ಮುಳಬಾಗಿಲು: ತಾಲ್ಲೂಕಿನ ಮುಷ್ಟೂರು ಗ್ರಾಮ ಪಂಚಾಯಿತಿ ಕಚೇರಿಯ ಕಟ್ಟಡ ಕಾಮಗಾರಿಯು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕಟ್ಟಡದ ಮೇಲೆ ನಾನಾ ಬಗೆಯ ಬಳ್ಳಿಗಳು ಹರಡಿಕೊಂಡಿವೆ. ಅಲ್ಲದೆ, ಕಟ್ಟಡ ಸುತ್ತಲಿನ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಮುಷ್ಟೂರು ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ₹21 ಲಕ್ಷ ವೆಚ್ಚದಲ್ಲಿ ಆಗಿನ ಶಾಸಕ ಎಚ್.ನಾಗೇಶ್, ಪಂಚಾಯಿತಿ ಕಾರ್ಯಾಲಯದ ಕಾಮಗಾರಿಗೆ ಚಾಲನೆ ನೀಡಿದ್ದರು. ತಮ್ಮ ಅಧಿಕಾರದ ಅವಧಿಯಲ್ಲೇ ಕಟ್ಟಡ ಉದ್ಘಾಟನೆ ಮಾಡಬೇಕು ಎಂಬ ಕಾರಣಕ್ಕೆ ತರಾತುರಿಯಲ್ಲಿ ಕಟ್ಟಡದ ಒಳಗೆ …
Read More »ಸಂತ್ರಸ್ತರೊಂದಿಗೆ ಸರ್ಕಾರವಿದೆ: ಸಚಿವ ತಿಮ್ಮಾಪುರ
ಮುಧೋಳ: ಘಟಪ್ರಭಾ ಪ್ರವಾಹದಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ನಾನೂ ಸಹ ನಿರಂತರವಾಗಿ ಶ್ರಮಿಸುತ್ತಿದ್ದು ರೈತರು ಹಾಗೂ ಸಂತ್ರಸ್ತರು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮನವಿ ಮಾಡಿದ್ದಾರೆ. ‘ಸರ್ಕಾರದ ಮಟ್ಟದಲ್ಲಿ ಸಂತ್ರಸ್ತರಿಗೆ ಹಾಗೂ ಬೆಳೆಹಾನಿಯಾದ ರೈತರಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಅನ್ವಯ ಪರಿಹಾರ ಒದಗಿಸುವ ಸಲುವಾಗಿ ಹಾಗೂ ಪರಿಹಾರ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸುವ ಸಲುವಾಗಿ …
Read More »ರಾಜ್ಯ ಸರ್ಕಾರದಿಂದ 6 ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ 6 ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕುರಿತಂತೆ ಅಧಿಸೂಚನೆಯನ್ನು ಹೊರಡಿಸಿರುವಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ಅವರು, ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಹಾಗೂ ವಿವಿಧ ರಂಗಾಯಣಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ನೇಮಕ ಮಾಡಿ ಆದೇಶಿಸಿದ್ದಾರೆ. ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರ ನೇಮಕ ಘೋಷಣೆ ಮಾಡಿದ …
Read More »ಗುಲಬರ್ಗಾ ವಿವಿ ಘಟಿಕೋತ್ಸವ: ರೈತನ ಮಗಳಿಗೆ 13 ಚಿನ್ನದ ಪದಕ
ಕಲಬುರಗಿ: ಗ್ರಾಮೀಣ ಭಾಗದ ಕೃಷಿ ಕುಟುಂಬದಿಂದ ಬಂದ ಆನಂದಮ್ಮ ಅವರು ಕನ್ನಡ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ಚಿತ್ತಾಪುರ ತಾಲ್ಲೂಕಿನ ದಿಗ್ಗಾಂವ ಗ್ರಾಮದ ರೈತ ದೇವಿಂದ್ರಪ್ಪ ಅವರ ಪುತ್ರಿ ಆನಂದಮ್ಮ. ಗುಲಬರ್ಗಾ ವಿವಿಯ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ 42ನೇ ಘಟಿಕೋತ್ಸವದಲ್ಲಿ ಮಗಳು ಚಿನ್ನದ ಪದಕ ಮತ್ತು ಪದವಿ ಪಡೆಯುವುದನ್ನು ಕೃಷಿಕರಾದ ದೇವಿಂದ್ರಪ್ಪ ಅವರು ಕುಟುಂಬ ಸಮೇತ ಬಂದು ಕಣ್ತುಂಬಿಕೊಂಡರು. ಜೇವರ್ಗಿ ತಾಲ್ಲೂಕಿನ ಯನಗುಂಟಿ ಸರ್ಕಾರಿ ಶಾಲೆಯ …
Read More »ನೀರಜ್ ಚೋಪ್ರಾ ಮತ್ತು ಮನು ಭಾಕರ್ ಮದುವೆ?
ಮನು ಭಾಕರ್ ಮತ್ತು ನೀರಜ್ ಚೋಪ್ರಾ ಭಾರತದ ಹೆಮ್ಮೆಯ ಕ್ರೀಡಾಪಟುಗಳು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕೆರ್ ಎರಡು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತದ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಕಳೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮನು ಭಾಕರ್ ಶೂಟಿಂಗ್‌ನಲ್ಲಿ ಎರಡು ಪದಕ ಗೆದ್ದರೆ, ನೀರಜ್ …
Read More »ಸಿದ್ದರಾಮೇಶ್ವರ ಅಜ್ಜ ನಿಧನ
ಹರಪನಹಳ್ಳಿ (ವಿಜಯನಗರ ಜಿಲ್ಲೆ): ಬಸವತತ್ವ ಪ್ರಚಾರಕ್ಕೆ ಲೋಕ ಸಂಚಾರ ಕೈಗೊಂಡು ಬಸವ ಕಲ್ಯಾಣದಲ್ಲಿ ನೆಲೆಸಿ, ಸ್ವಗ್ರಾಮ ತಾಲ್ಲೂಕಿನ ಮತ್ತಿಹಳ್ಳಿಗೆ ಮರಳಿದ್ದ ಶತಾಯುಷಿ ಶಿವರಾಮಪ್ಪ(104) ಸೋಮವಾರ ನಿಧನರಾದರು. ಅವರಿಗೆ ಮೂವರು ಪುತ್ರರು ಇದ್ದಾರೆ. 50 ವರ್ಷಗಳ ಹಿಂದೆ ಶಿವರಾಮಪ್ಪ ಅವರು ಬಸವ ತತ್ವ ಪ್ರಚಾರಕ್ಕಾಗಿ ಊರು ತೊರೆದು, ಬಸವಕಲ್ಯಾಣದಲ್ಲಿ ನೆಲೆಸಿ ‘ಸಿದ್ದರಾಮೇಶ್ವರ ಅಜ್ಜ’ ಎಂದು ಪ್ರಸಿದ್ಧಿ ಪಡೆದಿದ್ದರು. ಬಸವಕಲ್ಯಾಣದ ಅನುಭವ ಮಂಟಪದ ಸಂಚಾಲಕರಾಗಿದ್ದರು. ‘ಅಂತ್ಯಕ್ರಿಯೆ ಅವರ ಸ್ವಗ್ರಾಮ ಮತ್ತಿಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ 12 …
Read More »ಕೇಂದ್ರ ನಾಯಕರು ಮಧ್ಯಪ್ರವೇಶಿಸದಿದ್ದರೆ ಪಕ್ಷ ಎರಡಾಗುತ್ತದೆ: ಈಶ್ವರಪ್ಪ
ಶಿವಮೊಗ್ಗ: ಬಿಜೆಪಿಯ 12 ಜನ ಸಭೆ ಬೆಳಗಾವಿಯಲ್ಲಿ ಸಭೆ ನಡೆಸಿದ್ದು ನನಗೆ ಆಘಾತವಾಗಿದೆ. ಇವರು ಸಂಘಟನೆಯಲ್ಲಿದ್ದವರು, ಪಕ್ಷವನ್ನು ಕಟ್ಟಿದ್ದಾರೆ. ಏನೇನು ನೋವು ಅನುಭವಿಸಿದ್ದಾರೆಂದು ಅವರು ಹೇಳಿಕೊಂಡಿಲ್ಲ. ಅವರು ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ. 12 ಜನ ಮಾತ್ರ ಸಭೆ ನಡೆಸಿದ್ದಾರೆಂದು ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬೆಳಗಾವಿಯ ನಂತರ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅವರು ಪಾದಯಾತ್ರೆ …
Read More »ಫೇಸ್ ಬುಕ್ ಗೆಳತಿಯನ್ನು ನಂಬಿ 11 ಲಕ್ಷ ಕಳೆದುಕೊಂಡ ಕಾರ್ಕಳದ ಮಹಿಳೆ
ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಯವಾದ ಮಹಿಳೆಯನ್ನು ನಂಬಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಹಿಳೆಯೊಬ್ಬರು 11 ಲಕ್ಷಕ್ಕೂ ಹೆಚ್ಚು ಮೊತ್ತ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳ ತಾಲೂಕಿನ ಮಿಯಾರಿನ ಕುಂಟಿಬೈಲಿನ 38 ವರ್ಷದ ನಿವಾಸಿಯೊಬ್ಬರಿಗೆ ಫೇಸ್ ಬುಕ್ ಮೂಲಕ ಮಾರ್ಕ್ ಸೀಮಾ ಎಂಬವರು ಪರಿಚಯವಾಗಿದ್ದರು. ಗೆಳೆತನದಲ್ಲಿ ಅವರು ತಮ್ಮ ವಿಳಾಸವನ್ನು ನೀಡಿದ್ದರು. ಅವರ ನಂಬರಿನಿಂದ ಸುನಿತಾ ಕುಮಾರಿ ಎಂಬವರು ಮಹಿಳೆಗೆ ಲಂಡನ್ ನಿಂದ ಚಿನ್ನದ …
Read More »ಬೆಳಗಾವಿಯಲ್ಲಿ ನಡೆದಿದ್ದು ಬಿಜೆಪಿಯ ಗೌಪ್ಯ ಸಭೆಯಲ್ಲ: ಅರವಿಂದ್ ಬೆಲ್ಲದ್
ಧಾರವಾಡ: ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ ಹಾಗೂ ಸಿದ್ದೇಶ್ವರ ಅವರು ಗೌಪ್ಯವಾಗಿ ಸಭೆ ಮಾಡಿಲ್ಲ. ಬದಲಾಗಿ ಬಹಿರಂಗವಾಗಿಯೇ ಮಾಡಿದ್ದಾರೆ. ಅದೇನು ಗೌಪ್ಯ ಸಭೆಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ವಿಚಾರದಲ್ಲಿ ಕೆಲವೊಂದಿಷ್ಟು ವಿಚಾರಗಳನ್ನು ಪಕ್ಷದೊಳಗೆ ಚರ್ಚೆ ಮಾಡಬೇಕಿದೆ. ಪಕ್ಷದೊಳಗೆ ಕುಳಿತು ಎಲ್ಲರೂ ಮಾತನಾಡುವ ಅವಶ್ಯಕತೆಯಿದೆ. ಅದನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ …
Read More »‘ಚಿಲ್ಲರೆ’ ವಿಚಾರಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಕಂಡಕ್ಟರ್
ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಬಿಎಂಟಿಸಿ ಕಂಡಕ್ಟರ್ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. 5 ರೂ ಚಿಲ್ಲರೆ ಕೊಡುವ ವಿಚಾರಕ್ಕೆ ಕಂಡಕ್ಟರ್ ಅಭಿನವ್ ರಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಗಸ್ಟ್ 6 ರಂದು ಅಭಿನವ್ ರಾಜ್ ಮೇಲೆ ಹಲ್ಲೆ ನಡೆದಿತ್ತು, ನಂತರ ಅಭಿನವ್ ಬಿಎಂಟಿಸಿಗೆ …
Read More »