Breaking News
Home / ರಾಷ್ಟ್ರೀಯ (page 385)

ರಾಷ್ಟ್ರೀಯ

ಆದಾಯ ಮೀರಿ ಆಸ್ತಿ ಗಳಿಕೆ; ರೇಣುಕಾಚಾರ್ಯ ಅರ್ಜಿ ವಜಾ

ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಶಾಸಕ ರೇಣುಕಾಚಾರ್ಯ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು. ಇದರಿಂದ ರೇಣುಕಾಚಾರ್ಯ ಅವರಿಗೆ ಮತ್ತೆ ಕಂಟಕ ಎದುರಾದಂತಾಗಿದೆ. ರೇಣುಕಾಚಾರ್ಯ ವಿರುದ್ಧ ಗುರುಪಾದಯ್ಯ ಮಠದ್‌ ಎಂಬುವರು 2015ರಲ್ಲಿ …

Read More »

ಮಾಡಾಳು ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ವಶಕ್ಕೆ

ಬೆಂಗಳೂರು: ಕೆಎಸ್‌ಎಡಿಎಲ್‌ ಟೆಂಡರ್‌ ನೀಡಲು 40 ಲಕ್ಷ ರೂ. ಲಂಚ ಪಡೆದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಹೆಚ್ಚಿನ ವಿಚಾರಣೆಗಾಗಿ ಐದು ದಿನ ಲೋಕಾಯುಕ್ತ ಪೊಲೀಸ್‌ ಕಸ್ಟಡಿಗೆ ನೀಡಿದೆ.   ವಿರೂಪಾಕ್ಷಪ್ಪರನ್ನು ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಲೋಕಾಯುಕ್ತ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಈ ಅರ್ಜಿ ಸಂಬಂಧ ವಿಚಾರಣೆ ನಡೆಸಿದ …

Read More »

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ಬೆಂಗಳೂರು: ಒಂದೆಡೆ ಬಣಗಳ ಹಗ್ಗಜಗ್ಗಾಟ, ಮತ್ತೂಂದೆಡೆ ಅದೇ ಬಣಗಳ ಬೆಂಬಲಿತ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಿರುವುದರಿಂದ “ಕೈ’ ನಾಯಕರಿಗೆ ಎರಡನೇ ಅಭ್ಯರ್ಥಿಗಳ ಪಟ್ಟಿ ಅಕ್ಷರಶಃ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತಿದೆ.   ಉಳಿದ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಕಡೆ 3-4 ಆಕಾಂಕ್ಷಿಗಳಿದ್ದಾರೆ. ಒಬ್ಬರ ಆಯ್ಕೆ, ಉಳಿದವರ ಮುನಿಸಿಗೆ ಕಾರಣವಾಗುತ್ತಿದೆ. ಇದು ಮುಂಬರುವ ಚುನಾವಣೆಯಲ್ಲಿ ಒಳ ಏಟು ಕೊಡುವ ಆತಂಕವೂ ಇದೆ. ಹಾಗಾಗಿ, ಇದ್ದವರಲ್ಲಿ ಯಾರಿಗೆ ಮಣೆ ಹಾಕುವುದು ಹಾಗೂ ಯಾರನ್ನು …

Read More »

ಸಿಎಂ ಕಾರ್ಯಕ್ರಮ ರದ್ದಾಗುವುದಿಲ್ಲ: ಸಚಿವ ಹಾಲಪ್ಪ ಆಚಾರ್‌

ಕೊಪ್ಪಳ: ಜಿಲ್ಲೆಯ ಯಲಬುರ್ಗಾದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಆಯೋಜನೆಯಾಗಿರುವ ಮುಖ್ಯಮಂತ್ರಿ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ, ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ತಿಳಿಸಿದರು.   ಕೃಷ್ಣ ಬಿ ಸ್ಕೀಂ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮದ ಉದ್ಘಾಟನೆಗೆ ಸಿಎಂ ಬರಲಿದ್ದಾರೆ. 11.30ಕ್ಕೆ ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಇದೆ. ನಮ್ಮ ಕಾರ್ಯಕ್ರಮ 11ಕ್ಕೆ ನಿಗದಿಯಾಗಿದೆ. ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.

Read More »

ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ ಆಶಿಕಾ; ಈ ಕಾರಣಕ್ಕೆ ಅಹೋರಾತ್ರ ಈಗ ಮಾತನಾಡಲ್ಲ ಬಿಡಿ ಎಂದ ನೆಟ್ಟಿಗರು!

ಅಹೋರಾತ್ರ.. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ ಸಿನಿ ರಸಿಕರಿಗೆ ಅತಿ ಪರಿಚಿತವಾಗಿರುವ ಹೆಸರು. ಕನ್ನಡದ ಯಾವುದೇ ಸ್ಟಾರ್ ನಟರ ಕಟ್ಟಾಭಿಮಾನಿಗಳ ಬಳಿ ಹೋಗಿ ಅಹೋರಾತ್ರ ಯಾರು ಅಂತ ಕೇಳಿದ್ರೆ ಗೊತ್ತು ಬಿಡಿ ಎಂಬ ಉತ್ತರವೇ ಬರಲಿದೆ. ಆದರೆ ಒಳ್ಳೆ ರೀತಿಯಲ್ಲಿ ಅಹೋರಾತ್ರ ಗೊತ್ತು ಎಂದು ಹೇಳಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯೇ. ಆತನ ಬಗ್ಗೆ ಪ್ರತಿಕ್ರಿಯಿಸುವ ಬಹುತೇಕ ಸ್ಟಾರ್ ನಟರ ಅಭಿಮಾನಿಗಳು ಆತನ ಬಗ್ಗೆ ಕೆಟ್ಟದಾಗಿಯೇ ಮಾತನಾಡುತ್ತಾರೆ. ಇದಕ್ಕೆ ಕಾರಣ ಅಹೋರಾತ್ರ …

Read More »

ಒಳಮೀಸಲಾತಿ ರದ್ದುಪಡಿಸಿ, ಇಲ್ಲವೇ ವಿಷ ಕೊಡಿ: ಬಂಜಾರ‌ ಸಮಾಜದ ಮುಖಂಡ ರಾಜು ಲಮಾಣಿ

ಬಾಗಲಕೋಟೆ: ಒಳ ಮೀಸಲಾತಿ ‌ರದ್ದುಪಡಿಸಿ, ಇಲ್ಲವೇ‌ ವಿಷ ಕೊಡಿ ಎಂದು ಬಂಜಾರ‌ ಸಮಾಜದ ಮುಖಂಡ ರಾಜು ಲಮಾಣಿ ಆಗ್ರಹಿಸಿದರು. ಬಾಗಲಕೋಟೆಯಲ್ಲಿ ಪ್ರತಿಭಟನೆ ಮಾಡಿದ ಬಂಜಾರ ಸಮಾಜದ ಮುಖಂಡರು, ಬಿಜೆಪಿ ಸರ್ಕಾರದ ‌ವಿರುದ್ಧ ಘೋಷಣೆಗಳನ್ನು ಕೂಗಿದರು.   ಬಂಜಾರ‌ ಸೇವಾ‌ ಸಂಘದ‌ ಜಿಲ್ಲಾ ಘಟಕದ ಅಧ್ಯಕ್ಷ ಬಲರಾಮ ನಾಯ್ಕ ಮಾತನಾಡಿ, ಸರ್ಕಾರ ‌ನಮಗೆ ಊಟ ಹಾಕಿತ್ತು. ‌ಅದನ್ನ ಇವರು ಬೂಟುಗಾಲಿಲೇ ಒದ್ದಿದ್ದಾರೆ, ನಾವು ಜಾಡಿಸಿ, ಜಾಡಿಸಿ ಒದೆಯಲು ನಾವು ಸಿದ್ಧರಿದ್ದೇವೆ ಎಂದರು. ಶೇ …

Read More »

ತಂದೆಯನ್ನು ಬಿಜೆಪಿ ಮರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ವಿಜೇತಾ ಅನಂತಕುಮಾರ್

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಾಗ ಪಕ್ಷಗಳ ವಿರುದ್ಧ ಕೆಲವು ನಾಯಕರಿಂದ ಅಸಮಾಧಾನ ವ್ಯಕ್ತವಾಗುವುದು ಸಹಜ. ಇದೀಗ ಬಿಜೆಪಿ ವಿರುದ್ಧ ಮಾಜಿ ಸಚಿವ ಅನಂತಕುಮಾರ್ ಕುಟುಂಬದಿಂದ ಬೇಸರವೊಂದು ವ್ಯಕ್ತವಾಗಿದೆ. ಆದರೆ ಇದು ಚುನಾವಣೆ ವಿಚಾರಕ್ಕಾಗಿ ಅಲ್ಲ.   ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕರಾಗಿದ್ದ ಅನಂತಕುಮಾರ್ ಅವರ ಪುತ್ರಿ ವಿಜೇತಾ ಅನಂತಕುಮಾರ್ ಬಿಜೆಪಿ ವಿರುದ್ಧ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಭಾರತೀಯ ಜನತಾ ಪಕ್ಷವು ನನ್ನ ತಂದೆಯನ್ನು ಮರೆಯುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದೂ …

Read More »

ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ

ನವದೆಹಲಿ: ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.   ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮತ್ತು …

Read More »

ಮತ ಎಣಿಕೆಗೆ ಎರಡು ದಿನ ಬೇಕೆ? ಬಲ್ಲವರು ತಿಳಿಸಿ;

ಬೆಂಗಳೂರು: ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.   ಇದೀಗ ನಟ, ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ ಟ್ವಿಟರ್​ನಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದಲ್ಲಿ ಮತದಾನ …

Read More »

ಈ ಬಾರಿ M3 EVM ಬಳಕೆ, ಎಲ್ಲ ಪಕ್ಷಗಳ ಜತೆ ಹೊಸ ಯಂತ್ರ ಪರಿಶೀಲನೆ: ರಾಜ್ಯ ಚುನಾವಣಾ ಆಯೋಗ ಮಾಹಿತಿ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಇಂದು (ಮಾ.29) ಸುದ್ದಿಗೋಷ್ಠಿ ನಡೆಸಿ, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ, ಚುನಾವಣಾ ಪೂರ್ವ ತಯಾರಿ ಹಾಗೂ ನೀತಿ ಸಂಹಿತೆಯ ಎಚ್ಚರಿಕೆ ಸೇರಿದಂತೆ ಅನೇಕ ಮಾಹಿತಿಗಳನ್ನು ತಿಳಿಸಿದೆ.   ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 13ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ರಾಜ್ಯ ಚುನಾವಣಾ …

Read More »