Breaking News

ಬೆಂಗಳೂರು

ಗೌರಿ, ಗಣೇಶ ಹಬ್ಬಕ್ಕೆ ಕೆಎಂಎಫ್‌ ನಿಂದ ಬಂಪರ್‌ ಕೊಡುಗೆ

ಬೆಂಗಳೂರು : ಕೆಎಂಎಫ್‌ ಸ್ವಾತಂತ್ರ್ಯ ದಿನಾಚರಣೆ, ಗಣೇಶ, ಗೌರಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಂಪರ್‌ ಕೊಡುಗೆ ನೀಡಿದೆ. ಇಂದಿನಿಂದ ಆ.30ರವರೆಗೆ ನಡೆಯಲಿರುವ ‘ನಂದಿನಿ ಸಿಹಿ ಉತ್ಸವ’ದಲ್ಲಿ ಶೇ.10 ರಷ್ಟುರಿಯಾಯಿತಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಶನಿವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಹಾಲಿನ ಗುಣಮಟ್ಟಕಾಯ್ದುಕೊಂಡು ಗ್ರಾಹಕರಿಗೆ ಸದಾ ಕಾಲ ಉತ್ತಮ ಹಾಲು ಮತ್ತು …

Read More »

ಬೆಂಗಳೂರು ಗಲಭೆ ಪ್ರಕರಣ: ಮತ್ತೆ 35 ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 340ಕ್ಕೆ ಏರಿಕೆ

ಬೆಂಗಳೂರು: ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮತ್ತೆ 35 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 340ಕ್ಕೆ ಏರಿಕೆಯಾಗಿದೆ. ಕಳೆದ ಆಗಸ್ಟ್ 11ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಪೋಸ್ಟ್ ಗೆ ಸಂಬಂಧಿಸಿದಂತೆ ಪ್ರತಿಭಟನೆ ಹೆಸರಲ್ಲಿ ಗಲಭೆ ನಡೆಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಗೊಂಡಿದ್ದು, ಈ ವರೆಗೂ 340 ಮಂದಿಯನ್ನು ಬಂಧಿಸಿದ್ದಾರೆ. …

Read More »

ರಾಜ್ಯದಲ್ಲಿ ಒಂದೇ ದಿನ 8818 ಜನರಿಗೆ ಕೊರೊನಾ ಸೋಂಕು ಪತ್ತೆ!!

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ದಾಖಲೆಯ 8818 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 2,19,976 ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 6629 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 1,34,811 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ನಿನ್ನೆ 114 ಮಂದಿ ಮೃತಪಟ್ಟಿದ್ದು ಇದುವರೆಗೆ 3831 ಜನರು ಸಾವನ್ನಪ್ಪಿದ್ದಾರೆ. 81,276 ಸಕ್ರಿಯ ಪ್ರಕರಣಗಳಿದ್ದು, 716 ಜನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 3495 …

Read More »

ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿ ಸರ್ಕಾರ ಒತ್ತಡ ಹೇರುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ

ಬೆಂಗಳೂರು: ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಇಂಥಾದ್ದೇ ಹೇಳಿಕೆ ಕೊಡಿ ಅಂತಾ ನಮ್ಮ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಗಲಭೆಗೆ ಕಾಂಗ್ರೆಸ್ಸಿನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳೇ ಕಾರಣ ಎಂದಿದ್ದ ಗೃಹ ಸಚಿವರನ್ನು ಏಕ ವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಾತು ಹೇಳಲು ಬೊಮ್ಮಾಯಿ ಯಾರು, ಅವರೇನು ಇನ್ಸ್‍ಪೆಕ್ಟರ್ರಾ..? ಆಯೋಗನಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರ ಒಳ ತಂತ್ರದಿಂದಲೇ …

Read More »

ಗಲಭೆ ಪ್ರಕರಣ – 10 ಮಂದಿ ಫೇಸ್‍ಬುಕ್ ಲೈವ್, ಸಾವಿರಾರು ಜನರಿಗೆ ಆಮಂತ್ರಣ

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರಿಗೆ ಹೊಸ ಹೊಸ ಸಾಕ್ಷ್ಯಗಳು ಸಿಗುತ್ತಿವೆ. ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಗಲಭೆಗೆ 10 ಮಂದಿ ಫೇಸ್‍ಬುಕ್ ಲೈವ್ ಮಾಡುವ ಮೂಲಕ ಸಾವಿರಾರು ಜನರಿಗೆ ಆಮಂತ್ರಣ ನೀಡಲಾಗಿದೆ ಎಂಬುದು ತಿಳಿದುಬಂದಿದೆ.ಡಿಜೆ ಹಳ್ಳಿ ದೊಂಬಿ ಗಲಾಟೆಗೆ ಪುಂಡರನ್ನ ಸೇರಿಸಲು ಫೇಸ್‍ಬುಕ್ ಟ್ರಿಕ್ ಬಳಸಲಾಗಿದೆ. ಗಲಾಟೆ ಶುರುವಾಗೋದಕ್ಕೂ ಮೊದಲೇ 10 ಮಂದಿ ಫೇಸ್‍ಬುಕ್ ಲೈವ್ ಮಾಡಿದ್ದರು. …

Read More »

ನಾನು ಶಿರಾ ಉಪಚುನಾವಣೆಯ ಅಭ್ಯರ್ಥಿಯಾಗುವ ಕನಸು ಕಂಡವನಲ್ಲ

ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ನಿಂದ ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರಾ ಅನ್ನೋ ಚರ್ಚೆ ಕೆಲ ದಿನಗಳಿಂದ ಆರಂಭಗೊಂಡಿತ್ತು. ಈ ಎಲ್ಲ ಊಹಾಪೋಹಗಳಿಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕಾ ಪ್ರಕಟನೆ: ಇಂತಹ ಕಪೋಲಕಲ್ಪಿತ ಸುದ್ದಿ- ವದಂತಿಗಳನ್ನು ಯಾರು ಹಬ್ಬಿಸುತ್ತಾರೋ? ಯಾಕೆ ಹಬ್ಬಿಸುತ್ತಾರೋ? ಇದರಿಂದ ಕುತ್ಸಿತ ಮನಸುಗಳಿಗೆ ಆಗುವ ಲಾಭ ಏನೆಂಬುದು ನನಗೆ ತಿಳಿಯದಾಗಿದೆ. ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ …

Read More »

4 ಸಾವಿರ ಕೆಜಿ ಉಪ್ಪು, 250 ಕೆಜಿ ಬಣ್ಣ, 400 ಕೆಜಿ ಹೂವಿನಲ್ಲಿ ಅರಳಿತು ಧ್ವಜ

ಬೆಂಗಳೂರು: ಸಿಲಿಕಾನ್ ಸಿಟಿಯ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ತಾಂತ್ರಿಕ ಮಹಾವಿದ್ಯಾಲಯ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ತ್ರಿವರ್ಣೋತ್ಸವ” ವನ್ನು ಹಮ್ಮಿಕೊಂಡಿತ್ತು. ಸುಮಾರು 4,000 ಕೆ.ಜಿ. ಉಪ್ಪು, 250 ಕೆ.ಜಿ. ಬಣ್ಣ ಹಾಗೂ 400 ಕೆ.ಜಿ ಹೂಗಳನ್ನು ಬಳಸಿ ಮನೋಹರವಾದ ತ್ರಿವರ್ಣ ಧ್ವಜವನ್ನು ನಿರ್ಮಿಸಿದ್ದರು. ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ, ವೈದ್ಯರಾದ ಡಾ.ಉದಯಶಂಕರ್, ಡಾ.ಕಾರ್ತಿಕ್, ಡಾ.ಅನೂಷ, ಸ್ಟಾಫ್ ನರ್ಸ್ ನಾಗರಾಜ್, ಪೊಲೀಸರಾದ ಅರುಣ್ ಕುಮಾರ್ ಮತ್ತು ಲಕ್ಷಣ್ ಆಶಾ ಕಾರ್ಯಕರ್ತೆ …

Read More »

ಐದು ಭಾಷೆ, 65 ಸಿಂಗರ್ಸ್, ಒಂದು ಹಾಡು – ಲಹರಿ ಸಂಸ್ಥೆಯಿಂದ ವಿಷೇಶ ಗೀತೆ ಬಿಡುಗಡೆ

ಬೆಂಗಳೂರು: ಲಹರಿ ಸಂಸ್ಥೆಯಿಂದ ಸ್ವಾತಂತ್ರ ದಿನಾಚರಣೆಗೆ ವಿಶೇಷವಾದ ‘ಒಟ್ಟಿಗೆ ಒಂದಾಗಿ..’ ಎಂಬ ಹಾಡೊಂದನ್ನು ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಸುಮಾರು 65 ಸಿಂಗರ್‍ಗಳು ಹಾಡಿದ್ದು, 5 ಭಾಷೆಯಲ್ಲಿ ಈ ಹಾಡು ಮೂಡಿ ಬಂದಿದೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಡಲಾಗಿದೆ. ಈ ಹಾಡು ಲಹರಿ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಹಾಡು ಭಾರತದವರಾದ ನಾವು ಎಲ್ಲರೂ …

Read More »

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಒಬ್ಬ ಒಳ್ಳೆಯ ಶಾಸಕ. ಆತನಿಗೆ ಅನ್ಯಾಯ ಆಗಬಾರದಾಗಿತ್ತು: ರಮೇಶ ಜಾರಕಿಹೊಳಿ

ಬೆಳಗಾವಿ: ಬೆಂಗಳೂರು ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ  ನಡೆದದ್ದು, ಕಾಂಗ್ರೆಸ್ ಗಲಾಟೆ ಅದಕ್ಕೂ ನಮಗೂ ಸಂಬಂಧವಿಲ್ಲ  ಅಂತಾ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ. ಅದರಿಂದಲೇ ಸಂತ್ಯಾಂಶ ಹೊರ ಬರಲಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಒಬ್ಬ ಒಳ್ಳೆಯ ಶಾಸಕ. ಆತನಿಗೆ ಅನ್ಯಾಯ …

Read More »

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿದ ಸಿಎಂ ಯಡಿಯೂರಪ್ಪ,

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಯೋಜನೆ 2ನೇ ಹಂತಕ್ಕೆ 30,695 ಕೋಟಿ ರೂ. ಮೀಸಲಿಡಲಾಗಿದೆ. 2024ರ ಜೂನ್ ವೇಳೆಗೆ 2ನೇ ಹಂತದ ಮೆಟ್ರೋ ರೈಲು ಯೋಜನೆ ಪೂರ್ಣಗೊಳ್ಳಲಿದೆ. 10 ಲಕ್ಷ ರೈತರಿಗೆ 6,500 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ.  ಕೊಡಗು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಸೇರಿದಂತೆ 11 ಜಿಲ್ಲೆಗಳನ್ನು ಪ್ರವಾಹಪೀಡಿತ ಜಿಲ್ಲೆಗಳೆಂದು ಘೋಷಿಸಲಾಗಿದೆ. ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಮುಖ್ಯಮಂತ್ರಿ ಬಿ.ಎಸ್. …

Read More »