Breaking News

ರಾಷ್ಟ್ರೀಯ

ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಕಲಬುರಗಿ : ಕೃಷಿ ಜಮೀನೊಂದರಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆ ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಇದೀಗ ಹಳೆ ದ್ವೇಷದ ಹಿನ್ನೆಲೆ ಹತ್ಯೆ ಮಾಡಿರರಬಹುದೆಂದು ಶಂಕೆ ವ್ಯಕ್ತವಾಗುತ್ತಿದೆ. ಹೌದು ಕಲಬುರಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ನಾಗೂರ ಗ್ರಾಮದ ಖಾಸಗಿ ಕೃಷಿ ಜಮೀನಿನ ದಂಡೆಯಲ್ಲಿ ಅರ್ಧ ಸುಟ್ಟಿರುವ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಒಂದು ದಿನ ಹಿಂದೆ ಈ ಕೊಲೆ ನಡೆದಿರಬಹುದೆಂಬ ಅನುಮಾನ ಹುಟ್ಟಿಕೊಂಡಿದೆ. …

Read More »

ಕುಂದ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ 50 ಲಕ್ಷ ರೂ. ಬಿಡುಗಡೆ

ಬೆಂಗಳೂರು ಮಂಗಳುರು ವಿಶ್ವವಿದ್ಯಾಲಯದಲ್ಲಿ ‘ಕುಂದ ಕನ್ನಡ ಭಾಷೆಯ ಅಧ್ಯಯನ ಪೀಠ’ ಸ್ಥಾಪನೆಗೆ 50 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಪೀಠ ಸ್ಥಾಪನೆಗೆ 2022ರ ಮೇ 16ರಂದು ನಡೆದಿದ್ದ ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ವಿವಿ ಆಂತರಿಕ ಸಂಪನ್ಮೂಲದಿಂದ ಅಧ್ಯಯನ ಪೀಡ ಸ್ಥಾಪಿಸಲು 25 ಲಕ್ಷ ರೂ.ಗಳನ್ನು ಮೀಸಲಿಡಲು ನಿರ್ಣಯಿಸಲಾಗಿತ್ತು. ಬಳಿಕ ವಿವಿಗಳ ಅಧ್ಯಯನ ಪೀಠಗಳನ್ನು ಸ್ಥಾಪಿಸುವ ಮತ್ತು ಪೀಠಗಳ ಸಂಖ್ಯೆಯನ್ನು ನಿರ್ಧರಿಸುವ ಸಂಬಂಧ ಕಾರ್ಯ ನೀತಿಯನ್ನು ರೂಪಿಸುವ ಬಗ್ಗೆ …

Read More »

ನಾಳೆಯಿಂದ 5 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್

ಬೆಂಗಳೂರು: ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರವೂ ವರುರ್ಣಾಭಟ ಮುಂದುವರಿದಿದೆ. ಶಿವಮೊಗ್ಗದ ಆಗುಂಬೆ, ಕೊಡಗಿನ ಗೋಣಿಕೊಪ್ಪ ಸೇರಿ ಕರಾವಳಿಯಲ್ಲಿ ಮಳೆ ತೀವ್ರತೆ ಇನ್ನಷ್ಟು ಜಾಸ್ತಿಯಾಗಿದ್ದು, ಜಲಾಶಯಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್​ ಅರ್ಲಟ್​ ಘೋಷಿಸಿದೆ. ಈ ಸಂದರ್ಭದಲ್ಲಿ 204 ಮಿಮೀ …

Read More »

ಚಿಂಚೋಳಿ | ಬ್ರಿಜ್‌ ಕಂ ಬ್ಯಾರೇಜ್‌ ಬಹುತೇಕ ಪೂರ್ಣ

ಚಿಂಚೋಳಿ: ತಾಲ್ಲೂಕಿನ ಅಣವಾರ ಗಂಗನಪಳ್ಳಿ ನಡುವೆ ಬ್ರಿಜ್‌ ಕಂ ಬ್ಯಾರೇಜ್‌ ಕನಸು ಕಾಣುತ್ತಿದ್ದ ಗ್ರಾಮಸ್ಥರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನೆರವಿಗೆ ಧಾವಿಸಿದ್ದು, ದಶಕಗಳ ಕನಸು ನನಸಾಗಲಿದೆ. ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಅಂದಾಜು ₹ 10 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್‌ ಮಂಜೂರಾಗಿದ್ದು, ಹಗಲಿರುಳು ಕಾಮಗಾರಿ ನಡೆಸಿ, ಮೂರು ತಿಂಗಳಲ್ಲಿಯೇ ಬಹುತೇಕ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. 108 ಮೀಟರ್ ಉದ್ದ, 3 ಮೀಟರ್ ಎತ್ತರದ 5.5 ಮೀಟರ್ ಅಗಲದ …

Read More »

ವಾಲ್ಮೀಕಿ ನಿಗಮದ ಅಕ್ರಮದ ಆರೋಪಿ ಶಾಸಕ ಬಸನಗೌಡ ದದ್ದಲ್‌ ಪರಾರಿ

ಬೆಂಗಳೂರು,ಜು.14- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣದ ಆರೋಪಿ ಶಾಸಕ ಬಸನಗೌಡ ದದ್ದಲ್‌ ಅವರು ಪಶ್ಚಿಮ ಬಂಗಾಳ ಅಥವಾ ಹೈದರಾಬಾದ್‌ಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ತಲೆಮರೆಸಿಕೊಂಡಿರುವ ದದ್ದಲ್‌ ಅವರ ಪತ್ತೆಗೆ ಜಾರಿ ನಿರ್ದೇಶನಾಲಯ(ಇಡಿ) ಬಲೆ ಬೀಸಿದೆ. ಬಸನಗೌಡ ದದ್ದಲ್‌ ಅವರು ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌‍ಐಟಿ ಎದುರು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರ ಮತ್ತೆ ವಿಚಾರಣೆಗೆ ಬರುವಂತೆ ಎಸ್‌‍ಐಟಿ ಅಧಿಕಾರಿಗಳು ಸೂಚಿಸಿದ್ದರು. …

Read More »

ಹಳೇ ಸ್ಪ್ಲೆಂಡರ್ ಬೈಕ್‌ ಹೊಂದಿರುವವರಿಗೆ ಗುಡ್‌ನ್ಯೂಸ್‌

ಆಟೋಮೊಬೈಲ್‌ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ಅತೀ ಕಡಿಮೆ ಬೆಲೆ ಹಾಗೂ ಅತೀ ಹೆಚ್ಚು ಮೈಲೇಜ್‌ ನೀಡುವ ಬೈಕ್‌ಗಳಲ್ಲಿ ಹಿರೋ ಕೂಡ ಒಂದಾಗಿದ್ದು, ಇದರ ಮಾರಾಟದಲ್ಲೂ ಭಾರೀ ಪೈಪೋಟಿ ಏರ್ಪಟ್ಟಿದೆ. ಮೊದಲಿಗೆ ಹಿರೋ ಹೊಂಡಾ ಎರಡು ಒಂದೇ ಕಂಪನಿ ಆಗಿದ್ದವು. ಇದೀಗ ಇವೆರಡು ಬೇರೆ ಬೇರೆ ಆಗಿದ್ದು, ಹಿರೋ ಕಂಪನಿ ಇದೀಹ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ. ಮೊದಲಿನಿಂದಲೂ ಬಜಾಜ್‌ ಪ್ಲಾಟೀನ ಬಿಟ್ಟರೆ, ಭಾರತದ …

Read More »

ಮಾಜಿ ಸಚಿವ ನಾಗೇಂದ್ರಗೆ ಇಡಿ ಗ್ರಿಲ್

ಬೆಂಗಳೂರು,ಜು.14- ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಇ.ಡಿ ಅಧಿಕಾರಿಗಳು ವಾಲೀಕಿ ನಿಗಮದ ಬಹುಕೋಟಿ ಹಗರಣದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ನಿಗಮದ ಅಕ್ರಮ ಹಣ ವರ್ಗಾವಣೆ ಬಗ್ಗೆ ಬಿ.ನಾಗೇಂದ್ರ ಅವರನ್ನು ಶುಕ್ರವಾರ ಬಂಧಿಸಿದ್ದ ಇ.ಡಿ ಅಧಿಕಾರಿಗಳು ಶನಿವಾರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯ ಆರು ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿದೆ. ನಾಗೇಂದ್ರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಇ.ಡಿ ಅಧಿಕಾರಿಗಳು ಪ್ರಕರಣಕ್ಕೆ …

Read More »

ಹಲವು ವರ್ಷಗಳಿಂದ ಒಂದೇ ಸ್ಥಳ, ಕಂದಾಯ ಇಲಾಖೆ ಅಧಿಕಾರಿಗಳ ಪಟ್ಟಿ ಕೇಳಿದ ಸಚಿವರು

ಬೆಂಗಳೂರು, ಜುಲೈ 14: ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ಪಟ್ಟಿ ತಯಾರಾಗುತ್ತಿದೆ. ಸ್ವತಃ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ. ಕಂದಾಯ ಸಚಿವರ ಸೂಚನೆ ಮೇರೆಗೆ ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಪತ್ರವನ್ನು ಬರೆದಿದ್ದಾರೆ. ಸಚಿವರು ಈ ಪತ್ರವನ್ನು ಟ್ವೀಟ್ ಮಾಡಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಸಚಿವ …

Read More »

46 ವರ್ಷಗಳ ಬಳಿಕ ಪುರಿ ಜಗನ್ನಾಥ ದೇಗುಲದ ‘ರತ್ನ ಭಂಡಾರ’ದ ಬಾಗಿಲು ಓಪನ್

ಪುರಿ: ನಾಲ್ಕು ದಶಕಗಳ ನಂತರ ಶ್ರೀ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ (ನಿಧಿ ಭಂಡಾರ) ಭಾನುವಾರ ತೆರೆಯಲ್ಪಟ್ಟಿದೆ. ಒಡಿಶಾ ಸರ್ಕಾರ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಅನುಸರಿಸಿ ಶ್ರೀ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆರೆಯಲಾಯಿತು. ಶನಿವಾರ, ಒಡಿಶಾ ಸರ್ಕಾರವು ರತ್ನ ಭಂಡಾರ್ ತೆರೆಯಲು ಅನುಮೋದನೆ ನೀಡಿತು, ಅಲ್ಲಿ ಸಂಗ್ರಹಿಸಿದ ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳ ಆವಿಷ್ಕಾರವನ್ನು ಕೈಗೊಂಡ ನಂತರ ಈ ಕ್ರಮವಹಿಸಲಾಯಿತು. ಈ ಸಂದರ್ಭದ ನೆನಪಿಗಾಗಿ, ಒಡಿಶಾದ …

Read More »