Breaking News

ಕೊಪ್ಪಳ

ವಿದೇಶಿಗರ ಪಾರ್ಟಿ,ಅಕ್ರಮ ಕಲ್ಲು ಗಣಿಗಾರಿಕೆ, ಅನ್ನ ಭಾಗ್ಯ ಅಕ್ಕಿ ಮಾರಾಟ – ಮುನಿರಾಬಾದ್ ಪೊಲೀಸ್ ಠಾಣೆ PSI ಸುನೀಲ್ ತಲೆದಂಡ..!!

ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಅವರನ್ನ ಅಮಾನತು ಮಾಡಿ ಕೊಪ್ಪಳ ಎಸ್‌ಪಿ ರಾಮ್ ಅರಸಿದ್ದಿ ಆದೇಶಿಸಿದ್ದಾರೆ. ಆಡಳಿತಾತ್ಮಕ ವಿಚಾರದಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆ ಅಮಾನತು ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದಲೂ ಮುನಿರಾಬಾದ್ ಠಾಣೆಯ PSI ಆಗಿ ಸುನೀಲ್ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಅನಧಿಕೃತ ಚಟುವಟಿಕೆಗಳು ನಡೆದಿದ್ವು. ವಿದೇಶಿಗರ ಪಾರ್ಟಿ,ಅಕ್ರಮ ಕಲ್ಲು ಗಣಿಗಾರಿಕೆ,ಅನ್ನ ಭಾಗ್ಯ ಅಕ್ಕಿ ಮಾರಾಟದಂತಹ ಪ್ರಕರಣಗಳು ಬೆಳಕಿಗೆ …

Read More »

ಕೊಪ್ಪಳದಲ್ಲೊಬ್ಬ ವಿಕೃತ ಕಾಮಿ – ಮಹಿಳೆಯರ ಒಳಉಡುಪು ಈತನ ಟಾರ್ಗೆಟ್

ಕೊಪ್ಪಳ: ಮನೆಯ ಗೋಡೆ ಹಾರಿ ವಿಕೃತ ಕಾಮಿಯೊಬ್ಬ ಮಹಿಳೆಯರ ಒಳಉಡುಪನ್ನು  ಕಳ್ಳತನ ಮಾಡಿರುವ ಘಟನೆ ಕೊಪ್ಪಳದ  ಗಂಗಾವತಿಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಪ್ರತಿಷ್ಠಿತ ಏರಿಯಾದಲ್ಲಿ ಮಹಿಳೆಯರ ಒಳಉಡಪು ಕಳ್ಳತನ ಮಾಡಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮನೆಯ ಗೋಡೆ ಹಾರಿ ವಿಕೃತ ಕಾಮಿ ಮಹಿಳೆಯರ ಒಳ ಉಡುಪು ಕಳ್ಳತನ ಮಾಡಿದ್ದಾನೆ. ಮಹಿಳೆಯರ ಒಳಉಡುಪು ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಂಗವಾತಿಯ ಸಿಬಿಎಸ್ ಬಡಾವಣೆಯ ಸುತ್ತಮುತ್ತ ಮಹಿಳೆಯರ ಒಳ …

Read More »

ಲೋಕಾ ದಾಳಿ ವೇಳೆ 10 ಕೋಟಿ ಭ್ರಷ್ಟಾಚಾರ ಬಯಲು – ಕೊಪ್ಪಳ ನಗರಸಭೆಯ ಜೆಇ ಸಸ್ಪೆಂಡ್

ಕೊಪ್ಪಳ: ಲೋಕಾಯುಕ್ತ ದಾಳಿ ವೇಳೆ 10 ಕೋಟಿ ರೂ. ಭ್ರಷ್ಟಾಚಾರ ಬಯಲಿಗೆ ಬಂದ ಹಿನ್ನೆಲೆ ಕೊಪ್ಪಳ  ನಗರಸಭೆಯ ಜೆಇ ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಲಾಗಿದೆ. 2023-24 ಹಾಗೂ 24-25ನೇ ಸಾಲಿನಲ್ಲಿ ಕೆಲ ಕಾಮಗಾರಿಗಳಲ್ಲಿ ಸುಳ್ಳು ಬಿಲ್ ಹಾಕಿದ್ದು, ಒಟ್ಟು 366 ಕಾಮಗಾರಿಗಳಲ್ಲಿ 10 ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ. ಈ ಹಿಂದೆ ಲೋಕಾಯುಕ್ತ ದಾಳಿ ನಡೆಸಿದಾಗ ವಿಚಾರ ಬಯಲಿಗೆ ಬಂದಿದೆ. ಸದ್ಯ ಪೌರಾಡಳಿತ ಇಲಾಖೆ ನಿರ್ದೇಶಕರು ಕೊಪ್ಪಳ ನಗರಸಭೆಯ ಜೆಇ …

Read More »

ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದ್ಕೆ ಭಾರತದ ಧ್ವಜ ಇರೋ ಹಡಗುಗಳು ಬರುತ್ತಿವೆ – ಜನಾರ್ದನ ರೆಡ್ಡಿ

ಕೊಪ್ಪಳ: ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದಕ್ಕಾಗಿ ಭಾರತ ಧ್ವಜ ಇರೋ ಹಡುಗಗಳು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಬರುತ್ತಿವೆ ಎಂದು ಶಾಸಕ ಜನಾರ್ದನ ರೆಡ್ಡಿ  ಹೇಳಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಭಾರತದಲ್ಲಿ ಮುಸ್ಲಿಮರಿಗೆ ಸುರಕ್ಷತೆ ನೀಡಿದ್ದಾರೆ. ಅದಕ್ಕಾಗಿ ಇರಾನ್ ನಮ್ಮ ದೇಶದ ಹಡಗುಗಳಿಗೆ ರಕ್ಷಣೆ ಕೊಟ್ಟು ಕಳಿಸುತ್ತಿದೆ ಎಂದಿದ್ದಾರೆ. ಸಚಿವ ಬೋಸರಾಜು ಹೇಳಿಕೆ ಬಗ್ಗೆ ಮಾತನಾಡಿದ ಅವರು, ಮೋದಿ, ಟ್ರಂಪ್ ಗೆಳೆತನ ಜೋರಾಗಿರೋದಕ್ಕೆ ನಮಗೆ …

Read More »

ಮಾಹಿತಿ ನೀಡಲು ವಿಳಂಬ ಮಾಡಿದ ಪಿಡಿಒ ಸೇರಿ ಗ್ರಾಪಂ ಅಧಿಕಾರಿಗಳಿಗೆ ತಲಾ 10 ಸಾವಿರ ರೂ. ದಂಡ

ಕೊಪ್ಪಳ: ಸಕಾಲಕ್ಕೆ ಮಾಹಿತಿ ನೀಡಿದೆ ನಿರ್ಲಕ್ಷ್ಯ ವಹಿಸಿದ ಒಬ್ಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಮೂವರು ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ಅವರು ತಲಾ 10,000 ರೂ.ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಮೇಲ್ಮನವಿದಾರರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದೆ ಇರುವುದರಿಂದ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಲ್ಲಿ ಸಲ್ಲಿಸಿದ …

Read More »

ಆಂಧ್ರದ ಚಿತ್ತೂರಲ್ಲಿ ಹಕ್ಕಿ ಜ್ವರ ಪತ್ತೆ – ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ನಿಗಾ

ಕೊಪ್ಪಳ: ನರೆಯ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕೋಳಿ ಹಕ್ಕಿ ಜ್ವರ  ಪ್ರಕರಣ ಧೃಡಪಟ್ಟಿರುವ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಸೂಚನೆ ನೀಡಿದರು. ಕೊಪ್ಪಳ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕೋಳಿ ಶೀತ ಜ್ವರದ ರೋಗೋದ್ರೇಕದ ಕುರಿತು ಮುಂಜಾಗ್ರತೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಣಿ ಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು …

Read More »

ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ವಿದೇಶಿಗನ ಕೊಲೆ ಕೇಸ್: ಮೂವರಿಗೆ ಗಲ್ಲು ಶಿಕ್ಷೆ

ಕೊಪ್ಪಳ: ಹಂಪಿ  ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ವಿದೇಶಿ ಪ್ರವಾಸಿಗನ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇಸ್ರೇಲ್ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣ ಸಂಬಂಧ ಗಂಗಾವತಿ ನ್ಯಾಯಾಲಯವು, ಇದೇ ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇಂದು (ಫೆಬ್ರವರಿ 16)ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ …

Read More »

ಸ್ಪಿರಿಟ್ ಕುಡಿದು ಇಬ್ಬರು ಸಾವು, ಓರ್ವನ ಸ್ಥಿತಿ ಚಿಂತಾಜನಕ – ಇಬ್ಬರು ವಶಕ್ಕೆ

ಕೊಪ್ಪಳ: ತಾಲೂಕಿನ  ಕೂಕನಪಳ್ಳಿ ಗ್ರಾಮದಲ್ಲಿ  ಸ್ಪಿರಿಟ್  ಕುಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಕೂಕನಪಳ್ಳಿ ಗ್ರಾಮದ ಅಮರಯ್ಯ ಹಿರೇಮಠ (35) ಹಾಗೂ ರಮೇಶ ಹೊಸಹಳ್ಳಿ (25) ಮೃತಪಟ್ಟಿದ್ದು, ಶರಣಪ್ಪ ಹಂಚಿನಾಳ ಎಂಬವನ ಸ್ಥಿತಿ ‌ಚಿಂತಾಜನಕವಾಗಿದೆ. ಮೃತ ಅಮರಯ್ಯ ಜೆಸ್ಕಾಂ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ರಮೇಶ ಹೊಸಹಳ್ಳಿ ತಂದೆ – ತಾಯಿಗೆ ಒಬ್ಬನೇ ಮಗನಾಗಿದ್ದ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. …

Read More »

ಮುಸ್ಲಿಂ ಮಹಿಳೆ ಜೊತೆ ಇದ್ದಿದ್ದಕ್ಕೆ ಹಿಂದೂ ಯುವಕನಿಗೆ ಥಳಿತ

ಕೊಪ್ಪಳ: ಮುಸ್ಲಿಂ ಮಹಿಳೆ ಜೊತೆ ಹಿಂದೂ ಯುವಕನನ್ನು ನೋಡಿದ ಮುಸ್ಲಿಂ ಯುವಕರು ಹಿಂದೂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ  ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ವೆಂಕಟೇಶ್ ಎನ್ನುವ ಯುವಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿದೆ. ಬಸಾಪಟ್ಟಣ ಗ್ರಾಮದ ಅಜ್ಮೀರ್, ಆಫೀಯಾ ದಂಪತಿ ಜಗಳ ಮಾಡುತ್ತಿದ್ದರು. ಈ ವೇಳೆ ಪಕ್ಕದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ ಇಬ್ಬರ ಜಗಳ ಬಿಡಿಸಲು ಹೋಗಿದ್ದಾರೆ. ಗಂಡನ ಜೊತೆ ಜಗಳವಾಡಿ …

Read More »

ಆಸ್ತಿಗಾಗಿ ಕೊಲೆ ಆರೋಪ – ಮಗನ ವಿರುದ್ಧ ದೂರು ಕೊಟ್ಟ ಮರುದಿನವೇ ತಂದೆ ಅನುಮಾನಾಸ್ಪದ ಸಾವು

ಕೊಪ್ಪಳ: ಮಗನ ವಿರುದ್ಧ ದೂರು ಕೊಟ್ಟ ಮರುದಿನವೇ ತಂದೆ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವರಣಖೇಡ ಗ್ರಾಮದಲ್ಲಿ ನಡೆದಿದೆ. ಆಸ್ತಿಗಾಗಿ ಮಗನೇ ತಂದೆಯನ್ನೇ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೃತರನ್ನು ವೆಂಕೋಬಾ ಹಂಚಿನಾಳ (50) ಎಂದು ಗುರುತಿಸಲಾಗಿದೆ. ಸೋಮವಾರ (ಜ.26) ಸಂಜೆ ತಮ್ಮ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಮೃತ ವೆಂಕೋಬಾ ಮಗನ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. …

Read More »