Breaking News

ಚಿಕ್ಕೋಡಿ

ಕ್ಷುಲ್ಲಕ ಕಾರಣಕ್ಕೆ ಆಟೋ ಡ್ರೈವರ್‌ಗಳ ನಡುವೆ ಮನಸ್ತಾಪ ಕೊಲೆಯಲ್ಲಿ ಅಂತ್ಯ

ಚಿಕ್ಕೋಡಿ:ರೀಕ್ಷಾ ಚಾಲಕರ ನಡುವೆ ಸರತಿ ಸಾಲಿನಲ್ಲಿ ಆಟೋ ನಿಲ್ಲಿಸುವ ಸಲುವಾಗಿ ವಾಗ್ವಾದ. ಸರತಿ ಸಾಲಿನಲ್ಲಿ ರಿಕ್ಷಾ ನಿಲ್ಲಿಸುವ ಆಟೋ ಚಾಲಕರ ನಡುವೆ ವೈಮನಸ್ಸು. ಮಂಗಸೂಳಿ ಗ್ರಾಮದಲ್ಲಿ ಓರ್ವ ಆಟೋ ಚಾಲಕನ್ನ ಕೊಲೆ ಮಾಡಿದ ಆಟೋಚಾಲಕರು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆದ ಘಟನೆ. ಶಿವಾ ವಡ್ಡರ,ಸಾಗರ ವಡ್ಡರ, ವಿನೋದ್ ವಡ್ಡರ ಬಂಧಿತ ಆರೋಪಿಗಳು. ಅಶೋಕ ವಡ್ಡರ (27) ಮೃತ ದುರ್ದೈವಿ. ಅಶೋಕ ವಡ್ಡರ‌ ಹಾಗೂ ಬಂಧಿತ ಆರೋಪಿಗಳ …

Read More »

ಅಕ್ಕ-ತಂಗಿಯರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಚಿಕ್ಕೋಡಿ:ಶಾಲೆಯಿಂದ ಮನೆಗೆ ಮರಳುತ್ತಿದ್ದ ಇಬ್ಬರು ಅಕ್ಕ-ತಂಗಿಯರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮೇಖಳಿ ಗ್ರಾಮದ ಅನುದಾನಿತ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಾದ ಜಯಶ್ರೀ ಕೋಟರೆ ಮತ್ತು ಭಾಗ್ಯಶ್ರೀ ಕೋಟರೆ ಅವರು ಶಾಲೆ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ನಾಗರಮುನ್ನೋಳಿ ಗ್ರಾಮದಿಂದ ರಾಯಬಾಗ ಪಟ್ಟಣದ ಕಡೆಗೆ …

Read More »

ಚಿಕ್ಕೋಡಿಯ ಜಿಲ್ಲಾ ಕೋರ್ಟಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

​ಚಿಕ್ಕೋಡಿಯ ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಮಹಿಳಾ ದಿನಾಚರಣೆ ಹಾಗೂ ಕಾನೂನು ಮತ್ತು ಆಧ್ಯಾತ್ಮ ಚಿಂತನ ಮಂಥನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ್ದು ನನಗೆ ಅತ್ಯಂತ ಸಂತಸ ಮತ್ತು ತೃಪ್ತಿ ನೀಡಿದ ಅನುಭವ ವಾಗಿದೆ. ​ಕಾನೂನು ಎನ್ನುವುದು ಸಮಾಜದ ಶಿಸ್ತಿನ ಕವಚವಾದರೆ, ಆಧ್ಯಾತ್ಮ ಎನ್ನುವುದು ಬದುಕಿನ ಅಂತರಂಗದ ಬೆಳಕು. ಈ ಎರಡೂ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಿದ್ದು ಕಾರ್ಯಕ್ರಮದ ವಿಶಿಷ್ಟತೆಯಾಗಿತ್ತು. ​ ಕಾರ್ಯಕ್ರಮದ ಉದ್ಘಾಟಕರಾದ ಸನ್ಮಾನ್ಯ ಶ್ರೀ ಎ. ಎಸ್. …

Read More »

ಕೇಂದ್ರ ಸರ್ಕಾರದಿಂದ ಜನಪರ ಯೋಜನೆಗಳು ಜಾರಿ

ಚಿಕ್ಕೋಡಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಿ.ಎಂ ಆವಾಸ , ಜಲ ಜೀವನ, ಸ್ವಾಭಿಮಾನದ ಭಾರತ ಯೋಜನೆಗಳಂತಹ ಜನಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರ ಜೀವನ ಮಟ್ಟದ ಸುಧಾರಣೆಗೆ ಶ್ರಮಿಸುತ್ತಿದೆ ಎಂದು ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು. ಪಟ್ಟಣದ ಕೇಶವ ಕಲಾಭವನದಲ್ಲಿ ಕುಡಚಿ ಮಂಡಲ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಪಂಡಿತ ದೀನದಯಾಳ್ ಉಪಾಧ್ಯಾಯ ಶಿಕ್ಷಣ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡ ಮತ್ತು ಮಧ್ಯಮ …

Read More »

ವದಂತಿಗೆ ಹೆಚ್ಚಿದ ಸಿಲಿಂಡರ್ ಬುಕ್ಕಿಂಗ್

ಚಿಕ್ಕೋಡಿ: ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ವದಂತಿ ತೀವ್ರಗೊಂಡಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂಬ ಜಿಲ್ಲಾಡಳಿತ ಭರವಸೆ ನಡುವೆಯು ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ ಹೆಚ್ಚಾಗಿದ್ದು, ಬುಕ್ ಮಾಡಿದರೂ ಸಿಲಿಂಡರ್ ಪೂರೈಸುತ್ತಿಲ್ಲ ಎಂಬ ದೂರು ಗ್ರಾಹಕರಿಂದ ಕೇಳಿ ಬರುತ್ತಿದೆ. ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ರಾಜ್ಯಕ್ಕೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಉಂಟಾಗಿದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಅಭಾವದ ವದಂತಿಯಿಂದ ಜನರು ತಮ್ಮ ಬಳಿ ಇರುವ ಹೆಚ್ಚುವರಿ ಸಿಲಿಂಡರ್ ತುಂಬಿಸಿಕೊಳ್ಳಲು ಗಣನೀಯ …

Read More »

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

ಚಿಕ್ಕೋಡಿ:  ಪಟ್ಟಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು,  ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ 14.48 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು. ಪಟ್ಟಣದ ಝಾರಿ ಗಲ್ಲಿ, ವಿಠ್ಠಲ ದಾಮೋದರ ನಗರ, ಆರ್. ಕೆ ಕಾಲೋನಿ, ಹುಡ್ಕೊ ಕಾಲೋನಿ, ಬಸವೇಶ್ವರ ನಗರ ಹಾಗೂ ಸಾಯಿ ಮಂದಿರ ಬಳಿ ಚರಂಡಿ, ಸೋಮವಾರ ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಂತದಲ್ಲಿ 3 ಕೋಟಿ ರೂ.ವೆಚ್ಚದ ಕಾಮಗಾರಿಗೆ …

Read More »

ನಾಗರಮುನ್ನೋಳಿ ಪ್ರೌಢಶಾಲೆ ಉನ್ನತೀಕರಣ

ಚಿಕ್ಕೋಡಿ: ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಶಾಲಾ ಶಿಕ್ಷಣ ಸಾಕ್ಷರತಾ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. ತಾಲೂಕಿನ ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನಲೆ, ಈಚೆಗೆ ಗ್ರಾಮಸ್ಥರು ಅವರನ್ನು ಪಟ್ಟಣದ ಸ್ವಗೃಹ ಕಚೇರಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.  ನಾಗರಮುನ್ನೋಳಿ ಗ್ರಾಪಂ ಅಧ್ಯಕ್ಷ, ಸದಸ್ಯರು ಮುಖ್ಯಶಿಕ್ಷಕ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು …

Read More »

ಬೈಕ್ ಅಪಘಾತ ಯುವಕ ಬಲಿ

ಚಿಕ್ಕೋಡಿ : ರಸ್ತೆಯಲ್ಲಿ ಗುಂಡಿ ತಪ್ಪಿ ಹೋಗಿ ಮುಂದೆ ಬರುತ್ತಿದ್ದ ಇನ್ನೊಂದು ಬೈಕ್‌ಗೆ ಪರಸ್ಪರ ಡಿಕ್ಕಿಯಾದ ಪರಿಣಾಮ ವಡ್ರಾಳ ಗ್ರಾಮದ ನಿವಾಸಿ ಸತೀಶ ಬಾಳೇಶ ಪಾಟೀಲ(೨೩) ಮೃತನಾಗಿದ್ದರೆ, ಇನ್ನೋರ್ವ ಬೈಕ್ ಸವಾರ ಹಾಲಟ್ಟಿ ನಿವಾಸಿ ರೋಹಣ ಸುಕ್ಕುನಟ್ಟಿ ಗಂಭೀರ ಘಟನೆ ಗೋಟುರ- ವಿಜಯಪುರ ರಾಷ್ಟ್ರೀಯ ಹೆದ್ದಾರಿ 548ಬಿಯಲ್ಲಿನ ಹತ್ತರವಾಟ ಗೇಟ್ ಬಳಿ ಶನಿವಾರ ನಡೆದಿದೆ. ಮೃತ ಯುವಕ ಸತೀಶ ಪಾಟೀಲ ವಡ್ರಾಳಿ ಕಡೆಯಿಂದ ಚಿಕ್ಕೋಡಿ ಕಡೆಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ ಈ …

Read More »

ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಿನ ವಿದ್ಯಾರ್ಥಿನಿ ಹ್ಯಾಂಡಬಾಲ್ ನಲ್ಲಿ ಯುನಿವರ್ಸಿಟಿ ಬ್ಲೂ ಆಯ್ಕೆ

ಚಿಕ್ಕೋಡಿಯ ಕೆ. ಎಲ್. ಇ. ಇಂಜಿನೀಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿಧ್ಯಾರ್ಥಿನಿಯಾದ ಕು. ಸಹನಾ ಲಾಟೆ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಹ್ಯಾಂಡಬಾಲ್ ಕ್ರೀಡೆಯಲ್ಲಿ 2025-26ನೇ ಸಾಲಿನ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವೆಂದು ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ತಿಳಿಸಿದ್ದಾರೆ. ಈ ವಿದ್ಯಾರ್ಥಿನಿ ಕೇರಳದ ಕೊಟ್ಟಾಯಮ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದಲ್ಲಿ ಮಾರ್ಚ 22 ರಿಂದ 26 ರ ವರೆಗೆ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹ್ಯಾಂಡಬಾಲ್ …

Read More »

ಯುಪಿಎಸ್‌ಸಿ: ಬೆಳಗಾವಿಯ ರಾಹುಲ್‌ಗೆ 224ನೇ ರ್‍ಯಾಂಕ್‌

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟ ಗ್ರಾಮದ ಯುವಕ ಕಿರಣ ಸಣ್ಣಪ್ಪ ಕಮತೆ (29) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ರ್‍ಯಾಂಕ್‌ ಹಾಗೂ ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಪಡೆದಿದ್ದಾರೆ. ಬೆಳಗಾವಿ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ ಪದವಿ ಪಡೆದಿರುವ ಕಿರಣ, ಸದ್ಯ ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿ‌ನಿಯರ್ ಆಗಿದ್ದಾರೆ. ಐದು ಬಾರಿ ಪ್ರಿಲಿಮ್ಸ್‌ ಪಾಸಾಗಿದ್ದರೂ ಮೇನ್ಸ್‌ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಆರನೇ ಬಾರಿಗೆ ಯಶಸ್ಸು …

Read More »