Breaking News

ರಾಷ್ಟ್ರೀಯ

ಕಾಂತರಾಜು ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಲ್ಲ: ಸಚಿವ‌ ತಂಗಡಗಿ

ಬೆಂಗಳೂರು:ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್‌ ಕಾಂತರಾಜು ನೇತೃತ್ವದ ಸಮೀಕ್ಷಾ ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.   ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನು ಕಾಂತರಾಜು ವರದಿಯನ್ನು ಜಾತಿ ಗಣತಿ ಎಂದು ಕರೆಯಲಾಗುತ್ತಿದೆ. ಮೂಲವಾಗಿ ಇದು ಜಾತಿಗಣತಿ ಸಮೀಕ್ಷೆ ಅಲ್ಲವೇ, ಅಲ್ಲ.‌ ಇದು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸರಿಪಡಿಸುವ ಹಿನ್ನೆಲೆಯಲ್ಲಿ ವರದಿ ಸಿದ್ಧಪಡಿಸಲಾಗಿದೆ. ಅದನ್ನು ಹೊರತುಪಡಿಸಿ ಜಾತಿ …

Read More »

ಜಾಮೀನು ರಹಿತ ವಾರಂಟ್​​​​​​​ನಿಂದ ರಣ್​ದೀಪ್​ ಸುರ್ಜೇವಾಲಾಗೆ 5 ವಾರ ಬಿಗ್​ ರಿಲೀಫ್​

ನವದೆಹಲಿ : ಕಾಂಗ್ರೆಸ್​ ವಕ್ತಾರ ರಣ್​ದೀಪ್​ ಸುರ್ಜೇವಾಲಾ ಅವರಿಗೆ ಸುಪ್ರೀಂ ಕೋರ್ಟ್​ ಇಂದು ರಿಲೀಫ್​ ನೀಡಿದೆ. 23 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅವರ ವಿರುದ್ಧ ಜಾರಿಯಾಗಿದ್ದ ಜಾಮೀನು ರಹಿತ ವಾರಂಟ್​​ನಿಂದ ಸರ್ವೋಚ್ಛ ನ್ಯಾಯಾಲಯವು ಐದು ವಾರಗಳ ಕಾಲ ರಕ್ಷಣೆ ನೀಡಿದೆ. ವಾರಾಣಸಿಯ ವಿಭಾಗೀಯ ಆಯುಕ್ತರ ನ್ಯಾಯಾಲಯ ಮತ್ತು ಕಚೇರಿ ಆವರಣದಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7ರಂದು ವಾರಾಣಸಿಯ ವಿಶೇಷ ನ್ಯಾಯಾಧೀಶರು (ಸಂಸದರು, ಶಾಸಕರ ಪ್ರಕರಣಗಳ ನ್ಯಾಯಾಲಯ) ಜಾಮೀನು …

Read More »

ಗ್ರಾಮ ಪಂಚಾಯಿತಿಗಳಿಗೂ ಬಂತು ಕ್ಯೂಆರ್ ಕೋಡ್ ವ್ಯವಸ್ಥೆ!, ಈ ಕ್ರಾಂತಿಕಾರಕ ಬದಲಾವಣೆಗೆ ಗ್ರಾಮಸ್ಥರು ಮೆಚ್ಚುಗೆ

ಮೈಸೂರು: ಈವರೆಗೆ ಕೇವಲ ನಗರ ಪ್ರದೇಶಗಳಿಗಷ್ಟೇ ಸಿಮಿತವಾಗಿದ್ದ ಡಿಜಿಟಲ್​ ಪೇ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ತೆರಿಗೆ ಸೇರಿದಂತೆ ಇತರ ಸೇವಾ ಶುಲ್ಕವನ್ನು ಕ್ಯೂಆರ್ ಕೋಡ್ ಮೂಲಕ ಪಾವತಿಸಲಾಗುತ್ತಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಚಯಿಸಿದ ಪ್ರಥಮ ಪ್ರಯೋಗ ಇದಾಗಿದ್ದು, ಈ ವಿನೂತನ ಸೌಲಭ್ಯದಿಂದ ಸ್ಥಳೀಯರಿಗೆ ತುಂಬಾ ಅನುಕೂಲವಾಗಿದೆ. ಈ ಕ್ರಾಂತಿಕಾರಕ …

Read More »

ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಕೊಲೆ. ಹಳೆ ವೈಷಮ್ಯದಿಂದ ಹತ್ಯೆ ಶಂಕೆ.

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ 9:30ರ ಸುಮಾರಿಗೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ. ಸಹದೇವ್ ಕೊಲೆಯಾದ ರೌಡಿಶೀಟರ್​​​​. ಟೀ ಕುಡಿಯಲು ಬೇಕರಿ ಬಳಿ ಬಂದಿದ್ದಾಗ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ಗುಂಪು, ​ಸಹದೇವ್ ಮೇಲೆ ಹಲ್ಲೆ ಮಾಡಿ ಹತ್ಯೆಗೈದು ಪರಾರಿಯಾಗಿದೆ. ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಡಿದ್ದಾರೆ. ಕೊಲೆಯಾದ ವ್ಯಕ್ತಿ ಕೋಣನಕುಂಟೆ …

Read More »

ಅಧಿಕೃತ ದಾಖಲೆಗಳನ್ನ ತೋರಿಸಲಿ, ತಪ್ಪು ಸಾಬೀತಾದರೆ ಹುದ್ದೆ ತೊರೆಯುತ್ತೇನೆ: ಷಡಕ್ಷರಿ ಪ್ರತಿಕ್ರಿಯೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ತಮ್ಮ ವರ್ಗಾವಣೆ ಕುರಿತಂತೆ ಈ ಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ವರ್ಗಾವಣೆ ಹಾಗೂ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅವರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ”ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳ ಅಧಿಕೃತ ದಾಖಲಾತಿ ತೋರಿಸಲಿ. ಒಂದೊಮ್ಮೆ ತಪ್ಪು ಎಸಗಿರುವುದು ಸಾಬೀತಾದರೆ ಹುದ್ದೆಯನ್ನೇ ತೊರೆಯುತ್ತೇನೆ ಎಂದು ಸವಾಲು ಕೂಡಾ ಹಾಕಿದ್ದಾರೆ. ಈ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿ ಅವರನ್ನ …

Read More »

ನವೆಂಬರ್ 26 ರಂದು ನಡೆಯಬೇಕಿದ್ದ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ನವೆಂಬರ್ 26 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ 2023 ಅನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದ್ದು, ಡಿಸೆಂಬರ್ 31 ರಂದು ನಡೆಸಲು ಚಿಂತನೆ ನಡೆಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಮೂಲಕ ತಿಳಿಸಿದೆ‌.   ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ 2023 (ಕೆ ಸೆಟ್-2023) ಅನ್ನು ನವೆಂಬರ್ 26 ರಂದು ನಿಗದಿಪಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. …

Read More »

ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಪೌಷ್ಟಿಕಾಂಶಯುಕ್ತ ಆಹಾರ ಕೊಡುವುದು ನಮ್ಮ ಸರ್ಕಾರದ ಆದ್ಯತೆ: ಸಚಿವ ಹೆಚ್​ ಸಿ ಮಹದೇವಪ್ಪ

ಧಾರವಾಡ: ಎಸ್​ಸಿ ಮತ್ತು ಎಸ್​ಟಿ ಮಕ್ಕಳಿಗೆ ಸೀಟು ಖಾಲಿ ಇಲ್ಲ ಎಂದು ಹೇಳಿ ಅವರಿಗೆ ಹಾಸ್ಟೆಲ್​ ನಿರಾಕರಿಸಬಾರದು ಎಂದು ಸುತ್ತೋಲೆ ಹೊರಡಿಸಿದ್ದೇವೆ. ಇದರ ಉದ್ದೇಶ ಶಿಕ್ಷಣವನ್ನು ಉತ್ತೇಜಿಸುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್​.ಸಿ ಮಹದೇವಪ್ಪ ಹೇಳಿದರು. ಧಾರವಾಡದ ಹಾಸ್ಟೆಲ್​ಗೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾರವಾಡ ಹಾಸ್ಟೆಲ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 450 ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್​ನಲ್ಲಿ ತಂಗಲು ಅವಕಾಶವಿದೆ. ಆದರೆ, ಇಲ್ಲಿ …

Read More »

ನೋಟ್‌ ಬ್ಯಾನ್‌ನಿಂದ ಆದ ಒಂದೇ ಒಂದು ಪ್ರಯೋಜವಿದ್ದರೆ ಬಿಜೆಪಿ ಉತ್ತರಿಸಲಿ ಎಂದು ಕಾಂಗ್ರೇಸ್‌ ನೋಟ್‌ ಬ್ಯಾನ್‌ ವಿರುದ್ಧ ಸವಾಲು

: ನೋಟ್‌ ಬ್ಯಾನ್‌ನಿಂದ ಆದ ಒಂದೇ ಒಂದು ಪ್ರಯೋಜವಿದ್ದರೆ ಬಿಜೆಪಿ ಉತ್ತರಿಸಲಿ ಎಂದು ಕಾಂಗ್ರೇಸ್‌ ನೋಟ್‌ ಬ್ಯಾನ್‌ ವಿರುದ್ಧ ಸವಾಲು ಹಾಕಿದೆ. ಈ ಕುರಿತು ಎಕ್ಸ್‌ನಲ್ಲಿ ಬರೆದ ಹಂಚಿಕೊಂಡ ಕಾಂಗ್ರೇಸ್‌, ೨೦೧೬ ರ ಇದೇ ದಿನ ರಾತ್ರಿ ಎಂಟು ಗಂಟೆಗೆ ಭಾರತದ ಆರ್ಥಿಕತೆಗೆ, ಜನರ ಬದುಕಿಗೆ ಕೊಡಲಿ ಪೆಟ್ಟು ನೀಡಿದ ಘೋರ ದುರಂತ ಜರುಗಿತ್ತು ಎಂದು ಕಿಡಿಕಾರಿದ್ದಾರೆ. ನೋಟ್‌ ಬ್ಯಾನ್‌ ಆಗಿ ೬ ವರ್ಷ ಪೂರೈಸಿದೆ, ಬಿಜೆಪಿಯಾಗಲಿ, ಮೊದಿಯಾಗಲಿ ತಮ್ಮ ಈ …

Read More »

ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಡಿ.ವಿ .ಸದಾನಂದ ಗೌಡ

ಜೆಪಿಯ ಹಿರಿಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ, ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ ಎಂದು ಹೇಳಿದ್ದಾರೆ.ಪ್ರಸ್ತುತ ಅವರು ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ ಎಂದರು. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷಗಳ ಕಾಲ …

Read More »

ಸೌಜನ್ಯ ಪ್ರಕರಣ : ಸಂತೋಷ್ ರಾವ್ ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ

ಬೆಂಗಳೂರು, ನ 08 ): 11 ವರ್ಷದ ಹಿಂದೆ ನಡೆದ ಸೌಜನ್ಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್‌ ಖುಲಾಸೆಗೊಳಿಸಿದ ಕೇಂದ್ರೀಯ ತನಿಖಾ ದಳವು ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇದೀಗ ಮತ್ತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ ನಾಲ್ಕು ತಿಂಗಳ ಬಳಿಕ ಇದೀಗ ಸಿಬಿಐ ಸೌಜನ್ಯಾಳನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿ ಸಂತೋಷ್‌ ರಾವ್‌ …

Read More »