Breaking News

ಬೆಂಗಳೂರು

ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಅತ್ಯಾಚಾರ: ತನ್ನದೇ ಠಾಣೆ ಅಧಿಕಾರಿಗಳಿಂದ ಬಂಧನ

ಬೆಂಗಳೂರು: ಪಾರ್ಕ್ ಬಳಿ ಒಂಟಿಯಾಗಿ ನಿಂತಿದ್ದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಗೋವಿಂದರಾಜನಗರ ಪೊಲೀಸ್ ಕಾನ್ಸ್ಟೇಬಲ್ ನನ್ನು ಬಂಧಿಸಲಾಗಿದೆ. ಪವನ್ ದ್ಯಾವಣ್ಣಬವರ್ ಬಂಧಿತ ಕಾನ್ಸ್ಟೇಬಲ್ ಎಂದು ಗುರುತಿಸಲಾಗಿದೆ. ಆರೋಪಿ ಪವನ್, ಕಳೆದ ಆರನೇ ತಾರೀಕಿನಂದು ರಾತ್ರಿ ಗಸ್ತು ವೇಳೆ ಬಾಲಕಿಯನ್ನ ಪಾರ್ಕ್ ಬಳಿ ಕಂಡಿದ್ದ. ಚಾಮರಾಜನಗರ ಹೋಗ್ಬೇಕು ಎಂದು ಕೂತಿದ್ದ ಬಾಲಕಿ ನೋಡಿ ಡ್ರಾಪ್ ಕೊಡುವುದಾಗಿ ಕಾನ್ಸ್ಟೇಬಲ್ ಪವನ್ ಪುಸಲಾಯಿಸಿದ್ದಾನೆ. ನಂತರ ಡ್ರಾಪ್ ಕೊಡುತ್ತಿನಿ ಎಂದು ಬಾಲಕಿಯನ್ನು ರೂಂ ಗೆ ಕರೆದುಕೊಂಡು …

Read More »

2017 ನೇ ಸಾಲಿನ `KAS’ ಫಲಿತಾಂಶ ಪ್ರಕಟ : ಪಾಸಾದ ಅಭ್ಯರ್ಥಿಗಳ ಪೂರ್ಣ ಪಟ್ಟಿ ಇಲ್ಲಿದೆ.!

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KPSC) 2017ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ನಡೆಸಿದ ಮುಖ್ಯ ಪರೀಕ್ಷೆ ಫಲಿತಾಂಶವನ್ನ ಪ್ರಕಟಿಸಿದೆ. ಅಂದ್ಹಾಗೆ, ಅಭ್ಯರ್ಥಿಗಳು ಈ ಪರೀಕ್ಷಾ ಫಲಿತಾಂಶಕ್ಕಾಗಿ ಬಹು ದಿನಗಳಿಂದ ಕಾಯುತ್ತಿದ್ರು.   ಲೋಕಸೇವಾ ಆಯೋಗ ಈಗ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಅರ್ಹರಾದ 318 ಅಭ್ಯರ್ಥಿಗಳ ಪಟ್ಟಿಯನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಅನಂತರ ಅವರ ಸಂದರ್ಶನ ನಡೆಸಿ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. …

Read More »

ಬಳೆ ತೊಟ್ಟುಕೊಳ್ಳಿ , ಬಿಜೆಪಿ ನಾಯಕರೇ.. ನೀವು ಗಂಡಸರಾ..?

ಬೆಂಗಳೂರು: ಬಳೆ ತೊಟ್ಟುಕೊಳ್ಳಿ , ಬಿಜೆಪಿ ನಾಯಕರೇ.. ಹೀಗಂತ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರೆ ನಾಯಕರ ಫೋಟೋ ಹಾಕಿ ಭಜರಂಗದಳ ಕಾರ್ಯಕರ್ತರು ಪೋಸ್ಟ್ ಹಾಕುವ ಸಾಮಾಜಿಕ ಜಾಲತಾಣದಲ್ಲಿ ಸಿಟ್ಟು ಹೊರಹಾಕ್ತಿದ್ದಾರೆ.   ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಭಜರಂಗದಳದ ಫೇಸ್ ಬುಕ್‌ನಲ್ಲಿ ಬಳೆ ತೊಟ್ಟುಕೊಳ್ಳಿ,ಬಿಜೆಪಿ ನಾಯಕರೇ.. ಇನ್ನೆಷ್ಟು ಹಿಂದೂಗಳ ಬಲಿದಾನವಾಗಬೇಕು?ನಿಮ್ಮನ್ನು ಗಂಡಸರು ಎಂದು ಆರಿಸಿದೆವು..ಆದರೆ ನೀವು..? ಎಂದೆಲ್ಲಾ ಬರೆದು ಫೋಸ್ಟ್ …

Read More »

ಎಸಿಬಿಗೆ ಭ್ರಷ್ಟಾಚಾರ ಪ್ರಕರಣದ ತನಿಖಾ ವಿಧಾನವೇ ಗೊತ್ತಿಲ್ಲ: ಹೈಕೋರ್ಟ್ ಚಾಟಿ

ಬೆಂಗಳೂರು: ಎಸಿಬಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೇಗೆ ಸರಿಯಾಗಿ ತನಿಖೆ ನಡೆಸಬೇಕೆನ್ನುವ ವಿಧಾನವೇ ಸರಿಯಾಗಿ ತಿಳಿದಿಲ್ಲ. ತನಿಖಾ ಪದ್ಧತಿಯಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮತ್ತೊಮ್ಮೆ ಚಾಟಿ ಬೀಸಿದೆ. ಹೈಕೋರ್ಟ್​​ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಎಸಿಬಿಯು ತನಿಖೆಯಲ್ಲಿ ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇಂತಹ ತಪ್ಪುಗಳನ್ನು ನೋಡಿಕೊಂಡು ನ್ಯಾಯಾಲಯ ಸುಮ್ಮನೆ ಕೂರಲಾಗದು ಎಂದು ಎಸಿಬಿಯನ್ನು ತರಾಟೆಗೆ ತಗೆದುಕೊಂಡರು. ತಮ್ಮ ಮೇಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಎಸಿಬಿ ಸರಿಯಾಗಿ ತನಿಖೆ …

Read More »

‘ಬೆಳಿಗ್ಗೆ 10ಕ್ಕೆ ಕಚೇರಿ’ಗೆ ಹಾಜರಾಗಬೇಕು, ಇಲ್ಲವಾದಲ್ಲಿ ಶಿಸ್ತು ಕ್ರಮ: ‘ಸರ್ಕಾರಿ ನೌಕರ’ರಿಗೆ ‘ರಾಜ್ಯ ಸರ್ಕಾರ’ ಖಡಕ್ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ನಿಗದಿತ ಅವಧಿಗೆ ಹಾಜರಾಗಲು ಹಾಗೂ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದು. ಬೆಳಿಗ್ಗೆ 10ಕ್ಕೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ, ಸರ್ಕಾರಿ ನೌಕರರಿಗೆ ಖಡಕ್ ಎಚ್ಚರಿಕೆ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು …

Read More »

ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ ಅರೆಸ್ಟ್

ಹಾವೇರಿ: ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ ವ್ಯಕ್ತಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಆರೋಪಿಯನ್ನು 32 ವರ್ಷದ ಜಾಫರ್ ಕನ್ಯಾನವರ ಎಂದು ಗುರುತಿಸಲಾಗಿದೆ. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಜಾಫರ್‌ನ ಕೃತ್ಯ ಸೆರೆಯಾಗಿದೆ. ದೇವಸ್ಥಾನದ ಆವರಣದಲ್ಲಿ ಮಲಗಿ, ಎದ್ದು ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನ ಅಪವಿತ್ರಗೊಳಿಸಿದ ಎಂದು ಆರೋಪಿಸಿದ್ದಾರೆ. 

Read More »

ಉ.ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಬಗ್ಗೆ ಶೀಘ್ರ ನಿರ್ಧಾರ: ಕೆ.ಸುಧಾಕರ್

ಬೆಂಗಳೂರು: ಶಿರೂರು ಟೋಲ್ ಗೇಟ್ ನಲ್ಲಿ ಇತ್ತೀಚೆಗೆ ನಡೆದ ಆಯಂಬುಲೆನ್ಸ್ ಅಪಘಾತದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎಂಬ ಆಗ್ರಹ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಭಿಯಾನಗಳು ನಡೆಯುತ್ತಿದೆ. ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಸರ್ಕರದ ಗಮನ ಸೆಳೆಯುವ ಕೆಲಸ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಕೆ.ಸುಧಾಕರ್, ”ಉತ್ತರ ಕನ್ನಡ …

Read More »

ರೈತರೇ ಗಮನಿಸಿ : `ರೈತ ಶಕ್ತಿ ಯೋಜನೆ’ಯಡಿ ಡೀಸಲ್ ಸಹಾಯಧನ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು : 2022-23ರ ರಾಜ್ಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಕೃಷಿ ಉತ್ಪಾದತೆಯನ್ನು ಹೆಚ್ಚಿಸಲು, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ ರೂ. 250/- ಗಳಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಡೀಸಲ್‌ಗೆ ಸಹಾಯಧನಕ್ಕಾಗಿ ಕೃಷಿ ಇಲಾಖೆ ವತಿಯಿಂದ ‘ರೈತ ಶಕ್ತಿ’ ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕೆಂದು ಜಂಟಿ ಕೃಷಿ …

Read More »

ಬಿಎಸ್ವೈ ನಂತರ ವರ್ಷ ಮುಗಿಸಿದ ಮೊದಲ ಬಿಜೆಪಿ ಸಿಎಂ ಬೊಮ್ಮಾಯಿ

ಬೆಂಗಳೂರು : ದಕ್ಷಿಣ ಭಾರತದಲ್ಲಿ ಕಮಲ ಅರಳಿದ ಮೊದಲ ರಾಜ್ಯವಾದ ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಒಂದು ವರ್ಷದ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಬಸವರಾಜ ಬೊಮ್ಮಾಯಿ ಅವರದ್ದಾಗಿದೆ. ರಾಜ್ಯದಲ್ಲಿ ಈವರೆಗೆ ನಾಲ್ವರು ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದಾರೆ. ಯಡಿಯೂರಪ್ಪ ಮೊದಲ ಬಿಜೆಪಿ ಮುಖ್ಯಮಂತ್ರಿಯಾದರೆ ಡಿ.ವಿ. ಸದಾನಂದಗೌಡ ಎರಡನೇ ಸಿಎಂ, ಜಗದೀಶ್ ಶೆಟ್ಟರ್ ಮೂರನೇ ಮುಖ್ಯಮಂತ್ರಿಯಾಗಿದ್ದು, ಪ್ರಸ್ತುತ ಇರುವ ಬಸವರಾಜ ಬೊಮ್ಮಾಯಿ ನಾಲ್ಕನೇ ಮುಖ್ಯಮಂತ್ರಿಯಾಗಿದ್ದಾರೆ. ಈ ನಾಲ್ವರು ಮುಖ್ಯಮಂತ್ರಿಗಳಲ್ಲಿ …

Read More »

ಒಬಿಸಿಗೆ ಶೇ.33 ಮೀಸಲಾತಿ

ಬೆಂಗಳೂರು: ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಗಳಿಗೆ ಶೇ. 33ರಷ್ಟು ರಾಜಕೀಯ ಮೀಸಲಾತಿ ನೀಡುವಂತೆ ನ್ಯಾ| ಭಕ್ತವತ್ಸಲ ಸಮಿತಿಯು ತನ್ನ ವರದಿಯಲ್ಲಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಸಮಿತಿಯು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿ ಸಲ್ಲಿಸಿದೆ. ಬಿಬಿಎಂಪಿ, ಜಿಲ್ಲಾ ಮತ್ತು ತಾ.ಪಂ. ಚುನಾವಣೆ ನಡೆಸಲು ಆಯೋಗದ ವರದಿ ನಿರ್ಣಾಯಕವಾಗಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾಕರನ್ನು ಒಳಗೊಂಡಂತೆ ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. 44.40ರಷ್ಟಿದೆ. …

Read More »