Breaking News

ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷರಾಗಿ 1 ವರ್ಷ ಪೂರೈಸಿದ ಕಟೀಲ್ ಗೆ ಸಿಎಂ ಶುಭಾಶಯ

ಬೆಂಗಳೂರು,ಆ.27-ಆಡಳಿತಾರೂಢ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಂಸದ ನಳೀನ್ ಕುಮಾರ್ ಕಟೀಲ್ ಅಕಾರ ಸ್ವೀಕಾರ ಮಾಡಿ ಒಂದು ವರ್ಷ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಶುಭ ಕೋರಿದ್ದಾರೆ. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು. ಸಂಘಟನೆಗೆ ಶಕ್ತಿ, ಕಾರ್ಯಕರ್ತರಿಗೆ ಸೂರ್ತಿ ತುಂಬಿ ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆಯಿಂದ ಕೆಲಸ ಮಾಡುತ್ತಿರುವ ನಿಮಗೆ ಶುಭ …

Read More »

ಸಿಲಿಕಾನ್ ಸಿಟಿಯ ಸಿಸಿಬಿ ಪೊಲೀಸರು ಮೊಟ್ಟಮೊದಲ ಬಾರಿಗೆ ಎರಡು ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಸಿಸಿಬಿ ಪೊಲೀಸರು ಮೊಟ್ಟಮೊದಲ ಬಾರಿಗೆ ಎರಡು ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ. ಏಕಕಾಲದಲ್ಲಿ 204 ಕೆಜಿ ಗಾಂಜಾ ಸಿಸಿಬಿ ಪೊಲೀಸರು ಬೇಟೆಯಾಡಿದ್ದು, ಈ ಮೂಲಕ ಇದೇ ಮೊದಲ ಬಾರಿಗೆ ಪೊಲೀಸ್ ಇತಿಹಾಸದಲ್ಲೇ ಇಷ್ಟು ಪ್ರಮಾಣದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗಾಂಜಾ ಬರೋಬ್ಬರಿ ಒಂದು ಕೋಟಿ ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಈ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಸಮೀರ್, ಕೈಸರ್ ಪಾಷಾ, ಇಸ್ಮಾಯಿಲ್ ಎಂದು …

Read More »

ಜೀವ ಹೋಗ್ತಿದೆ ಅಂದ್ರೂ ಡೋಂಟ್‍ಕೇರ್ – ಸೋಂಕಿತರಿಗೆ ಆಕ್ಸಿಜನ್ ನೀಡಲು ಆರ್ಡರ್ ಬರ್ಬೇಕಂತೆ

ನೆಲಮಂಗಲ: ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಉಸಿರಾಟ ತೊಂದರೆ ಇದ್ದರೂ ಆಂಬುಲೆನ್ಸ್ ಗೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ ನೆಲಮಂಗಲದ ಮಾದವಾರದಲ್ಲಿರುವ ಬಿಐಇಸಿ ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದ ಸೋಂಕಿತರಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಆದರೆ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲ. ಗಂಟೆಗಟ್ಟಲೇ ಕಾದರೂ ಸ್ಥಳಕ್ಕೆ ಅಂಬುಲೆನ್ಸ್ ಬರಲಿಲ್ಲ. ಅಲ್ಲದೆ ಉಸಿರು ಹೋಗ್ತಿದೆ ಅಂದರೂ ಇಲ್ಲಿ ಡೋಂಟ್ ಕೇರ್ ಎಂದಿದ್ದಾರೆ. ಉಸಿರಾಡಲು ಆಗ್ತಿಲ್ಲ ಅಂತ …

Read More »

ಮಕ್ಕಳಿಗೆ ಆರೋಗ್ಯ ಕಾರ್ಡ್‌; ಈ ವರ್ಷವೇ ಲಭ್ಯ ರಾಜೀವ್‌ ಗಾಂಧಿ ವಿ.ವಿ.ಯೋಜನೆ

ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಪತ್ರ ಸಾಮಾನ್ಯ. ಇನ್ನು ಅದರ ಜತೆ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುವ “ಆರೋಗ್ಯ ಕಾರ್ಡ್‌’ ಕೂಡ ನೀಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರೋಗ್ಯ ಕಾರ್ಡ್‌ ದೊರೆಯಲಿದೆ. ಕೊರೊನಾದಿಂದ ಶಾಲೆಗಳ ಆರಂಭ ವಿಳಂಬವಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಅತಿಯಾದ ಗಮನ ಅಗತ್ಯವಾಗಿರುವುದರಿಂದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಸರಕಾರಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಸ್ವಾಸ್ಥ್ಯ ನಿಗಾವಣೆಗೆ ಯೋಜನೆ ಸಿದ್ಧಪಡಿಸಿದೆ. ಪ್ರತಿ ವಿದ್ಯಾರ್ಥಿಯ …

Read More »

ಐವರು ಐಪಿಎಸ್ ಅಧಿಕಾರಿಗಳ ವರ್ಗಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಪ್ರಮುಖ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಐವರು ಐಪಿಎಸ್ ಹಾಗೂ ಒಬ್ಬರು ಕರ್ನಾಟಕ ಸೇವೆಯ ಡಿಸಿಪಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೂಲಗಳ ಪ್ರಕಾರ ಈ ಹಿಂದೆ CCB ವಿಭಾಗದಲ್ಲಿ DCP ಆಗಿದ್ದ ಕುಲ್​ದೀಪ್​ ಕುಮಾರ್ ಜೈನ್​ರನ್ನು ACB ಎಸ್​ಪಿಯಾಗಿ ನೇಮಿಸಲಾಗಿದ್ದು, ರವಿಕುಮಾರ್​ವರನ್ನು CCBಯ ಡಿಸಿಪಿ ಗ್ರೇಡ್​ 2 ರಿಂದ CCB ಡಿಸಿಪಿ ಗ್ರೇಡ್ 1 ಆಗಿ ವರ್ಗಾಯಿಸಲಾಗಿದೆ. ಅಂತೆಯೇ ಬೆಳಗಾವಿಯ ಡಿಸಿಪಿ ಆಗಿದ್ದ ಸೀಮಾ ಅನಿಲ್ ಲಟ್ಕರ್​ರನ್ನು CCB ಎಐಜಿ …

Read More »

ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಡಿಗ್ರಿ ತರಗತಿಗಳು ಅಕ್ಟೋಬರ್‌ 1 ರಿಂದ ಆಫ್‍ಲೈನ್ ಆಗಲಿದೆ.

ಬೆಂಗಳೂರು: ಕೋವಿಡ್‌ 19ನಿಂದಾಗಿ ಸದ್ಯ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಡಿಗ್ರಿ ತರಗತಿಗಳು ಅಕ್ಟೋಬರ್‌ 1 ರಿಂದ ಆಫ್‍ಲೈನ್ ಆಗಲಿದೆ. ಎಂದಿನಂತೆ ತರಗತಿ ಆರಂಭಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಸಿದ್ಧತೆಗಳು ಆರಂಭವಾಗಿದೆ. ಕೊರೊನಾದೊಂದಿಗೆ ಬದುಕಬೇಕಿರುವ ಕಾರಣ ಉನ್ನತ ಶಿಕ್ಷಣ ಇಲಾಖೆ ಅಕ್ಟೋಬರ್‌ ತಿಂಗಳಿನಿಂದ ಡಿಗ್ರಿ ಕಾಲೇಜು ಆರಂಭಿಸಲು ಮುಂದಾಗುತ್ತಿದೆ. ಈಗ ಹೇಗೆ ಕಚೇರಿಗಳನ್ನು ತೆರೆಯಲು ಸರ್ಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆಯೋ ಅದೇ ರೀತಿಯಾಗಿ ಕಾಲೇಜಿನಲ್ಲಿ ಅಳವಡಿಸಬೇಕಾದ ನಿಯಮಗಳ ಬಗ್ಗೆ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ …

Read More »

ಬುಲೆಟ್ ಮೇಲಿತ್ತು 103 ಪ್ರಕರಣಗಳು – ಫೈನ್ ಕಂಡು ಬೆಚ್ಚಿಬಿದ್ದ ಮಾಲೀಕ

ಬೆಂಗಳೂರು: ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ಆಡುಗೊಡಿಯಲ್ಲಿ ನಡೆದಿದೆ. ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಸಂಚಾರ, ಒನ್ ವೇ ಹೀಗೆ ಸುಮಾರು 103 ಬಾರಿ ಬೈಕ್ ಸವಾರ ರಾಜೇಶ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಈ ಕಾರಣದಿಂದ ಸಂಚಾರಿ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದರು. ಪರಿಣಾಮ ಇಂದು ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಗೆ ಬಂದ ರಾಜೇಶ್ ಬರೋಬ್ಬರಿ …

Read More »

ಸಿಎಂ ಆಗಲೇಬೇಕು ಎಂಬ ಹಠಕ್ಕೆ ಬಿದ್ದಂತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್………!

ಬೆಂಗಳೂರು: ಸಿಎಂ ಆಗಲೇಬೇಕು ಎಂಬ ಹಠಕ್ಕೆ ಬಿದ್ದಂತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜ್ಯೋತಿಷ್ಯದ ಮೊರೆ ಹೋಗಿದ್ದು, ಕಚೇರಿಯಲ್ಲಿ ಓಡಾಡಲು ಪ್ರತ್ಯೇಕ ಬಾಗಿಲನ್ನೇ ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಆಗಲು ಕಚೇರಿ ಹಾಗೂ ಅಧಿಕೃತ ನಿವಾಸ ಕಚೇರಿಯನ್ನು ಶ್ವೇತ ವರ್ಣಕ್ಕೆ ಬದಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯ ಪಟ್ಟಕ್ಕೇರಲು ಜ್ಯೋತಿಷಿಗಳ ಸಲಹೆಯಂತೆ ಕಾಂಗ್ರೆಸ್ ಕಚೇರಿಯಲ್ಲಿ ಓಡಾಡಲು ಕುಬೇರ ಮೂಲೆಯಲ್ಲಿ ಹೊಸ ಬಾಗಿಲನ್ನೇ …

Read More »

ಇಂದು ರಾಜ್ಯದಲ್ಲಿ 8,580 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,00,406ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ ಮೂರು ಲಕ್ಷದ ಗಡಿ ದಾಟಿದೆ. ಇಂದು ರಾಜ್ಯದಲ್ಲಿ 8,580 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,00,406ಕ್ಕೆ ಏರಿಕೆಯಾಗಿದೆ. ಮರಣ ಕೇಕೆ ಮುಂದುವರಿಸಿರುವ ಕೊರೊನಾಗೆ ಇಂದು 133 ಸೋಂಕಿತರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 5,091ಕ್ಕೆ ಏರಿಕೆ ಕಂಡಿದೆ. ಇಂದು 7,249 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 83,608 ಸಕ್ರಿಯ ಪ್ರಕರಣಗಳಿವೆ. 760 ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ …

Read More »

ಜೂಜಾಡಲು ಕೆಲಸ ಮಾಡ್ತಿದ್ದ ಮನೆಯಲ್ಲೇ ಕಳ್ಳತನ – ಆರೋಪಿ ಬಂಧನ

ಬೆಂಗಳೂರು: ಜೂಜಾಡುವ ಗೀಳಿಗೆ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಶಂಕರಪ್ಪ (40) ಎಂದು ಗುರುತಿಸಲಾಗಿದೆ. ಶಂಕರಪ್ಪ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಗಿರಿನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದನು. ಆದರೆ ಆರೋಪಿ ಜೂಜಾಡುವ ಚಟ ಹೊಂದಿದ್ದನು. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಮಾರು 15 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದನು. ನಂತರ ಬೆಂಗಳೂರಿನಲ್ಲಿ ಮನೆಗಳವು ಮಾಡಿದ …

Read More »