Breaking News

ಬಿಜಾಪುರ

ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತೀರ್ಮಾನಿಸುವುದು ಜನ,ಬಿಜೆಪಿ ನಾಯಕರಲ್ಲ: ರಮೇಶ್ ಕುಮಾರ್

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುವುದು ರಾಜಕೀಯ ಸಹಜ. ಆದರೆ ಯಾರು ಅಧಿಕಾರಕ್ಕೆ ಬರಬೇಕೆಂದು ತೀರ್ಮಾನಿಸುವುದು ರಾಜ್ಯದ ಜನತೆಯೇ ಹೊರತು ಬಿಜೆಪಿ ನಾಯಕರಲ್ಲ ಎಂದು ರಾಜ್ಯ ವಿಧಾನಸಭೆ ಮಾಜಿ ಅಧ್ಯಕ್ಷರಾದ ಶಾಸಕ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.   ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ನಾಯಕರೇ ಹೇಳಿದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತೆಂದು ಕಾಂಗ್ರೆಸ್ ನಾಯಕರು ಹೇಳಿದರೆ ಅದರ ರಾಜಕಾರ …

Read More »

ಹರ ಘರ್ ತಿರಂಗಾ ಪೊಸ್ಟರ್ ತ್ರೀ ಚಕ್ರ ವಿತರಣೆ ಬಿಡುಗಡೆಗೊಳಿಸಿದ ಸಚಿವ ಕತ್ತಿ

ವಿಜಯಪುರ ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ 1 ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ವಿಕಲಚೇತನ ಇಲಾಖೆಯಿಂದ 10 ಜ‌ನ ಅಂಗವಿಕಲರಿಗೆ ತ್ರೀ ಚಕ್ರ ಸೈಕಲ್ ವಿತರಣೆ ನಡೆಯಿತು. ಸಭೆಯಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ಹಾಗೂ ಚೆಕ್ ವಿತರಿಸಲಾಯಿತು. ಹರ್ ಘರ್ ತಿರಂಗಾ ಪ್ರಚಾರದ ಪೋಸ್ಟರ್ …

Read More »

ಆಲಮಟ್ಟಿ ಜಲಾಶಯದಲ್ಲಿ ಅವನಲ್ಲ, ಅವಳು. ಬುರ್ಖಾಧಾರಿಯ ಅಸಲಿಯತ್ತೇನು? ಪೊಲೀಸರು ಹೇಳಿದ್ದೇನು?

ವಿಜಯಪುರ: ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಬುರ್ಖಾಧಾರಿ ವ್ಯಕ್ತಿಯೊಬ್ಬ ಸಂಚರಿಸಿ ಭಾರಿ ಆತಂಕ ಸೃಷ್ಟಿಯಾಗಿತ್ತು. ಆಲಮಟ್ಟಿ ಜಲಾಶಯದ ಸುತ್ತಮುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದ ಈ ವ್ಯಕ್ತಿ ಬುರ್ಖಾ ಧರಿಸಿದ್ದ ಕಾರಣ ಮೊದಲು ಮಹಿಳೆ ಎಂದು ಅಂದುಕೊಳ್ಳಲಾಗಿತ್ತು. ಕೆಲ ಸಮಯದ ಬಳಿಕ ಆ ಬುರ್ಖಾಧಾರಿ, ಪಕ್ಕದಲ್ಲಿರುವ ಮುಳ್ಳು ಕಂಟಿಗಳ ಕಡೆಗೆ ಹೋಗಿ ವಾಪಸ್​ ಬರುವಾಗ ಬುರ್ಖಾ ತೆಗೆದು ಆಚೆ ಬಂದಿದ್ದನ್ನು ಗಮನಿಸಿದ ಪೊಲೀಸರು ಬುರ್ಖಾ ಧರಿಸಿದ್ದು ಮಹಿಳೆ ಅಲ್ಲ. ಪುರುಷ ಎಂಬುದು …

Read More »

ಮೋದಿ-ಯೋಗಿಗೆ ಕುಟುಂಬವಿಲ್ಲ, ನಮಗಿದೆ: ಕುಟುಂಬ ರಾಜಕಾರಣಕ್ಕೆ ಸಚಿವ ಉಮೇಶ್​ ಕತ್ತಿ ಸಮರ್ಥನೆ

ವಿಜಯಪುರ: ಪ್ರಧಾನಿ ಮೋದಿ ಹಾಗೂ ಯೋಗಿಗೆ ಕುಟುಂಬ ಇಲ್ಲ. ಹೀಗಾಗಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಕುಟುಂಬ ರಾಜಕಾರಣ ಎನ್ನುವುದು ಇದೆ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದರು‌.   ಮೋದಿ, ಯೋಗಿ ಕುಟುಂಬ ಇಲ್ಲದ ನಾಯಕರು. ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು, ಈಗ ಅವರ ಪುತ್ರ …

Read More »

ಅಥಣಿಯಲ್ಲಿ ಸೆರೆಸಿಕ್ಕ ಅಪರೂಪದ ಪುನುಗು ಬೆಕ್ಕು

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ನಿನ್ನೆ ರಾತ್ರಿ ಚಿರತೆಯ ಮರಿಯನ್ನು ಹೋಲುವಂತ ಪ್ರಾಣಿ ಸೆರೆ ಸಿಕ್ಕಿದೆ. ಸ್ಥಳೀಯರು ಚಿರತೆ ಮರಿ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಂತೆ, ಸ್ಥಳಕ್ಕೆ ಅಥಣಿ ವಲಯ ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದಾಗ ಇದು ಪುನುಗು ಬೆಕ್ಕು(ಸಿವೆಟ್ ಕ್ಯಾಟ್) ಎಂದು ತಿಳಿಸಿದ್ದಾರೆ. ಇ ದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಮಹಾದೇವ ಹೊನ್ನೊಳ್ಳಿ ಎಂಬುವವ ಹೊಲದಲ್ಲಿ ಪುನುಗು ಬೆಕ್ಕು ಹಿಡಿದು ಕೋಳಿಯ ಬೋನಿನಲ್ಲಿ ಇರಿಸಲಾಗಿತ್ತು. ಸ್ಥಳಕ್ಕೆ …

Read More »

ರೈಲು ಢಿಕ್ಕಿ ಹೊಡೆದು 96 ಕುರಿಗಳ ದಾರುಣ ಸಾವು : ರೈಲು ಹಳಿ ದಾಟುವ ವೇಳೆ ಘಟನೆ

ಕೊಲ್ಹಾರ (ವಿಜಯಪುರ) : ಜಿಲ್ಲೆಯ ಕೊಲ್ಹಾರ ತಾಲೂಕಿಕ ಮಸೂತಿ-ಕೂಡಗಿ ಮಧ್ಯೆ ಗದಗ-ವಿಜಯಪೂರ ರೈಲ್ವೆ ಮಾರ್ಗದಲ್ಲಿ ರೈಲು ಡಿಕ್ಕಿಯಾಗಿ ಸುಮಾರು 96 ಕುರಿಗಳು ಸಾವನ್ನಪ್ಪಿರುವ ಘಟಣೆ ಜರುಗಿದೆ. ಶನಿವಾರ ಸಂಜೆ ಸುರಿಯುತ್ತಿದ್ದ ಮಳೆ ಸಂದರ್ಭದಲ್ಲಿ ಸೇತುವೆ ಕೆಳಗಡೆ ಮಳೆಯಿಂದ ರಕ್ಷಣೆಗೆ ನಿಂತಿದ್ದ ಕುರಿಗಾರರು ಒಂದು ರೈಲು ಸಂಚರಿಸಿದ ಬಳಿಕ ಕುರಿಗಳನ್ನು ರೈಲ್ವೇ ಹಳಿ ದಾಟಿಸುವ ಸಂದರ್ಭದಲ್ಲಿ ಮತ್ತೊಂದು (ಗದಗ-ಮುಂಬೈ) ರೈಲು ಹಾಯ್ದು ಈ ದುರ್ಘಟನೆ ಸಂಭವಿಸಿದೆ.   ವೇಗವಾಗಿ ಚಲಿಸುತ್ತಿರುವ ರೈಲಿನ ರಬಸಕ್ಕೆ …

Read More »

ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ವಿಜಯಪುರ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾದ ತಾಯಿಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬುಧವಾರ ಜಿಲ್ಲೆಯ ಸಿಂದಗಿ ತಾಲೂಕಿನ‌ ಹಂದಿಗನೂರ ಗ್ರಾಮದಲ್ಲಿ ಜರುಗಿದೆ. ಮಕ್ಕಳನ್ನು ಮೊದಲು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿಯನ್ನು ಆರು ತಿಂಗಳಿಂದ ಮಾನಸಿಕ‌ ಖಿನ್ನತೆಯಿಂದ ಬಳಲುತ್ತಿದ್ದ ಅವ್ವಮ್ಮಾ ಶ್ರೀಶೈಲ ಗುಬ್ಬೇವಾಡ (32) ಎಂದು ಗುರುತಿಸಲಾಗಿದೆ. 1 ಹಾಗೂ 3 ವರ್ಷದ ಮಕ್ಕಳು ತಾಯಿಯಿಂದ ಜೀವ ಕಳೆದುಕೊಂಡ ನತದೃಷ್ಟರು. …

Read More »

ಇದು ಸಿದ್ದರಾಮೋತ್ಸವ ಅಲ್ಲ, ಮನೆಗೆ ಹೋಗುವ ಉತ್ಸವ-.:ಯತ್ನಾಳ

ಬಾಗಲಕೋಟೆ: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು. ಉತ್ಸವ, ಭಂಡಾರ, ಕೇಸರಿ ಹಚ್ಚಿಕೊಳ್ಳೋದು ಅಂದ್ರೆ ಅವರಿಗೆ ಅಲರ್ಜಿ ಆಗುತ್ತದೆ. ಅದೇ ಹಾಲುಮತ ಪೇಟ ಹಾಕಿಕೊಂಡು ಕುಂಕುಮ ಹಚ್ಚಿಕೊಂಡ್ರೆ ಅದು ಸಿದ್ದರಾಮೋತ್ಸವ ಆಗುತ್ತದೆ. ನಮಾಜ್ ಟೋಪಿ ಹಾಕಿಕೊಳ್ತಾರೆ, ಆದ್ರೆ ಕೇಸರಿ ಬಂದರೆ ನೂಕ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ವ್ಯಂಗ್ಯವಾಡಿದರು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದ್ಯಾವ ಉತ್ಸವರಿ, ಇದು ಕೊನೆಯದ್ದು, ಇದು ಸಿದ್ದರಾಮೋತ್ಸವ ಅಲ್ಲ, ಮನೆಗೆ …

Read More »

ಮಳೆಗಾಗಿ ವಿಜಯಪುರ ‌ಜಿಲ್ಲೆಯಲ್ಲಿ ವಿಶಿಷ್ಟ ಆಚರಣೆ: ಹೂತಿದ್ದ ಶವ ಮೇಲೆ ನೀರು ಹಾಕಿ‌ ಮಳೆಗಾಗಿ ಪ್ರಾರ್ಥನೆ

ವಿಜಯಪುರ: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ(rain)ಯಾಗುತ್ತಿದ್ದು, ಜನ ಜೀವನ ಅಸ್ಥವ್ಯಸ್ತವಾಗಿದೆ. ಜೊತೆಗೆ ಹಲವೆಡೆ ರೆಡ್​, ಯೊಲ್ಲೋ, ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಆದರೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಒಂದು ಹನಿ ಮಳೆ ಕೂಡ ಆಗಿಲ್ಲ. ಮಳೆಯಿಲ್ಲದೆ ಜನರು ಕಂಗಾಲಾಗಿದ್ದು, ವಿಶಿಷ್ಟ ಆಚರಣೆ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ. ಸದ್ಯ ಮಳೆಗಾಗಿ ವಿಜಯಪುರ ‌ಜಿಲ್ಲೆಯಲ್ಲಿ ಜನರು ವಿಶಿಷ್ಟ ಆಚರಣೆಯೊಂದು ಮಾಡುತ್ತಿದ್ದು, ಈ‌ ಬಗ್ಗೆ ಕೇಳಿದರೆ ಆಶ್ಚರ್ಯವಾಗೋದು‌ ಗ್ಯಾರಂಟಿ. ಸ್ಮಶಾನದಲ್ಲಿ ಹೂತಿದ್ದ ಶವ …

Read More »

ಕಾರ್ ಹಾಗೂಬೈಕ್ ನಡುವೆ ಮುಖಾಮುಖಿ ಡಿಕ್ಕಿ:ಗಂಭೀರ ಗಾಯ

ಬೈಕ್ ಹಾಗೂ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮೀಸಾಳೆ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಎರಡು ವಾಹನಗಳ ಅತೀ ವೇಗವೇ ಕಾರಣ ಎನ್ನಲಾಗಿದೆ ಘಟನೆಯಲ್ಲಿ ಗಾಯಗೊಂಡಿವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More »