Breaking News

ರಾಷ್ಟ್ರೀಯ

ಗೃಹಲಕ್ಷ್ಮೀ ಯೋಜನೆಯ ಹಣದಿಂದ ವಾಷಿಂಗ್ ಮಷಿನ್ ಖರೀದಿ

ಹಾವೇರಿ, ಆ.10: ಮಹಿಳೆಯರು ಕಾತರದಿಂದ ಕಾಯುತ್ತಿದ್ದ ಗೃಹಲಕ್ಷ್ಮೀ ಯೋಜನೆಯ(Gruha Lakshmi Scheme) 9 ನೇ ಕಂತು ಬಿಡುಗಡೆಯಾಗಿದ್ದು, ಅದೇ ಹಣದಿಂದ ಗೃಹಿಣಿಯೊಬ್ಬರು ಮನೆಗೆ ವಾಷಿಂಗ್ ಮಷಿನ್ ಖರೀದಿಸಿದ್ದಾರೆ. , ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಬೀಡಂ ಗ್ರಾಮದ ನಿವಾಸಿ ಚಂಪವಾತಿ ಕರೆವ್ವನವರ್ ಎಂಬ ಮಹಿಳೆ, ಗೃಹಲಕ್ಷ್ಮೀ ಹಣದಿಂದ ವಾಷಿಂಗ್ ಮಷಿನ್ ಖರೀದಿಸಿ ಪೂಜೆ ಸಲ್ಲಿಸಿದ್ದಾರೆ. ಇದೇ ಖುಷಿಯಲ್ಲಿ ಮಾತನಾಡಿದ ಅವರು, ‘ಒತ್ತಡದಿಂದ ಕೆಲಸ ಮಾಡುತ್ತಿದ್ದೆ. ಇದೀಗ ವಾಷಿಂಗ್ ಮಷಿನ್ ಖರೀದಿಯಿಂದ ಕೆಲಸದ ಹೊರೆ …

Read More »

ಶಾರುಖ್ ಖಾನ್ ಜತೆಗಿನ ಸಿನಿಮಾವನ್ನೂ ಮುಲಾಜಿಲ್ಲದೇ ರಿಜೆಕ್ಟ್ ಮಾಡಿದ್ದ ರವೀನಾ ಟಂಡನ್; ಕಾರಣ?

ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶ ಸಿಕ್ಕರೆ ಬಹುತೇಕ ನಟಿಯರು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಇದೆ ಶಾರುಖ್​ ಹವಾ. ಆದರೆ ನಟಿ ರವೀನಾ ಟಂಡನ್​ ಅವರು ಈ ಮೊದಲು ಶಾರುಖ್​ ಖಾನ್​ ಜೊತೆಗಿನ ಒಂದು ಸಿನಿಮಾವನ್ನು ತಿರಸ್ಕರಿಸಿದ್ದರು. ಆ ಕುರಿತು ಅವರು ಈಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಶಾರುಖ್​ ಖಾನ್ ಮತ್ತು ರವೀನಾ ಟಂಡನ್​ ಅವರು ಜೊತೆಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಒಂದು ಸಿನಿಮಾದಿಂದ ರವೀನಾ ಟಂಡನ್​ ಅವರು …

Read More »

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ 200 ವರ್ಷವಾಯ್ತು,

ಕಿತ್ತೂರು ಸ್ವತಂತ್ರ ಸಂಸ್ಥಾನವಾಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಯುದ್ಧ ಸಿದ್ಧತೆಗಳನ್ನು ಪೂರೈಸಿಕೊಳ್ಳುವವರೆಗೆ ಸಂಧಾನದ ಮಾತು ಆಡುತ್ತಿದ್ದ ಬ್ರಿಟಿಷರು ತಮ್ಮ ಯುದ್ಧ ಖೈದಿಗಳು ಬಿಡುಗಡೆ ಆಗುತ್ತಲೇ ಆಧುನಿಕ ಯುದ್ಧ ಸಾಮಗ್ರಿಗಳೊಂದಿಗೆ ಯುದ್ಧ ಆರಂಭಿಸಿಯೇ ಬಿಟ್ಟರು. ಬ್ರಿಟಿಷರಿಗೆ ಕಿತ್ತೂರು ಕೋಟೆಯಲ್ಲಿದ್ದ ವಿದ್ರೋಹಿಗಳು ಕೈಜೋಡಿಸಿದರು. ಕೋಟೆಯಲ್ಲಿದ್ದ ಮದ್ದಿನ ಮನೆಯಲ್ಲಿ ಮೋಸ ಮಾಡಿಬಿಟ್ಟರು. ಬ್ರಿಟಿಷರ ಫಿರಂಗಿಗಳು ಕಿತ್ತೂರಿನ ಕೋಟೆಯ ಭಾಗಗಳನ್ನು ಕೆಡವಿದವು. ಕಿತ್ತೂರು ಕಾಪಾಡಲು, ದೇಶವಾಸಿಗಳ ರಕ್ಷಣೆಗೆ ಚೆನ್ನಮ್ಮ ಯತ್ನಿಸುತ್ತಿದ್ದರೆ ಕಿತ್ತೂರು ಸೈನಿಕರು ಕೆಚ್ಚೆದೆಯಿಂದ ಹೋರಾಟ ಮುಂದುವರಿಸಿದರು. …

Read More »

ಗೃಹಲಕ್ಷ್ಮಿ ಹಣ ವಿಳಂಬವಾಗುತ್ತಿರುವುದೇಕೆ?

ಬೆಂಗಳೂರು, ಆಗಸ್ಟ್ 10: ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗಳಿಗೆ ವರ್ಗಾವಣೆಯಾಗದೇ ಇರುವುದು, ಎರಡ್ಮೂರು ತಿಂಗಳುಗಳಿಂದ ಬಾಕಿ ಇರುವ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಹಣ ವರ್ಗಾವಣೆ ಯಾಕೆ ವಿಳಂಬವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಗೃಹಲಕ್ಷ್ಮಿ ಯೋಜನೆಗೆ ಪ‌್ರತಿ ತಿಂಗಳಿಗೆ 2,400 ಕೋಟಿ ರೂ. ಖರ್ಚಾಗುತ್ತಿದೆ. ಮಂಡ್ಯದಲ್ಲಿ ಡಿಪಿಟಿಗೆ ಪುಷ್ ಮಾಡಿ ಮೂರು ದಿನಗಳಾದವು. ಇನ್ನೂ ನಾಲ್ಕೈದು …

Read More »

ಗಂಡ ಬಿಟ್ಟಿ ಮಹಿಳೆಗೆ ಬಾಳು ಕೊಡ್ತೀನಿ ಎಂದು ಕಾರು ಚಾಲಕನಿಂದ ಮೋಸ

ಬೆಂಗಳೂರು, : ಗಂಡನನ್ನು ಬಿಟ್ಟು ಬಾಳು ಕಟ್ಟಿಕೊಂಡಿದ್ದ ಮಹಿಳೆಗೆ ಕಾರು ಚಾಲಕನೋರ್ವ ಬಾಳು ಕೊಡ್ತೀನಿ ಎಂದು ನಂಬಿಸಿ ಮೋಸ (Cheating) ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆಸಿದೆ. ಕ್ಯಾಬ್ ಚಾಲಕ ಪ್ರಜ್ವಲ್ ಎಂಬಾತ ವಿವಾಹಿತ ಮಹಿಳೆಗೆ ಬಾಳು ಕೊಡ್ತೀನಿ ಎಂದು ನಂಬಿಸಿ ಆಕೆಯ ಜೊತೆ ಕೆಲ ದಿನಗಳ ಕಾಲ ಒಟ್ಟಿಗೆ ಜೀವನ ನಡೆಸಿ ಆಕೆಯನ್ನು ಬಳಸಿಕೊಂಡು ಇದೀಗ ಬೋರಾದ್ಳು ಎಂದು ಬಿಟ್ಟು ಹೋಗಿದ್ದಾನೆ. ಘಟನೆ ಸಂಬಂಧ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ …

Read More »

ಹಳ್ಳಹಿಡಿದ ಜಲ ಜೀವನ್​ ಯೋಜನೆ: ನೀರು ಬರುವ ಮೊದಲೇ ತುಕ್ಕು ಹಿಡಿದ ಪೈಪ್​ಗಳು

ಗದಗ, ಆಗಸ್ಟ್​ 09: ಕೇಂದ್ರ ಸರ್ಕಾರ ಪ್ರತಿ ಗ್ರಾಮಗಳ ಮನೆ ಮನೆಗೆ ಕುಡಿಯುವ ನೀರು (water) ಪೂರೈಕೆ ಮಾಡುವ ಉದ್ದೇಶದಿಂದ ಜಲ ಜೀವನ ಮಷಿನ್ ಯೋಜನೆ (Jal Jeevan Yojana) ಜಾರಿ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವ್ರ ಮಹತ್ವಾಕಾಂಕ್ಷಿ ಯೋಜನೆ. ಇದು ಗದಗ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳಹಿಡಿದಿದೆ. ರಾಜ್ಯದ ಪ್ರತಿಯೊಂದು ಮನೆಗೆ ಕುಡಿಯವ ನೀರು ಸಿಗಲಿ ಅಂತ ಕೇಂದ್ರ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದೆ. ಆದ್ರೆ, ಕಾಮಗಾರಿ ಮುಗಿದು ಮೂರ್ನಾಲ್ಕು ವರ್ಷಗಳು ಕಳೆದ್ರೂ …

Read More »

ಆಲಮಟ್ಟಿ ಡ್ಯಾಂ ಭರ್ತಿಗೆ ಕಲವೇ ಅಡಿ ಬಾಕಿ,

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿದೆ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಇದರಿಂದ ಆಲಮಟ್ಟಿ ಜಲಾಶಯಾಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾದರೆ ಆಲಮಟ್ಟಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Read More »

ಇಬ್ಬರ ಮನೆಯಲ್ಲಿ ಪ್ರೀತಿಗೆ ವಿರೋಧ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಾಗಲಕೋಟೆ : ಮನೆಯಲ್ಲಿ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನನೊಂದು ಯುವಕ ಮತ್ತು ಯುವತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಗಾಂವ್ ಗ್ರಾಮದಲ್ಲಿ ನಡೆದಿದೆ.‌ ರಬಕವಿ – ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದ ಸಚಿನ್ ಭೀಮಪ್ಪ ದಳವಾಯಿ ( 22 ) ಹಾಗೂ ಪ್ರೀಯಾ ಮಲ್ಲಪ್ಪ ಮಡಿವಾಳ ( 19 ) ನಾಗರಪಂಚಮಿ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಯುವಕ ಹಾಗೂ ಯುವತಿ …

Read More »

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಇಒ ಶಿಂಧೆ ಭೇಟಿ

ಬೈಲಹೊಂಗಲ: ತಾಲ್ಲೂಕಿನ ಉಡಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ  ಭೇಟಿ ನೀಡಿ, ಪರಿಶೀಲಿಸಿದರು. ‘ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಸಾಂಕ್ರಾಮಿಕ ಕಾಯಿಲೆಗಳು ಉದ್ಭವಿಸುತ್ತಿದ್ದು, ರೋಗಿಗಳ ಆರೋಗ್ಯವಂತರನ್ನಾಗಿ ಮಾಡುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೈಜೊಡಿಸಬೇಕು’ ಎಂದು ಸೂಚಿಸಿದರು. ಔಷಧಿ ಕೊಠಡಿ ನಿರ್ವಹಣೆ, ವಿತರಣೆ ಕುರಿತು ಮಾಹಿತಿ ಪಡೆದರು. ಕೆಂಗಾನೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಡಿಜಿಟಲ್‌ ಗ್ರಂಥಾಲಯ ವೀಕ್ಷಣೆ …

Read More »

ಜಮೀನಿಗೆ ಹಾನಿ: ಎಂಜಿನಿಯರ್‌ ಪರಿಶೀಲನೆ

ಹಿರೇಬಾಗೇವಾಡಿ: ಇಲ್ಲಿನ ಮಲ್ಲಪ್ಪನಗುಡ್ಡದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಹಾಯಕ ಎಂಜಿನಿಯರ್‌ ಅರುಣ ಕುಮಾರ ಅವರು ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು. ಕಟ್ಟಡ ಕಾಮಗಾರಿಯಿಂದ ಜಮೀನುಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ರೈತರು ಈಚೆಗೆ ಕುಲಪತಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅರುಣ ಕುಮಾರ ಅವರು, ರಸ್ತೆ ನಿರ್ಮಾಣ, ಅಂತರ್ಜಲ, ಜಮೀನುಗಳಿಗೆ ಉಂಟಾಗುವ ಹಾನಿ ತಡೆ …

Read More »