ಬೆಳಗಾವಿ: ರೈತರು ಸಾವಯವ ಕೃಷಿಗೆ ಆದ್ಯತೆ ನೀಡುವಂತೆ ದೇಶದ ಒಂದು ಲಕ್ಷ ಹಳ್ಳಿಗಳಲ್ಲಿ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ನಗರದಲ್ಲಿ ಎರಡು ದಿನಗಳ ಕಾಲ ಜರಗಿದ ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಕೊನೆಯ ದಿನವಾದ ಸೋಮವಾರ ಸಭೆಯ ಸಮಾರೋಪದಲ್ಲಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ, ಕೃಷಿ ಸಚಿವ ಬಿ.ಸಿ. ಪಾಟೀಲ್, ರೈತ …
Read More »ಎಸಿಪಿ ನಾರಾಯಣ ಭರಮಣಿ ವರ್ಗಾವಣೆ ಗೊಳಿಸಿ ಆದೇಶ
ಎಸಿಪಿ ನಾರಾಯಣ ಭರಮಣಿ ಅವರನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ಉಪವಿಭಾಗಕ್ಕೆ ಹಾಗೂ ಗ್ರಾಮೀಣ ಎಸಿಪಿ ಎಸ್ ವಿ ಗಿರೀಶ್ ರನ್ನು ಹುಬ್ಬಳ್ಳಿ – ಧಾರವಾಡ ಸಿಸಿಬಿ ಗೆ ವರ್ಗಾವಣೆ ಮಾಡಲಾಗಿದೆ. ನಗರ ಕಾನೂನು ಹಾಗೂ ಸುವ್ಯವಸ್ಥೆ ಉಪ ಪೋಲೀಸ್ ಆಯುಕ್ತ ರವೀಂದ್ರ ಗಡಾದಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಎಚ್.ಶೇಖರ್ ಅವರನ್ನು ನೇಮಕ ಮಾಡಲಾಗಿದೆ. ರವೀಂದ್ರ ಗಡಾದಿ ಅವರನ್ನು ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು …
Read More »ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ವರ್ಗಾವಣೆ !
ಬೆಳಗಾವಿ : ಬೆಳಗಾವಿ ನಗರ ಕಾನೂನು ಹಾಗೂ ಸುವ್ಯವಸ್ಥೆ ಉಪ ಪೋಲೀಸ್ ಆಯುಕ್ತ ರವೀಂದ್ರ ಗಡಾದಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಎಚ್. ಶೇಖರ್ ಅವರನ್ನು ನೇಮಕ ಮಾಡಲಾಗಿದೆ. ರವೀಂದ್ರ ಗಡಾದಿ ಅವರನ್ನು ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು ಇಲ್ಲಿಗೆ ವರ್ಗಾಯಿಸಲಾಗಿದೆ.
Read More »ಅಣ್ಣ ತಮ್ಮಂದಿರಂತಿದ್ದ ಡಿಕೆಶಿ ಮತ್ತು ನನ್ನ ಸಂಬಂಧ ಹಾಳಾಗಿದ್ದೇ ವಿಷಕನ್ಯೆಯಿಂದ – ರಮೇಶ್ ಜಾರಕಿಹೊಳಿ
ಬೆಳಗಾವಿ: ಬಿಜೆಪಿ ಶಾಸಕ, ಮಾಜಿ ಮಂತ್ರಿ, ಸಿಡಿ ಕೇಸ್ ಆರೋಪಿ ರಮೇಶ್ ಜಾರಕಿಹೊಳಿ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಡಿಕೆಶಿ, ರಮೇಶ್ ಜಾರಕಿಹೊಳಿ ನಡುವೆ ವೈಯಕ್ತಿಕ ಜಿದ್ದು ಹೆಚ್ಚಾಗಿದೆ. ನನ್ನನ್ನು ಟಾರ್ಗೆಟ್ ಮಾಡಿ ಡಿಕೆ ಶಿವಕುಮಾರ್ ಹೊಡೆದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಾನೂ ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್ ನಾಲಾಯಕ್. ನನ್ನ ಬಳಿ 128 ಸಾಕ್ಷ್ಯಗಳಿವೆ ಎಂದು ರಮೇಶ್ …
Read More »ರಮೇಶ್ ಮಾಡಿರುವ ಆರೋಪಗಳು ವೈಯಕ್ತಿಕವಾಗಿವೆ, ನಾನು ಪ್ರತಿಕ್ರಿಯಿಸುವುದು ಉಚಿತವಲ್ಲ: ಸತೀಶ್ ಜಾರಕಿಹೊಳಿ
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸತೀಶ್ ಅವರು, ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪಕ್ಷದ ಅಧ್ಯಕ್ಷರು ಮತ್ತು ಸಿ ಎಲ್ ಪಿ ನಾಯಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿದರು. ಬೆಳಗಾವಿ:ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ವಿರುದ್ಧ ಆರೋಪಗಳನ್ನು ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು …
Read More »ಕಾಂಗ್ರೆಸ್ ಹಾಳಾಗಲು ವಿಷ ಕನ್ಯೆ ಕಾರಣ: ರಮೇಶ ಜಾರಕಿಹೊಳಿ
ಬೆಳಗಾವಿ: ನನ್ನ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್, ಉದ್ಯಮಿ ಪರಶಿವಮೂರ್ತಿ, ನರೇಶ, ಶ್ರವಣ, ಡಿ.ಕೆ. ಶಿವಕುಮಾರ್ ವಾಹನ ಚಾಲಕ ಹಾಗೂ ಮಂಡ್ಯ ಮೂಲದ ಇಬ್ಬರು ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರಾಜಕಾರಣ ಮಾಡಲು ಯೋಗ್ಯನಲ್ಲ. ಷಡ್ಯಂತ್ರದ ಮೂಲಕ ರಾಜಕಾರಣ ಹಾಳು ಮಾಡುವ ಮತ್ತು ನನ್ನ ರಾಜಕೀಯ ಜೀವನ ಮುಗಿಸಲು ಪ್ರಯತ್ನಿಸಿರುವ ಡಿ.ಕೆ.ಶಿವಕುಮಾರ್ ಅವರನ್ನು …
Read More »ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ : ಮಾಜಿ ಸಿಎಂ BSY
ಬೆಳಗಾವಿ : ಮುಖ್ಯಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಈಗಾಗಲೇ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ನನಗೆ 80 ವರ್ಷ ವಯಸ್ಸಾಗಿದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
Read More »ಸವಿತಾ ಸಮುದಾಯದವರ ಜೀವನಮಟ್ಟ ಸುಧಾರಿಸಲಿ’:.ನಿರ್ಮಲಾ ಬಟ್ಟಲ್
ಬೆಳಗಾವಿ: ‘ಸಮಾಜದಲ್ಲಿ ಎಲ್ಲ ವರ್ಗಗಳ ಜನರು ಸುಂದರವಾಗಿ ಕಾಣಲು ಕಾರಣವಾಗಿರುವ ಸವಿತಾ ಸಮುದಾಯದವರ ಜೀವನಮಟ್ಟ ಸುಧಾರಣೆಯಾಗಬೇಕು. ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅವರೂ ಬೆಳೆಯಬೇಕು’ ಎಂದು ಎಂಎನ್‌ಆರ್‌ಎಸ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯೆ ಪ್ರೊ.ನಿರ್ಮಲಾ ಬಟ್ಟಲ್ ಹೇಳಿದರು. ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಶನಿವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ …
Read More »ಬೆಳಗಾವಿ; ಸ್ತ್ರೀ ಸಂವೇದನೆಗಳಿಗೆ ಕನ್ನಡಿ ಹಿಡಿದ ಸಮ್ಮೇಳನ
ಬೆಳಗಾವಿ: ಇಲ್ಲಿ ಶನಿವಾರ ಆರಂಭವಾದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನವು ಸ್ತ್ರೀ ಸಂವೇದನೆಗಳಿಗೆ ಕನ್ನಡಿ ಹಿಡಿಯಿತು. ಮೊದಲ ದಿನದ ಗೋಷ್ಠಿಗಳಲ್ಲಿ ಕಾವ್ಯಗಳನ್ನು ಪ್ರಸ್ತುತಪಡಿಸಿದ ವಿವಿಧ ರಾಜ್ಯಗಳ ಕವಯತ್ರಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯಗಳನ್ನು ಖಂಡಿಸಿದರು. ಪುರುಷರು ಮತ್ತು ಮಹಿಳೆಯರ ಮಧ್ಯೆ ಇರುವ ಅಸಮಾನತೆ ನಿವಾರಣೆ, ಮಹಿಳಾ ಸಬಲೀಕರಣದ ಬಗ್ಗೆಯೂ ದನಿ ಎತ್ತಿದರು. ಮಹಿಳೆಯರ ಅಂತಃಶಕ್ತಿಯಾಗಿರುವ ಪ್ರೀತಿ, ಪ್ರೇಮ, ಕರುಣೆ, ಸಹನೆ ಮೇಲೂ ಹಲವರು …
Read More »ಫೆಬ್ರವರಿ 1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆ ಬೆಳವಣಿಗೆ ಎನ್ನುತ್ತ ನಗುತ್ತಲೇ ಹೊರಟುಬಿಟ್ಟರು ಚಾಣಾಕ್ಷ ಬಾಲಚಂದ್ರ ಜಾರಕಿಹೊಳಿ.
ಬೆಳಗಾವಿ – ಅಮಿತಾ ಶಾ ಬಂದು ಸಭೆ ಮಾಡಿದ್ದು ಬಹಳ ಒಳ್ಳೆಯದಾಗಿದೆ. ಫೆಬ್ರವರಿ 1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಆಗಲಿದೆ. ಎಲ್ಲ ನಾಯಕರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಲಿದ್ದಾರೆ ಎಂದು ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಡಿಯೂರಪ್ಪ, ಪ್ರಹ್ಲಾದ ಜೋಶಿ, ನಳೀನ್ ಕುಮಾರ …
Read More »