ಮೈಸೂರು: ಡ್ರಗ್ಸ್ ದಂಧೆ ಕುರಿತು ತನಿಖೆ ನಡೆಯುತ್ತಿರುವಾಗಲೇ ಈ ವಿಚಾರ ರಾಜಕೀಯವಾಗಿದ್ದು, ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಇದೀಗ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ಮಾಜಿ ಸಚಿವ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಕಿಡಿ ಕಾರಿರುವ ಅವರು, ಡ್ರಗ್ಸ್ ದಂಧೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್‍ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲಂ ನೋಡುವ ಅಡಿಕ್ಷನ್ …
Read More »ಮೈಸೂರಿನ ಪ್ರತಿಷ್ಠಿತ ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತೆ: ಮುತಾಲಿಕ್
ಮೈಸೂರು: ಜಿಲ್ಲೆಯ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ-ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಸಿಗುತ್ತದೆ. ಮೈಸೂರಿನ ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತೆ. ಇದು ಪೋಷಕರು, ಪಾಲಕರು, ಶಿಕ್ಷಕರಿಗೆ ಗೊತ್ತಿದೆ. ಆದ್ರೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಹೇಳಿದರು. ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್‍ಗಳ …
Read More »ಹೆತ್ತ ಮಗಳನ್ನೇ ಎರಡನೇ ಗಂಡನ ಜೊತೆ ಸೇರಿ ಕೊಂದ ತಾಯಿ
ಮೈಸೂರು : ಸ್ವಂತ ತಾಯಿಯೇ ಹೆತ್ತ ಮಗುವನ್ನು ಕೊಲೆ ಮಾಡಿದ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಪವಿತ್ರ ಎಂಬಾಕೆ ಮಗಳು ಜಯಲಕ್ಷ್ಮೀ (6) ಹತ್ಯೆ ಮಾಡಿದ್ದಾಳೆ.ತನ್ನ ಮೊದಲ ಗಂಡನ ಪುತ್ರಿಯನ್ನು ಎರಡನೇ ಗಂಡ ಸೂರ್ಯ ಹಾಗೂ ಅತ್ತೆ ಗೌರಮ್ಮನ ಜೊತೆ ಸೇರಿ ಹತ್ಯೆ ಮಾಡಿದ್ದಾಳೆ. ತಾನು ಹೆತ್ತ ಮಗಳನ್ನೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ತಾಯಿ ಪವಿತ್ರ, ಆಕೆಯ ಪತಿ ಸೂರ್ಯ ಹಾಗೂ ಗೌರಮ್ಮನನ್ನು ಮೇಟಗಳ್ಳಿ ಪೊಲೀಸರು …
Read More »ಜಮೀನು ವಿಚಾರದಲ್ಲಿ ರೈತರು ಪರಸ್ಪರ ಹೊಡೆದಾಡಿಕೊಂಡ ಘಟನೆ
ಮೈಸೂರು: ಜಮೀನು ವಿಚಾರದಲ್ಲಿ ರೈತರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಂಜನಗೂಡು ತಾಲೂಕು ಇಮ್ಮಾವು ಗ್ರಾಮದಲ್ಲಿ ನಡೆದಿದೆ.ರಘು ಹೆಸರಿನಲ್ಲಿದ್ದ ಅರ್ಧ ಎಕರೆ ಜಮೀನನ್ನು ಚಂದ್ರಶೇಖರ್ ಉಳುಮೆ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಜಮೀನು ಬಿಡಿಸಿಕೊಳ್ಳಲು ರಘು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ರಘು ಪರ ತೀರ್ಪು ನೀಡಿತ್ತು. ಆದರೆ ತೆರವುಗೊಳಿಸುವ ಆದೇಶ ಇನ್ನೂ ನೀಡಿರಲಿಲ್ಲ. ಇತ್ತ ತೀರ್ಪಿನ ಅನ್ವಯದಂತೆ ರಘು ಜಮೀನು ತೆರುವುಗೊಳಿಸುವಂತೆ ಒತ್ತಡ ಹೇರಿದ್ದ. ಹೀಗಾಗಿ ಕೆಲವು ರೈತರನ್ನ ಕರೆದುಕೊಂಡು ಹೋಗಿ …
Read More »ಪತ್ರಕರ್ತರಾಗಿದ್ದಾಗ ಏನೇನು ಮಾಡಿದ್ದೀಯಾ ಎಂಬುದು ಗೊತ್ತು,ಬಿ.ವೈ.ವಿಜಯೇಂದ್ರ ಅವರು 482 ಕೆಪಿಎಸ್‍ಸಿ ಹುದ್ದೆ ಮಾರಾಟ
ಮೈಸೂರು, ಆ.30- ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 482 ಕೆಪಿಎಸ್‍ಸಿ ಹುದ್ದೆ ಮಾರಾಟ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಡಿಸೆಂಬರ್‍ನಲ್ಲಿ ಆಗಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ 218 ಕೋಟಿ ಅವ್ಯವಹಾರ, ಅದರಲ್ಲಿ ಹಣ ಕೊಟ್ಟು ಪಡೆದ ದಾಖಲೆಗಳು ನಮ್ಮ ಬಳಿ ಇವೆ. ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರತಾಪ್ ಸಿಂಹ ಅವರ ಹಗರಣಗಳನ್ನು ನಾನು …
Read More »ಡಾ.ನಾಗೇಂದ್ರ ಆತ್ಮಹತ್ಯೆ ಬೆನ್ನಲ್ಲೇ ಮೈಸೂರು DC ಎತ್ತಂಗಡಿ
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ ಇಂದು ಮೈಸೂರು ಡಿಸಿ ಅಭಿರಾಂ ಜಿ ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಆಡಳಿತ ತರಬೇತಿ ಸಂಸ್ಥೆ ನಿರ್ದೇಶಕ ಹುದ್ದೆಗೆ ಅಭಿರಾಂ ಅವರನ್ನು ವರ್ಗಾವಣೆ ಮಾಡಲಾಗಿದ್ದು ನೂತನ ಜಿಲ್ಲಾಧಿಕಾರಿಯಾಗಿ ಕಲಬುರ್ಗಿ ಡಿಸಿ ಶರತ್ ಅವರನ್ನ ನೇಮಕ ಮಾಡಲಾಗಿದೆ. ಶರತ್ ಅವರು ಈ ಹಿಂದೆ ಮಂಡ್ಯ ಜಿಪಂ ಸಿಇಓ ಆಗಿದ್ದರು. ನಂಜನಗೂಡು ತಾಲೂಕಾಧಿಕಾರಿ ಡಾ.ನಾಗೇಂದ್ರ ಅವರ ಮೃತದೇಹ …
Read More »ಸಿಎಂ ಪುತ್ರ ವಿಜಯೇಂದ್ರ ಅವರು ಎಲ್ಲಾ ಇಲಾಖೆಗಳಲ್ಲೂ ಉಸ್ತುವಾರಿಗಳನ್ನು ಮಾಡಿಕೊಂಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.:ಕಾಂಗ್ರೆಸ್ ನಿಂದ ಆರೋಪ
ಮೈಸೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಮಾಡಿದೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ, ಸಿಎಂ ಪುತ್ರ ವಿಜಯೇಂದ್ರ ಅವರು ಎಲ್ಲಾ ಇಲಾಖೆಗಳಲ್ಲೂ ಉಸ್ತುವಾರಿಗಳನ್ನು ಮಾಡಿಕೊಂಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದಕ್ಕಾಗಿ 31 ಜನರ ಗುಂಪು ಕಟ್ಟಿಕೊಂಡಿದ್ದಾರೆ. ಈ 31 ಜನರ ಚಲನವಲನಗಳನ್ನು ಗಮನಿಸಿದ್ದೇದ್ದು, ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ್ದೇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಿಜಯೇಂದ್ರ ಅವರು ವರ್ಗಾವಣೆ ದಂಧೆಯಲ್ಲಿ ಕೋಟಿಗಟ್ಟಲೆ …
Read More »ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಾಗಿನ
ಮೈಸೂರು : ಜಿಲ್ಲೆಯ ಎಚ್.ಡಿ.ಕೋಟೆಯ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಬಾಗಿನ ಅರ್ಪಿಸಿದರು. ಇದೇ ವೇಳೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರುಗಳು ಭಾಗಿಯಾಗಿದ್ದರು. ಬಳಿಕ ಕಬಿನಿ ಜಲಾಶಯದ ಕೆಳಭಾಗದಲ್ಲಿ ಮೇಲ್ಮಟ್ಟದ ಸೇತುವೆ ಹಾಗೂ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಗುದ್ದಲಿಪೂಜೆ ನೆರವೇರಿಸುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಸಚಿವರಾದ ಸೋಮಶೇಖರ್, ರಮೇಶ್ ಜಾರಕಿಹೊಳಿ, ಶಾಸಕರಾದ ಎಸ್.ಎ.ರಾಮದಾಸ್, …
Read More »ನಾಳೆಯಿಂದ ನಾವು ಕೆಲಸಕ್ಕೆ ಬರುವುದಿಲ್ಲ ಎಂದು ಮೈಸೂರು ಆರೋಗ್ಯ ಇಲಾಖೆ ವೈದ್ಯರು ಸುಧಾಕರ್‌ಗೆ ಎಚ್ಚರಿಕೆ
ಮೈಸೂರು: ಆತ್ಮಹತ್ಯೆ ಮಾಡಿಕೊಂಡ ನಂಜನಗೂಡಿನ ಟಿಹೆಚ್‍ಒ ಅವರ ಅಂತಿಮ ದರ್ಶನಕ್ಕೆ ಹೋಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಮಹಿಳಾ ವೈದ್ಯೆಯೊಬ್ಬರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಆರೋಗ್ಯಾಧಿಕಾರಿ ನಾಗೇಂದ್ರ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾಗೇಂದ್ರ ಅವರು ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಅವರು ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಾಗೇಂದ್ರ ಅವರ ಅಂತಿಮ ದರ್ಶನ …
Read More »ಆಸ್ತಿಗಾಗಿ ಸಂಬಂಧಿಕರೇ ಮಹಿಳೆಯನ್ನು ಬರ್ಬರವಾಗಿ ಕೊಲೆ
ಮೈಸೂರು: ಆಸ್ತಿಗಾಗಿ ಸಂಬಂಧಿಕರೇ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಘಟನೆ ನಡೆದಿದೆ.ಹತ್ಯೆಯಾದ ಮಹಿಳೆಯನ್ನು ಬೆಟ್ಟದಪುರ ಗ್ರಾಮದ ಗಂಗಮ್ಮ (45) ಎಂದು ಗುರುತಿಸಲಾಗಿದೆ. ಆರೋಪಿಗಳು ಗಂಗಮ್ಮರನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು ಕಾವೇರಿ ನದಿಗೆ ಎಸೆದಿದ್ದಾರೆ. ಮೃತ ಗಂಗಮ್ಮಗೆ ಮಕ್ಕಳಿಲ್ಲ. ಗಂಡ ಸತ್ತು ಹೋಗಿದ್ದಾರೆ. ಆಗಸ್ಟ್ 7 ರಿಂದ ಗಂಗಮ್ಮ ನಾಪತ್ತೆಯಾಗಿದ್ದರು. ಕೊಲೆ ಆರೋಪಿಗಳು ಮದ್ಯದ ಅಮಲಿನಲ್ಲಿ ಹತ್ಯೆ ಬಗ್ಗೆ ಮಾತನಾಡಿದ್ದಾರೆ. ವಿಚಾರ ತಿಳಿದು …
Read More »