ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದೆ. ಹುಬ್ಬಳ್ಳಿ – ಧಾರವಾಡ ಭಾಗದಲ್ಲಿ ಹೆಚ್ಚಿನ ಮಳೆ ಹಿನ್ನಲೆಯಲ್ಲಿ ಯಲ್ಲಾಪುರ ಭಾಗದ ಹಲವು ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಮಂಚಿಕೇರಿಯ ಹಲವು ಭಾಗದ ಕೃಷಿ ಭೂಮಿಗೂ ನೀರು ನುಗ್ಗಿದೆ. ಯಲ್ಲಾಪುರ -ಮಂಚಿಕೇರಿ ಸೇತುವೆ ಕೊಚ್ಚಿಹೋದ್ದರಿಂದ ನಗರ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡ ಮಳೆಯ ಅಬ್ಬರ …
Read More »ಉತ್ತರಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ.
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಕರಾವಳಿ ತಾಲೂಕುಗಳ ಅನೇಕ ಹಳ್ಳಿಗಳು ಜಲಾವೃತವಾಗಿವೆ.ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ ಯಲ್ಲಾಪುರ ತಾಲೂಕಿನ ತಗ್ಗು ಪ್ರದೇಶಗಳಿಗೆ ಗಂಗಾವಳಿ, ಅಘನಾಶಿನಿ, ಬೇಡ್ತಿ ನದಿ ನೀರು ನುಗ್ಗಿದೆ. ಗಂಗಾವಳಿ ನದಿ ಪ್ರವಾಹದಿಂದ ಅಂಕೋಲಾ ತಾಲೂಕಿನ ವಾಸರಕುದ್ರಗಿ ಹಳ್ಳಿ ಸಂಪೂರ್ಣ ಜಲಾವೃತವಾಗಿದ್ದು, 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಜನರನ್ನು ದೋಣಿ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಹಲವು ಮನೆಗಳಲ್ಲಿ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, …
Read More »ಸಮುದ್ರಕ್ಕಿಳಿದ ಬೋಟುಗಳು ಮರಳಿ ದಡಕ್ಕೆ
ಕಾರವಾರ: ರಾಜ್ಯದ ಕರಾವಳಿಯಲ್ಲಿ ಅಗಸ್ಟ್ ತಿಂಗಳ ಮೊದಲ ದಿನ ಮೀನುಗಾರಿಕೆ ಪ್ರಾರಂಭಕ್ಕೆ ವಿದ್ಯುಕ್ತ ಚಾಲನೆ ಸಿಗುತ್ತದೆ. ಮಳೆಗಾಲದ ಎರಡು ತಿಂಗಳು ಬಂದ್ ಆಗುವ ಮೀನುಗಾರಿಕೆ, ಸರ್ಕಾರದ ಆದೇಶದಂತೆ ಇಂದಿನಿಂದ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಪ್ರತಿ ವರ್ಷ ಅಗಸ್ಟ್ ನಲ್ಲಿ ಮೀನುಗಾರಿಕೆಯನ್ನು ಹಬ್ಬದಂತೆ ಆಚರಿಸುತ್ತಿದ್ದ ಉತ್ತರ ಕನ್ನಡ ಮೀನುಗಾರರ ಸಂಭ್ರಮ ಕಳೆಗುಂದಿದೆ. ಸರ್ಕಾರದ ಆದೇಶದಂತೆ ಜೂನ್, ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ ಬಳಿಕ ಅಗಸ್ಟ್ 1 ರಿಂದ …
Read More »ಬಿಜೆಪಿಯವರು ಹೆಣದ ಮೇಲೆ ಹಣ ಮಾಡುವವರು: ಬಿ.ಕೆ.ಹರಿಪ್ರಸಾದ್
ಕಾರವಾರ: ಕೊರೊನಾ ವಿಚಾರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಬಿಜೆಪಿಯವರು ಹೆಣದ ಮೇಲೆ ಹಣ ಮಾಡುವವರು. ಶವದ ಮೇಲೆ ಕುಳಿತು ಊಟ ಮಾಡುವವರು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ. ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರಿಗೆ ಯಾವುದೇ ನಾಚಿಕೆ, ಮಾನಮರ್ಯಾದೆ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜ್ಯ ಸರ್ಕಾರ ಇಂಥ ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದು …
Read More »3.50 ಲಕ್ಷ ರೂ. ಮೌಲ್ಯದ ಗೋಮಾಂಸ ಸಾಗಾಟ ಮಾಡ್ತಿದ್ದವರ ಬಂಧನ
ಕಾರವಾರ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿ ಸೇರಿ ವಾಹನ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹಿರೇಗುತ್ತಿ ಚೇಕ್ ಪೋಸ್ಟ್ ಬಳಿ ನಡೆದಿದೆ. ಆರೋಪಿಗಳನ್ನು ಅಮೂಲ (36), ಜಮೀರ್ ಸಯ್ಯದ್(29) ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಾಟವಾಗುತ್ತಿದ್ದ ಗೋಮಾಂಸವನ್ನು ರಾಷ್ಟ್ರೀಯ ಹೆದ್ದಾರಿ 66 ರ ಹಿರೆಗುತ್ತಿ ಚೆಕ್ ಪೋಸ್ಟ್ ನಲ್ಲಿ ಗೋಕರ್ಣ ಪಿಎಸ್‍ಐ ನವೀನ್ ಕುಮಾರ ನೇತೃತ್ವದ ತಂಡ ತಪಾಸಣೆ ನಡೆಸಿದ ವೇಳೆ …
Read More »ಸಿದ್ದಿ ಜನಾಂಗಕ್ಕೆ ಒಲಿದು ಬಂತು ಎಂಎಲ್‍ಸಿ ಪಟ್ಟ…………
ಕಾರವಾರ: ವಿಧಾನ ಪರಿಷತ್ ಸದಸ್ಯರಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ಧಿ ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಜನರೇ ಆಶ್ಚರ್ಯ ಪಡುವಂತಾಗಿದೆ. ಇವರ ಕುರಿತು ಅಧಿಕೃತ ಪ್ರಕಟಣೆಯನ್ನು ರಾಜ್ಯಪಾಲರಾದ ವಜುಬಾಯಿ ವಾಲಾ ಹೊರಡಿಸಿದ್ದಾರೆ. ಅಷ್ಟಕ್ಕೂ ಇವರು ಯಾರು? ಏನು ಸಾಧನೆ ಎಂದು ತಿಳಿದರೆ ಇವರ ಮೇಲೆ ಗೌರವ ಹೆಚ್ಚಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅವರ ಹೆಸರು ದೊಡ್ಡದು. 55 …
Read More »ಖಲೀಸ್ಥಾನ ಚಳುವಳಿಗಾರರ ವಿರುದ್ಧ ಅನಂತಕುಮಾರ್ ಹೆಗಡೆ ದೂರು ದಾಖಲು
ಕಾರವಾರ: ರಾಷ್ಟ್ರೀಯ ಏಕಾಗ್ರತೆ ಹಾಗೂ ಅಸ್ತಿತ್ವಕ್ಕೆ ಭಂಗ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಖಲೀಸ್ಥಾನ ಚಳುವಳಿಗಾರರನ್ನು ದೇಶದ್ರೋಹದ ಆರೋಪದ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖಲೀಸ್ಥಾನ ಚಳುವಳಿಯ ಹೋರಾಟಗಾರ ಗುರುಪಥವಂತ ಸಿಂಗ್ ಪನೂನ ಆರೋಪಿತನಾಗಿದ್ದಾನೆ. ಈ ಹಿಂದೆ ಸಂಸದ ಹೆಗಡೆ ಖಲೀಸ್ಥಾನದ ಕುರಿತು ಟ್ವಿಟ್ಟರ್ ಮೂಲಕ ಖಲೀಸ್ಥಾನ ಚಳುವಳಿಗಾರರ ವಿರುದ್ಧ ಜಾಹಿರಾತನ್ನು ಪ್ರಕಟಿಸಿದ್ದರು. ಈ ಕಾರಣಕ್ಕೆ ಚಳುವಳಿಗಾರರು ದೂರವಾಣಿ …
Read More »ಗಂಡು ಮಗು ಆಗಿಲ್ಲ ಎಂದು ಮನನೊಂದ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ
ಕಾರವಾರ: ಗಂಡು ಮಗು ಆಗಿಲ್ಲ ಎಂದು ಮನನೊಂದ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನ ಜಿಲ್ಲೆಯ ಶಿರಸಿಯ ಅಂದಳ್ಳಿಯಲ್ಲಿ ನಡೆದಿದ್ದು ಶುಕ್ರವಾರ ಎಫ್‌ಐಆರ್ ದಾಖಲಾಗಿದೆ. ಮಧುರಾ ಹೆಗಡೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಹಿಂದೆ ತನಗೆ ಎರಡೂ ಹೆಣ್ಣು ಮಕ್ಕಳೆ ಆಗಿದ್ದು ಗಂಡು ಮಗು ಆಗಿಲ್ಲ ಎಂದು ನೊಂದಿದ್ದಾಳೆ ಎನ್ನಲಾಗಿದೆ. ಬಚ್ಚಲ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ …
Read More »ಕೊರೊನಾ ಸೋಂಕಿರುವುದನ್ನು ಮುಚ್ಚಿಟ್ಟ ವರ- ಮದ್ವೆಯಾದ 5 ದಿನಕ್ಕೆ ಸಾವು
ಕಾರವಾರ: ಮದುವೆ ಸಂಭ್ರಮದಲ್ಲಿ ತನಗೆ ಕೊರೊನಾ ಸೋಂಕು ಹರಡಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಮದುಮಗ ವಿವಾಹ ಜರುಗಿದ 5ದಿನಕ್ಕೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದ ಮದುಮಗ ಸದ್ಯ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ನೆಂಟರು ಹಾಗೂ ಕುಟುಂಬಕ್ಕೆ ಸೋಂಕು ಹರಡಲು ಕಾರಣನಾಗಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ ಭಟ್ಕಳದ 26 ವರ್ಷದ ಯುವಕ ತನ್ನ ಮದುವೆ ಸಂಭ್ರಮದಲ್ಲಿದ್ದ. ಈತನಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಇದರಿಂದ ತನ್ನ …
Read More »ಶಿರಸಿಯ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ಬಿಟ್ಟ ಸಾರಿಗೆ ಇಲಾಖೆ
ಕಾರವಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಾಮುಖ್ಯತೆಯನ್ನು ಅರಿತ ಸರ್ಕಾರ ಕೊರೊನಾ ವೈರಸ್ ಸೋಂಕಿನ ನಡುವೆ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆ ತಪ್ಪಿಸಬಾರದು ಎನ್ನುವ ಕಾರಣಕ್ಕೆ ಸಾರಿಗೆ ಇಲಾಖೆ ಶಿರಸಿಯ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ಬಿಟ್ಟದೆ. ಶಿರಸಿಯ ಲಯನ್ಸ್ ಪರೀಕ್ಷಾ ಕೇಂದ್ರಕ್ಕೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಲು, ವಿದ್ಯಾರ್ಥಿ ಶ್ರೀಧರ ಗೌಡ ಹೋಗಬೇಕಿತ್ತು. ಆ ವಿದ್ಯಾರ್ಥಿಯ ಪರೀಕ್ಷೆ ಬರೆಯಲು ಕೆಎಸ್‌ಆರ್‌ಟಿಸಿ ಸಹಾಯ ಮಾಡಿದೆ. ಆದ್ದರಿಂದ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ವ್ಯವಸ್ಥೆ ಮಾಡಿ ಪರೀಕ್ಷೆ …
Read More »
Laxmi News 24×7