Breaking News

ರಾಷ್ಟ್ರೀಯ

ಮುಂದಿನ 8-10 ವರ್ಷ ಪೆಟ್ರೋಲ್ ಮತ್ತು ಡೀಸೆಲ್ ನ್ನು ಜಿಎಸ್ ಟಿ ವ್ಯಾಪ್ತಿಯಡಿ ತರಲು ಸಾಧ್ಯವಿಲ್ಲ: ಸುಶಿಲ್ ಕುಮಾರ್ ಮೋದಿ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ನ್ನು ಇನ್ನು 8-10 ವರ್ಷ ಜಿಎಸ್ ಟಿ ಆಡಳಿತದಡಿ ತರಲು ಸಾಧ್ಯವಿಲ್ಲ, ಇದರಿಂದ ವಾರ್ಷಿಕವಾಗಿ ಎಲ್ಲಾ ರಾಜ್ಯಗಳಿಗೆ 2 ಲಕ್ಷ ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಬಿಜೆಪಿ ನಾಯಕ ಸುಶಿಲ್ ಕುಮಾರ್ ಮೋದಿ ಹೇಳಿದ್ದಾರೆ. ಹಣಕಾಸು ಮಸೂದೆ 2021ರ ಕುರಿತು ಇಂದು ರಾಜ್ಯಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ 5 ಲಕ್ಷ ಕೋಟಿಗಿಂತಲೂ …

Read More »

ಏ.1ಕ್ಕಿಂತ ಮೊದ್ಲೇ ಈ ಕೆಲ್ಸ ಮಾಡಿ.. ಇಲ್ಲದಿದ್ರೆ ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತೆ..!

ಪ್ಯಾನ್ ಕಾರ್ಡ್ ಹೊಂದಿರುವವರು ಇದನ್ನ ಎಚ್ಚರಿಕೆಯಿಂದ ಓದಿ. ಯಾಕಂದ್ರೆ, ಆದಾಯ ತೆರಿಗೆ ಇಲಾಖೆಯು 2021ರ ಮಾರ್ಚ್ 31ಕ್ಕೆ ಆಧಾರ್ ಪ್ಯಾನ್ ಲಿಂಕ್ ಗಡುವು ನೀಡಿದೆ. ಒಂದ್ವೇಳೆ ನಿಮ್ಮ ಪ್ಯಾನ್ʼನ್ನ ನಿಮ್ಮ ಆಧಾರ್ʼಗೆ ಲಿಂಕ್ ಮಾಡದಿದ್ದರೆ, ಏಪ್ರಿಲ್ 1 ರಿಂದ ನೀವು ಯಾವುದೇ ಹಣಕಾಸು ವ್ಯವಹಾರವನ್ನ ಮಾಡೋಕೆ ಸಾಧ್ಯವಾಗೋಲ್ಲ. ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡದಿದ್ರೆ, ಆದಾಯ ತೆರಿಗೆ ಕಾಯ್ದೆಯಡಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಹೇಳಿದೆ. …

Read More »

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕಳೆದ 15 ದಿನಗಳ ಅವಧಿಯಲ್ಲಿ ಕಚ್ಚಾ ತೈಲದ ದರ ಭಾರೀ ಇಳಿಕೆಯಾಗಿದೆ. ಬ್ಯಾರಲ್ ಗೆ 71 ಡಾಲರ್ ನಿಂದ 64 ಡಾಲರ್ ಗೆ ಕಡಿಮೆಯಾಗಿದೆ. ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಕಡಿಮೆ ಮಾಡಲು ಅವಕಾಶ ಸೃಷ್ಟಿಯಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದ್ದು, ಕಚ್ಚಾತೈಲದ ಬೆಲೆ ಏರಿಕೆ ನೆಪ ಹೇಳುತ್ತಿದ್ದ ಕಂಪನಿಗಳು ಈಗ ಬೆಲೆ ಕಡಿಮೆ ಮಾಡಲಿವೆ ಎಂದು …

Read More »

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಕಠಿಣ ಕ್ರಮ : ಸಚಿವ ಜಗದೀಶ್ ಶೆಟ್ಟರ್

ಬೆಂಗಳೂರು : ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಅಂತಹ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ. ವಿಧಾನಪರಿಷತ್ ನಲ್ಲಿ ಮಾತನಾಡಿದ ಸಚಿವರು, ಕೈಗಾರಿಕಾ ನೀತಿ 2020-25 ರ ಅನ್ವಯ ಸರ್ಕಾರದ ಸೌಲಭ್ಯ ಪಡೆದು ಸ್ಥಾಪಿಸಿರುವ ಕೈಗಾರಿಕೆಗಳಲ್ಲಿ ಅರ್ಹತೆ ಇರುವ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.   ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ. 100 …

Read More »

ರೈಲಿನಲ್ಲಿ ಸ್ಮೋಕ್ ಮಾಡಿದ್ರೆ 1000 ರೂ. ದಂಡ, 3 ವರ್ಷ ಜೈಲು ಶಿಕ್ಷೆ!

ನವದೆಹಲಿ : ಧೂಮಪಾನಿಗಳಿಗೆ ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದ್ದು, ರೈಲಿನಲ್ಲಿ ಪ್ರಯಾಣಿಸುವಾಗ ಧೂಮಪಾನ ಮಾಡಿದರೆ 1000 ರೂ. ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಮುಂದಾಗಿದ್ದು, ಈ ನಿಯಮ ಸೋಮವಾರದಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ರೈಲುಗಳಲ್ಲಿ ಸಂಭವಿಸುತ್ತಿರುವ ಅಗ್ನಿ ದುರಂತ ತಡೆಯುವುದಕ್ಕಾಗಿ ರೈಲ್ವೆ ಇಲಾಖೆ ಈ ಆದೇಶ ಹೊರಡಿಸಿದ್ದು, ಧೂಮಪಾನ ಮಾಡುವುದು ಮತ್ತು ಉರಿಯುವಂತಹ ವಸ್ತುಗಳ ಸಾಗಣೆಗೆ ರೈಲಿನಲ್ಲಿ ಸಂಪೂರ್ಣ ನಿಷೇಧ ಮಾಡಲಾಗಿದೆ. ರೈಲ್ವೆ ಕಾಯ್ದೆಯ …

Read More »

ಠಾಕ್ರೆ ಬಗ್ಗೆ ಮಾತಾಡಿದರೆ ಆಸಿಡ್‌ ದಾಳಿ ಮಾಡುತ್ತೇವೆ ಎಂದು ಶಿವಸೇನೆ ಬೆದರಿಕೆ’ – ನವನೀತ್‌ ಕೌರ್‌

ವದೆಹಲಿ: ಲೋಕಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತಾಡಿದಕ್ಕಾಗಿ ನನಗೆ ಮಹಾರಾಷ್ಟ್ರ ಶಿವಸೇನಾ ಸಂಸದ ಅರವಿಂದ ಸಾವಂತ್ ತನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿರುವ ಅಮರಾವತಿಯ ಪಕ್ಷೇತರ ಸಂಸದೆ ನವನೀತ್ ಕೌರ್ ರಾಣಾ ಅವರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದ ಕಾರಣಕ್ಕೆ ನನಗೆ ಫೋನ್ ಕರೆ ಹಾಗೂ ಪತ್ರಗಳ ಮೂಲಕ ಆಸಿಡ್‌ ದಾಳಿ ಬೆದರಿಕೆ ಹಾಕಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ಅಲ್ಲಗಳೆದಿರುವ …

Read More »

ವಿಜಯೇಂದ್ರಗೆ ದೂರು ನೀಡಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಶಿವಮೊಗ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ದೂರು ನೀಡಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳು ಸೋಮವಾರ ಬೆಳಿಗ್ಗೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ತಾಲೂಕು ಶಂಕರಘಟ್ಟದಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಅವರು ಖರೀದಿಸಿದ ಜಮೀನಿನ ಮೇಲೆ ಪ್ರಭಾವಿಗಳು ಕಣ್ಣಿಟ್ಟಿದ್ದು ಕಬಳಿಸಲು ಮುಂದಾಗಿ ಮಹಿಳೆಗೆ ನಿರಂತರವಾಗಿ ಹಿಂಸೆ ಕೊಡುತ್ತಿದ್ದಾರೆ. ಇದರಿಂದ ಬೇಸತ್ತ ಮಹಿಳೆ ದಯಾಮರಣಕ್ಕಾಗಿ ಬಿ.ವೈ. …

Read More »

ಹಬ್ಬದ ವಿಶೇಷ, ಪ್ಯಾಸೆಂಜರ್ ರೈಲುಗಳು ಜೂನ್ ತನಕ ವಿಸ್ತರಣೆ

ಹುಬ್ಬಳ್ಳಿ, ಮಾರ್ಚ್ 22: ನೈಋತ್ಯ ರೈಲ್ವೆ ಸದ್ಯ ಸಂಚಾರ ನಡೆಸುತ್ತಿರುವ ಹಬ್ಬದ ವಿಶೇಷ ರೈಲು ಮತ್ತು ಪ್ಯಾಸೆಂಜರ್ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ವಿಸ್ತರಣೆ ಮಾಡಿದೆ. ಮಾರ್ಚ್ ಅಂತ್ಯಕ್ಕೆ ರೈಲುಗಳ ಸಂಚಾರ ಕೊನೆಗೊಳ್ಳಬೇಕಿತ್ತು. ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ರೈಲು ಮತ್ತು ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಜೂನ್ ತನಕ ವಿಸ್ತರಣೆ ಮಾಡಲಾಗಿದೆ. ಯಾವ-ಯಾವ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಮಾರ್ಚ್ 31 ರಿಂದ ಜೂನ್ …

Read More »

ಗೋವಾ ಪ್ರವಾಸಿಗರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಯ ವೇಗ ಹೆಚ್ಚುತ್ತಿರುವ ಹಿನ್ನೆಲೆ ಗೋವಾಗೆ ತೆರಳುವ ಪ್ರತಿಯೊಬ್ಬ ಪ್ರವಾಸಿಗರು ಕೊವಿಡ್-19 ನೆಗೆಟಿವ್ ವರದಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ. ಕೊರೊನಾವೈರಸ್ ನೆಗೆಟಿವ್ ವರದಿ ಕಡ್ಡಾಯಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.   ಕೊವಿಡ್-19 ಶಿಷ್ಟಾಚಾರ ಪಾಲನೆಯ ಉದ್ದೇಶದಿಂದಾಗಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ಅಂತರ-ರಾಜ್ಯ ಪ್ರಯಾಣಿಕರಿಗೆ ಕೊವಿಡ್-19 ನೆಗೆಟಿವ್ ವರದಿ …

Read More »

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

ಕೊಪ್ಪಳ: ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಾರಿನ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಥಳಿಸಿದ್ದಾರೆ. ಚಾಲಕ ಅವಾಚ್ಯ ಶಬ್ದ ಉಪಯೋಗಿಸಿದ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಮಹಿಳೆ ಸುಜಾತಾ ಗೋರ್ಲೆಕೊಪ್ಪ ಕೊಪ್ಪಳದ ಕುಕನೂರು ಪಟ್ಟಣ ನಿವಾಸಿ. ಕಾರು ಚಾಲಕ ವಿಜಯ್​ ನನ್ನನ್ನು ನಿಂದಿಸಿದ್ದಾನೆಂದು ಆರೋಪಿಸಿ, ಕೊಪ್ಪಳ ಜಿಲ್ಲಾಡಳಿತದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲೇ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read More »