Breaking News

ಕಾರವಾರ

ರೈಲಿನಲ್ಲಿ 2 ಕೋಟಿ ಸಾಗಿಸುತ್ತಿದ್ದವನ ಬಳಿ ಟಿಕೆಟ್ಟೇ ಇರಲಿಲ್ಲ..!

ಕಾರವಾರ; ಸಾಮಾನ್ಯವಾಗಿ ಹಣ ಇಲ್ಲದೇ ಇದ್ದವರು ರೈಲಿನಲ್ಲಿ ಟಿಕೆಟ್‌ ಇಲ್ಲದೆ ಕಳ್ಳತನವಾಗಿ ಪ್ರಯಾಣ ಮಾಡುತ್ತಾರೆ. ಆದ್ರೆ, ಮುಂಬೈನಿಂದ ಬರುತ್ತಿದ್ದ ವ್ಯಕ್ತಿಯ ಬಳಿಯ ರೈಲು ಟಿಕೆಟ್‌ ಇರಲಿಲ್ಲ, ಹಣ ಅಂತೂ ಸಾಕಷ್ಟಿತ್ತು. ಅದು ಅಷ್ಟೋ ಇಷ್ಟೂ ಅಲ್ಲ, ಬರೋಬ್ಬರಿ 2 ಕೋಟಿ ರೂಪಾಯಿ. ಅದಕ್ಕೆ ದಾಖಲೆ ಇಲ್ಲದ ಕಾರಣಕ್ಕಾಗಿ ಆ ವ್ಯಕ್ತಿಯನ್ನು ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೌದು, ವ್ಯಕ್ತಿಯೊಬ್ಬ ರೈಲಿನ ಮೂಲಕ ಮುಂಬೈನಿಂದ ಮಂಗಳೂರಿಗೆ 2 ಕೋಟಿ ರೂಪಾಯಿ ಹಣ …

Read More »

ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,

ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,   ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ಬಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಗೋಕಾಕದಲ್ಲಿ ಬಸವೇಶ್ವರ ವೃತ್ತದಲ್ಲಿ ಗೋಕಾಕದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೆಂದ್ರ ಮಹಾಸ್ವಾಮಿಗಳ ಮುಖಂಡತ್ವದಲ್ಲಿ ಹಾಗೂ ಯುವ ದಲಿತ ಸಮಿತಿ ನೇತೃತ್ವದಲ್ಲಿ ವಿವಿದ ಸಂಘಟನೆಗಳಿಂದ ಪ್ರದಾನ ಮಂತ್ರಿಯವರಿಗೆ ಸಾವಿರಾರು ಪತ್ರ ಬರೆದು ಪತ್ರ ಚಳುವಳಿ ಮಾಡಲಾಯಿತು. ಈ ಸಮಯದಲ್ಲಿ ಮಾತನಾಡಿದ …

Read More »

ರಸ್ತೆಯಲ್ಲೇ ಚಾಕಲೇಟ್‌ ಎಸೆದ ವ್ಯಾಪಾರಿ ..!

ಕಾರವಾರ: ಸಗಟು ವ್ಯಾಪಾರಿಯೊಬ್ಬರು ಒಬ್ಬರು ಕ್ವಿಂಟಾಲ್ ಗೂ ಹೆಚ್ಚು ತೂಕದ ಚಾಕ್ಲೇಟ್ ಅನ್ನು ರಸ್ತೆಯಲ್ಲಿ ಎಸೆದು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹುಡ್ಲಮನೆ ರಸ್ತೆಯಲ್ಲಿ ನಡೆದಿದೆ. ಕ್ಯಾಂಡಿ ಕಂಪನಿಗೆ ಸೇರಿದ ವಿವಿಧ ಬಗೆಯ ಪ್ಲೇವರ್ ಹೊಂದಿದ ಚಾಕ್ಲೇಟ್ ಇದಾಗಿದ್ದು ಕೊರೊನಾ ಲಾಕ್ ಡೌನ್ ನಿಂದ ಈ ಕಂಪನಿಯ ಚಾಕ್ಲೇಟ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿಲ್ಲ. ಈ ಕಾರಣದಿಂದ ಇದರ ಅವಧಿ ಮುಗಿದಿದ್ದು, ಕಂಪನಿಯ ಡೀಲರ್ ನಗರಸಭೆಯ ಕಸ …

Read More »

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಕಾರವಾರದಲ್ಲಿ ಇಬ್ಬರು ಅರೆಸ್ಟ್

ಕಾರವಾರ: ನಗರದ ಕೋಡಿಭಾಗದ ಸಾಗರ ದರ್ಶನ ಹಾಲ್ ಹಿಂಭಾಗದಲ್ಲಿ ಇಬ್ಬರು ಅಕ್ರಮವಾಗಿ ಗಾಂಜಾ ಸಾಗಾಟ, ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಅಧಿಕಾರಿಗಳು ದಾಖಲಿ ನಡೆಸಿ ಇಬ್ಬರನ್ನು ಬಂಧಿಸಿದ್ದು 3.20 ಲಕ್ಷ ರೂ. ಗಾಂಜಾ ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಸಂಕ್ರಿವಾಡಾದ ರಿಜ್ವಾನ್ ಅಕ್ಬರ್ ಶೇಖ್ (30) ಹಾಗೂ ನಗರದ ಗುನಗಿವಾಡಾದ ಸಾಹಿಲ್ ನಾದರ್ ಭಾಷಾ ಶೇಖ್ (20) ಎನ್ನುವ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. …

Read More »

ಲಸಿಕೆ ಪಡೆಯಲು ಜನರ ತಳ್ಳಾಟ ನೂಕಾಟ

ಕಾರವಾರ: ರಾಜ್ಯಾದ್ಯಂತ ಕೊರೊನಾ ಲಸಿಕೆಯ ಅಭಾವ ಮಿತಿಮೀರಿದ್ದು ಗಡಿ ಜಿಲ್ಲೆ ಉತ್ತರ ಕನ್ನಡವನ್ನೂ ಬಿಟ್ಟಿಲ್ಲ. 15 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಇದುವರೆಗೆ 3,81000 ಜನ ಮೊದಲ ಹಂತದ ಲಸಿಕೆ ಪಡೆದಿದ್ದಾರೆ. 77000 ಜನ ಎರಡನೇ ಹಂತದ ಲಸಿಕೆ ಸಹ ನೀಡಲಾಗಿದೆ. ಆದರೆ ಇದೀಗ ರಾಜ್ಯ ಹಾಗೂ ಕೇಂದ್ರದಿಂದ ಬರಬೇಕಾದ ಪ್ರಮಾಣದಲ್ಲಿ ಲಸಿಕೆ ಬರುತ್ತಿಲ್ಲ. ಕಳೆದ ಮೂರು ದಿನದಿಂದ ಜಿಲ್ಲೆಯಲ್ಲಿ ಲಸಿಕೆ ಅಭಾವ ಸಹ ಆಗಿದ್ದು, ಜಿಲ್ಲಾಡಳಿತದಿಂದ ನಿಗದಿ ಮಾಡಿದವರನ್ನು …

Read More »

ಗೋವಾ- ಕರ್ನಾಟಕ ಗಡಿಯಲ್ಲಿ ನಿರ್ಬಂಧ : ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಸಂಕಷ್ಟ

ಕಾರವಾರ: ಕೊರೊನಾ ರೂಪಾಂತರ ವೈರಸ್ ಡೆಲ್ಟಾ ಪ್ಲಸ್ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆ ಕಾರವಾರದ ಮಾಜಾಳಿ -ಗೋವಾ ಗಡಿಯಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್ ಟೆಸ್ಟ್ ನೆಗಟಿವ್ ಇಲ್ಲದವರಿಗೆ ಗೋವಾ ಹಾಗೂ ಕರ್ನಾಟಕ ಪ್ರದೇಶಕ್ಕೆ ತೆರಳಲು ಕರ್ನಾಟಕ ಸರ್ಕಾರ ಹಾಗೂ ಗೋವಾ ಸರ್ಕಾರ ನಿರ್ಬಂಧ ವಿಧಿಸಿದೆ. ಗೋವಾ ಭಾಗದಿಂದ ಬರುವ ಮಹಾರಾಷ್ಟ್ರ, ಚಂಡೀಗಢ, ಕೇರಳ, ಹರಿಯಾಣ, ದೆಹಲಿ, ಉತ್ತರ ಪ್ರದೇಶದಿಂದ ಬರುವ ವಾಹನಗಳಿಗೆ …

Read More »

ಅತ್ಯುತ್ತಮ ಪ್ರವಾಸಿ ತಾಣ ಕರ್ನಾಟಕದ ಯಾಣ.!

ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಯಾಣ. ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ತಾಣವಿದು. ನಗರದ ಜಂಜಾಟವನ್ನೆಲ್ಲಾ ಮರೆತು ಶುದ್ಧವಾದ ಗಾಳಿ ಸೇವಿಸುತ್ತಾ, ದಟ್ಟವಾದ ಕಾಡಲ್ಲಿ ವಿಹರಿಸುತ್ತಾ, ಹಕ್ಕಿಗಳ ಚಿಲಿಪಿಲಿ, ನೀರಿನ ಜುಳುಜುಳು ನಾದವನ್ನು ಸವಿಯುತ್ತಾ ದಿನ ಕಳೆಯಬಹುದು. ಇಲ್ಲಿ ಕಾಣಿಸುವ ಎರಡು ಎತ್ತರವಾದ ಬಂಡೆಗಳೇ ಇಲ್ಲಿನ ವಿಶೇಷತೆ. ಒಂದು ಬಂಡೆಯನ್ನು ಮೋಹಿನಿ ಶಿಖರ ಮತ್ತೊಂದನ್ನು ಭೈರವೇಶ್ವರ ಶಿಖರ ಎಂದು ಕರೆಯುತ್ತಾರೆ. ಭೈರವೇಶ್ವರ ಬಂಡೆಯಲ್ಲಿ ಒಂದು ಸಣ್ಣ …

Read More »

ಮೊಬೈಲ್ ನಲ್ಲಿ ಕಾಲ ಕಳೆಯಬೇಡ ಅಂತ ಬುದ್ದಿ ಹೇಳಿದ್ದಕ್ಕೆ ಪತಿ ಹತ್ಯೆಗೆ ಸುಪಾರಿ ಕೊಟ್ಟ ಪತ್ನಿ!

ಕಾರವಾರ : ಪ್ರತಿ ದಿನ ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯನ್ನೇ ಕೊಲ್ಲಲು 30 ಸಾವಿರ ಸುಪಾರಿ ನೀಡಿ ಹತ್ಯೆ ಪ್ರಯತ್ನದ ವೇಳೆ ಪತ್ನಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಸರಸ್ವತಿ ಸುತಾರ ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಈಕೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬುವವನನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ …

Read More »

ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ.: ಆರ್.ವಿ.ದೇಶಪಾಂಡೆ

ಕಾರವಾರ : ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಡೀ ಜಗತ್ತಲ್ಲೂ ಸಾಂಕ್ರಾಮಿಕ ಕಡಿಮೆ ಆಗಬೇಕಿದೆ ಎಂದು ನಾನೂ ಪ್ರಾರ್ಥಿಸುತ್ತೇನೆ. ಆದರೆ ತಪಾಸಣೆ ಕಡಿಮೆ ಮಾಡಿದರೆ ಪಾಸಿಟಿವಿಟಿ ದರ ಕಡಿಮೆಯಾಗದೇ ಇರುತ್ತದಾ? ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಪ್ರಶ್ನಿಸಿದ್ದಾರೆ. ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಅಲೆಯಲ್ಲಿ ವಸತಿನಿಲಯಗಳನ್ನೆಲ್ಲ ಬಳಸಿಕೊಂಡಿದ್ದರು. …

Read More »

ಕಾಂಗ್ರೆಸ್ ಮುಖಂಡ, ಸಹಚರರಿಂದ ASP ಮೇಲೆ ಕಾರು ಚಲಾಯಿಸುವುದಕ್ಕೆ ಯತ್ನ.. ಐವರು ಅರೆಸ್ಟ್

ಕಾರವಾರ: ಕಾಂಗ್ರೆಸ್ ಮುಖಂಡ ಹಾಗೂ ಸಹಚರರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಮೇಲೆ ಕಾರು ಚಲಾಯಿಸುವುದಕ್ಕೆ ಪ್ರಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಐಆರ್‌ಬಿ ಟೋಲ್ ಬಳಿ ನಡೆದಿದೆ. ಈ ಸಂಬಂಧ ಸದ್ಯ ಐವರನ್ನು ವಶಕ್ಕೆ ಪಡೆಯಲಾಗಿದೆ. ನಿನ್ನೆ ಮಧ್ಯಾಹ್ನ ಟೋಲ್​ನಲ್ಲಿ ಗಲಾಟೆ ನಡೆಯುತ್ತಿತ್ತು. ಇದೇ ವೇಳೆ ಉತ್ತರ ಕನ್ನಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ಕಾರಿನಲ್ಲಿ ಬಂದಿದ್ದರು. ಈ ವೇಳೆ ASP ಬದ್ರಿನಾಥ್ ಕಾರ್ …

Read More »