Breaking News

ರಾಷ್ಟ್ರೀಯ

ಸಮವಸ್ತ್ರ ಧರಿಸಿ 5 ಗಂಟೆ ಗಸ್ತು: ಪೊಲೀಸರಿಗೆ ಐಜಿಪಿ ಆದೇಶ

ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ 11ರ ವರೆಗೆ ಹಾಗೂ ಸಾಯಂಕಾಲ 6ರಿಂದ ರಾತ್ರಿ 9ರ ವರೆಗೆ ಒಟ್ಟು 5 ಗಂಟೆ ಗಸ್ತು ತಿರುಗುವಂತೆ ರಾಜ್ಯ ಡಿಜಿ-ಐಜಿಪಿ ಆಲೋಕ್‌ ಮೋಹನ್‌ ಪೊಲೀಸರಿಗೆ ಆದೇಶಿಸಿದ್ದಾರೆ. ಕಮಿಷನರೆಟ್‌ ವ್ಯಾಪ್ತಿಯಲ್ಲಿ ಡಿಸಿಪಿಗಳು, ಜಿಲ್ಲೆಗಳಲ್ಲಿ ಎಸ್‌ಪಿ ನೇತೃತ್ವದಲ್ಲಿ ಪೊಲೀಸರು ಗಸ್ತು ತಿರುಗಬೇಕು. ಪ್ರಮುಖ ಅಪರಾಧ ಪ್ರಕರಣಗಳು ಘಟಿಸಿದಾಗ ಸ್ಥಳಕ್ಕೆ ಭೇಟಿ ನೀಡಬೇಕು. ಆಯಾ ವಲಯ ಐಜಿಪಿಗಳು, ಹೆಚ್ಚುವರಿ ಪೊಲೀಸ್‌ ಆಯುಕ್ತರು ಠಾಣೆಗಳಿಗೆ ಭೇಟಿ ನೀಡಬೇಕು. ಶಾಲಾ ಕಾಲೇಜು …

Read More »

ಕೃಷ್ಣಾ- ಪಂಚಗಂಗಾ ನದಿಗಳ ಸಂಗಮ ಕ್ಷೇತ್ರದ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತಮಂದಿರ ಜಲಾವೃತ

ಚಿಕ್ಕೋಡಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ಮತ್ತು ಪಂಚಗಂಗಾ ನದಿ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಗಡಿಭಾಗದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತ ಮಂದಿರ ಜಲಾವೃತಗೊಂಡಿದೆ. ಕೃಷ್ಣಾ ನದಿ ಮತ್ತು ಪಂಚಗಂಗಾ ನದಿ ಸಂಗಮ ಕ್ಷೇತ್ರವಾದ ನರಸಿಂಹವಾಡಿ ಶ್ರೀ ದತ್ತ ದೇವಸ್ಥಾನಕ್ಕೆ ಮಂಗಳವಾರ ನೀರು ನುಗ್ಗಿದೆ. ದೇವವಸ್ಥಾನ ಅರ್ಧ ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ದೇವಸ್ಥಾನ …

Read More »

ಗಡಿಯಲ್ಲಿಯ ಘಾಟ್‌ ಹೆದ್ದಾರಿ ಭಾರೀ ಅಪಾಯಕಾರಿ-ಗುಡ್ಡ ಕುಸಿತಕ್ಕೆ ತಡೆ ಇಲ್ಲವೇ?

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಶುರು ವಾಯಿತೆಂದರೆ ಗಡಿ ಭಾಗ ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಹಾಗೂ ಮಣ್ಣು ಕುಸಿತ ಆಗುವುದು ಸಾಮಾನ್ಯವಾಗಿದ್ದು, ಕುಸಿತಕ್ಕೆ ತಡೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಪಶ್ಚಿಮ ಘಟ್ಟದಲ್ಲಿ ಸುರಿಯುವ ಧಾರಾಕಾರ ಮಳೆಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಅಪಾಯಕಾರಿ ಮಟ್ಟಕ್ಕೆ ತಲುಪುತ್ತವೆ. ಗುಡ್ಡ ಕುಸಿತ ಆಗುವುದು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ. …

Read More »

ಚಿಕ್ಕೋಡಿ‌ | ಸಮಸ್ಯೆಗಳ ಆಗರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್: ವಿದ್ಯಾರ್ಥಿಗಳ ಪರದಾಟ

ಚಿಕ್ಕೋಡಿ: ₹8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಆವರಣ ಗೋಡೆಯೇ ಇಲ್ಲ. ಬೋಧನೆಗೆ ಕಾಯಂ ಉಪನ್ಯಾಸಕರಿಲ್ಲ. ಕೊಳವೆಬಾವಿ ಇದ್ದರೂ, ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಕಾಲೇಜಿಗೆ ಬರಲು ಸರಿಯಾಗಿ ಬಸ್‌ ವ್ಯವಸ್ಥೆಯೂ ಇಲ್ಲ. ಹೀಗೆ ಸಾಲು ಸಾಲು ಸಮಸ್ಯೆಗಳಿಂದ ತಾಲ್ಲೂಕಿನ ಸದಲಗಾ ಹೊರವಲಯದ ಸರ್ಕಾರಿ ಪಾಲಿಟೆಕ್ನಿಕ್ ಬಳಲುತ್ತಿದೆ. ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಪ್ರಯತ್ನದಿಂದ ಇಲ್ಲಿ ಸುಸಜ್ಜಿತ ಕಟ್ಟಡ ತಲೆ ಎತ್ತಿ, …

Read More »

ಬೈಂದೂರು: ಕುಸಿಯುತ್ತಿದೆ ಸೋಮೇಶ್ವರ ಗುಡ್ಡ

ಬೈಂದೂರು: ಪಡುವರಿ ಗ್ರಾಮದ ಸೋಮೇಶ್ವರ ಗುಡ್ಡದಲ್ಲಿ ಖಾಸಗಿ ಕಟ್ಟಡಕ್ಕೆ ರಸ್ತೆ ನಿರ್ಮಿಸಿದ ಪರಿಣಾಮ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿದೆ. ನಿರಂತರ ಸುರಿಯುತ್ತಿರುವ ಮಳೆಯ ಅಬ್ಬರದ ಪರಿಣಾಮವಾಗಿ ಸೊಮೇಶ್ವರ-ದೊಂಬೆ ರಸ್ತೆಗೆ ಮಣ್ಣು ಕುಸಿಯುತ್ತಿದೆ ಎಂದು ಸಾರ್ವಜನಿಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.   ಗುಡ್ಡವು ಯಾವುದೇ ಕ್ಷಣದಲ್ಲೂ ಕುಸಿಯುವ ಸಾಧ್ಯತೆ ಇದ್ದು, ಒಂದೊಮ್ಮೆ ಕುಸಿದರೆ ರಸ್ತೆಯ ಇನ್ನೊಂದು ಪಾರ್ಶ್ವದ ಗುಡ್ಡವು ಸೋಮೇಶ್ವರ ದೇವಾಲಯದ ಆವರಣ, ಕೆರೆ ಹಾಗೂ ಸುತ್ತಮುತ್ತ ಜರಿದು ಬೀಳಲಿದೆ ಎಂದಿದ್ದಾರೆ. …

Read More »

ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆ ವರದಾನ: LICಗೆ ಶೇ 79ರಷ್ಟು ಗಳಿಕೆ

ಮುಂಬೈ: ದೇಶದ ಮೂಲ ಸೌಕರ್ಯ ವಲಯದ ಷೇರುಗಳಲ್ಲಿನ ಹೂಡಿಕೆಯು ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪಾಲಿಗೆ ವರದಾನವಾಗಿದೆ. ಒಂದು ವರ್ಷದಲ್ಲಿ ನಿಗಮದ ಷೇರಿನ ಮೌಲ್ಯದಲ್ಲಿ ಶೇ 79ರಷ್ಟು ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಎಚ್‌ಡಿಎಫ್‌ಸಿ ಲೈಫ್‌ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಕಂಪನಿಯು ಮಾಹಿತಿ ತಂತ್ರಜ್ಞಾನ, ಗ್ರಾಹಕ, ಬ್ಯಾಂಕಿಂಗ್‌, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ) ವಲಯಗಳಲ್ಲಿ ಹೆಚ್ಚು ಹೂಡಿಕೆ ಮಾಡಿವೆ. ಆದರೆ, …

Read More »

ಪ್ರಸಕ್ತ ಅಧಿವೇಶನದಲ್ಲಿ ಕನ್ನಡಿಗರಿಗೆ ಮೀಸಲಾತಿ ಮಸೂದೆ ಮಂಡನೆ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದ ಸರ್ಕಾರ

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಅಧಿವೇಶನದಲ್ಲಿ ಮಸೂದೆ ಮಂಡಿಸದಿರಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಲಾಗಿದೆ. ಕನ್ನಡಿಗರ ಮೀಸಲಾತಿ ನೀಡುವ ವಿಧೇಯಕ ಪುನರ್ ಪರಿಶೀಲಿಸಲಾಗುವುದು. ಹೀಗಾಗಿ ತಕ್ಷಣಕ್ಕೆ ಮಸೂದೆ ಮಂಡಿಸದಿರಲು ನಿರ್ಧರಿಸಲಾಗಿದೆ. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸಂತೋಷ್ ಲಾಡ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ನಾಲ್ಕು ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಕ್ಯಾಬಿನೆಟ್ ನಲ್ಲಿ ಸೂಕ್ತ …

Read More »

ಹುಬ್ಬಳ್ಳಿ | ಇಂಗ್ಲಿಷ್‌ ಮಾಧ್ಯಮ; ಶಿಕ್ಷಕರ ಕೊರತೆ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ಇನ್ನೂ ಆರು ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಇಲಾಖೆಯು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವವೂ ಸಲ್ಲಿಸಿದೆ. ಜಿಲ್ಲೆಯಲ್ಲಿ ಪ್ರಸ್ತುತ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ಶಹರ, ಕಲಘಟಗಿ, ಕುಂದಗೋಳ ಹಾಗೂ ನವಲಗುಂದದಲ್ಲಿ ತಲಾ ಒಂದೊಂದು ಶಾಲೆ ಸೇರಿ ಒಟ್ಟು 8 ಕರ್ನಾಟಕ ಪಬ್ಲಿಕ್‌ ಶಾಲೆಗಳಿವೆ (ಕೆಪಿಎಸ್‌). ಇಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಬೋಧಿಸಲಾಗುತ್ತದೆ. ‘ಪೋಷಕರು ಹಾಗೂ ವಲಯ ವ್ಯಾಪ್ತಿಯ …

Read More »

270ಕ್ಕೂ ಹೆಚ್ಚು ನಕಲಿ ಖಾತೆ ಸೃಷ್ಟಿಸಿ ಅವ್ಯವಹಾರ: ಪೊಲೀಸ್ ಬಲೆಗೆ ಸೈಬರ್ ವಂಚಕರು

ಹುಬ್ಬಳ್ಳಿ: ಸೈಬರ್ ವಂಚಕರ ಜಾಲವನ್ನು ಪತ್ತೆ ಮಾಡಿರುವ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆ ಪೊಲೀಸರು, ದೆಹಲಿಯಲ್ಲಿ ಇಬ್ಬರು ಮತ್ತು ಮುಂಬೈಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೊಬೈಲ್, ಲ್ಯಾಪ್‌ಟಾಪ್ ಸೇರಿ ಕೆಲ ದಾಖಲೆ ವಶಪಡಿಸಿಕೊಂಡು, ಕೆಲ ಬ್ಯಾಂಕ್‌ಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ₹ 60 ಲಕ್ಷ ಬಳಕೆಯನ್ನು ತಡೆ ಹಿಡಿದಿದ್ದಾರೆ.   ದೆಹಲಿಯ ನಿಖಿಲಕುಮಾರ್‌ ರೌನಿ ಮತ್ತು ಸಚಿನ್‌ ಬೋಲಾ ಹಾಗೂ ಮುಂಬೈಯ ನಿಗಮ್ ಬಂಧಿತ ಆರೋಪಿಗಳು. ಮೂವರನ್ನು ಹುಬ್ಬಳ್ಳಿಗೆ ಕರೆ ತಂದು, …

Read More »

ಪೊಲೀಸ್ ಬಲೆಗೆ ಸೈಬರ್ ವಂಚಕರು

ಹುಬ್ಬಳ್ಳಿ: ಸೈಬರ್ ವಂಚಕರ ಜಾಲವನ್ನು ಪತ್ತೆ ಮಾಡಿರುವ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆ ಪೊಲೀಸರು, ದೆಹಲಿಯಲ್ಲಿ ಇಬ್ಬರು ಮತ್ತು ಮುಂಬೈಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೊಬೈಲ್, ಲ್ಯಾಪ್‌ಟಾಪ್ ಸೇರಿ ಕೆಲ ದಾಖಲೆ ವಶಪಡಿಸಿಕೊಂಡು, ಕೆಲ ಬ್ಯಾಂಕ್‌ಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ₹ 60 ಲಕ್ಷ ಬಳಕೆಯನ್ನು ತಡೆ ಹಿಡಿದಿದ್ದಾರೆ. ದೆಹಲಿಯ ನಿಖಿಲಕುಮಾರ್‌ ರೌನಿ ಮತ್ತು ಸಚಿನ್‌ ಬೋಲಾ ಹಾಗೂ ಮುಂಬೈಯ ನಿಗಮ್ ಬಂಧಿತ ಆರೋಪಿಗಳು. ಮೂವರನ್ನು ಹುಬ್ಬಳ್ಳಿಗೆ ಕರೆ ತಂದು, ನ್ಯಾಯಾಂಗ …

Read More »