈಯಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಬಳಿಕ ನೆರೆದಿದ್ದ ಸಾರ್ವಜನಿಕರಿಗೆ ಸಿಹಿಯನ್ನು ಹಂಚಿ, ಉದ್ಧವ್ ಠಾಕ್ರೆ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಬೆಳಗಾವಿಯ ಶಿವಸೇನಾ …

Read More »

ಬಿಜೆಪಿಯವರಿಗೆ ತಿರಂಗಾ ಝಂಡಾ ಹಾರಿಸೋ ಅಧಿಕಾರ ಇಲ್ಲ: ಸತೀಶ ಜಾರಕಿಹೊಳಿ

ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಇಡೀ ರಾಜ್ಯಾಧ್ಯಂತ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಪರಿವರ್ತನೆ ಮಾಡಿ ಆಚರಿಸುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಗೋಕಾಕ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ 12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಮೌಢ್ಯತೆ ಆಚರಿಸುವುದು ಸರಿಯಲ್ಲ ಎಂದು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಆದರೆ ಇನ್ನು ಕೂಡ ಜನರು ಮೂಢನಂಬಿಕೆ, ಮೌಢ್ಯತೆಯಲ್ಲಿಯೇ ಮುಳುಗಿದ್ದಾರೆ. ಇದನ್ನು ಬದಲಾವಣೆ …

Read More »