ದಾವಣಗೆರೆ, : ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮತ್ತೆ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ. ಲೋಕಾಯುಕ್ತ ಬಲೆಗೆ ಬಿದ್ದು ಪಕ್ಷದಿಂದ ಉಚ್ಛಾಟನೆಗೊಂಡಿರುವ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಅವರು ನಾಳೆ ಅಂದರೆ ಫೆಬ್ರವರಿ 07ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಮಾಜಿ ಶಾಸಕ ಎಚ್. ಪಿ. ರಾಜೇಶ್ ಬಿಜೆಪಿಯತ್ತ ಮುಖ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಕಾಂಗ್ರೆಸ್ನ ಮಾಜಿ ಶಾಸಕ ಎಚ್. …
Read More »ಎಣ್ಣೆ ಮತ್ತಿನಲ್ಲಿ ಮನೆಗೆ ಎಂಟ್ರಿ ಕೊಟ್ಟ ವ್ಯಕ್ತಿಯಿಂದ ಯುವಕನ ಮೇಲೆ ಗುಂಡಿನ ದಾಳಿ
ಬೆಂಗಳೂರು, : ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಎಂಬ ವ್ಯಕ್ತಿ ಎಣ್ಣೆ ಮತ್ತಿನಲ್ಲಿ ಪರಿಚಿತರ ಮನೆಗೆ ಹೋಗಿದ್ದು ಮನೆಯಲ್ಲಿದ್ದ ಯುವಕನ ಮೇಲೆ ಗುಂಡು (Firing) ಹಾರಿಸಿದ ಘಟನೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿನಿಮಾ ಸ್ಟೈಲ್ ನಲ್ಲಿ ಮನೆಗೆ ಎಂಟ್ರಿ ಕೊಟ್ಟ ಪರಶುರಾಮ್ ಅವರನ್ನು ಮನೆಯೊಳಗೆ ಬರದಂತೆ ಸೂರಜ್ ತಡೆದಿದ್ದು ಕೋಪಗೊಂಡ ಪರಶುರಾಮ್ ತಮ್ಮ ಕೈಯಲ್ಲಿದ್ದ ಗನ್ನಿಂದ ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಅದೃಷ್ಟವಶಾತ್ ಗುಂಡು ಗೋಡೆಗೆ …
Read More »ರಾಷ್ಟ್ರ ರಾಜಧಾನಿಯಲ್ಲಿ ಇಂದು ʻಕೈʼ ರಣಕಹಳೆ: ಎಲ್ಲರ ಚಿತ್ತ ಕಾಂಗ್ರೆಸ್ ನಾಯಕರ ಹೋರಾಟದತ್ತ
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರಾಜ್ಯದ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಇಂದು ತಮ್ಮ ಹೋರಾಟದ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. “ರಾಜ್ಯದ ಹಿತ ಕಾಯುವ ಹೋರಾಟಕ್ಕೆ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಇಡಬೇಕಿದೆ. ರಾಜ್ಯದ ಜನ ನಮಗೆ ಅವಕಾಶ ಕೊಟ್ಟಿದ್ದು ಅವರಿಗೆ ನ್ಯಾಯ ಒದಗಿಸಿ ಋಣ ತೀರಿಸುವುದು ನಮ್ಮ ಕರ್ತವ್ಯ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕೇಂದ್ರ ಸರ್ಕಾರದ ಜತೆ ಸಹಕಾರ, ಸಮನ್ವಯತೆ ಮೂಲಕ ನಡೆದುಕೊಂಡು ಬರುತ್ತಿದ್ದೇವೆ. …
Read More »‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಶೇ. 50 ಮಿತಿ ರದ್ದು: ರಾಹುಲ್ ಗಾಂಧಿ ಘೋಷಣೆ
ರಾಂಚಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಜಯಗಳಿಸಿದಲ್ಲಿ ಈಗ ಮೀಸಲಾತಿಗೆ ಇರುವ ಗರಿಷ್ಠ ಶೇಕಡ 50ರಷ್ಟು ಮಿತಿಯನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ಭಾರತ್ ಚೋಡೋ ನ್ಯಾಯ ಯಾತ್ರೆ ಅಂಗವಾಗಿ ರಾಂಚಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ಜಯಗಳಿಸಿದಲ್ಲಿ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಮೀಸಲಾತಿಗೆ ಶೇಕಡ 50ರಷ್ಟು ಗರಿಷ್ಠ ಮಿತಿಯನ್ನು ಇಂಡಿಯಾ ಒಕ್ಕೂಟ ಕಿತ್ತೊಗೆಯಲಿದೆ. ದಲಿತರು, …
Read More »ಇಂದಿನಿಂದ 29 ರೂ.ನ ‘ಭಾರತ್ ಬ್ರ್ಯಾಂಡ್’ ಅಕ್ಕಿ ಮಾರಾಟ
ಬೆಂಗಳೂರು : ಜನಸಾಮಾನ್ಯರಿಗೆ ಗುಡ್ ನ್ಯೂಸ್ ಎಂಬಂತೆ ಇಂದಿನಿಂದ 29 ರೂ.ನ ‘ಭಾರತ್ ಬ್ರ್ಯಾಂಡ್’ ಅಕ್ಕಿ ಮಾರಾಟವಾಗುತ್ತಿದೆ. ಹೌದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಾಹನಗಳಿಗೆ ಚಾಲನೆ ಸಿಗಲಿದೆ. ಈ ಮೂಲಕ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ ನೀಡಲಾಗುತ್ತಿದೆ. ನಾಫೆಡ್-ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಇಂದು ನಾಫೆಡ್ನ 7 ಸಂಚಾರಿ ವಾಹನಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಭಾರತ್ ಅಕ್ಕಿ …
Read More »ಸಿಕ್ಕಿಂನಲ್ಲಿ ಗದಗ ಮೂಲದ ಯೋಧ ಹುತಾತ್ಮ
ಗದಗ: ಕರ್ತವ್ಯನಿರತ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಅಸ್ಸಾಂ ಹಾಗೂ ಸಿಕ್ಕಿಂ ನಡುವಿನ ಬಾಂಗ್ ಡೊಂಗ್ನಲ್ಲಿ ನಡೆದಿದೆ. ಹುತಾತ್ಮ ಯೋಧರನ್ನು ಗದಗ ಜಿಲ್ಲೆ ನರಗುಂದ ತಾಲೂಕಿನ ರಡ್ಡೇರ ನಾಗನೂರ ಗ್ರಾಮದ ರಾಮನಗೌಡ ಕರಬಸನಗೌಡ್ರ (44) ಎಂದು ಗುರುತಿಸಲಾಗಿದೆ. ಅಸ್ಸಾಂ ಹಾಗೂ ಸಿಕ್ಕಿಂ ನಡುವಿನ ಬಾಂಗ್ ಡೊಂಗ್ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತ ಆಗಿದೆ. ರಕ್ತದೊತ್ತಡದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಫೆ.7ರಂದು ಹುತಾತ್ಮ …
Read More »ಲೋಕಸಭಾ ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಕೆ ಸಲ್ಲದು ; ತಾಕೀತು
ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಲು ಕೆಲವೇ ದಿನಗಳು ಬಾಕಿ ಇರುವಂತೆಯೇ ಚುನಾವಣ ಆಯೋಗ ನಿರ್ದೇಶನವೊಂದನ್ನು ಹೊರಡಿಸಿ ಈ ಬಾರಿ ಯಾವುದೇ ಕಾರಣಕ್ಕೆ ಮತ್ತು ಯಾವುದೇ ರೂಪದಲ್ಲಿ ಚುನಾವಣ ಪ್ರಚಾರದಲ್ಲಿ ಮಕ್ಕಳನ್ನು ಬಳಸಕೂಡದು ಎಂದು ತಾಕೀತು ಮಾಡಿದೆ. ಈ ಹಿಂದೆ ಹಲವು ಬಾರಿ ಚುನಾವಣ ಆಯೋಗ ಸೂಚನೆ ನೀಡಿತ್ತಾದರೂ, ಈ ಸಲ “ಶೂನ್ಯ ಸಹನಾ’ ನಿಲುವು ತಳೆಯುವುದಾಗಿ ಸ್ಪಷ್ಟಪಡಿಸಿದೆ. ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರನ್ನು ಕಡ್ಡಾಯವಾಗಿ …
Read More »ವಿಧಾನಮಂಡಲ ಅಧಿವೇಶನ ಹಿನ್ನೆಲೆ ಫೆ. 9ರಂದು ಶಾಸಕರಿಗೆ ತರಬೇತಿ
ಬೆಂಗಳೂರು: ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರಿನ ಐಐಎಂನಲ್ಲಿ ಫೆಬ್ರವರಿ 9ರಂದು ಶಾಸಕರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಬಜೆಟ್ ಅಧಿವೇಶನದ ಸ್ವರೂಪ, ಚರ್ಚೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುವುದು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ಫೆಬ್ರವರಿ 12ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದು, ಫೆ. 16ರಂದು ಮುಖ್ಯಮಂತ್ರಿಗಳು …
Read More »ಉಚಿತವಾಗಿ ‘ಆಧಾರ್’ ಕಾರ್ಡ್ ಅಪ್ ಡೇಟ್ ಮಾಡಲು ಮಾ.14 ಕೊನೆಯ ದಿನ
ನವದೆಹಲಿ: ಆಧಾರ್ ಕಾರ್ಡ್ ನಲ್ಲಿ ನಿಮ್ಮ ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದರೆ, ಅಥವಾ ನೀವು ಹೆಸರನ್ನು ಸರಿಪಡಿಸಲು ಬಯಸಿದರೆ, ನೀವು ಮನೆಯಲ್ಲಿ ಕುಳಿತು ನಿಮ್ಮ ಸ್ವಂತ ಮೊಬೈಲ್ನಿಂದ ಆಧಾರ್ ಅನ್ನು ನವೀಕರಿಸಬಹುದು. ಇದಕ್ಕಾಗಿ ಯಾವುದೇ ಶುಲ್ಕ ಇರುವುದಿಲ್ಲ.ನೀವು ಇನ್ನೂ ಕೂಡ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಸಿಲ್ವಾ..? ಹಾಗಾದರೆ ಮಾರ್ಚ್ 14 ರೊಳಗೆ ಈ ಕೆಲಸ ಮಾಡಿ. ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಅನ್ನು ಉಚಿತವಾಗಿ ನವೀಕರಿಸುವ …
Read More »ಎಂಕೆ ಹುಬ್ಬಳ್ಳಿ ಧ್ವಜ ತೆರವು: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ಗಲಾಟೆಗೆ ಕಾರಣ ಎಂದ ಬೆಳಗಾವಿ ಎಸ್ಪಿ
ಬೆಳಗಾವಿ, : ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಕ್ಕೆ ಅವಕಾಶ ಇಲ್ಲ ಎಂದುಬೆಳಗಾವಿ (Belagavi)ಎಸ್ಪಿ ಭೀಮಾಶಂಕರ ಗುಳೇದ್ ಹೇಳಿದ್ದಾರೆ. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದ ಸಂಬಂಧ ಮಾತನಾಡಿದ ಅವರು, ಸರ್ಕಾರ, ಅಧಿಕಾರಿಗಳ ತೀರ್ಮಾನದಂತೆ ನಾವು ನಡೆಯುತ್ತೇವೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ಗಲಾಟೆಗೆ ಕಾರಣವಾಗಿರುವ ಹಿನ್ನೆಲೆ ಸಾಮಾಜಿಕ ಜಾಲತಾಣ ಮೇಲೆ ನಿಗಾ ಇಟ್ಟಿದ್ದೇವೆ. ಯಾರೇ ತಪ್ಪು ಮಾಡಿದರೂ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಗ್ರಾಮದಲ್ಲಿ ಎಲ್ಲರೂ …
Read More »