Breaking News
Home / ರಾಷ್ಟ್ರೀಯ (page 746)

ರಾಷ್ಟ್ರೀಯ

ಬೆಳಗಾವಿಗೆ ಕೊರೊನಾ ಆತಂಕ ಶುರು ಇಂದು ಬರಲಿದೆ 500 ಜನರ ವರದಿ

ಬೆಳಗಾವಿ: ಉಪಚುನಾವಣೆ ಮುಗಿದ ಬೆನ್ನಲ್ಲೇ ಗಡಿಜಿಲ್ಲೆ ಬೆಳಗಾವಿಗೆ ಕೊರೊನಾ ಆತಂಕ ಶುರುವಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪನವರ ಸಂಪರ್ಕದಲ್ಲಿದ್ದವರ ಕೋವಿಡ್ ಟೆಸ್ಟ್ ವರದಿ ಇಂದು ಬರಲಿದೆ. ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಕೆಲ ದಿನಗಳಿಂದ ಸಿಎಂ ಸಂಪರ್ಕದಲ್ಲಿದ್ದವರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ. ಬೆಳಗಾವಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸಿಎಂ ಸಂಪರ್ಕಕ್ಕೆ ಬಂದ 500 …

Read More »

ಮಂಗಳಾ ಅಂಗಡಿ ಗೆಲವು ನಿಶ್ಚಿತ- ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಗೆಲುವು ಖಚಿತವೆಂದು ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ನಗರದ ಹೊಸಪೇಟ ಗಲ್ಲಿಯಲ್ಲಿರುವ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪರ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟಾಗಿ ಪ್ರಚಾರ ಕಾರ್ಯ ನಡೆಸಿದ್ದೇವೆ. ಮತದಾರರು ಸಹ ಬಿಜೆಪಿ ಜನೋಪಯೋಗಿ …

Read More »

ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್‌ಗೆ ಶನಿವಾರ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ.

ಪಾಟ್ನಾ, ಏಪ್ರಿಲ್ 17: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್‌ಗೆ ಶನಿವಾರ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ. ಇದೇ ಫೆಬ್ರವರಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಎರಡು ತಿಂಗಳ ನಂತರ ಹೊಸ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಶನಿವಾರ ಜಾಮೀನು ನೀಡಿದ್ದು, ಜೈಲಿನಿಂದ ಶೀಘ್ರವೇ ಅವರು ಹೊರ ಹೋಗಲಿರುವುದಾಗಿ ತಿಳಿದುಬಂದಿದೆ.   ಲಾಲೂ ಪ್ರಸಾದ್ ಅವರು …

Read More »

ಕೆಂಪುಕೋಟೆ ಮೇಲೆ ಬಾವುಟ ಪ್ರಕರಣ- ನಟ ದೀಪ್ ಸಿಧುಗೆ ಜಾಮೀನು

ನವದೆಹಲಿ: ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ನಟ ದೀಪ್ ಸಿಧುಗೆ ದೆಹಲಿ ಕೋರ್ಟ್ ಜಾಮೀನು ನೀಡಿದೆ. ಜನವರಿ 26 ರ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ದೀಪ್ ಸಿಧುಗೆ ಜಾಮೀನು ನೀಡಿದೆ. ಕಳೆದ ವಿಚಾರಣೆಯ ವೇಳೆ, ಜನವರಿ 26 ರಂದು ಕೆಂಪು ಕೋಟೆಗೆ ಹೋಗುವಂತೆ ಆಂದೋಲನ ನಡೆಸುತ್ತಿರುವ ರೈತರಿಗೆ ಯಾವುದೇ ಕರೆ ನೀಡಿಲ್ಲ ಎಂದು ದೀಪ್ ಸಿಧು ನ್ಯಾಯಾಲಯಕ್ಕೆ ಮನವಿ …

Read More »

ತಮಿಳು ಚಿತ್ರರಂಗದ​ ಹಿರಿಯ ಹಾಸ್ಯ ಕಲಾವಿದ ವಿವೇಕ್​ ವಿಧಿವಶ

ಚೆನ್ನೈ: ನಿನ್ನೆ (ಏಪ್ರಿಲ್​ 16) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ವಿವೇಕ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ (ಏಪ್ರಿಲ್​ 17) ವಿಧಿವಶರಾಗಿದ್ದಾರೆ.​ ಎಡ ಮುಂಭಾಗದ ಅಪಧಮನಿ ನಾಳವು ಶೇ 100 ರಷ್ಟು ಬ್ಲಾಕ್​ ಆಗಿದ್ದು, ತೀವ್ರತರವಾದ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿವೇಕ್ ಅವರ ಹೃದಯಾಘಾತಕ್ಕೆ ಗುರುವಾರ ತೆಗೆದುಕೊಂಡ ಕೋವಿಡ್​ ಲಸಿಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ …

Read More »

ರೈಲು ಇಳಿಯುತ್ತಿದ್ದಂತೆ ನಿಲ್ದಾಣದಿಂದ ಎದ್ನೋ ಬಿದ್ನೋ ಎಂದು ಓಡಿದ ಜನರು: ಕಾರಣ ಕೇಳಿದ್ರೆ ದಂಗಾಗ್ತೀರಾ!

ಪಟನಾ: ಎಲ್ಲಿ ನಮ್ಮನೆಲ್ಲ ಹಿಡಿದು ಕರೊನಾ ವೈರಸ್​ ಟೆಸ್ಟ್​ ಮಾಡಿಸುತ್ತಾರೋ ಎಂಬ ಭಯದಲ್ಲಿ ಮಕ್ಕಳು, ಯುವಕರು ಸೇರಿದಂತೆ ಅನೇಕರು ರೈಲು ನಿಲ್ದಾಣದಲ್ಲಿ ಯರ್ರಾಬಿರ್ರಿ ಓಡಿದ ಘಟನೆ ಬಿಹಾರದ ಬುಕ್ಸರ್​ನಲ್ಲಿ ಗುರುವಾರ ನಡೆದಿದೆ.​ ರೈಲು ಇಳಿದು ನಿಲ್ದಾಣದಿಂದ ಹೊರ ಹೋಗುವ ಮುಂಚೆ ಕರೊನಾ ಟೆಸ್ಟ್​ ಮಾಡಿಸಲು ಅಲ್ಲಿನ ಆರೋಗ್ಯ ಕಾರ್ಯಕರ್ತರು ಕೇಳಿದಾಗ, ಟೆಸ್ಟ್​ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೈಲು …

Read More »

ವಿಜಯಪುರ: ಐತಿಹಾಸಿಕ ಗೋಳಗುಮ್ಮಟ ಪ್ರವೇಶಕ್ಕೆ ಮೇ 15ರವರೆಗೆ ನಿರ್ಬಂಧ

ವಿಜಯಪುರ, ಎ.16: ರಾಜ್ಯ ಹಾಗೂ ವಿಜಯಪುರ ಜಿಲ್ಲಾದ್ಯಂತ ಕೊರೋನ ಸೋಂಕು ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಮೇ 15ರ ವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಗೋಳಗುಮ್ಮಟಕ್ಕೆ ಪ್ರವೇಶ ನಿರ್ಬಂಧಿಸಿ ಭಾರತೀಯ ಪುರಾತತ್ವ ಇಲಾಖೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಗೋಳಗುಮ್ಮಟ ಪ್ರವೇಶ ದ್ವಾರದ ಬಾಗಿಲಿಗೆ ಬೀಗ ಹಾಕಲಾಗಿದೆ.

Read More »

ಒಂದೇ ಬೆಡ್​ನಲ್ಲಿ ಇಬ್ಬರಿಗೆ ಚಿಕಿತ್ಸೆ, ಆಸ್ಪತ್ರೆ ಹೊರಗೆ ಹೆಣಗಳು; ಕೊರೊನಾದಿಂದ ಪರಿಸ್ಥಿತಿ ಭೀಕರ

ದೆಹಲಿ: ಹಾಸಿಗೆಗಳ ಕೊರತೆ, ಆಮ್ಲಜನಕದ ಕೊರತೆ.. ಒಂದೇ ಹಾಸಿಗೆಯಲ್ಲಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಮಲಗಿರುವ ಇಬ್ಬರು ಕೊರೊನಾ ಸೋಂಕಿತರು. ಇದು ದೆಹಲಿಯ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ಕರುಣಾಜನಕ ಪರಿಸ್ಥಿತಿ. ಕೊವಿಡ್ ಸೋಂಕಿತರಿಗಾಗಿಯೇ ಸುಮಾರು 1500 ಹಾಸಿಗೆ ವ್ಯವಸ್ಥೆಯಿರುವ ದೆಹಲಿಯ ಸರ್ಕಾರಿ ಆಸ್ಪತ್ರೆ ಇದೀಗ ಕೊರೊನಾ ಸೋಂಕಿತರಿಂದ ತುಂಬಿ ತುಳುಕುತ್ತಿದೆ. ‘ನನಗೆ ಗೊತ್ತು, ನಮ್ಮ ಆಸ್ಪತ್ರೆಯಲ್ಲಿ ಮಿತಿಮೀರಿದ, ಹಿಡಿಯಲಾರದಷ್ಟು ಕೊರೊನಾ ಸೋಂಕಿತರು ತುಂಬಲಿದ್ದಾರೆ. ಈಗಲೇ ಹಾಸಿಗೆಯೂ ಸೇರಿ ನಮ್ಮಲ್ಲಿರುವ …

Read More »

ಬಿಜೆಪಿ ನಾಯಕನ ಮನೆಯಲ್ಲಿ ಪತ್ತೆಯಾಯ್ತಾ ರಾಶಿ ರಾಶಿ ಹಣ? ಫೋಟೋ ಹಿಂದಿನ ಸತ್ಯಾಂಶವೇ ಬೇರೆ!

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸದ್ಯ ಚುನಾವಣೆ ಭರಾಟೆ ಜೋರಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಮತ್ತು ಪೋಸ್ಟ್​ ವಾರ್​ಗಳು ಸಹ ನಡೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ರಾಶಿ ರಾಶಿ ಹಣದ ಕಂತೆಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಹಣವನ್ನು ಬಂಗಾಳ ಬಿಜೆಪಿ ನಾಯಕರೊಬ್ಬರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಕೆಲವು ಪೊಲೀಸರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.   ಅನೇಕ ಫೇಸ್​ಬುಕ್​ …

Read More »

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ: ಸಂಕಷ್ಟದಲ್ಲಿ ಡಬ್ಬಾವಾಲಾಗಳು

ಮುಂಬೈ, ಏಪ್ರಿಲ್ 15: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಜನರಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಈ ಮಧ್ಯೆ ಮುಂಬೈ ಡಬ್ಬಾವಾಲಾಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈನಲ್ಲಿ ಒಟ್ಟು 5 ಸಾವಿರ ಡಬ್ಬಾವಾಲಾಗಳಿದ್ದರು, ಆದರೆ ಕೊರೊನಾ ಬಳಿಕ ಅವರಲ್ಲಿ ಕೇವಲ 400,500ರಷ್ಟು ಡಬ್ಬಾವಾಲಾಗಳು ಮಾತ್ರ ಕೆಲಸ ಮಾಡುತ್ತಿದ್ದರು. ಇದೀಗ ಮತ್ತೆ ಹೊಸ ನಿಯಮಗಳು ಜಾರಿಗೊಂಡಬಳಿಕ 200-250 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಇದೀಗ ಡಬ್ಬಾವಾಲಾಗಳ ಪರಿಸ್ಥಿತಿ ತೀವ್ರ ಸಂಕಷ್ಟಕ್ಕೆ …

Read More »