Breaking News

ಬೆಂಗಳೂರು

ಸಿಡಿ ವಿಚಾರದಲ್ಲಿ ನಾನೂ ಕೂಡಾ ಸದನದ ಚರ್ಚೆಯಲ್ಲಿ ಭಾಗವಹಿಸಬೇಕಿತ್ತು, ಆದರೆ ಹಿರಿಯರು ಬೇಡ ಎಂದಿದ್ದಕ್ಕೆ ಸುಮ್ಮನಾದೆ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು : ಸಿಡಿ ವಿಚಾರದಲ್ಲಿ ನಾನೂ ಕೂಡಾ ಸದನದ ಚರ್ಚೆಯಲ್ಲಿ ಭಾಗವಹಿಸಬೇಕಿತ್ತು, ಆದರೆ ಹಿರಿಯರು ಬೇಡ ಎಂದಿದ್ದಕ್ಕೆ ಸುಮ್ಮನಾದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಆ ಹುಡುಗಿ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಆಕೆ ಒತ್ತಾಯದಿಂದ ಮಾತನಾಡಿದ್ದಾಳೋ, ಅಥವಾ ಸ್ವ-ಇಚ್ಛೆಯಿಂದ ಮಾತನಾಡಿದ್ದಾಳೋ ಗೊತ್ತಿಲ್ಲ. ಆದರೆ ಸಿಡಿಯಲ್ಲಿ ಇರುವ ದೃಶ್ಯ ಅಸಲಿಯೋ, ನಕಲಿಯೋ ಗೊತ್ತಿಲ್ಲ ಎಂದರು. ತನಿಖೆ ಆಗುವವರೆಗೂ ವಿರೋಧ ಪಕ್ಷ ಕೂಡ ಸಹಕರಿಸಬೇಕು. ಜನರ ಸಮಸ್ಯೆಗಳ …

Read More »

ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿಗ್ನಲ್ ಆಯಪ್ ಬಳಸುತ್ತಿರುವ ಸಿಡಿ ಪ್ರಕರಣದ ಕಿಂಗ್‌ಪಿನ್‌ಗಳು!

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಬಹಿರಂಗವಾದ ಬಂದ ಬಳಿಕ 20 ದಿನಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಿಂಗ್‌ಪಿನ್‌ಗಳು ಗೌಪ್ಯ ಸಂವಹನಕ್ಕೆ ‘ಸಿಗ್ನಲ್’ ಆಯಪ್ ಮೆಸೆಂಜರ್ ಬಳಸುತ್ತಿದ್ದಾರೆ ಎಂಬ ಸಂಗತಿ ವಿಶೇಷ ತನಿಖಾ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಿಡಿ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರು ಮತ್ತು ವಿವಾದಿತ ಯುವತಿ ಎಸ್‌ಐಟಿ ಗಾಳಕ್ಕೆ ಸಿಲುಕದಂತೆ ಹೊರ ರಾಜ್ಯಗಳಲ್ಲಿ …

Read More »

ಸಿಡಿ ಲೀಕ್​ ಆದಾಗಿನಿಂದ ಊರೂರು ಸುತ್ತುತ್ತಿರುವ ಕಿಂಗ್​ಪಿನ್, ಹ್ಯಾಕರ್​, ಯುವತಿ ಸದ್ಯ ರಾಜಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.?

ಬೆಂಗಳೂರು: ಬಗೆದಷ್ಟೂ ಆಳ ಎಂಬಂತೆ ತನಿಖೆ ಮುಂದುವರಿದಂತೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ ಲೀಕಾಸುರರ ಎಕ್ಸ್​ಕ್ಲೂಸಿವ್​ ಮಾಹಿತಿ ಲಭ್ಯವಾಗುತ್ತಲೇ ಇದೆ. ಸಿಡಿ ಲೀಕ್​ ಆದಾಗಿನಿಂದ ಊರೂರು ಸುತ್ತುತ್ತಿರುವ ಕಿಂಗ್​ಪಿನ್, ಹ್ಯಾಕರ್​, ಯುವತಿ ಸದ್ಯ ರಾಜಸ್ಥಾನದಲ್ಲಿದ್ದಾರೆ ಎನ್ನಲಾಗಿದೆ. ಇನ್ನು ಸಿಡಿ ಬಹಿರಂಗದ ಬಳಿಕ ಸಿಡಿ ಗ್ಯಾಂಗ್ ನಡೆಸಿದ್ದ ತಂತ್ರ ಏನು? ಹ್ಯಾಕರ್ ಶ್ರವಣ್ ಯಾವ ರೀತಿ ಪ್ಲಾನಿಂಗ್ ಮಾಡಿಕೊಂಡಿದ್ದ? ಅನ್ನೋದ್ರ ಕಂಪ್ಲೀಟ್​ ಡಿಟೇಲ್ಸ್ ಇಲ್ಲಿದೆ.  ಎಸ್‌ಐಟಿ …

Read More »

ಬಿಎಸ್ವೈ ಬೆನ್ನಿಗೆ ನಿಂತರೇ ಡಿಕೆಶಿ? ಏನಿದು ರಮೇಶ್ ಕುಮಾರ್ ಮಾತಿನ ಮರ್ಮ!

ಬೆಂಗಳೂರು ಮಾರ್ಚ್ 23: ಸೋಮವಾರ (ಮಾ 22) ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ, ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಬೆಂಕಿಯುಂಡೆಯಂತಹ ಭಾಷಣ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು. ಇವರ ಅಬ್ಬರದ ಭಾಷಣದ ಮಧ್ಯೆ ಮಾಜಿ ಸ್ಪೀಕರ್, ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಆಡಿದ ಮಾತು ಸದನವನ್ನು ನಗೆಗಡಲಲ್ಲಿ ತೇಲಿಸಿದ್ದು ಒಂದು ಕಡೆಯಾದರೆ, ಅವರ ಮಾತಿನ ಹಿಂದಿನ ಮರ್ಮವೇನು ಎನ್ನುವುದು ಸದ್ಯಕ್ಕೆ ಚರ್ಚೆಯ ವಿಷಯವಾಗಿದೆ.   …

Read More »

ಸಿದ್ದು-ಡಿಕೆಶಿ ಜತೆ ಲಕ್ಷ್ಮೀ ಏಕಾಂತ ಮಾತುಕತೆ! ಸಿಎಂಗೆ ಲಕ್ಷ್ಮೀ ಬ್ಲಾಕ್​ಮೇಲ್​ ಮಾಡ್ತಾರಾ..?

ಬೆಂಗಳೂರು: ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಹಾಗೂ 6 ಸಚಿವರು ಕೋರ್ಟ್​ಗೆ ಮೊರೆ ಹೋಗಿ ನಿರ್ಬಂಧಕಾಜ್ಞೆ ತಂದ ವಿಚಾರವಾಗಿ ಮೇಲ್ಮನೆಯಲ್ಲಿ ಸೋಮವಾರ ಪ್ರತಿಪಕ್ಷಗಳ ನಾಯಕರು ಆಕ್ಷೇಪಿಸಿದರು. ಎಸ್​ಐಟಿ ಸಿಡಿ ಪ್ರಚಾರಕರ ಬೆನ್ನುಹಿಂದೆ ಬಿದ್ದಿದೆ, ಸಂತ್ರಸ್ತ ಯುವತಿಗೆ ಅನ್ಯಾಯ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿಲ್ಲ. ಈ ಸಿಡಿ ಅಸಲಿಯೋ- ನಕಲಿಯೋ ಮೊದಲು ಆ ಬಗ್ಗೆ ತನಿಖೆ ಮಾಡಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಮಾಜಿ ಸಿಂ …

Read More »

‘ಸಿಡಿ ಹೆಸರು ಹೇಳಿದರೆ ಸಚಿವರು ಬೆಚ್ಚಿ ಬೀಳುತ್ತಾರೆ’

ಬೆಂಗಳೂರು, ಮಾ.23- ಸಿಡಿ ಹೆಸರು ಹೇಳಬೇಡಿ, ಈ ಸರ್ಕಾರದಲ್ಲಿನ ಸಚಿವರು ಬೆಚ್ಚಿ ಬೀಳುತ್ತಾರೆ ಎಂದು ಪ್ರತಿಪಕ್ಷದ ಸದಸ್ಯರು ಲೇವಡಿ ಮಾಡಿದ ಪ್ರಸಂಗ ವಿಧಾನಪರಿಷತ್‍ನಲ್ಲಿಂದು ನಡೆಯಿತು. ಶೂನ್ಯ ವೇಳೆಯಲ್ಲಿ ಸದಸ್ಯ ಶ್ರೀಕಾಂತ್ ಗೊಟ್ನೇಕರ್ ಅವರು ವಿಷಯ ಪ್ರಸ್ತಾಪಿಸುತ್ತ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೀದರ್‍ನಲ್ಲಿ ಮುಖ್ಯಮಂತ್ರಿ ಭಾಷಣ ಮಾಡುವ ವೇಳೆ ಮರಾಠಿಗರಿಗೆ 3ಬಿ ಯಿಂದ 2ಬಿಗೆ ಮೀಸಲಾತಿ ಬದಲಾವಣೆ ಮಾಡುವ ಭರವಸೆ ನೀಡಿದ್ದರು. ಸಿಎಂ ಭಾಷಣದ ಸಿಡಿ ನನ್ನ ಬಳಿ ಇದೆ …

Read More »

ಎಸ್‌ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಸಿಡಿ ಪ್ರಕರಣದಲ್ಲಿ ರಾಜಿನಾಮೆ ಸಲ್ಲಿಸಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಅವರ ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ತನಿಖೆಯ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಮೇಶ್‌ ಜಾರಕಿಹೊಳಿ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಿಡಿ ಪ್ರಕರಣ ಕುರಿತಂತೆ ಎಸ್‌ ಐ …

Read More »

ಜಿ.ಪಂ., ತಾ.ಪಂ. ಚುನಾವಣೆ ಮುಂದೂಡುವುದಿಲ್ಲ: ಸರಕಾರ ಸ್ಪಷ್ಟನೆ

ಬೆಂಗಳೂರು: ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ವಿಂಗಡಣೆ ಮಾರ್ಗಸೂಚಿಗಳ ಬಗ್ಗೆ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಸಭೆ ನಡೆಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ರಾಜ್ಯ ಚುನಾವಣ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಸರಕಾರ ಪ್ರಕಟಿಸಿದೆ. ಈ ನಡುವೆ, ಯಾವುದೇ ಕಾರಣಕ್ಕೂ ಜಿ.ಪಂ., ತಾ.ಪಂ. ಚುನಾವಣೆ ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸೋಮವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ವಿ. ಸುನಿಲ್‌ ಕುಮಾರ್‌ ಪ್ರಸ್ತಾವಿಸಿದ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಜಿ.ಪಂ., ತಾ.ಪಂ. ಕ್ಷೇತ್ರಗಳ …

Read More »

ಸಿ.ಡಿ. ಪ್ರಕರಣ: ನ್ಯಾಯಾಂಗ ತನಿಖೆಗೆ ಪಟ್ಟು, 6 ಸಚಿವರ ರಾಜೀನಾಮೆಗೂ ಕೈ ಆಗ್ರಹ

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಇದ್ದಾರೆ ಎನ್ನಲಾದ ಅಶ್ಲೀಲ ಸಿ.ಡಿ. ಪ್ರಕರಣ ವಿಧಾನಸಭೆಯಲ್ಲಿ ಸೋಮವಾರ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ ಸದಸ್ಯರ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಯಿತು. ಸುಮಾರು 4 ತಾಸುಗಳ ಕಾಲ ಚರ್ಚೆ ನಡೆದು, ಸರಕಾರದ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್‌ ಸದಸ್ಯರು ಆರು ಮಂದಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸಿ.ಡಿ. ಪ್ರಕರಣದ ಕುರಿತು ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ …

Read More »

ಆರು ಮಂದಿ ಸಚಿವರು ನ್ಯಾಯಾಲಯಕ್ಕೆ ಹೋಗಲು ಸಲಹೆ ಕೊಟ್ಟವರು ಅವಿವೇಕಿಗಳು: ರಮೇಶ್ ಕುಮಾರ್

ಬೆಂಗಳೂರು: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಸಚಿವರು ನ್ಯಾಯಾಲಯಕ್ಕೆ ಹೋಗಲು ಸಲಹೆ ಕೊಟ್ಟವರು ಅವಿವೇಕಿಗಳು ಎಂದು ರಮೇಶ್ ಕುಮಾರ್ ಪರೋಕ್ಷವಾಗಿ ಸಚಿವ ಸುಧಾಕರ್ ಗೆ ಟಾಂಗ್ ನೀಡಿದರು. ಸಿಡಿ ಚರ್ಚೆ ವೇಳೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗಲು ಸಲಹೆ ಕೊಟ್ಟವರು ಅವಿವೇಕಿಗಳು ಅಥವಾ ಹಿತೈಷಿಗಳು ಎಂದು ನಟಿಸಿ ನಿಮ್ಮನ್ನು ಮುಗಿಸಲು ಮಾಡಿದ ಸಂಚು ಎಂದು ಆರೋಪಿಸಿದರು. ಕೋರ್ಟ್ ಗೆ ಹೋಗಿದ್ದನ್ನು ಸಮಾಜ ಏನು ತಿಳಿದುಕೊಳ್ಳುತ್ತದೆ, …

Read More »