Breaking News

ಬೆಳಗಾವಿ

ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಾವಿರಾರು ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ‌ ನಿರ್ಮಾಣ

ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದ ಆನೆಬಾಯಿಕೋಡಿಯಲ್ಲಿ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಾವಿರಾರು ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ‌ ನಿರ್ಮಾಣವಾಗಿದೆ‌. ಅ ಲಾಲಪುರ- ರಾಯಬಾಗ ರಸ್ತೆಯಲ್ಲಿರುವ ಆನೆಬಾಯಿ ಕೋಡಿಯಲ್ಲಿ ವಿದ್ಯುತ್ ಕಂಬ್ ಸಮೀಪದ ಮತ್ತೊಂದು ವಿದ್ಯುತ್ ಕಂಬಕ್ಕೆ ತಾಗುತ್ತಿದೆ. ಇದರಿಂದ ಜನರು ಭಯಭೀತಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾರೂ ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಜನರು ಗಂಭೀರ ಆರೋಪ ಮಾಡುತ್ತಿದ್ದಾರೆ. ವಿದ್ಯುತ್ ಕಂಬ …

Read More »

ರುದ್ರಭೂಮಿಗೆ ಹೋಗಲು ದಾರಿವಿಲ್ಲವೆಂದು ರಸ್ತೆ ಮದ್ಯೆಯೇ ಶವವಿಟ್ಟು ಧರಣಿ

ರುದ್ರಭೂಮಿಗೆ ಹೋಗಲು ದಾರಿವಿಲ್ಲವೆಂದು ರಸ್ತೆ ಮದ್ಯೆಯೇ ಶವವಿಟ್ಟು ಧರಣಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದಲ್ಲಿ ನಡೆದಿದೆ. ಯಕ್ಸಂಬಾ- ಚಿಕ್ಕೋಡಿ ರಸ್ತೆಯ ಮದ್ಯ ಶವವಿಟ್ಟು ಭಜನೆ ಮಾಡುವುದರ ಮೂಲಕ ಪ್ರತಿಭಟನೆ ಮಾಡಲಾಯಿತು. ಇಂದು ಬೆಳಗ್ಗೆ ಅನಾರೋಗ್ಯದಿಂದ ನಣದಿವಾಡಿ ಗ್ರಾಮದ ಸುಧಾಕರ ಮಹಾದೇವ ನಾಯಕ ಎಂಬುವವರು ಮೃತಪಟ್ಟಿದರು. ರುದ್ರಭೂಮಿಗೆ ಹೋಗುವ ದಾರಿ ವಿಚಾರಕ್ಕೆ ಸಂಬಂಧಸಿದಂತೆ ನಣದಿವಾಡಿ ಗ್ರಾಮದ ಯಕ್ಸಂಬಿ ಕುಟುಂಬವು ತಕರಾರು ತಗೆದಿತ್ತು. ಅಷ್ಟೇ ಅಲ್ಲದೇ ರುದ್ರಭೂಮಿಗೆ …

Read More »

ನಂದಗಡದಲ್ಲಿ ಶಾಲೆಗಳ ನೂತನ ಕೊಠಡಿಗಳ ಉದ್ಘಾಟನೆ: ಅಂಜಲಿ ನಿಂಬಾಳ್ಕರ್

ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿನ ಜೆಸಿಎಸ್ ಆವರಣದಲ್ಲಿನ ಉರ್ದು ಹೆಣ್ಣು ಮಕ್ಕಳ ಶಾಲೆಯ ಕೊಠಡಿ, ಅದರಂತೆ ಮರಾಠಿ ಶಾಲೆಯ ನೂತನ ಕೊಠಡಿಯ ಉದ್ಘಾಟನೆಯನ್ನು ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ನೆರವೇರಿಸುವರು. ಈ ಸಂದರ್ಭದಲ್ಲಿ ಉರ್ದು ಶಾಲೆಯ ವಿದ್ಯಾರ್ಥಿಗಳೊಂದಿಗೆ,ದುವಾ ಅದರಂತೆ ಮರಾಠಿ ಶಾಲೆಯ ಮಕ್ಕಳೊಂದಿಗೆ ಪೂಜೆ ಸಲ್ಲಿಸಿ ಮಕ್ಕಳಲ್ಲಿ ಸರಳತೆಯಿಂದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಶಿಕ್ಷಕರಿಂದ ಶಾಸಕಿ ಅಂಜಲಿ ಅವರನ್ನು …

Read More »

ಇಬ್ರಾಹಿಂ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಬೆಳಗಾವಿ : ‘ಕುಮಾರಸ್ವಾಮಿ’ ಸಿಎಂ ಆಗಲಿ ಎಂದು ‘ಕೈ’ ನಾಯಕರು ದೇವೇಗೌಡರ ಕಾಲಿಗೆ ಬಿದ್ದಿದ್ದರು’ ಎಂದು ಸಿಎಂ ಇಬ್ರಾಹಿಂ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಾತನಾಡಿದ ಇಬ್ರಾಹಿಂ, ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕಾಂಗ್ರೆಸ್ ನಾಯಕರು H.D.ದೇವೇಗೌಡರ ಕಾಲಿಗೆ ಬಿದ್ದಿದ್ದರು. ಸಿಎಂ ಮಾಡಿದ 14 ತಿಂಗಳಲ್ಲೇ ಶಾಸಕರನ್ನ ಮುಂಬೈಗೆ ಕಳಿಸಿದ್ರು. ಮುಂಬೈಗೆ ಕಳಿಸಿ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ಇಬ್ರಾಹಿಂ ಹೇಳಿಕೆ …

Read More »

ಆರೋಗ್ಯ ಕೇಂದ್ರಕ್ಕೆ ಬಾರದ ವೈದ್ಯರು, ನರ್ಸ್‌: 2 ತಾಸು ನರಳಾಡಿದ ತುಂಬು ಗರ್ಭಿಣಿ

ಕಿತ್ತೂರು : ಸಮೀಪದ ಸಂಗೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ, ಸೂಕ್ತ ಸಮಯಕ್ಕೆ ಗರ್ಭಿಣಿಗೆ ಚಿಕಿತ್ಸೆ ನೀಡದ ಶುಶ್ರೂಷಕಿಯನ್ನು ವರ್ಗಾವಣೆ ಮಾಡಿದ್ದು, ಆಸ್ಪತ್ರೆಯ ಇಬ್ಬರು ವೈದ್ಯರಿಗೂ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ.   ತಾಲ್ಲೂಕಿನ ಕಡತನಾಳ ಗ್ರಾಮದ ರತ್ನವ್ವ ಕಾದ್ರೊಳ್ಳಿ ಅವರನ್ನು ಗುರುವಾರ ಹೆರಿಗೆಗೆ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಆದರೆ ಅಲ್ಲಿ ವೈದ್ಯರು, ನರ್ಸ್‌ ಸೇರಿದಂತೆ ಯಾರೂ ಇರಲಿಲ್ಲ. ಎರಡು ತಾಸು ಆಸ್ಪತ್ರೆಯ ಆವರಣದಲ್ಲೇ ಗರ್ಭಿಣಿ …

Read More »

ಬೆಳಗಾವಿ: ಜನರ ಮನಸೂರೆಗೊಂಡ ಫಲ-ಪುಷ್ಪ ಪ್ರದರ್ಶನ

ಬೆಳಗಾವಿ: ಒಂದೆಡೆ ಕಾಂತಾರ ಚಲನಚಿತ್ರದ ಪರಿಸರ ದೇವತೆ ಪಂಜುರ್ಲಿ, ಇನ್ನೊಂದೆಡೆ ಎತ್ತುಚಕ್ಕಡಿ ಕಟ್ಟಿ ಬಿತ್ತಲು ನಡೆದ ರೈತ, ಮತ್ತೊಂದೆಡೆ ಕೇಶರಾಶಿ ಹರಡಿ ನಿಂತ ಸುಂದರ ಜಲಕನ್ಯೆ, ಎಲ್ಲರನ್ನೂ ಬರಸೆಳೆಯುವ ನೆಚ್ಚಿನ ನಟ ಪುನೀತ್‌ ರಾಜ್‌ಕುಮಾರ್‌…   ಇಲ್ಲಿನ ಹ್ಯೂಮ್‌ ಪಾರ್ಕಿನಲ್ಲಿ ಆಯೋಜಿಸಿದ ಮೂರು ದಿನಗಳ 63ನೇ ಫಲ ಪುಷ್ಪ ಪ್ರದರ್ಶನದಲ್ಲಿ ಕಂಡುಬರುವ ದೃಶ್ಯಗಳಿವೆ. ಶುಕ್ರವಾರವೇ ಆರಂಭವಾದ ಈ ಪ್ರದರ್ಶನ ಪರಿಸರ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಿವಿಧ ಶಾಲಾ ಮಕ್ಕಳು, ಯುವಜನರು, ರೈತರು, …

Read More »

ಮದ್ಯದ ಅಂಗಡಿಗಳಿಗೆ ಡಿ.ಸಿ ಭೇಟಿ: ಪರಿಶೀಲನೆ

ಬೆಳಗಾವಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಎರಡು ಮದ್ಯದ ಅಂಗಡಿಗಳಿಗೆ ತೆರಳಿದರು. ಲೈಸೆನ್ಸ್, ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.   ಡಿ.ಸಿ ಗ್ರಾಮ ಪ್ರವೇಶಿಸುತ್ತಿದ್ದಂತೆ ತಡೆದ ಮಹಿಳೆಯರು, ಊರ ಮಧ್ಯದಲ್ಲಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಆಗ, ಪಾಟೀಲ ಸ್ವತಃ ಅಂಗಡಿಗಳಿಗೆ ಹೋಗಿ ಪರಿಶೀಲಿಸಿದರು. ಸದ್ಯ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಲಾಗಿದೆ. ಸಮಗ್ರವಾಗಿ …

Read More »

ಸ್ಮಾರ್ಟ್ ಕ್ಯಾಷು ಫ್ಯಾಕ್ಟರಿಯನ್ನು ಮಾಜಿ ಸಚಿವರು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಬೆಳಗಾವಿ ತಾಲೂಕಿನಲ್ಲಿ ಸ್ಮಾರ್ಟ್ ಕ್ಯಾಷು ಫ್ಯಾಕ್ಟರಿಯನ್ನು ಮಾಜಿ ಸಚಿವರು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ಹೌದು ಬೆಳಗಾವಿ ತಾಲೂಕಿನ ಸುಪುತ್ರ, ಸಮಾಜ ಸೇವಕ, ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಅವರು ಈ ಭಾಗದ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕಾಜು ಫ್ಯಾಕ್ಟರಿಯನ್ನು ಸ್ಥಾಪಿಸಿದ್ದಾರೆ. ದೇಶದ ಪ್ರಸಿದ್ಧ ಎಮೋಸಿಸ್ ಗ್ರೂಪ್‍ನೊಂದಿಗೆ ಸ್ಮಾರ್ಟ್ ಕ್ಯಾಷು ಫ್ಯಾಕ್ಟರಿಯನ್ನು ಬೆಳಗುಂದಿ ಸಮೀಪ ಸೋನೋಲಿ ಎಳೆಬೈಲ ಗ್ರಾಮದಲ್ಲಿ ಪ್ರಾರಂಭ ಮಾಡಿದ್ದಾರೆ. ಶನಿವಾರ ಶಾಸಕ …

Read More »

ಸ್ಥಳೀಯ ಸಂಸ್ಥೆಗಳ ಆಸ್ತಿ ದಾಖಲೆಗೆ ಹೈಟೆಕ್ ಸ್ಪರ್ಶ: ಡಿಜಿಟಲೀಕರಣಕ್ಕೆ ‘ಇ-ಆಸ್ತಿ ತಂತ್ರಾಂಶ’ ಜಾರಿ; ಆನ್​ಲೈನ್​ನಲ್ಲೇ ಸಕಲ ಮಾಹಿತಿ

ಬೆಳಗಾವಿ :ನಗರ -ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ, ಖಾಸಗಿ ಒಡೆತನದ ಲಕ್ಷಾಂತರ ಆಸ್ತಿ ದಾಖಲೆಗಳಿಗೆ ಇನ್ಮುಂದೆ ಹೈಟೆಕ್ ಸ್ಪರ್ಶ ಸಿಗಲಿದೆ. ಏಕಕಾಲದಲ್ಲಿ ಆನ್​ಲೈನ್​ನಲ್ಲಿಯೇ ಆಸ್ತಿ ದಾಖಲೆಗಳ ಮಾಹಿತಿ ಲಭ್ಯವಾಗಲಿದೆ. ಹೌದು. ರಾಜ್ಯದಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 1.20 ಕೋಟಿ ಆಸ್ತಿಗಳಿವೆ. ಆದರೆ, ಲಕ್ಷಾಂತರ ಆಸ್ತಿಗಳ ದಾಖಲೆಗಳ ನಿರ್ವಹಣೆ, ಸಂರಕ್ಷಣೆ ಇಲ್ಲದೆ ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ಸಾರ್ವಜನಿಕರಿಗೆ ಆಸ್ತಿಯ ಮೂಲ ದಾಖಲೆಗಳು ಲಭ್ಯವಾಗುತ್ತಿಲ್ಲ. …

Read More »

ರೈತರ ಆಕ್ರೋಶಕ್ಕೆ ಕಾರಣವಾಗಿದೆ ಲೈಲಾ ಶುಗರ್ಸ ಕಾರ್ಖಾನೆ

ಖಾನಾಪುರದ ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ಪೂರೈಕೆ ಮಾಡಿದ ರೈತರು ಸಕ್ಕರೆ ಪಡೆಯಲು ಪರದಾಡಿದ ಘಟನೆ ನಡೆದಿದೆ. ಹೌದು ಮಹಾಲಕ್ಷ್ಮೀ ಗ್ರುಪ್ ಸಂಚಾಲಿತ ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಳೆದ ದಿನಾಂಕ 14ರಿಂದ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಟನ್ 25 ರೂಪಾಯಿ ದರದಲ್ಲಿ ಸಕ್ಕರೆ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ ತಾಲೂಕಿನ ಗಡಿಭಾಗ ಸೇರಿದಂತೆ ತಾಲೂಕಿನ ಬೇರೆ ಕಡೆಯಿಂದ ಬಂದು ತಮ್ಮ ಸ್ಲೀಪ್ ತೋರಿಸಿ ಆಧಾರ್ ಕಾರ್ಡ್ …

Read More »