Breaking News

ರಾಷ್ಟ್ರೀಯ

ಮೊಬೈಲ್‌ ಬ್ಲಾಸ್ಟ್‌ (Mobile Blast) ಆಗಿ ಯುವಕನ ತೊಡೆಗೆ ಗಾಯ

ಬೆಂಗಳೂರು: ಮೊಬೈಲ್‌ ಬ್ಲಾಸ್ಟ್‌ (Mobile Blast) ಆಗಿ ಯುವಕನ ತೊಡೆಗೆ ಗಾಯವಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನ ವೈಟ್‌ ಫಿಲ್ಡ್‌ ನಿವಾಸಿ ಪ್ರಸಾದ್‌ (24) ಗಾಯಗೊಂಡ ಯುವಕ. ಈತ ಅಕ್ಟೋಬರ್ ತಿಂಗಳಲ್ಲಿ ಒನ್​ ಪ್ಲಸ್​(1+) ಕಂಪನಿಯ ಮೊಬೈಲ್ ಖರೀದಿಸಿದ್ದ. ಇಂದು ಸ್ಕೂಟರ್​ನಲ್ಲಿ ತೆರಳುತ್ತಿದ್ದ ವೇಳೆ ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್​ ಏಕಾಏಕಿ ಬ್ಲಾಸ್ಟ್ ಆಗಿದೆ. ಪರಿಣಾಮ ಆತನ ತೊಡೆಗೆ ಗಂಭೀರ ಗಾಯವಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಮೊಬೈಲ್ ಸೆಂಟರ್​ಗೆ ಹೋದರೆ …

Read More »

ST CERTIFICATE: ಗೊಂಡ, ರಾಜಗೊಂಡ, ಕಾಡು ಕುರುಬ ಜನಾಂಗದವರಿಗೆ ಎಸ್ಟಿ ಪ್ರಮಾಣ ಪತ್ರ

ಬೆಂಗಳೂರು: ಕಲಬುರ್ಗಿ (kalburgi), ಬೀದರ್ (bidar) ಮತ್ತು ಯಾದಗಿರಿ (yadgiri) ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು (kodagu) ಜಿಲ್ಲೆಯ ಕುರುಬ ಜನಾಂಗದವರಿಗೆ ಪರಿಶಿಷ್ಟ ಪಂಗಡದ (ST) ಜಾತಿ ಪ್ರಮಾಣ ಪತ್ರ (Caste certificate) ಮತ್ತು ಸಿಂಧುತ್ವ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.   ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ …

Read More »

ಕರ್ನಾಟಕ ರಾಜಕಾರಣಕ್ಕೆ ಗುಡ್‌ ಬೈ ಹೇಳಿದ ಶ್ರೀರಾಮುಲು ಸೋದರಿ!

ಬಳ್ಳಾರಿ : ಬಿಜೆಪಿ (BJP) ತೊರೆದು ವೈಎಸ್‌ಆರ್‌ (YSRP) ಕಾಂಗ್ರೆಸ್‌ ಪಕ್ಷ ಸೇರಿರುವ ಮಾಜಿ ಸಂಸದೆ ಜೆ. ಶಾಂತಾ (J Shanta) ಕರ್ನಾಟಕ ರಾಜಕಾರಣಕ್ಕೆ ಗುಡ್‌ ಬೈ ಹೇಳಿದ್ದಾರೆ. ಮಾಜಿ ಸಚಿವ ಶ್ರೀರಾಮುಲು (Sriramulu) ಸೋದರಿಯಾಗಿರುವ ಶಾಂತಾ, ಆಂಧ್ರಪ್ರದೇಶದ (Andhrapradesh) ಸಿಎಂ ಜಗಮೋಹನ್‌ ರೆಡ್ಡಿ (CM Jagamohan reddy) ಸಮ್ಮುಖದಲ್ಲಿ ವೈಎಸ್‌ಆರ್‌ ಪಾರ್ಟಿ ಸೇರ್ಪಡೆಯಾಗಿದ್ದಾರೆ.   ಲೋಕಸಭಾ ಚುನಾವಣೆಯಲ್ಲಿ ಹಿಂದೂಪುರ ಕ್ಷೇತ್ರದಿಂದ ಶಾಂತಾ ಅವರಿಗೆ ವೈಎಸ್‌ಆರ್‌ ಟಿಕೆಟ್‌ ದೊರೆಯಲಿದೆ ಎನ್ನಲಾಗಿದೆ. …

Read More »

ಲೂಟಿ ಮಾಡಿರುವವರು ರಾಮರಾಜ್ಯದ ಬಗ್ಗೆ ಮಾತಾಡುತ್ತಾರೆ: ಪಾಟೀಲ್

ವಿಜಯಪುರ: ಬಜೆಟ್ ಗಿಂತ ಹೆಚ್ಚು ಹಣ ಖರ್ಚು ಮಾಡಿ ರಾಜ್ಯವನ್ನು ಲೂಟಿ ಮಾಡಿರುವವರು ಈಗ ರಾಮ (ram) ರಾಜ್ಯದ ಬಗ್ಗೆ ಮಾತನಾಡುತ್ತಾರೆ. ಇಂತವರಿಂದ ನಾವು ಕಲಿಯೋದು ಏನಿದೆ ಎಂದು ಕೈಗಾರಿಕ ಸಚಿವ ಎಂ. ಬಿ. ಪಾಟೀಲ್ (m.b. patil) ಹೇಳಿದರು. ವಿಜಯಪುರದಲ್ಲಿ (vijaypura) ಕೆಡಿಪಿ ಸಭೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾ (pulwama), ಬಾಲಾಕೋಟ್ (balkot) ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದ ಬಿಜೆಪಿ (bjp) ಈಗ ರಾಮನ ಹೆಸರನ್ನು ಬಳಸಿಕೊಂಡು …

Read More »

ಸಿದ್ದರಾಮಯ್ಯ ಅವರನ್ನ ನಿತ್ಯಾನಂದನಿಗೆ ಹೋಲಿಸಿದ ಬಿ.ಕೆ ಹರಿಪ್ರಸಾದ್!

ಬೆಂಗಳೂರು: ನಿತ್ಯಾನಂದನಿಗೆ ಹೇಗೆ ಭಕ್ತರಿದ್ದಾರೆಯೋ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೂ ಭಕ್ತರಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ (BK Hariprasad) ವ್ಯಂಗ್ಯವಾಡಿದರು. ಮಾಜಿ ಸಚಿವ ಹೆಚ್. ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಭಕ್ತರು ಇರುತ್ತಾರೆ. ಕೈಲಾಸದ ನಿತ್ಯಾನಂದ ಸ್ವಾಮೀಜಿಗೂ ಭಕ್ತರಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಭಕ್ತರಿದ್ದಾರೆ. ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದರು. ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿಚಾರವನ್ನು ಸಮರ್ಥಿಸಿಕೊಂಡ ಹರಿಪ್ರಸಾದ್, …

Read More »

ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ಕ್ಕೆ ಡಿಕೆಶಿ ಚಾಲನೆ

ಬೆಂಗಳೂರು: ಇಂದು ರಾಜ್ಯ ಸರ್ಕಾರದ “ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ” ಎಂಬ ಹೆಸರಿನ ಜನಸಂಪರ್ಕ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಮಹಾದೇವಪುರ ಮತ್ತು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ನಾಗರಿಕರು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಹಂಚಿಕೊಂಡರು.   ಕೆ.ಆರ್.ಪುರದ ಶಾಸಕ ಬೈರತಿ ಬಸವರಾಜು ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಸುತ್ತಲಿನ …

Read More »

ಮುಂದುವರೆದ ಅತಿಥಿ ಉಪನ್ಯಾಸಕರ ಪ್ರತಿಭಟನೆ: ಬೆಂಗಳೂರು ತಲುಪಿದ ಪಾದಯಾತ್ರೆ

ಬೆಂಗಳೂರು: ಸೇವೆ ಕಾಯಂಗೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು (Guest lecturers) ಆರಂಭಿಸಿರುವ ಪಾದಯಾತ್ರೆ ಮುಂದುವರಿದಿದ್ದು, ಇದೀಗ ಬೆಂಗಳೂರಿಗೆ (bengaluru) ಪಾದಯಾತ್ರೆ ಬಂದು ತಲುಪಿದೆ. ಅತಿಥಿ ಉಪನ್ಯಾಸಕ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ತುಮಕೂರಿನ (Tumkur) ಸಿದ್ದಗಂಗಾ ಮಠದಿಂದ (Siddaganga Mutt) ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದು, ಇದೀಗ ಬೆಂಗಳೂರಿಗೆ ಪಾದಯಾತ್ರೆ ಬಂದು ತಲುಪಿದೆ. ಈ ನಡುವೆ ಕೊಪ್ಪಳದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah), ಪಾದಯಾತ್ರೆ ನಡೆಸುತ್ತಿರುವ ಅತಿಥಿ …

Read More »

ಅದಾನಿ-ಹಿಂಡೆನ್ ಬರ್ಗ್ ಪ್ರಕರಣ: ಇಂದು ತೀರ್ಪು ಪ್ರಕಟಿಸಲಿರುವ ಸುಪ್ರೀಂ ಕೋರ್ಟ್

ನವದೆಹಲಿ: 2023 ರ ಜನವರಿಯಲ್ಲಿ ಯುಎಸ್ ಕಿರು ಮಾರಾಟಗಾರ ಹಿಂಡೆನ್ ಬರ್ಗ್ ರಿಸರ್ಚ್‌ ನ ಸಂಶೋಧನಾ ವರದಿಯಲ್ಲಿ ಪ್ರಕಟವಾದ ಅದಾನಿ ಗ್ರೂಪ್ ಕಂಪನಿಗಳ ವಿರುದ್ಧದ ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ತಿರುಚುವಿಕೆ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತನ್ನ ತೀರ್ಪನ್ನು ನೀಡಲಿದೆ.   ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತು ಮನೋಜ್ …

Read More »

‘ಲವ್ ಮ್ಯಾರೇಜ್’ ಗೆ ಪೋಷಕರ ವಿರೋಧ : ‘ಕಿರಾತಕ’ ಸಿನಿಮಾ ಶೈಲಿಯಲ್ಲೇ ಮದ್ವೆಯಾದ ಪ್ರೇಮಿಗಳು

ಬಳ್ಳಾರಿ : ಮದುವೆಗೆ ಹುಡುಗಿ ಮನೆಯವರು ಒಪ್ಪದ ಕಾರಣಕ್ಕೆ ಸಖತ್ ಪ್ಲ್ಯಾನ್ ಮಾಡಿ ಹೀರೋ ಹುಡುಗಿಯನ್ನು ಕರೆಸಿ ಕಾರಿನಲ್ಲೇ ಮದುವೆಯಾಗುತ್ತಾನೆ. ಇದು ಕನ್ನಡದ ಕಿರಾತಕ ಸಿನಿಮಾದ ಕಥೆ. ಇದು ನಿಮಗೆ ಗೊತ್ತಿರುವ ವಿಚಾರ. ಇದೀಗ ಅದೇ ರೀತಿಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಆದರೆ ಇದು ಕೊಂಚ ಡಿಫರೆಂಟ್ ಆಗಿದೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಶಿವಪ್ರಸಾದ್ ಮತ್ತು ಕೊಪ್ಪಳ ಮೂಲದ ಯುವತಿ ಅಮೃತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಶಿವಪ್ರಸಾದ್ ಕೆಳಜಾತಿಗೆ …

Read More »

‘ಯಡಿಯೂರಪ್ಪನವರಿಗಿಂತ ದೊಡ್ಡ ಹಿಂದೂ, ರಾಮ ಭಕ್ತ ಯಾರಿದ್ದಾರೆ? ಯತ್ನಾಳರಿಗೆ ಎಚ್ಚರಿಕೆ ನೋಟೀಸ್ ನೀಡಲಾಗದಷ್ಟು ಬಿಜೆಪಿ ನಿರ್ವೀರ್ಯ’

ಬೆಂಗಳೂರು: ಸುಮಾರು ನಾಲ್ಕು ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಭಾರತೀಯ ಜನತಾ ಪಕ್ಷಕ್ಕೆ ನಮ್ಮ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನ ದಿಗಿಲು ಹುಟ್ಟಿಸಿದೆ. ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ. ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ …

Read More »