ವಿಜಯನಗರ: ಎಫ್ಡಿಎ(FDA) ಅಧಿಕಾರಿಯೊಬ್ಬರು 65 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೂವಿನ ಹಡಗಲಿಯ ತಹಶಿಲ್ದಾರರ ಕಚೇರಿಯ ಎಫ್ಡಿಎ ವೆಂಕಟಸ್ವಾಮಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ನೌಕರ. ಹಗರನೂರು ಗ್ರಾಮದ ನಿವೃತ್ತ ಶಿಕ್ಷಕ ಲಕ್ಕಪ್ಪ ಎಂಬುವವರು ನಾಲ್ಕು ಎಕರೆ ಜಮೀನಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ಕಲಂ 11 ತೆಗೆದು ಹಾಕಲು ಅರ್ಜಿ ಸಲ್ಲಿಕೆ ಮಾಡಿದ್ದರು. ಈ ವೇಳೆ ವೆಂಕಟಸ್ವಾಮಿ 70 ಸಾವಿರ ರೂ. ಹಣ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ …
Read More »ಅಚ್ಚರಿ ತಂದ ಅಪರೂಪದ ನಾಗರಹಾವು
ಕಾರವಾರ: ನಾಗರ ಹಾವಿನ ತಲೆಯ ಹಿಂದೆ ಹೆಡ್ ಫೋನ್ ಮಾದರಿಯ ಚಿನ್ಹೆಯಿರುವುದು ಸಾಮಾನ್ಯ. ಆದರೆ, ಅಂಕೋಲಾದಲ್ಲಿ ಸೋಮವಾರ ಹಿಡಿದ ಹಾವಿನ ತಲೆಯ ಮೇಲೆ ವಿಭಿನ್ನ ರೀತಿಯ ಚಿನ್ಹೆ ಗಮನ ಸೆಳೆದಿದೆ. ಉರಗ ತಜ್ಞ ಮಹೇಶ ನಾಯ್ಕ ಹಿಡಿದ ಹಾವಿನ ತಲೆಯ ಮೇಲೆ ಮನುಷ್ಯನ ಕಣ್ಣು, ಹುಬ್ಬು, ಕೆಳಗೆ ಬಾಯಿ, ಮೂಗು ಮುಂತಾದ ಚಿತ್ರ ಬಿಡಿಸಿದಂತೆ ಇದೆ. ಕೆಲವು ಹಾವುಗಳಲ್ಲಿ ಮಾತ್ರ ಇಂಥ ಚಿತ್ರ ಕಂಡುಬರುತ್ತದೆ ಎನ್ನುತ್ತಾರೆ ಮಹೇಶ ನಾಯ್ಕ.
Read More »ಎಂಇಎಸ್ ನಾಯಕರಿಂದ ಮಹಾರಾಷ್ಟ್ರ ಸಿ.ಎಂ ಏಕನಾಥ ಶಿಂದೆ ಭೇಟಿ
ಬೆಳಗಾವಿ: ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ್ ಪಾಟೀಲ ಹಾಗೂ ಶಂಭುರಾಜ್ ದೇಸಾಯಿ ಅವರನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಮಂಗಳವಾರ ಭೇಟಿಯಾದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬೆಳವಣಿಗೆಗಳು ಹಾಗೂ ಫೆ.28ರಂದು ಎಂಇಎಸ್‌ನಿಂದ ಆಯೋಜಿಸಿರುವ ಮುಂಬೈ ಚಲೋ ಹೋರಾಟದ ಕುರಿತು ಚರ್ಚಿಸಿದರು. ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಕೇಶಕುಮಾರ್, ಎಂಇಎಸ್ ಕಾರ್ಯಾಧ್ಯಕ್ಷ ಮನೋಹರ್ ಕಿಣೇಕರ್ ಇತರರಿದ್ದರು.
Read More »ಹಲ್ಲೆ ಯತ್ನ: ಕ್ರಮಕ್ಕೆ ಆಗ್ರಹಿಸಿ ಮನವಿ
ಬೆಳಗಾವಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಈಚೆಗೆ ರೈತ ಹೋರಾಟಗಾರ, ಕಬ್ಬು ನಿಯಂತ್ರಣ ಮಂಡಳಿ ಸದಸ್ಯ ಸಿದಗೌಡ ಮೋದಗಿ ಅವರ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ. ಆರೋಪಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರಿ ವಿವಿಧ ಸಂಘಟನೆಗಳು ಸದಸ್ಯರು ಸೋಮವಾರ ನಗರ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದರು. ‘ಸಿದಗೌಡ ಮೋದಗಿ ಅವರು ಫೆ.4ರಂದು ಕಾರ್ಖಾನೆಗೆ ನಾಮನಿರ್ದೇಶನ ಸಂಬಂಧ ವರದಿ ಮಾಡಿದ ನಂತರ, ಅವರನ್ನು ಕಾರ್ಖಾನೆಯ ಒಂದು ಕೋಣೆಯಲ್ಲಿ ನಾಲ್ಕು …
Read More »ಖಾತೆ ಬದಲಾವಣೆಗೆ ಲಂಚ: ಪ್ರಥಮದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ
ಬಳ್ಳಾರಿ (ಹೂವಿನಹಡಗಲಿ): ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿಕೊಡಲು ಸಾವಿರಾರು ರೂ. ಲಂಚ ಕೇಳಿದ್ದ ಹಡಗಲಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಎನ್ನುವವರು ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಹಗರನೂರು ಗ್ರಾಮಾದ ನಿವೃತ್ತ ಶಿಕ್ಷಕ ಲಕ್ಕಪ್ಪಾ ಅಂಗಡಿಯವರ ತಾಯಿಗೆ ಸೇರಿದ 4 ಎಕರೆ ಜಮಿನಿಗೆ ಸಂಬಂಧಿಸಿದಂತೆ ಸರ್ವೆನಂ. 330\ಎ ಪಹಣಿ ಕಲಂ 11 ರಲ್ಲಿ ಸರ್ಕಾರಿ ಜಮಿನು ಎಂದು ಬಂದಿದ್ದು ಇದನ್ನು ತಗೆದು ಹಾಕಲು ಅರ್ಜಿದಾರ ಲಕ್ಕಪ್ಪ ಅಂಗಡಿಯ 2014 …
Read More »ಅಸಮರ್ಪಕ ಸಮವಸ್ತ್ರ, ಶೂ ವಿತರಣೆಗೆ ಹೈಕೋರ್ಟ್ ತರಾಟೆ
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸಮವಸ್ತ್ರ ಮತ್ತು ಶೂ ವಿತರಿಸಿರುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡದ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಹಿರಿಯ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ ಎಲ್ಲ ಸರಿಹೋಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂದು …
Read More »ಕರಿಕಟ್ಟಿ ಗ್ರಾಮದಲ್ಲಿ ಮನೆಯ ಛಾವಣಿ ಕುಸಿದು ಬಿದ್ದು ಹಿರಿಯ ಮಹಿಳೆ ಸಾವು
ಸವದತ್ತಿ: ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಮನೆಯ ಛಾವಣಿ ಕುಸಿತಕ್ಕೊಳಗಾಗಿ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಗ್ರಾಮದ ಶಾಂತವ್ವ ಶಿವಮೂರ್ತಯ್ಯ ಹಿರೇಮಠ (60) ಮೃತಪಟ್ಟವರು. ಹಳೆಯದಾದ ಮನೆಯ ಛಾವಣಿ ಏಕಾಏಕಿ ಕುಸಿತಕ್ಕೊಳಗಾಯಿತು. ಅದರಡಿಯಲ್ಲೇ ಇದ್ದ ಶಾಂತವ್ವ ಅವರ ಮೇಲೆ ವ್ಯಾಪಕ ಪ್ರಮಾಣದ ಮಣ್ಣು, ಹಲಗೆಗಳು ಬಿದ್ದು ಅದರಲ್ಲಿ ಮುಚ್ಚಿ ಹೋಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಈ ಸಂಬಂಧ ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು …
Read More »BBC ಕಚೇರಿ ಮೇಲೆ IT ಅಧಿಕಾರಿಗಳ ದಿಢೀರ್ ದಾಳಿ
ಬೆಂಗಳೂರು: ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಸರ್ವಿಸ್-BBC ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿ, ಮುಂಬೈ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಿಬಿಸಿ ಕಚೇರಿಯಲ್ಲಿನ ಸಿಬ್ಬಂದಿಗಳ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆ ಅಕ್ರಮಗಳ ಆರೋಪದ ಮೇಲೆ ತೆರಿಗೆ ಇಲಾಖೆ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ತಪಾಸಣೆ ಅವಧಿಯಲ್ಲಿ ಬಿಬಿಸಿ ಕಚೇರಿ, ಸ್ಟುಡಿಯೋಗಳನ್ನು ಮುಚ್ಚಲಾಗುತ್ತಿದ್ದು, ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ …
Read More »ಬಜೆಟ್ ಅಧಿವೇಶನದ ಭಾಗ 1 ಮುಕ್ತಾಯ : ಮಾರ್ಚ್ 13 ರಿಂದ ಮತ್ತೆ ಲೋಕಸಭೆಯ ಕಲಾಪ
ನವದೆಹಲಿ: ಲೋಕಸಭೆಯ ಕಲಾಪನ್ನು ಸೋಮವಾರ ಒಂದು ತಿಂಗಳ ಅವಧಿಗೆ ಮುಂದೂಡಲಾಗಿದ್ದು, ಮಾರ್ಚ್ 13 ರಂದು ಮತ್ತೆ ಸಭೆ ಸೇರಲಿದೆ. ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಪ್ರಾರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ‘ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ’ದ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ …
Read More »ಪುಲ್ವಾಮಾ ದುರಂತಕ್ಕೆ 4 ವರ್ಷ
ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ನಡೆದ ಘೋರ ದುರಂತದಲ್ಲಿ ಮಡಿದ ವೀರ ಯೋಧರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆನೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಪುಲ್ವಾಮಾದಲ್ಲಿ ಈ ದಿನ ನಾವು ಕಳೆದುಕೊಂಡ ನಮ್ಮ ಪರಾಕ್ರಮಿಗಳನ್ನು ನೆನಪಿಸಿಕೊಳ್ಳುತ್ತೇನೆ. ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ’ …
Read More »
Laxmi News 24×7