ಕನ್ನಡ ಹೋರಾಟಗಾರರ ಹೋರಾಟದ ಪರಿಣಾಮ ಬೆಳಗಾವಿಯ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಇಂದು ಕನ್ನಡ ಬಾವುಟ ಹಾರಾಡುತ್ತಿದೆ. ಆದರೆ ಇದೀಗ ಆ ಬಾವುಟಕ್ಕೆ ಅಪಮಾನ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹರಿದ ಬಾವುಟವೇ ಹಾರಾಡುತ್ತಿರೋದು ಸಧ್ಯ ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಹರಿದ ಕನ್ನಡ ಬಾವುಟವೇ ಹಾರಾಡುತ್ತಿದೆ. ಮಳೆ, ಗಾಳಿಗೆ ಹರಿದ ಕನ್ನಡ ಬಾವುಟ ಬದಲಾಯಿಸಲು ಪಾಲಿಕೆ ಮುಂದಾಗುತ್ತಿಲ್ಲ. ಕನ್ನಡ ರಾಜ್ಯೋತ್ಸವ ಹೊಸ್ತಿಲಿನಲ್ಲಿ ಯಡವಟ್ಟಾಗಿದೆ. …
Read More »ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಸಾರಾಯಿ ಕುಡಿದ ನಶೆಯಲ್ಲಿ ಹತ್ಯೆ ಮಾಡಿರುವ ಪಾಪಿ ಪತಿ
ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಸಾರಾಯಿ ಕುಡಿದ ನಶೆಯಲ್ಲಿ ಪಾಪಿ ಪತಿ ಹತ್ಯೆ ಮಾಡಿರುವ ಬೆಚ್ಚಿ ಬೀಳಿಸುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಪಾಂಡುರಂಗ ಹಾರೂಗೇರಿ(55) ಗಂಡನಿಂದ ಕೊಲೆಯಾದ ಪತ್ನಿ. ಪಾಂಡುರಂಗ ಹಾರೂಗೇರಿ ಹೆಂಡತಿಯನ್ನು ಕೊಲೆ ಮಾಡಿದ ಪಾಪಿ ಪತಿ. ಹೆಂಡತಿಯನ್ನು ಕೊಂದು ತಲೆ ಮರೆಸಿಕೊಂಡ ಪತಿಯನ್ನು ಪೆÇೀಲೀಸರು ಪತ್ತೆ ಮಾಡುತ್ತಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮೂಡಲಗಿ ಪೆÇಲೀಸರು …
Read More »ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ
ಮೂರು ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಮುಳುಗಿದ್ದ ಯುವಕನ ಶವ ಪತ್ತೆಯಾಗಿದೆ. ಹೌದು ಮಂಗಳವಾರ ಸಾಯಂಕಾಲ ಮೂವರು ಸ್ನೇಹಿತರು ದೀಪಾವಳಿ ಹಬ್ಬದ ಮೋಜು ಮಸ್ತಿ ಮಾಡುತ್ತಾ, ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ನೀರಿಗೆ ಇಳಿದಿದ್ದರು. ಇದರಲ್ಲಿ ಅನಗೋಳದ 22 ವರ್ಷದ ಸತೀಶ ಹನಮನ್ನವರ ಎಂಬ ಯುವಕ ನೀರಿನಲ್ಲಿ ಮುಳುಗಿದ್ದ. ಈತನ ಸ್ನೇಹಿತರು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿದ್ದರು. ಸುದ್ದಿ …
Read More »ಬೆಳಗಾವಿ: ಕಾರ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವು
ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ಮಂಗಳವಾರ ರಾತ್ರಿ ಕಿತ್ತೂರು ಉತ್ಸವದ ಕಾರ್ಯಕ್ರಮ ನೋಡಿಕೊಂಡು ಮರಳುತ್ತಿದ್ದ ಇಬ್ಬರು ಪಾದಚಾರಿಗಳ ಮೇಲೆ ಕಾರ್ ಹರಿದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖಾನಾಪುರ ತಾಲ್ಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33) ಹಾಗೂ ಕರೆಪ್ಪ ತಳವಾರ (36) ಮೃತಪಟ್ಟವರು. ಮಂಗಳವಾರ ರಾತ್ರಿ ಗಾಯಕ ರಘು ದೀಕ್ಷಿತ್ ಅವರ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದಿದ್ದ ಇಬ್ಬರೂ ಊರಿಗೆ ಮರಳಲು ವಾಹನಕ್ಕೆ ಕಾಯುತ್ತಿದ್ದರು. ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ …
Read More »‘ಕಿತ್ತೂರು ಕೇಸರಿ’ ಪಟ್ಟಕ್ಕಾಗಿ ಪಟ್ಟುಬಿಡದ ಜಟ್ಟಿಗಳು
ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಎರಡನೇ ದಿನವಾದ ಮಂಗಳವಾರ ನಡೆದ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನೋಡಲು ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಸೇರಿದರು. ಮಹಿಳಾ ಹಾಗೂ ಪುರುಷ ವಿಭಾಗ ಸೇರಿ ಒಟ್ಟು 234 ಪೈಲ್ವಾನರು ಇಲ್ಲಿ ಮುಖಾಮುಖಿಯಾಗಿದ್ದಾರೆ. ಪ್ರತಿವರ್ಷ ಜಂಗಿ ನಿಕಾಲಿ ಕುಸ್ತಿ ನಡೆಯುತ್ತಿದ್ದವು. ಇದೇ ಮೊದಲ ಬಾರಿ ಪಾಯಿಂಟ್ ಆಧರಿತ ಕುಸ್ತಿ ಆಯೋಜಿಸಲಾಗಿತ್ತು. ಎರಡು ದಿನಗಳ ಟೂರ್ನಿಯಲ್ಲಿ ನಡೆದ ಬಹುತೇಕ ಪಂದ್ಯಗಳು ಪೈಪೋಟಿಯಿಂದ …
Read More »ಚಿಣ್ಣರಿಗೂ ಬಂತು ಉತ್ಸವದ ಹಿಗ್ಗು
ಕಿತ್ತೂರು: ಐತಿಹಾಸಿಕ ಉತ್ಸವದಲ್ಲಿ ಒಂದೆಡೆ ವರ್ಣರಂಜಿತ ವೇದಿಕೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದರೆ, ಮತ್ತೊಂದೆಡೆ ಮಕ್ಕಳು ವಿವಿಧ ಆಟಗಳನ್ನಾಡಿ ಸಂಭ್ರಮದಲ್ಲಿ ಮಿಂದೆದ್ದರು. ಇಲ್ಲಿನ ಕೋಟೆ ಆವರಣದ ಮುಂಭಾಗದಲ್ಲಿ ಮಕ್ಕಳು ಹಾಗೂ ಯುವಕರಿಗಾಗಿ ವಿವಿಧ ಆಟಿಕೆಗಳನ್ನು ಅಳವಡಿಸಲಾಗಿದೆ. ಎಲ್ಲವೂ ವಿದ್ಯುತ್ ಚಾಲಿತ ಆಟಿಕೆಗಳೇ ಇರುವುದು ಈ ಬಾರಿಯ ವಿಶೇಷ. ಚಿಣ್ಣರು ಬಾತುಕೋಳಿ, ಬೈಕ್‌ಗಳ ತಿರುಗುಂಡಿ ಮೇಲೆ ಕುಳಿತು ಸಂಭ್ರಮಿಸಿದರು. ಮತ್ತೆ ಕೆಲವರು ಜಾರುಬಂಡೆಯಿಂದ ಜಾರಿ ನಲಿದರು. ರಬ್ಬರ್‌ನಿಂದ ಮಾಡಿದ ಡಾನ್ಸಿಂಗ್ ರೋಪ್ …
Read More »198ನೇ ಕಿತ್ತೂರು ಉತ್ಸವಕ್ಕೆ ವೈಭವದ ತೆರೆ, ರಾತ್ರಿಯವರೆಗೂ ಸಾಂಸ್ಕೃತಿಕ ವೈಭವ
ಚನ್ನಮ್ಮನ ಕಿತ್ತೂರು (ರಾಣಿ ಚನ್ನಮ್ಮ ವೇದಿಕೆ): ‘ರಾಣಿ ಚನ್ನಮ್ಮ ದೇಶದ ಸ್ವಾತಂತ್ರ್ಯದ ಹೆಗ್ಗುರುತು ಮಾತ್ರವಲ್ಲ; ವಿಶ್ವದ ಹೆಣ್ಣುಮಕ್ಕಳ ಸಮಾನತೆಯ ಪ್ರತೀಕ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು. ಇಲ್ಲಿ ಮಂಗಳವಾರ ನಡೆದ 198ನೇ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ‘ಹೆಣ್ಣುಮಗಳು ಸಮಾಜದಿಂದ ಹೊರ, ಧರ್ಮದಿಂದ ಹೊರ ಎಂಬ ಸಂಪ್ರದಾಯಗಳು ಇದ್ದ ಕಾಲದಲ್ಲಿ ಚನ್ನಮ್ಮ ಖಡ್ಗ ಹಿಡಿದಳು. ಪ್ರಪಂಚದ ಬಹಳಷ್ಟು ರಾಜರು ಮಂತ್ರಿಗಳ ಮಾರ್ಗದರ್ಶನದಲ್ಲಿ …
Read More »ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆಗೆ M.E.S.ಸಿದ್ಧತೆ
ಬೆಳಗಾವಿ: ನಾಡದ್ರೋಹಿ ಎಂಇಎಸ್‍ನಿಂದ (MES) ಮತ್ತೆ ಗಡಿ ಖ್ಯಾತೆ ಆರಂಭವಾಗಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು (Kannada Rajyotsava) ಎಂಇಎಸ್ ಮುಖಂಡರು ಕರಾಳ ದಿನಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ ದಿನ ಆಚರಿಸುವ ಕುರಿತಾಗಿ ಪೋಸ್ಟ್ ಹಾಕಿದ್ದಾರೆ. ನವೆಂಬರ್ 1ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ (Belagavi) ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯದ ಮೂಲೆಮೂಲೆಗಳಿಂದ ಕನ್ನಡ ರಾಜ್ಯೋತ್ಸವ ನೋಡಲು …
Read More »ಬೆಳಗಾವಿ: ಕಲುಷಿತ ನೀರು ಸೇವಿಸಿ 3 ದಿನಗಳ ಅಂತರದಲ್ಲಿ 50 ಕ್ಕೂ ಅಧಿಕ ಜನರು ಅಸ್ವಸ್ಥ
ಬೆಳಗಾವಿ: ಕಲುಷಿತ ನೀರು (Polluted Water) ಸೇವಿಸಿ 3 ದಿನಗಳ ಅಂತರದಲ್ಲಿ 50 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಮುದೇನೂರು ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ದೀಪಾವಳಿ ಸಂಭ್ರಮದಲ್ಲಿ ಇರಬೇಕಿದ್ದ ಗ್ರಾಮಸ್ಥರು ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಅಸ್ವಸ್ಥಗೊಂಡಿರುವ 50 ಕ್ಕೂ ಅಧಿಕ ಜನರು ರಾಮದುರ್ಗದ ಸರ್ಕಾರಿ ಹಾಗೂ ಖಾಸಗಿ …
Read More »ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರಲ್ಲಿ ಓರ್ವ ನಾಪತ್ತೆ,ಮುಂದುವರಿದ ಶೋಧ ಕಾರ್ಯ
ಬೆಳಗಾವಿ ತಾಲೂಕಿನ ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರಲ್ಲಿ ಓರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮಂಗಳವಾರ ಸಾಯಂಕಾಲ ಮೂವರು ಸ್ನೇಹಿತರು ದೀಪಾವಳಿ ಹಬ್ಬದ ಮೋಜು ಮಸ್ತಿ ಮಾಡುತ್ತಾ, ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಓರ್ವ ಬಹಳ ಸಮಯದವರೆಗೆ ಮೇಲೆ ಬಂದಿಲ್ಲ. ಹೀಗೆ ನೀರಿನಲ್ಲಿ ನಾಪತ್ತೆಯಾಗಿರುವ ಯುವಕನ ಹೆಸರು 22 ವರ್ಷದ ಸತೀಶ ಎನ್ನಲಾಗುತ್ತಿದೆ. ಈತ …
Read More »