Breaking News

ಬೆಳಗಾವಿ

ಸತತ ಮಳೆಯ ಅಬ್ಬರ ಹಲಸಿ ಗ್ರಾಮದಲ್ಲಿಯೂ ಎರಡು ಮನೆಗಳ ಗೋಡೆಗಳು ಬಿದ್ದಿವೆ.

ಸತತ ಮಳೆಯ ಅಬ್ಬರಕ್ಕೆ ಖಾನಾಪೂರ ತಾಲೂಕಿನ ಮನೆಗಳು, ಮನೆಗಳ ಗೋಡೆಗಳು ಬೀಳುವ ವರದಿಗಳು ಸಂಭವಿಸುತ್ತಲ್ಲೇ ಇದ್ದು ಐತಿಹಾಸಿಕ ಹಲಸಿ ಗ್ರಾಮದಲ್ಲಿಯೂ ಎರಡು ಮನೆಗಳ ಗೋಡೆಗಳು ಬಿದ್ದಿವೆ. ಹಲಸಿ ಗ್ರಾಮದ ಜಹೂರ ಅಬ್ಬಾಸಿ ಮತ್ತು ಚನ್ನಬಸವರಾಜ ಡಿಗ್ಗಿಮಠ ಎಂಬವರಿಗೆ ಸೇರಿದ ಎರಡು ಮನೆ ಗೋಡೆಗಳು ಹಿಂಬದಿಯಿಂದ ಬಂದಿದ್ದು, ಅದೃಷ್ಟವಶ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಎರಡು ಮನೆಗಳ ಗೋಡೆಗಳು ಸತತ ಮಳೆಯಿಂದ ನೆನೆದು, ಉಳಿದ ಮನೆಯೂ ಕೂಡಾ ಅಪಾಯಕಾರಿ ಸ್ಥಿತಿಯಲ್ಲಿವೆ. ಇದನ್ನು …

Read More »

ಧರ್ಮಟ್ಟಿಯಲ್ಲಿ ಕಾಣಿಸಿಕೊಂಡ ಚಿರತೆ: ಎಚ್ಚರಿಕೆಯಿಂದಿರಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ.

ಮೂಡಲಗಿ: ಗುರುವಾರದಂದು ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ. ಧರ್ಮಟ್ಟಿ ಗ್ರಾಮದ ಅನಿಲ ಮಂದ್ರೋಳ್ಳಿ ಅವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿಕ್ಕೋಡಿ ತಾಲೂಕಿನಿಂದ ಈ ಚಿರತೆ ಬಂದಿರಬಹುದೆಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತೆಯಿಂದ ಇರಬೇಕು. ಚಿರತೆಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ತಹಶೀಲದಾರ …

Read More »

ಹಿಡಕಲ್ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬೆಳಗಾವಿ: ಘಟಪ್ರಭಾ ನದಿಗೆ ನಿರ್ಮಿಸಲಾದ ಹಿಡಕಲ್ (ರಾಜಾ ಲಖಮಗೌಡ) ಜಲಾಶಯ ಶೇ. 94ರಷ್ಟು ಭರ್ತಿಯಾಗಿದ್ದು ಕೆಲವೇ ಗಂಟೆಗಳಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.  ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2175 ಅಡಿಗಳಿದ್ದು ಗುರುವಾರ ಬೆಳಗ್ಗ 8.30ರ ವೇಳೆಗೆ 2171.333 ಅಡಿ ನೀರಿದೆ. ಒಳಹರಿವಿನ ಪ್ರಮಾಣ 29133 ಕ್ಯೂಸೆಕ್ ಇರುವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಘಟಪ್ರಭಾ …

Read More »

ಪುಟ್ಟ ಗುಡಿಸಲಿಂದ ವಿದೇಶ ತಲುಪಿದ ಗೋಕಾಕ್​​​ ಕರದಂಟು ಸ್ವಾದ..!

ಬೆಳಗಾವಿ: ಗೋಕಾಕ್ ಅಂದಾಕ್ಷಣ ಥಟ್‌ನೇ ನೆನಪಾಗೋದು ಗೋಕಾಕ್ ಫಾಲ್ಸ್ ಹಾಗೂ ಗೋಕಾಕ್ ಕರದಂಟು. ಅದರಲ್ಲೂ ಗೋಕಾಕನ‌ ಕರದಂಟು ಅಂದ್ರೆ ವರ್ಲ್ಡ್ ಫೇಮಸ್. ಭಾರತ ಅಷ್ಟೇ ಅಲ್ಲ ಅಮೆರಿಕ, ಖತಾರ್‌ ಸೇರಿ ವಿದೇಶಗಳಲ್ಲೂ ಗೋಕಾಕ್ ಕರದಂಟು ರಪ್ತಾಗುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್​ ಪಟ್ಟಣದಲ್ಲಿ ಕರದಂಟನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಶಂಕರ್ ದೇವರಮನಿ (80) ಎಂಬುವವರ ಮಾಲೀಕತ್ವದ ಸದಾನಂದ ಸ್ವೀಟ್ಸ್ ಗೋಕಾಕ್​ ಕರದಂಟು ದೇಶ ವಿದೇಶಗಳಿಗೆ ರಪ್ತು ಆಗುತ್ತದೆ. ಕರದಂಟು ಗರ್ಭಿಣಿ, ಬಾಣಂತಿಯರು, …

Read More »

ಸಾವಿರಾರು ಸಹೋದರರಿಗೆ ರಾಖಿ ಕಟ್ಟಿದ ಲಕ್ಷ್ಮೀ ಅಕ್ಕಾ..!

ರಕ್ಷಾ ಬಂಧನ ಅಣ್ಣ-ತಂಗಿಯರ, ಅಕ್ಕ-ತಮ್ಮಂದಿರ ಅತ್ಯಂತ ಪವಿತ್ರವಾದ ಹಬ್ಬ. ಮನೆಯಲ್ಲಿ ತಮ್ಮ ತಂಗಿ, ಅಕ್ಕನ ಕಡೆಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾರೆ. ಆದರೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ತಮ್ಮ ಕ್ಷೇತ್ರದ ಸಾವಿರಾರು ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ಅದ್ಧೂರಿಯಾಗಿ ರಕ್ಷಾ ಬಂಧನ ಆಚರಿಸಿದ್ದಾರೆ. ಇದರ ಜೊತೆಗೆ ಎಲ್ಲರೂ ದೀರ್ಘಾಯುಷಿ ಆಗಲಿ ಎಂದು ಪ್ರಾರ್ಥಿಸಿದ್ದಾರೆ. ಹೌದು ಸ್ವಂತ ಅಣ್ಣ-ತಮ್ಮಂದಿರಂತೆ ಕ್ಷೇತ್ರದ ಜನತೆಗೆ ಅತ್ಯಂತ ಖುಷಿ, ಖುಷಿಯಾಗಿ ರಾಖಿ ಕಟ್ಟುತ್ತಿರುವ ಶಾಸಕಿ …

Read More »

ಸಹೋದರತೆಯ ಬಂಧ ಇನ್ನಷ್ಟು ಗಟ್ಟಿಯಾಗಲಿ: ಸಂತೋಷ್ ಜಾರಕಿಹೊಳಿ

ಬದುಕಿನುದ್ದಕ್ಕೂ ಭರವಸೆಯಾಗಿ ನಿಲ್ಲುವ, ಅಪ್ಪನಂತೆ ಕಾಳಜಿ ಇಟ್ಟುಕೊಂಡಿರುವ, ಅಮ್ಮನಂತೆ ಪ್ರೀತಿ ತೋರುವ, ಗೆಳೆಯನಂತೆ ಕ್ಷಮಿಸುವ ಔದಾರ್ಯದ ಜೀವ ಹೀಗೆಂದಾಗ ನೆನಪಾಗುವ ಹೆಸರೇ ಅಣ್ಣ. ಅಣ್ಣ – ತಂಗಿ ನಡುವೆ ಇರುವ ಬಾಂಧವ್ಯವೇ ಅಂತಹದ್ದು. ವರ್ಷಪೂರ್ತಿ ಜಗಳವಾಡುತ್ತಲೇ ಕಾಲ ಕಳೆಯುವ ಈ ಸಂಬಂಧ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಅನುಬಂಧದ ಸುತ್ತ ನಿಂತಿದೆ. ಸಹೋದರ ಸಹೋದರಿಯರ ನಡುವಿನ ಭ್ರಾತೃತ್ವವನ್ನು ಗಟ್ಟಿಗೊಳಿಸುವ ನೆಲೆಯಲ್ಲಿಯೂ ರಕ್ಷಾ ಬಂಧನ ಮುಖ್ಯವಾಗುತ್ತದೆ. ಶ್ರಾವಣ ಮಾಸವೆಂಬುದು ಸಂಬಂಧ ಮತ್ತು ಸಂಸ್ಕಾರಗಳಿಗೆ ಮಹತ್ವವನ್ನು …

Read More »

ಅತಿವೃಷ್ಟಿಯ ಹಾನಿಗೆ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ: ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ಅತಿವೃಷ್ಟಿಯಿಂದ ಮನೆಹಾನಿ ಅಥವಾ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದರು.   ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಳ್ಳಲಾದ ಕ್ರಮಗಳ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕುಟುಂಬಗಳು 2019 ರ ನಂತರ ಮನೆ ಬಿಟ್ಟು …

Read More »

ಕಾಂಗ್ರೆಸ್‌ ಮುಖ್ಯಮಂತ್ರಿ ಬದಲಾವಣೆಯ ಗಾಳಿಸುದ್ದಿ ಹರಡಿದ್ದಾರೆ.: ಗೋವಿಂದ ಕಾರಜೋಳ

ಬೆಳಗಾವಿ: ‘ದೇಶದಲ್ಲಿ ಇದೂವರೆ‌ಗಿನ ಯಾವುದೇ ಪ್ರಧಾನಿ, ನರೇಂದ್ರ ಮೋದಿ ಅವರಷ್ಟು ಪ್ರಖರ ದೇಶಭಕ್ತ ಆಗಿರಲಿಲ್ಲ. ಅವರ ಬಗ್ಗೆ ಮಾತನಾಡುವ ಅರ್ಹತೆ ಕಾಂಗ್ರೆಸ್ಸಿಗರಿಗೆ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.   ‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಾನು ಕಂಡ ಪ್ರಖರ ದೇಶಭಕ್ತ ಪ್ರಧಾನಿಯೆಂದರೆ ಅದು ಮೋದಿ ಅವರೇ. ಮಹಮ್ಮದ್‌ ಅಲಿ ಜಿನ್ನಾ ಜೊತೆ ಕೈ ಜೋಡಿಸಿದವರು ಕಾಂಗ್ರೆಸ್ಸಿಗರು. ದೇಶ ಒಡೆದವರು ಕಾಂಗ್ರೆಸ್ಸಿಗರು. ಇಂಥವರು ಹರ್‌ಘರ್‌ ತಿರಂಗಾ …

Read More »

ರಾಮದುರ್ಗದ ಕಾರ್ಯ ನಿರ್ವಾಹಕ ಅಧಿಕಾರಿಯಿಂದ ವಂಚಿತಗೊಳಗಾದ ಸರ್ಕಾರಿ ಶಾಲೆಗಳು

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿಗೆ ಸಂಬಂಧಿಸಿದ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರಿ ಶಾಲೆಗಳು ರಾಮದುರ್ಗ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯಾದ “ಪ್ರವೀಣ್ ಸಾಲಿ” ಇವರಿಂದ ಅಭಿವೃದ್ಧಿ ಕಾಣದೆ ಹದಗೆಟ್ಟು ಹೋಗುತ್ತೇವೆ… ಪ್ರಿಯ ವಿಕ್ಷೆಕರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಕಾಮಗಾರಿಗಳಾದ ಕಂಪೌಂಡ್, ಆಟದ ಮೈದಾನ, ಶೌಚಾಲಯ, ಅಡುಗೆ ಕೊನೆ, ಹೀಗೆ ಮುಂತಾದ …

Read More »

ಮೊಹರಂ ಹಬ್ಬ ಆಚರಣೆ: ಕೊಂಡ ಹಾಯುವಾಗ ನಿಗಿ ನಿಗಿ ಕೆಂಡದಲ್ಲಿ ಬಿದ್ದ ಯುವಕ

ಬೆಳಗಾವಿ: ಮೊಹರಂ ಹಬ್ಬ ಆಚರಣೆ ಸಂದರ್ಭದಲ್ಲಿ ಯುವಕನೊಬ್ಬ ಕೆಂಡ ಹಾಯಲು ಹೋಗಿ ಬೆಂಕಿಯಲ್ಲಿ ಬಿದ್ದ ಘಟನೆ ಸವದತ್ತಿ ತಾಲೂಕಿನ ಕೋ-ಶಿವಾಪೂರ ಗ್ರಾಮದ ನಡೆದಿದೆ. ಮತ್ತೊಂದೆಡೆ, ಯುವಕನೊಬ್ಬ ಕೆಂಡವನ್ನು ಕೈಯಲ್ಲಿ ಹಿಡಿದು ಜನರ ಮೇಲೆ ಎರಚಿದ ಘಟನೆ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದಲ್ಲಿ ನಡೆದಿದೆ. ಮೊಹರಂ ಹಬ್ಬದ ನಿಮಿತ್ತ ಪೂರ್ವಜರು ಮಾಡಿಕೊಂಡು ಬಂದ ಸಂಪ್ರದಾಯದಂತೆ ಕೋ-ಶಿವಾಪೂರ ಗ್ರಾಮದಲ್ಲಿ ಪ್ರತಿ ವರ್ಷವೂ ಕೆಂಡ ಹಾಯಲಾಗುತ್ತದೆ. ಈ ವೇಳೆ ಕೆಂಡ ಹಾಯಲು ಹೋಗಿ ಯುವಕನೊಬ್ಬ …

Read More »