ಚಿಕ್ಕೋಡಿ: ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು ಮತ್ತು ದಿನ ಬಳಕೆ ವಸ್ತುಗಳ ತೊಂದರೆಯಾಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ರಾಯಬಾಗ ಶಾಸಕ ದುರ್ಯೋಧನ ಐಹೋಳೆ ಹೇಳಿದರು. ತಾಲೂಕಿನ ಉಮರಾಣಿ ಗ್ರಾಮದಲ್ಲಿ ಶುಕ್ರವಾರ ಕೊರೊನಾ ವೈರಸ್ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆಸಿದ ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರಿಗೆ ಗ್ರಾಮ ಪಂಚಾಯತಿ ವತಿಯಿಂದ ಮಾಸ್ಕ್ …
Read More »ದೆಹಲಿ ಸಮಾವೇಶಕ್ಕೆ ಹೋಗಿದ್ದವರ ಶೋಧಕ್ಕೆ ಹುಕ್ಕೇರಿ ಪೊಲೀಸರ ಹೊಸ ಐಡಿಯಾ
ಬೆಳಗಾವಿ(ಚಿಕ್ಕೋಡಿ): ದೇಶವನ್ನೇ ತಲ್ಲಣಗೊಳಿಸಿರುವ ಕೊರೊನಾ ಶಂಕಿತರಾದ ದೆಹಲಿ ನಿಜಾಮುದ್ದೀನ್ ಸಮಾವೇಶದ ನಂಟು ಇದ್ದವರ ಪತ್ತೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಪೊಲೀಸರು ಹೊಸ ಐಡಿಯಾವೊಂದನ್ನ ಮಾಡಿದ್ದಾರೆ. ಪೊಲೀಸರು ಗಲ್ಲಿ ಗಲ್ಲಿಗಳಿಗೆ ಹೋಗಿ ಯಾರಾದರೂ ದೆಹಲಿಯ ನಿಜಾಮುದ್ದೀನ್ ಸಮಾವೇಶಕ್ಕೆ ಜಮಾತ್‍ಗೆ ಹೋಗಿ ಬಂದಿದ್ದರೆ ದಯವಿಟ್ಟು ಬಂದು ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹುಕ್ಕೇರಿ ಪಟ್ಟಣದ ತಬ್ಲಿಗ ಸಮಾಜದ ಎರಿಯಾಗಳಿಗೆ ಹೋಗಿ ಪೊಲೀಸರು ಧ್ವನಿ ವರ್ಧಕಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹುಕ್ಕೇರಿ …
Read More »ಚಿಕ್ಕೋಡಿ:ಮದ್ಯ ಸಿಗುತ್ತಿಲ್ಲವೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟ
ಚಿಕ್ಕೋಡಿ (ಬೆಳಗಾವಿ): ಲಾಕ್‍ಡೌನ್ ಹಿನ್ನೆಲೆ ರಾಜ್ಯದಲ್ಲಿ ಮದ್ಯದ ಅಂಗಡಿ ಬಂದ್ ಆಗಿವೆ. ಪರಿಣಾಮ ಕುಡಿಯುವುದಕ್ಕೆ ಎಣ್ಣೆ ಸಿಗಲಿಲ್ಲವೆಂದು ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದಲ್ಲಿ ನಡೆದಿದೆ. ಕೋಥಳಿ ಗ್ರಾಮದ ಪೋಪಟ್ ಈರಪ್ಪ ಬಡಿಗೇರಿ (44) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮದ್ಯದ ಅಂಗಡಿ ಬಂದ್ ಆಗಿದ್ದರಿಂದ ಪೋಪಟ್ ಸೋಮವಾರ ಕುಡಿಯುವುದಕ್ಕೆ ಎಣ್ಣೆ ಸಿಗಲಿಲ್ಲವೆಂದು ಕೋಥಳಿ ಗ್ರಾಮದ ಗಲ್ಲಿ ಗಲ್ಲಿ ಸುತ್ತಿ ನಾಪತ್ತೆಯಾಗಿದ್ದ. ಆದರೆ ಇಂದು …
Read More »ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಸ್ವಾಮಿಜಿ ರಸ್ತೆಗಿಳಿಯದಂತೆ ಜಾಗೃತಿ ಕಾರ್ಯ ಮಾಡಿದ್ದಾರೆ.
ಚಿಕ್ಕೋಡಿ(ಬೆಳಗಾವಿ): ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಆದೇಶ ಹೇರಲಾಗಿದೆ. ಲಾಕ್‍ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿಯುತ್ತಿರುವ ಜನರಿಗೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದ್ದಾರೆ. ಪೋಲಿಸರ ಲಾಠಿ ಏಟಿಗೂ ಲಾಕ್ ಡೌನ್ ಪಾಲಿಸದ ಜನರಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಸ್ವಾಮಿಜಿ ರಸ್ತೆಗಿಳಿಯದಂತೆ ಜಾಗೃತಿ ಕಾರ್ಯ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮಿಜಿ …
Read More »ಪಕ್ಕದ ಮಹಾರಾಷ್ಟ್ರದಲ್ಲಿ ರೋಗ ಹೆಚ್ಚಿರುವುದರಿಂದ ನಾವು ಎಷ್ಟೇ ಜಾಗ್ರತೆ ವಹಿಸಿದರೂ ಕಡಿಮೆ:ಗಣೇಶ ಹುಕ್ಕೇರಿ
ಚಿಕ್ಕೋಡಿ – ಕೊರೋನಾ ವೈರಸ್ ಹರಡುವುದನ್ನು ತಡೆಯಲು ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಜನಪ್ರತಿನಿಧಿಗಳು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ. ಜನರಲ್ಲಿ ಅರಿವು ಮೂಡಿಸುವುದು, ಔಷಧಗಳನ್ನು ಸಿಂಬಡಿಸುವುದು, ಅಧಿಕಾರಿಗಳೊಂದಿಗೆ ಸಭೆ ನಡೆಸುವುದು, ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತರಿಸುವುದು… ಇತ್ಯಾದಿ ಕೆಲಸಗಳನ್ನು ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಗಣೇಶ ಹುಕ್ಕೇರಿ ಶಾಸಕ ಗಣೇಶ ಹುಕ್ಕೇರಿ ಕಳೆದ ವಾರ ಚಿಕ್ಕೋಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೊರೋನಾ ವೈರಸ್ ನಿಯಂತ್ರಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿ …
Read More »ಲಾಕ್‍ಡೌನ್ ಯಶಸ್ವಿಗೊಳಿಸಲು ಮೋದಿಗೆ ಚಿಕ್ಕೋಡಿ ಗೃಹಿಣಿ ಪತ್ರ
ಚಿಕ್ಕೋಡಿ(ಬೆಳಗಾವಿ): ಲಾಕ್ ಡೌನ್ ಯಶಸ್ವಿಗೊಳಿಸಲು ಗೃಹಿಣಿಯೊಬ್ಬರು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಗೃಹಿಣಿ ದೀಪಾ ಬಿ.ಕೆ, ಪ್ರಧಾನಿಗೆ ಪತ್ರ ಬರೆದು ರಾಜ್ಯದ ಎಲ್ಲ ಇಲಾಖೆಗಳನ್ನ ಲಾಕ್ ಡೌನ್ ಸೇವೆಗೆ ಬಳಸಿಕೊಳ್ಳಬೇಕು. ಕೇವಲ 5 ರಿಂದ 6 ಇಲಾಖೆಗಳು ಮಾತ್ರ ಲಾಕ್ ಡೌನ್ ಇದ್ದರೂ ಸೇವೆ ಸಲ್ಲಿಸುತ್ತಿವೆ. ಬಾಕಿ ಉಳಿದಿರುವ 50ಕ್ಕೂ ಹೆಚ್ಚು ಇಲಾಖೆಗಳ ನೌಕರರ ಸದ್ಬಳಕೆ ಮಾಡಿಕೊಂಡು ಕೊರೊನಾ ಬಗ್ಗೆ ಜಾಗೃತಿ …
Read More »ಉದ್ದೇಶಪೂರ್ವಕವಾಗಿ ಲಾಠಿ ಬೀಸಬಾರದು: ಮಹಾಂತೇಶ ಕವಟಗಿಮಠ
ಚಿಕ್ಕೋಡಿ : ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಎಲ್ಲ ಜನರಿಗೂ ಮಾಸ್ಕ ವಿತರಿಸುವ ಮೂಲಕ ಸಾಮಾಜಿಕ ಅಂತರಕಾಯ್ದುಕೊಳ್ಳುವಂತೆ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ವಿಧಾನಪರಿಷತ್‍ನ ಸರಕಾರಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ಪಟ್ಟಣದ ಮಿನಿವಿಧಾನ ಸೌಧದಲ್ಲಿ ಸೋಮವಾರ ನಡೆದ ಅಧಿಕಾರಿಗಳಸಭೆಯಲ್ಲಿ ಮಾತನಾಡಿದ ಅವರು, ತರಕಾರಿ ಮಾರಾಟಕ್ಕೆ ಹೋಗುವವರು ಹಾಗೂ ಅಟೋದವರು ಕಡ್ಡಾಯವಾಗಿ ಮಾಸ್ಕ ಹಾಕಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು …
Read More »ಚಿಕ್ಕೋಡಿ:ಅಂಬುಲೆನ್ಸ್‌ನಲ್ಲಿ ಪ್ರಯಾಣ ಬೆಳೆಸಿದ್ದ ನಕಲಿ ರೋಗಿಗಳ ಬಂಧನ
ಚಿಕ್ಕೋಡಿ: ಭಾರತ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಸಂಚಾರ ಸ್ಥಗಿತ ಹಿನ್ನೆಲೆಯನ್ನೆ ಮಾಸ್ಟರ್ ಪ್ಲಾನ್ ಮಾಡಿ ರೋಗಿಗಳ ಸೋಗಿನಲ್ಲಿ ಅಂಬುಲೆನ್ಸ್ ಏರಿದವರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಘಟನೆ ಮಹರಾಷ್ಟ್ರದ ಕೊಲ್ಹಾಪುರ ನಗರದ ಹೊರವಲಯದಲ್ಲಿ ನಡೆದಿದೆ. ಖಾಸಗಿ ಅಂಬುಲೆನ್ಸ್ ಚಾಲಕನಿಗೆ ಹಣದ ಆಮಿಷ ತೋರಿಸಿ ಕರ್ನಾಟಕದತ್ತ ಬರುತ್ತಿದ್ದ 8 ಜನ ಯುವಕರನ್ನ ಕೊಲ್ಹಾಪುರ ಪೊಲೀಸರು ಬಂಧಿಸಿದ್ದಾರೆ. ಕೊಲ್ಲಾಪುರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ …
Read More »ಚಿಕ್ಕೋಡಿ :ಶಾನೂರಬಾಬಾ ದರ್ಗಾದ ಆವರಣದಲ್ಲಿ ಆಗಮಿಸಿದ ಕಟುಂಬ ತುತ್ತು ಅನ್ನಕ್ಕಾಗಿ ಪರದಾಟ.. Mar, 27 2020
ಚಿಕ್ಕೋಡಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‍ಗೆ ಇಡೀ ಭಾರತ ಲಾಕ್‍ಡೌನ್ ಆಗಿದೆ. ಆದರೆ ಅಮವಾಸ್ಯೆಗೆ ಚಿಕ್ಕೋಡಿ ತಾಲೂಕಿನ ಕರೋಶಿ ಶಾನೂರಬಾಬಾ ದರ್ಗಾಕ್ಕೆ ದೇವರಿಗೆ ಬಂದಿದ್ದ ಬಡ ಕುಟುಂಬವೊಂದು ಹತ್ತಿರ ಹಣವೂ ಇಲ್ಲದೆ ಪರದಾಡುವಂತಾಗಿದೆ. ನೆರೆಯ ಮಹಾರಾಷ್ಟ್ರ ಸೋಲ್ಲಾಪೂರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಬೋರಗಾಂವ ಎಂಬ ದೂರದ ಊರಿಂದ ನವಾಜ ಮುಲ್ಲಾ ಎನ್ನುವ ಕುಟುಂಬ ಅಮವಾಸ್ಯೆಯೆಂದು ದರ್ಗಾಕ್ಕೆ ದೇವರ ದರ್ಶಕ್ಕೆಂದು ಆಗಮಿಸಿದ್ದರು. ಅಮವಾಸ್ಯೆ ಮತ್ತು ಅಮವಾಸ್ಯೆಯಾದ ನಂತರ ಒಂದೆರಡು …
Read More »ಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಹಣ್ಣು ಮತ್ತು ತರಕಾರಿ ಮಾರುವವರು ಜನರ ಮನೆ ಹತ್ತಿರವೇ ಬರುತ್ತಾರೆ.
ಚಿಕ್ಕೋಡಿ : ಪಟ್ಟಣದ 23 ವಾರ್ಡುಗಳಿಗೆ ದೈನಂದಿನ ಅವಶ್ಯಕ ತರಕಾರಿ, ಹಣ್ಣು ಮತ್ತು ದಿನಸಿ ವಸ್ತುಗಳನ್ನು ಜನರ ಮನೆ ಬಾಗೀಲಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅನಾವಶ್ಯಕವಾಗಿ ಮನೆಯಿಂದ ಯಾರು ಹೊರಗೆ ಬರಬಾರದು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮನವಿ ಮಾಡಿದ್ದಾರೆ. ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಹಣ್ಣು ಮತ್ತು ತರಕಾರಿ ಮಾರುವವರು ಜನರ …
Read More »