ಹೊಸಪೇಟೆ (ವಿಜಯನಗರ): ಪ್ರಾಚಾರ್ಯರ ಮನವೊಲಿಕೆ ನಂತರ ಎಂಟು ವಿದ್ಯಾರ್ಥಿನಿಯರು ಹಿಜಾಬ್ ಕಳಚಿ ನಗರದ ವಿಜಯನಗರ ಕಾಲೇಜಿನಲ್ಲಿ ಸೋಮವಾರ ಪದವಿ ಪರೀಕ್ಷೆಗೆ ಹಾಜರಾದರು. ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿನಿಯರು ಮುಂದಾಗಿದ್ದರು. ಆದರೆ, ಪ್ರಾಚಾರ್ಯ ವಿ.ಎಸ್. ಪ್ರಭಯ್ಯ, ಅವರನ್ನು ತಡೆದು, ‘ನ್ಯಾಯಾಲಯದ ಆದೇಶ ಪಾಲಿಸಬೇಕು’ ಎಂದು ಹೇಳಿದರು. ಮಂಗಳೂರಿನಲ್ಲಿ ಅವಕಾಶ ನಿರಾಕರಣೆ: ನಗರದ ವಾಮಂಜೂರಿನ ಸಂತ ರೇಮಂಡ್ಸ್ ಕಾಲೇಜಿನಲ್ಲಿ ಸೋಮವಾರ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಅರ್ಥಶಾಸ್ತ್ರ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ. ಹೈಕೋರ್ಟ್ ತೀರ್ಪಿನ …
Read More »ಆಗಸ್ಟ್‌ನಲ್ಲಿ ಕೋವಿಡ್ ನಾಲ್ಕನೇ ಅಲೆ ಸಾಧ್ಯತೆ: ಸಚಿವ ಸುಧಾಕರ್
ಬೆಂಗಳೂರು: ‘ಐಐಟಿ ಕಾನ್ಪುರ ತಂಡದ ಅಧ್ಯಯನ ಪ್ರಕಾರ ಆಗಸ್ಟ್‌ನಲ್ಲಿ ಕೋವಿಡ್ ನಾಲ್ಕನೇ ಅಲೆ ಬರುವ ಸಾಧ್ಯತೆ ಇದೆ. ಆದರೆ, ದೇಶದಲ್ಲಿ ಲಸಿಕಾ ಅಭಿಯಾನ ವ್ಯಾಪಕವಾಗಿ ಕೈಗೊಂಡಿರುವುದರಿಂದ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಶಶಿಲ್ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹೊಸ ತಳಿ ಬಿಎ2 ಫಿಲಿಪ್ಪೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದು, 40 ದೇಶಗಳಲ್ಲಿ ಹಬ್ಬಿದೆ. ಹೀಗಾಗಿ, ಎಚ್ಚರಿಕೆ …
Read More »ಪುನೀತ್ ಅಭಿಮಾನ: ಕ್ರೇನಿಗೆ ಬೆನ್ನಿನ ಮೂಲಕ ಕಬ್ಬಿಣದ ಕೊಂಡಿ ಕಟ್ಟಿಕೊಂಡು ನೇತಾಡುತ್ತಿದ್ದ ಭಕ್ತ
ಭದ್ರಾವತಿ: ಕೂಡ್ಲಿಗೆರೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆ ಶುಕ್ರವಾರ ವೈಭವದಿಂದ ನಡೆಯಿತು. ಭಕ್ತರು ದೇಹದಂಡನೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು. 350ಕ್ಕೂ ಹೆಚ್ಚು ಮಾಲಾಧಾರಿ ಭಕ್ತರು ತಮ್ಮ ಹರಕೆಗೆ ತಕ್ಕಂತೆ ದೇಹದಂಡನೆ ಮಾಡಿಕೊಂಡು ಸ್ವಾಮಿಯ ದರ್ಶನ ಪಡೆದರು. ಭಕ್ತರು ಆಟಗೇರಿ ಕ್ಯಾಂಪ್ ಬಳಿಯ ಚಾನಲ್ ಬಳಿಯಲ್ಲಿ ದೇಹದಂಡನೆ ಮಾಡಿಕೊಂಡು ಅಲ್ಲಿಂದ ಕೊಂಬು, ಕಹಳೆ, ವಾದ್ಯ, ಡೊಳ್ಳು, ನಗಾರಿ ಮೊದಲಾದ ವಾದ್ಯಮೇಳದೊಂದಿಗೆ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಬಂದರು. ಕೆನ್ನೆಯ ಎರಡೂ ಬದಿಗಳಲ್ಲಿ ತ್ರಿಶೂಲ, ನಾಲಿಗೆಗೆ ತ್ರಿಶೂಲ, ಕಲ್ಲಿನ …
Read More »ದಾವಣೆಗೆರೆಯ ಎಸ್ ಎಸ್ ಆಸ್ಪತ್ರೆಗೆ ವಿದ್ಯಾರ್ಥಿ ನವೀನ್ ದೇಹದಾನ.. ಕರುಳ ಕುಡಿಗೆ ಕೊನೆಯ ಮುತ್ತಿಟ್ಟ ಅಮ್ಮ..
ಹಾವೇರಿ/ದಾವಣಗೆರೆ: ಶೆಲ್ ದಾಳಿಗೆ ಉಕ್ರೇನ್ ನಲ್ಲಿ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ನವೀನ್‌ಗೆ ಅವರ ಕುಟುಂಬ ಕಣ್ಣೀರಿನ ಅಂತಿಮ ವಿದಾಯ ಹೇಳಿದೆ. ಸಹೋದರ ಹರ್ಷ ಅವರು ತನ್ನ ತಮ್ಮನ ಮೃತದೇಹಕ್ಕೆ ಅಪ್ಪುಗೆ ಮಾಡಿ ಅಧಿಕೃತವಾಗಿ ಆಸ್ಪತ್ರೆಯ ನಿಬಂಧನೆಗಳಿಗೆ ಸಹಿ ಹಾಕುವ ಮೂಲಕ ನವೀನ್ ಮೃತದೇಹವನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಿಂದ ನವೀನ್ ಮೃತದೇಹ ಹೊತ್ತ ಆ್ಯಂಬುಲೆನ್ಸ್ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ಆಗಮಿಸಿತು. ಈ ವೇಳೆ ಮೃತದೇಹ ಹಸ್ತಾಂತರ …
Read More »ಪ್ರತಿಯೊಬ್ಬ ಭಾರತೀಯರೂ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಿ: ಅಮೀರ್ ಖಾನ್
ಮಾರ್ಚ್ 11 ರಂದು ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಿದೆ. ಅಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್ ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಈ ಚಿತ್ರವನ್ನು ಶ್ಲಾಘಿಸಿದ್ದು, ಸಿನಿಮಾ ನೋಡಲು ಪ್ರೇಕ್ಷಕರಿಗೆ ಸಲಹೆ ನೀಡಿದ್ದಾರೆ. ಈಗ ನಟ ಅಮೀರ್ ಖಾನ್ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸುವಂತೆ ತಿಳಿಸಿದ್ದಾರೆ. ಮಾಧ್ಯಮ ಸಂವಾದದ ವೇಳೆ ಅಮೀರ್, ಪ್ರತಿಯೊಬ್ಬ ಭಾರತೀಯನೂ ಕಾಶ್ಮೀರ ಫೈಲ್ಸ್ ನೋಡಲೇಬೇಕು ಎಂದು …
Read More »‘ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಇನ್ಯಾರಿಗೂ ಜವಾಬ್ದಾರಿ ಇಲ್ಲ’ : ಸಿದ್ದು
ಬೆಂಗಳೂರು: ವಿಧಾನಸಭೆಯಲ್ಲಿ (Assembly) ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಇವತ್ತು ಹಲವು ಸಚಿವರು ಗೈರಾಗಿದ್ದಕ್ಕೆ ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಕೆಂಡಾಮಂಡಲರಾದ್ರು. ಬಿಜೆಪಿಯಲ್ಲಿ ಯಡಿಯೂರಪ್ಪ (Yediyurappa) ಬಿಟ್ರೆ ಇನ್ಯಾರಿಗೂ ಜವಾಬ್ದಾರಿ (Responsibility) ಅನ್ನೋದೇ ಇಲ್ಲ ಅಂತ ಕಿಡಿ ಕಾರಿದ್ದಾರೆ. ಸದನದಲ್ಲಿ ಚರ್ಚೆ ಮಾಡುವಾಗ ಸಚಿವರು (Ministers) ಹಾಜರಾಗಿರಬೇಕು. ಸಚಿವರೇ ಇಲ್ಲದಿದ್ರೆ ಹೇಗೆ? ಆ ಇಲಾಖೆ ಸಚಿವರಿಲ್ಲದಾಗ ಬೇರೆ ಸಚಿವರು ಚರ್ಚೆ ವಿಷಯವನ್ನು ಬರೆದುಕೊಳ್ಳಬೇಕು ಇಲ್ಲವಾದ್ರೆ ನಮ್ಮ ಪ್ರಶ್ನೆಗಳಿಗೆ ಅವ್ರು ಉತ್ತರಿಸೋದಾದ್ರು ಹೇಗೆ …
Read More »ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್
ಸ್ಯಾಂಡಲ್ವುಡ್, ಟಾಲಿವುಡ್, ಕಿರುತೆರೆಯಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಜನಮನ್ನಣೆ ಪಡೆದಿರುವ ನಟಿ ತೇಜಸ್ವಿನಿ ಪ್ರಕಾಶ್, ಖಾಸಗಿ ಕಂಪನಿಯ ಉದ್ಯೋಗಿ ಪಣಿ ವರ್ಮಾ ಜೊತೆಗೆ ನಿನ್ನೆ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಣಿ ಮತ್ತು ತೇಜಸ್ವಿನಿ ಹಲವು ವರ್ಷಗಳಿಂದ ಸ್ನೇಹಿತರು, ಈ ಸ್ನೇಹವೇ ಪ್ರೀತಿಗೆ ತಿರುಗಿ ಇದೀ ಹೊಸ ಜೀವನಕ್ಕೆ ನಾಂದಿ ಹಾಡಿದೆ. ಈ ಜೋಡಿಯ ಮದುವೆ ಸಂಭ್ರಮದಲ್ಲಿ ವಧು, ವರರ ಕುಟುಂಬಸ್ಥರು, ಅನೇಕ ಸಿನಿ ಮತ್ತು ಕಿರುತೆರೆ ಕಲಾವಿದರು …
Read More »ತುಮಕೂರು ಖಾಸಗಿ ಬಸ್ ದುರಂತದ ಬಳಿಕ ರಾಜ್ಯ ಸರ್ಕಾರ ಅಲರ್ಟ್: 7 ‘KSRTC ಬಸ್’ಗಳು ಸಂಚಾರ ಆರಂಭ
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಬಳಿಯಲ್ಲಿ ಖಾಸಗಿ ಬಸ್ ಅಪಘಾತಗೊಂಡು ಭೀಕರ ದುರ್ಘಟನೆ ನಂತ್ರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ದುರಂತದ ಬಳಿಕ 7 ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರವನ್ನು, ಈ ಮಾರ್ಗದಲ್ಲಿ ಆರಂಭಿಸಿದೆ. ಹೌದು.. ಪಳವಳ್ಳಿ ಕಟ್ಟೆ ಬಳಿಯಲ್ಲಿನ ಖಾಸಗಿ ಬಸ್ ಅಪಘಾತದ ಬಳಿಕ, 24 ಗಂಟೆಯೊಳಗೆ ಕೆ ಎಸ್ ಆರ್ ಟಿ ಸಿ ಚುರುಕುಗೊಂಡಿದ್ದು, ವೈ ಎನ್ ಹೊಸಕೋಟೆ ಟು …
Read More »ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು: ಬಸವರಾಜ ಬೊಮ್ಮಾಯಿ
ದಾವಣಗೆರೆ: ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಅಲ್ಲಿನ ವೈದ್ಯಕೀಯ ಕೋರ್ಸ್ಗೂ, ಇಲ್ಲಿಗೂ ಬದಲಾವಣೆ ಇದೆ. ಈಗಾಗಲೇ ಇಂತಹ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಭಾರತೀಯ ವೈದ್ಯಕೀಯ ಮಂಡಳಿ ಚಿಂತನೆ ಮಾಡುತ್ತಿದೆ ಎಂದು ದಾವಣಗೆರೆಯಲ್ಲಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಕಡಿಮೆ …
Read More »ಜನಪ್ರತಿನಿಧಿಗಳನ್ನು ಕೆಳಗಿಸುವ ಅಧಿಕಾರ ಜನರ ಕೈಗೆ.. ಶಾಸಕರು, ಸಚಿವರಿಗೆ ಸಿಎಂ ಮಾನ್ ಹೊಸ ಟಾಸ್ಕ್
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಚಿವರ, ಶಾಸಕರ ಭದ್ರತೆ ರದ್ದು, 25 ಸಾವಿರ ಸರ್ಕಾರಿ ಹುದ್ದೆಗಳ ನೇಮಕಕ್ಕೆ ಸೂಚನೆ, ಭ್ರಷ್ಟಾಷಾರ ನಿಗ್ರಹಕ್ಕೆ ಸಹಾಯವಾಣಿ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸದ ಸಚಿವರನ್ನು ‘ಅಧಿಕಾರದಿಂದ ಕೆಳಗಿಳಿಸುವ ಹಕ್ಕನ್ನು ಜನರಿಗೆ ನೀಡಿ’ ಗಮನ ಸೆಳೆದಿದ್ದಾರೆ. ಈ ಬಗ್ಗೆ ಮೊಹಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಪಕ್ಷದ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಎಂ ಭಗವಂತ್ ಮಾನ್ ಅವರು ಸರ್ಕಾರದಲ್ಲಿ …
Read More »
Laxmi News 24×7