Breaking News
Home / ರಾಷ್ಟ್ರೀಯ (page 793)

ರಾಷ್ಟ್ರೀಯ

ರೈಲು ಹತ್ತುವಾಗ ಆಯ ತಪ್ಪಿದ ಅಂಗವಿಕಲನ ರಕ್ಷಿಸಿದ ರೈಲ್ವೆ ಸಿಬ್ಬಂದಿ: ಸಿಸಿಟಿವಿ ವೀಡಿಯೋ ವೈರಲ್

ಚಲಿಸುತ್ತಿದ್ದ ರೈಲು ಹತ್ತುವಾಗ ಜಾರಿ ಬಿದ್ದ ವಿಕಲಚೇತನನ್ನು ಸಮಯಪ್ರಜ್ಞೆ ತೋರಿದ ರೈಲ್ವೆ ಸುರಕ್ಷತಾ ಪಡೆ (ಆರ್ ಪಿಎಫ್) ಸಿಬ್ಬಂದಿ ರಕ್ಷಿಸಿದ ಘಟನೆ ಮಹಾರಾಷ್ಟ್ರದ ಪನ್ವಾಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಫೆಬ್ರವರಿ 5ರಂದು ಈ ಘಟನೆ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಕಲಚೇತನ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತಲು …

Read More »

ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ

ಡಾ ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ‘ಅದೊಂದಿತ್ತು ಕಾಲ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಈ ಚಿತ್ರಕ್ಕೆ ಕೀರ್ತಿ ನಿರ್ದೇಶನ ಮಾಡುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾ ಆಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಪೋಸ್ಟರ್‌ನಲ್ಲಿ ಪುಟ್ಟ ಹುಡುಗನೊಬ್ಬ ಗಾಳಿಪಟ …

Read More »

ಮೊದಲ ಸಿಆರ್‌ಪಿಎಫ್ ಮಹಿಳಾ ತಂಡ ‘ಕೋಬ್ರಾ’ ಘಟಕಕ್ಕೆ ಸೇರ್ಪಡೆ

ಗುರುಗ್ರಾಮ‌: 34ನೇ ಸಿಆರ್‌ಪಿಎಫ್‌ನ ಮೊದಲ ಮಹಿಳಾ ತಂಡವನ್ನು ಶನಿವಾರ ವಿಶೇಷ ಜಂಗಲ್‌ ವಾರ್‌ಫೇರ್‌ ಕಮಾಂಡೊ ಪಡೆ ‘ಕೋಬ್ರಾ’ಗೆ(ಕಮಾಂಡೊ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್‌) ಸೇರಿಸಲಾಯಿತು. ಇಲ್ಲಿನ ಕಡರ್‌ಪುರದಲ್ಲಿರುವ ಸಿಆರ್‌ಪಿಎಫ್‌ ಶಿಬಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳೆಯರು ನಡೆಸಿದ ಯುದ್ಧಸಮರ ಕಸರತ್ತನ್ನು ಸಿಆರ್‌ಪಿಎಫ್ ಮಹಾನಿರ್ದೇಶಕಿ ಎ ಪಿ ಮಹೇಶ್ವರಿ ವೀಕ್ಷಿಸಿದರು. ‘ಈಗಿರುವ ಆರು ಸಿಆರ್‌ಪಿಎಫ್‌ ಮಹಿಳಾ ಬೆಟಾಲಿಯನ್‌ಗಳಿಂದ ಮಹಿಳೆಯರನ್ನು ಕೋಬ್ರಾ ಪಡೆಗೆ ಆಯ್ಕೆ ಮಾಡಲಾಗಿದೆ. ಇವರೆಲ್ಲರೂ …

Read More »

₹29 ಲಕ್ಷ ಪಡೆದು, ಬಳಿಕ ಕಾರ್ಯಕ್ರಮಗಳಿಗೆ ಹಾಜರಾಗದೇ ವಂಚಿಸಿದ್ದಾರೆ ಸನ್ನಿ ಲಿಯೋನ್​

ತಿರುವನಂತಪುರಂ: ಕಾರ್ಯಕ್ರಮಗಳಿಗೆ ಭಾಗವಹಿಸುದಾಗಿ ಬರೋಬ್ಬರಿ ₹29 ಲಕ್ಷ ಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಬಾಲಿವುಡ್​ ನಟಿ ಸನ್ನಿ ಲಿಯೋನ್​ನ್ನ ಕೇರಳ ಪೊಲೀಸರು ಇಂದು ವಿಚಾರಣೆ ನಡೆಸಿದ್ದಾರೆ. ಕೊಚ್ಚಿಯಲ್ಲಿ ಏರ್ಪಡಿಸಲಾದ ಎರಡು ಕಾರ್ಯಕ್ರಮಗಳಿಗೆ ಭಾಗವಹಿಸುವುದಾಗಿ ಹೇಳಿ ಸನ್ನಿ ಲಿಯೋನ್​ ₹29 ಲಕ್ಷ ಪಡೆದು, ಬಳಿಕ ಕಾರ್ಯಕ್ರಮಗಳಿಗೆ ಹಾಜರಾಗದೇ ವಂಚಿಸಿದ್ದಾರೆ ಎಂದು ಆಯೋಜಕರು ದೂರು ನೀಡಿದ್ದಾರೆ ಅಂತಾ ವರದಿಯಾಗಿದೆ. ದೂರಿನ ಅನ್ವಯ ಕೇರಳ ಪೊಲೀಸರು ಸನ್ನಿ ಲಿಯೋನ್ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ …

Read More »

ಇಂದು ಕುರುಬ ಸಮುದಾಯದಿಂದ ಬೃಹತ್​ ಸಮಾವೇಶ

ಬೆಂಗಳೂರು (ಫೆ. 7): ಕುರುಬ ಸಮುದಾಯ ಬೃಹತ್​ ಸಮಾವೇಶಕ್ಕೆ ಇಂದು ರಾಜಧಾನಿ ಸಾಕ್ಷಿಯಾಗಲಿದೆ. ಈ ಮೂಲಕ ತಮ್ಮ ಮೀಸಲಾತಿಯ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲು ಸಮುದಾಯ ನಿರ್ಧರಿಸಿದೆ. ಈಗಾಗಲೇ ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ  ಯಶಸ್ವಿ ಪಾದಯಾತ್ರೆಯನ್ನು ನಡೆಸಲಾಗಿದೆ.  ನಗರದ ಹೊರವಲದಲ್ಲಿರುವ ಮಾದಾವರ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಇಂದು ಬೃಹತ್​ ಸಮಾವೇಶ ನಡೆಯಲಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ರಾಜ್ಯ …

Read More »

ಯಾವುದೆ ಆಪತ್ತಿರಲಿ ತುರ್ತು ಸಂಖ್ಯೆ 112 ಕರೆ ಮಾಡುವುದು ನೆನಪಿರಲಿ : PSI ನಾಗರಾಜ ಖಿಲಾರೆ.

  ಗೋಕಾಕ : ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಶನಿವಾರ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿ,ಎಸ್,ಆಯ್, ನಾಗರಾಜ ಖಿಲಾರೆಯವರು ಶ್ರೀಲಕ್ಷ್ಮಿ ದೇವಸ್ಥಾನದಲ್ಲಿ ಜನಸಂಪರ್ಕ ಸಭೆ ಮತ್ತು ಅಂಬೇಡ್ಕರ ನಗರದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ದಲಿತ ಸಬೆ ಮತ್ತು ಒಂದೆ ದೇಶ ಒಂದೆ ತುರ್ತು ಸಂಖ್ಯೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸ್ಥಳಿಯರನ್ನು ಉದ್ದೇಶಿಸಿ ಮಾತನಾಡಿ ತಮ್ಮ ಸುತ್ತಮುತ್ತಲು  ಅಗ್ನಿ ದುರಂತ ಸಂಭವಿಸಿದ್ದಲ್ಲಿ,ಅಪಘಾತವಾಗಿದ್ದಲ್ಲಿ,ಅಪರಾಧವಾಗಿದ್ದಲ್ಲಿ ಹಾಗೂ ವಿನಾಕಾರಣ ಯಾರಾದರೂ ಅಣ್ಯ ವ್ಯಕ್ತಿಗಳು ಕುಡಿದು …

Read More »

ರೈತ ಬಾಂಧವರು ಮನಸ್ಪೂರ್ತಿಯಾಗಿ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನಿಸಿದರು ….

ಗೋಕಾಕ: ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಸುಮಾರು ದಿನಗಳಿಂದ ಚರ್ಚೆ ಯಲ್ಲಿ ಇದ್ದ ಈ ಶುಗರ್ ಫ್ಯಾಕ್ಟರಿ .. ಇದರ ಬಗ್ಗೆ ನಾವು ಹೇಳುವುದಕ್ಕಿಂತ ಜನ ಹೇಳೋದು ಕೇಳಿದ್ರೆ ಬಹುಶ ಈ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಸಂತೋಷ್ ಜಾರಕಿಹೊಳಿ ಅವರಿಗೆ ಸಂತೋಷ್ ಜಾರಕಿಹೊಳಿ ಅವರಿಗೆ ಖುಷಿ ಆಗಬಹುದು. ಒಂದು ಈ ಕಾರ್ಖಾನೆ ರಾಜ್ಯದಲ್ಲಿಯೇ ಮಾದರಿ ಯಾಕೆ ಗೊತ್ತಾ ಪ್ರಥಮ್ ವಾಗಿ ಅನ್ನದಾತರಿಗೆ ಬರಬೇಕಾದ ಬಿಲ್ಲನ್ನು ಕೊಟ್ಟು ಮಾದರಿ ಯಾಗಿದೆ. ಇನ್ನು …

Read More »

ಸರ್ಕಾರದ ಆದೇಶ ಇಲ್ಲದಿದ್ರೂ ಯಾದಗಿರಿಯಲ್ಲಿ 1-5 ನೇ ತರಗತಿ ಆರಂಭ

ಯಾದಗಿರಿ: ಸರ್ಕಾರದ ಆದೇಶ ಇಲ್ಲದಿದ್ರೂ ಯಾದಗಿರಿಯಲ್ಲಿ ಸದ್ದಿಲ್ಲದೆ 1 ರಿಂದ 5 ನೇ ತರಗತಿ ನಡೆಯುತ್ತಿವೆ. ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಕೆಲ ಖಾಸಗಿ ಶಾಲೆಗಳು ತರಗತಿ ಆರಂಭಿಸಿ, ಮುಗ್ಧ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿವೆ. ಯಾದಗಿರಿ ನಗರದ ಸಪ್ತಗಿರಿ, ನವನಂದಿ, ಆರ್ ವಿ ಸೇರಿದಂತೆ ಬಹುತೇಕ ಖಾಸಗಿ ಶಾಲೆಗಳಲ್ಲಿ ಗಪ್ ಚುಪ್ ಆಗಿ ಕ್ಲಾಸ್ ಆರಂಭವಾಗಿವೆ. ಕ್ಲಾಸ್ ರೂಮ್ ಗಳಲ್ಲಿ ಯಾವುದೇ ಮಕ್ಕಳ ಮಧ್ಯೆ ಸಾಮಾಜಿಕ ಅಂತರ, ಮಾಸ್ಕ್ …

Read More »

ದೆಹಲಿ ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಪೂಜಾರಿ ಒತ್ತಾಯ

ಗೋಕಾಕ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ರಾಜಕೀಯದ ಬಣ್ಣಕೊಡುತ್ತಿರುವುದು ದುರ್ದೈವದ ಸಂಗತಿ ಎಂದು ಜೆ‌ಡಿಎಸ್ ಮುಖಂಡ ಅಶೋಕ ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಯಾವುದೇ ಪ್ರತಿಭಟನೆಗಳಲ್ಲಿ ನಡೆಯುವ ಹಿಂಸಾಕೃತ್ಯಗಳು ಅಕ್ಷಮ್ಯ ಮತ್ತು ಖಂಡನೀಯ. ದೆಹಲಿಯಲ್ಲಿ ಜ.26 ರಂದು ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಕಾಣದ ಕೈಗಳು ದುಷ್ಕೃತ್ಯ ನಡೆಸಿವೆ ಎಂಬ ಅನುಮಾನ ಕಂಡುಬರುತ್ತಿದೆ. …

Read More »

ಕೋರ್ಟ್ ಆವರಣದಲ್ಲಿ ಸಾಹಿತಿ ಕೆ.ಎಸ್ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಬೆಂಗಳೂರು, : ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾದ ಚಿಂತಕ, ಹಿರಿಯ ಸಾಹಿತಿ ಕೆ.ಎಸ್ ಭಗವಾನ್ ಅವರ ಮುಖಕ್ಕೆ ಬಿಜೆಪಿ ಕಾರ್ಯಕರ್ತೆ, ವಕೀಲೆಯೊಬ್ಬರು ಮಸಿ ಬಳಿದ ಘಟನೆ ನಗರದ 2ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಇಂದು ಮದ್ಯಾಹ್ನ ನಡೆದಿದೆ. ವಕೀಲೆ ಮೀರಾ ರಾಘವೇಂದ್ರ ಅವರು ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದು, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಈ ಕೃತ್ಯ ಎಸಗಲಾಗಿದೆ ಎಂದು …

Read More »