“ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶಿಲನೆ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರು” ಹುಕ್ಕೇರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಲ್ಲಿನ ಸಮೀಪದ ಮಸರಗುಪ್ಪಿ ಬಳಿಯ ಹಿರಣ್ಯಕೇಶಿ ನದಿಯ ಹೂಳೆತ್ತುವ ಮತ್ತು ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು. ಬಳಿಕ ಸಮೀಪದ ಚಿಕ್ಕಾಲಗುಡ್ಡ ಗ್ರಾಮದಲ್ಲಿ ಕೈಷಿ ಇಲಾಖೆಯಿಂದ ರೈತರಿಗೆ ಬೀಜ ವಿತರಣೆ ಕಾರ್ಯಕ್ರಮವನ್ನು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿ.ಪಂಚಾಯತಿ ಸಿಇಒ …
Read More »ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲು,ಬ್ರೇಡ್, ಬಿಸ್ಕತ್ತು ವಿತರಣೆ
ಹುಕ್ಕೇರಿ:ಸ್ಥಳೀಯ ಗುಡಸ ಗ್ರಾಮದ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮೀತಿಯ ತಾಲೂಕ ಅಧ್ಯಕ್ಷರಾದ ರವೀಂದ್ರ ಬಡಿಗೇರ ಅವರು ಮಹಾಮಾರಿ ಕೊರೋನ ರೋಗ ತಡೆಗಟ್ಟಲು ಪ್ರತಿನಿತ್ಯ ಪ್ರಾಣದ ಹಂಗಿಲ್ಲದೇ ಹೋರಾಡುತ್ತಿರುವ ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲು, ಬ್ರೇಡ್, ಬಿಸ್ಕತ್ತುಗಳು ಕೊಟ್ಟು ವಿತರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಸುರೇಶ ಪತ್ತಾರ.ರಾಜ್ಯ ಉಪಾಧ್ಯಕ್ಷರಾದ ಸಿದ್ದಾರೋಡ ಬಡಿಗೇರ. ಮಹೇಶ್ ಪತ್ತಾರ.ಬಸವರಾಜ ಬಡಿಗೇರ.ಆಶಾ-ಅಂಗನವಾಡಿ ಕಾರ್ಯಕರ್ತೆಯರು,ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.
Read More »ಹುಕ್ಕೇರಿ ತಾಲೂಕಿನ 12 ವರ್ಷದ ಬಾಲಕನಿಗೆ ಕೊರೋನಾ ಸೋಂಕು ಪತ್ತೆ
ರಾಜ್ಯದಲ್ಲಿ ಇಂದು 9 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇವರಲ್ಲಿ 8 ಜನರು ಕಲಬುರ್ಗಿಯವರು. ಬೆಳಗಾವಿಯಲ್ಲಿ ಹುಕ್ಕೇರಿ ತಾಲೂಕಿನ 12 ವರ್ಷದ ಬಾಲಕನಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಬಾಲಕನಿಗೆ ರೋಗಿ ನಂಬರ್ 293 ರಿಂದ ಸೋಂಕು ತಗುಲಿದೆ. ಕಲಬುರ್ಗಿಯಲ್ಲಿ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕಲಬುರ್ಗಿಯಲ್ಲಿ 4, 12 ಹಾಗೂ 17 ವರ್ಷದ ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ. ಹುಕ್ಕೇರಿ ತಾಲೂಕು ಎಂದರೆ ಈಗಾಗಲೆ ಪತ್ತೆಯಾಗಿರುವ ಸಂಕೇಶ್ವರ ಪಟ್ಟಣದ ಬಾಲಕನಿರಬಹುದು ಎಂದು …
Read More »ಕುಡಚಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಚಿಕ್ಕೊಡಿಗು ಕೋರೋನ್ ಟೆಸ್ಟಿಂಗ್ ಲ್ಯಾಬ್ ಬೇಕು – ಗಣೇಶ್ ಹುಕ್ಕೇರಿ
ಚಿಕ್ಕೋಡಿ – ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಚಿಕ್ಕೋಡಿಯಲ್ಲೂ ಕೊರೋನಾ ಟೆಸ್ಟಿಂಗ್ ಲ್ಯಾಬ್ ಅಗತ್ಯವಾಗಿದ್ದು, ತಕ್ಷಣ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಗಣೇಶ ಹುಕ್ಕೇರಿ ಆಗ್ರಹಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಜೊತೆ ಮಾತನಾಡಿದ್ದೇನೆ. ಇಬ್ಬರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆದಷ್ಟು ಬೇಗ ಲ್ಯಾಬ್ ಆರಂಭಿಸಬೇಕು ಎಂದರು. ಚಿಕ್ಕೋಡಿ ವ್ಯಾಪ್ತಿಯ ಕುಡಚಿಯಲ್ಲಿ ಅತ್ಯಂತ ಹೆಚ್ಚು ಕೊರೋನಾ ಸೋಂಕು ಕಂಡು ಬಂದಿದೆ. ಅಲ್ಲಿಯ ಜನರನ್ನು ಅಥವಾ ಬೇರೆ ಭಾಗದ …
Read More »ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ನಡೆಯಬೇಕಿದ್ದ ಜಾತ್ರೆ ರದ್ದು……..
ಚಿಕ್ಕೋಡಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ನಡೆಯಬೇಕಿದ್ದ ಜಾತ್ರೆಯನ್ನು ರದ್ದು ಮಾಡಿ ಕೊರೊನಾ ವಾರಿಯರ್ಸ್‍ಗೆ ಅನ್ನ ದಾಸೋಹ ಮಾಡಿ ಹುಕ್ಕೇರಿ ಹಿರೇಮಠ ಮಾದರಿಯಾಗಿದೆ. ಪ್ರತಿ ವರ್ಷ ಏಪ್ರಿಲ್ 24ರಿಂದ ಹುಕ್ಕೇರಿ ಹಿರೇಮಠದಲ್ಲಿ ಗುರುಶಾಂತೇಶ್ವರ ಜಾತ್ರೆ ನಡೆಯಬೇಕಿತ್ತು. ಆದರೆ ಜಾತ್ರೆಯನ್ನು ಈ ಬಾರಿ ರದ್ದು ಮಾಡಲಾಗಿದೆ. ಜಾತ್ರೆ ರದ್ದಾದರೂ ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ಪೌರ ಕಾರ್ಮಿಕರು, ಪೊಲೀಸರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಅನ್ನ ದಾಸೋಹವನ್ನು ಆಯೋಜಿಸಲಾಗಿತ್ತು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ …
Read More »ಪಟ್ಟಣದ ಹಿರಿಯರಾದ ಶಿವಪುತ್ರಪ್ಪ ಶಂಕ್ರಪ್ಪ ಶಿರಕೋಳಿಯವರು ಕೊರೊನಾ ಸೊಂಕನ್ನು ತಡೆಯುವ ನಿಟ್ಟಿನಲ್ಲಿ ಹಗಲಿರುಳೆನ್ನದೇ
ಸಂಕೇಶ್ವರ ಪಟ್ಟಣದ ಹಿರಿಯರಾದ ಶಿವಪುತ್ರಪ್ಪ ಶಂಕ್ರಪ್ಪ ಶಿರಕೋಳಿಯವರು ಕೊರೊನಾ ಸೊಂಕನ್ನು ತಡೆಯುವ ನಿಟ್ಟಿನಲ್ಲಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಸಂಕೇಶ್ವರ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ಪಿಪಿ ಕೀಟ್’ನ್ನು ವಿತರಿಸಿ, ಪೋಲಿಸ್ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗೋಕಾಕ ಡಿವೈಎಸ್ಪಿ ಶ್ರೀ ಡಿ.ಟಿ.ಪ್ರಭು, ಹುಕ್ಕೇರಿ ಸಿಪಿಆಯ್ ಗುರುರಾಜ ಕಲ್ಯಾಣ ಶೆಟ್ಟಿ, ಪಿಎಸ್ಐ ಗಣಪತಿ ಕೊಗನೊಳಿ, ಸಿಬ್ಬಂದಿಗಳಾದ ಬಿ.ಕೆ.ನಾಗನೂರಿ, ಬಿ.ಎಸ್.ಕಪರಟ್ಟಿ, ಎಸ್.ಆರ್.ರಾಜಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Read More »ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ.- ಮಾಜಿ ಸಂಸದ ರಮೇಶ ಕತ್ತಿ
ಬೆಳಗಾವಿ -: ಕೊರೋನ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಜನರನ್ನು ರಕ್ಷಿಸಲು ಸರಕಾರಕ್ಕೆ ಎಲ್ಲರ ಸಹಾಯ ಸಹಕಾರ ಅವಶ್ಯವಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ತಿಳಿಸಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಿಂದ ಕೊರೋನ ರೋಗ ಹೊಡೆದೋಡಿಸಲು ಸರಕಾರಗಳಿಗೆ ನೆರವು …
Read More »129 ನೇ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ ಬಾಗೇವಾಡಿ ಗ್ರಾಮಸ್ಥರು..
ಹುಕ್ಕೇರಿ: ತಾಲ್ಲೂಕಿನ ಬಾಗೇವಾಡಿ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮೂದಯ ಭವನದಲ್ಲಿ ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಹಾಗೂ ದ್ವಜಾರೋಹಣ ಮಾಡುವ ಮುಂಕಾತರ್ 129 ನೇ ಅಂಬೇಡ್ಕರ್ ಜಯಂತಿಯನ್ನು ಬಾಗೇವಾಡಿ ಗ್ರಾಮದಲ್ಲಿ ಆಚರಣೆ ಮಾಡಲಾಯಿತು. ಬಳಿಕ ಗ್ರಾಮದಲ್ಲಿ ಸಮೂದಾಯ ಭವನದಲ್ಲಿ ಅಂಬೇಡ್ಕರ್ ಜಯಂತಿ ಬಗ್ಗೆ ಮಾದ್ಯಮದ ಜೊತೆಗೆ ಮಾತನಾಡಿದ ಮಾಜಿ ಜಿಲ್ಲಾ.ಪಂಚಾಯತಿ ಸದಸ್ಯ ಶಿವಾಜಿ ಸಂಜೀವಗೋಳ ಅವರು ಸರಳ ರೀತಿಯಲ್ಲಿ ಬಾಗೇವಾಡಿ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮೂದಾಯ ಭವನದಲ್ಲಿ ದೀಪ ಬೆಳಗಿಸಿ, …
Read More »ದೆಹಲಿ ಸಮಾವೇಶಕ್ಕೆ ಹೋಗಿದ್ದವರ ಶೋಧಕ್ಕೆ ಹುಕ್ಕೇರಿ ಪೊಲೀಸರ ಹೊಸ ಐಡಿಯಾ
ಬೆಳಗಾವಿ(ಚಿಕ್ಕೋಡಿ): ದೇಶವನ್ನೇ ತಲ್ಲಣಗೊಳಿಸಿರುವ ಕೊರೊನಾ ಶಂಕಿತರಾದ ದೆಹಲಿ ನಿಜಾಮುದ್ದೀನ್ ಸಮಾವೇಶದ ನಂಟು ಇದ್ದವರ ಪತ್ತೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಪೊಲೀಸರು ಹೊಸ ಐಡಿಯಾವೊಂದನ್ನ ಮಾಡಿದ್ದಾರೆ. ಪೊಲೀಸರು ಗಲ್ಲಿ ಗಲ್ಲಿಗಳಿಗೆ ಹೋಗಿ ಯಾರಾದರೂ ದೆಹಲಿಯ ನಿಜಾಮುದ್ದೀನ್ ಸಮಾವೇಶಕ್ಕೆ ಜಮಾತ್‍ಗೆ ಹೋಗಿ ಬಂದಿದ್ದರೆ ದಯವಿಟ್ಟು ಬಂದು ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹುಕ್ಕೇರಿ ಪಟ್ಟಣದ ತಬ್ಲಿಗ ಸಮಾಜದ ಎರಿಯಾಗಳಿಗೆ ಹೋಗಿ ಪೊಲೀಸರು ಧ್ವನಿ ವರ್ಧಕಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹುಕ್ಕೇರಿ …
Read More »ಹುಕ್ಕೇರಿ ಪಟ್ಟಣದ ಬಾಗವಾನ ಗಲ್ಲಿಯ ಓರ್ವ ವ್ಯಕ್ತಿ ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಖಚಿತ
ಹುಕ್ಕೇರಿ ; ದೆಹಲಿಯ ನಿಜಾಮುದ್ದೀನ್ ತಬ್ಲೀಘ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡ ಓರ್ವ ಸೇರಿದಂತೆ ಇದೇ ವೇಳೆ ಅಂತಾರಾಜ್ಯಗಳಿಗೆ ಭೇಟಿ ನೀಡಿದ ತಾಲೂಕಿನ ಐವರಿಗೆ ಕಿಲ್ಲರ್ ಕೊರೋನಾ ವೈರಸ್ ಸೋಂಕು ತಗಲಿರುವ ಶಂಕೆಯ ಮೇಲೆ ನಿಗಾ ವಹಿಸಲಾಗಿದೆ. ಹುಕ್ಕೇರಿ ಪಟ್ಟಣದ ಬಾಗವಾನ ಗಲ್ಲಿಯ ಓರ್ವ ವ್ಯಕ್ತಿ ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಖಚಿತಪಟ್ಟ ಹಿನ್ನೆಲೆಯಲ್ಲಿ ಆತನನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಜತೆಗೆ ಇದೇ ಸಮಯದಲ್ಲಿ …
Read More »