Home / ರಾಷ್ಟ್ರೀಯ (page 788)

ರಾಷ್ಟ್ರೀಯ

ರೈತರ ಪ್ರತಿಭಟನೆ ಪರ ಧ್ವನಿಯೆತ್ತಿ ವಿವಾದಕ್ಕೀಡಾದ ಗಾಯಕಿ ರಿಹಾನ್ನಾ ಮೇಲೆ ಮತ್ತೊಂದು ವಿವಾದ

ನ್ಯೂಯಾರ್ಕ್‌: ಭಾರತದಲ್ಲಿನ ರೈತರ ಪ್ರತಿಭಟನೆ ಪರ ಧ್ವನಿಯೆತ್ತಿ, ವಿವಾದಕ್ಕೀಡಾಗಿದ್ದ ಖ್ಯಾತ ಪಾಪ್‌ ಗಾಯಕಿ ರಿಹಾನ್ನಾ ಮತ್ತೂಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗಣೇಶನ ಪದಕವುಳ್ಳ ನೆಕ್ಲೇಸ್‌ ಧರಿಸಿ, ಟಾಪ್‌ಲೆಸ್‌ನಲ್ಲಿ ಪೋಸು ಕೊಟ್ಟ ಫೋಟೋವೊಂದನ್ನು ರಿಹಾನ್ನಾ ಟ್ವಿಟರಿನಲ್ಲಿ ಪೋಸ್ಟ್‌ ಮಾಡಿದ್ದಾರೆ. “ಅರೆಬೆತ್ತಲೆ ರೂಪದ ರಿಹಾನ್ನಾ, ತನ್ನ ಮೈಮಾಟದ ಪ್ರದರ್ಶನಕ್ಕಾಗಿ ಹಿಂದೂ ದೇವರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಮುಗಿಲು ಮುಟ್ಟಿದೆ. “ಭಾರತವನ್ನು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನು ನಿಲ್ಲಿಸಿ’ ಎಂದು …

Read More »

ವಿವಾದಿತ ಸ್ಥಳದಿಂದ ಚೀನ ಅಕ್ರಮ ಟೆಂಟು ತೆರವು : ವಿಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ

ಹೊಸದಿಲ್ಲಿ: ಲಡಾಖ್‌ನ ಎಲ್‌ಎಸಿಯ ವಿವಾದಿತ ಸ್ಥಳದಿಂದ ಚೀನ ಸೇನೆ ವಾಪಸಾತಿ ಕೈಗೊಳ್ಳುತ್ತಿರುವ ವೀಡಿಯೊವೊಂದನ್ನು ಭಾರತೀಯ ಸೇನೆ ಮಂಗಳವಾರ ಬಿಡುಗಡೆ ಮಾಡಿದೆ. ಹಿಮಬೆಟ್ಟದ ನೆತ್ತಿ ಮೇಲೆ ಹೂಡಿದ್ದ ಅಕ್ರಮ ಟೆಂಟ್‌ಗಳನ್ನು ಪಿಎಲ್‌ಎ ಸೈನಿಕರು ಕೀಳುತ್ತಿರುವ ದೃಶ್ಯಗಳು ವೀಡಿಯೋದಲ್ಲಿವೆ. ಯುದ್ದೋಪಕರಣಗಳನ್ನು ಹೊತ್ತು ಪರ್ವತದಿಂದ ಇಳಿಯುತ್ತಾ, ತಮಗಾಗಿ ಕಾಯುತ್ತಿರುವ ಟ್ರಕ್‌ನತ್ತ ಚೀನೀ ಸೈನಿಕರು ಧಾವಿಸುತ್ತಿರುವ ದೃಶ್ಯಗಳನ್ನು ಝೂಮ್‌ ನೋಟದಲ್ಲಿ ವೀಡಿಯೋ ತೋರಿಸಿದೆ. ನಿರ್ಮಾಣಗಳು ಉಡೀಸ್‌: ಅಲ್ಲದೆ ಈ 10 ತಿಂಗಳಲ್ಲಿ ಸೈನಿಕರು ತಂಗಲು, ಯುದ್ದೋಪಕರಣಗಳನ್ನು …

Read More »

ಪಿಎಂ ಕೇರ್ಸ್​ ಲೆಕ್ಕವನ್ನೇ ಕೊಡದವರು ರಾಮ ಮಂದಿರ ಹಣದ ಲೆಕ್ಕಾ ಕೊಡ್ತಾರ?; ಸಿದ್ದರಾಮಯ್ಯ

ಬೆಂಗಳೂರು (ಫೆಬ್ರವರಿ 16); ಕೊರೋನಾ ಸಂದರ್ಭದಲ್ಲಿ ಜನರಿಂದ ಸಂಗ್ರಹಿಸಲಾದ ಪಿಎಂ ಕೇರ್ಸ್​ ಹಣದ ಲೆಕ್ಕವನ್ನೇ ಕೊಡದವರು, ಇದೀಗ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಲು ಮುಂದಾಗಿರುವ ಹಣದ ಲೆಕ್ಕ ಕೊಡ್ತಾರಾ? ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ನೇರಾ ನೇರ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್​ ಹಸಿರು ನಿಶಾನೆ ನೀಡುತ್ತಿದ್ದಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿದ್ದರು. ಅಲ್ಲದೆ, ದೇವಾಲಯ …

Read More »

ಗೋಕಾಕದಲ್ಲಿಂದು ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಸಾರ್ವಜನಿಕರಿಗೆ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ವಿತರಿಸುತ್ತಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಂಡು ನ್ಯಾಯಬೆಲೆ ಅಂಗಡಿಯವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಸಂಜೆ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ …

Read More »

ಹೆಣ್ಣುನಾಯಿಯೊಂದನ್ನು ಹಿಡಿದು ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ

ಮೈಸೂರು (ಫೆ. 16): ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೈಸೂರಿನಲ್ಲಿ ಯುವಕನನ್ನು ಬಂಧಿಸಲಾಗಿದೆ. ಮೈಸೂರಿನ ವಿವಿ ಪುರಂ ಪೋಲೀಸರಿಂದ ಯುವಕನನ್ನು ಬಂಧಿಸಲಾಗಿದ್ದು, ಆ ಯುವಕನ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಪೀಪಲ್ ಫಾರ್ ಅನಿಮಲ್ ಸಂಸ್ಥೆಯ ಸದಸ್ಯರು ನೀಡಿದ ದೂರಿನ ಅನ್ವಯ ಹಾಗೂ ವಿಡಿಯೋ ಆಧಾರದ ಮೇಲೆ ಆ ಯುವಕನನ್ನು ಬಂಧಿಸಲಾಗಿದೆ. ಫೆ. 11ರ ರಾತ್ರಿ 11 ಗಂಟೆ ವೇಳೆ ಈ ಘಟನೆ ನಡೆದಿದೆ. ಮೈಸೂರಿನ ಗೋಕುಲಂನ …

Read More »

ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು

ಮುಂಬೈ, ಫೆ.16 (ಪಿಟಿಐ)- ಪೂನಾ-ಮುಂಬೈ ಎಕ್ಸ್‍ಪ್ರೆಸ್‍ವೇನಲ್ಲಿ ಮುಂಜಾನೆ ಲಾರಿಯೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಖಾಪೊಲಿ ನಗರದ ಸಮೀಪ ಮತ್ತೊಂದು ವಾಹನಕ್ಕೂ ಗುದ್ದಿದ ಕಾರಣ ಸ್ಥಳದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಹಲವರಿಗೆ ಗಾಯಗಳಾಗಿರುವ ಘಟನೆ ಸಂಭವಿಸಿದೆ.ನವಿ ಮುಂಬೈ ಮುನಿಸಿಪಲ್ ಕಾಪೆರ್ರೇಷನ್ (ಎನ್‍ಎಂಎಂಸಿ)ಯ ಪಶುವೈದ್ಯರು ಸೇರಿದಂತೆ ಅವರ ಕುಟುಂಬದ ಮೂವರು ಒಂದು ಕಾರಿನಲ್ಲಿ ತೆರಳುತ್ತಿದ್ದರು. ಖಾಲಾಪುರ ಟೋಲ್ ಪ್ಲಾಜಾ ಕ್ಯೂನಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ …

Read More »

ಮಹಿಳೆಗೆ ಮೈದುನನ್ನು ಹೆಗಲ ಮೇಲೆ ಹೊತ್ತು 3 ಕಿ.ಮೀ. ನಡೆಯುವ ಶಿಕ್ಷೆ: ವೀಡಿಯೋ ವೈರಲ್!

ಕ್ಷುಲಕ ಕಾರಣಕ್ಕಾಗಿ ಮಹಿಳೆಯೊಬ್ಬರಿಗೆ ಮೈದುನನ್ನು ಬಲವಂತವಾಗಿ ಹೆಗಲ ಮೇಲೆ ಹೊರಿಸಿ ಕನಿಷ್ಠ 3 ಕಿ.ಮೀ. ನಡೆಸಿಕೊಂಡು ಹೋಗುವ ಘೋರ ಶಿಕ್ಷೆ ವಿಧಿಸಿದ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಮಹಿಳೆಯನ್ನು ಕೋಲು-ದೊಣ್ಣೆ ಹಿಡಿದ ಯುವಕರು ಗುಂಪು ಬೆದರಿಕೆ ಹಾಕುತ್ತಾ ಮಹಿಳೆಯನ್ನು ನಡೆಸಿಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ನಡೆದುಕೊಂಡು ಹೋಗುತ್ತಿದ್ದರೆ ಯುವಕರು ಗೇಲಿ ಮಾಡಿ ನಗುತ್ತಿದ್ದು, ಇನ್ನು …

Read More »

ಟೂಲ್‌ಕಿಟ್‌ ಹಗರಣ ಬಯಲಾಗುತ್ತಿದ್ದಂತೆಯೇ ಹೆಚ್ಚಾಯ್ತು ‘ಮೋದಿಗೋಬ್ಯಾಕ್‌’ ಟ್ರೆಂಡ್‌- ಸಂಕಷ್ಟದಲ್ಲಿ ನಟಿ

ಚೆನ್ನೈ: ಭಾರತದ ವಿರುದ್ಧ ಮಹಾ ಷಡ್ಯಂತ್ರ ರಚಿಸಿರುವ ‘ಟೂಲ್‌ಕಿಟ್‌’ ಹಗರಣ ಬಯಲಾಗುತ್ತಿದ್ದಂತೆಯೇ, ಇತ್ತ ಮೋದಿಗೋಬ್ಯಾಕ್‌ ಟ್ರೆಂಡ್‌ ಮತ್ತೆ ಶುರುವಾಗಿದೆ. ರೈತರ ಪ್ರತಿಭಟನೆಯನ್ನು ನೆಪ ಮಾಡಿಕೊಂಡು ಭಾರತದ ವಿರುದ್ಧ ಮಹಾ ಸಮರ ಸಾರಿರುವ ಕೆಲವು ಕಿಡಿಗೇಡಿಗಳ ಕೃತ್ಯ ಒಂದೊಂದಾಗಿ ಹೊರಕ್ಕೆ ಬರುತ್ತಿದ್ದಂತೆಯೇ ಇತ್ತ ಮೋದಿಗೋಬ್ಯಾಕ್‌ ಎಂದು ಹಲವರು ಟ್ವೀಟ್‌ ಶುರು ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಹ್ಯಾಷ್‌ಟ್ಯಾಗ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, …

Read More »

ರಾಜಾಪೂರದಲ್ಲಿ 8.17 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಘಟಪ್ರಭಾ : ಜಲಜೀವನ ಮಿಷನ್ ಕಾಮಗಾರಿಗಾಗಿ ರಾಜಾಪೂರ, ತುಕ್ಕಾನಟ್ಟಿ, ದಂಡಾಪೂರ, ದುರದುಂಡಿ ಹಾಗೂ ಬಡಿಗವಾಡ ಗ್ರಾಮ ಪಂಚಾಯತಿಗಳಿಗೆ 8.17 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸೋಮವಾರದಂದು ಇಲ್ಲಿಗೆ ಸಮೀಪದ ರಾಜಾಪೂರ ಗ್ರಾಮದಲ್ಲಿ 8.17 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ …

Read More »

ಗೋಕಾಕ: ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಗೋಕಾಕ: ಸಮೀಪದ ಮರಡಿಮಠ ಗ್ರಾಮದ ಬಳಿಯ ಕೊಣ್ಣೂರು ಪುರಸಭೆ ಕಟ್ಟಡದ ಪಕ್ಕ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ಯುವಕನ ಶವ ಪತ್ತೆಯಾಗಿದೆ.   ಕೊಳೆತ ಸ್ಥಿತಿಯಲ್ಲಿರುವುದರಿಂದ ಯುವಕ ಯಾರೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »