ಬೆಂಗಳೂರು, ಮೇ. 12: ರೂಪಾಂತರಿ ಕೊರೊನಾ ವೈರೆಸ್ ಎರಡನೇ ಅಲೆಗೆ ಬೆಂಗಳೂರು ಪೊಲೀಸರು ಕೂಡ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ 1268 ಪೊಲೀಸ್ ಸಿಬ್ಬಂದಿ ಕೊರೊನಾ ಪಾಸಿಟಿವ್‌ಗೆ ಒಳಗಾಗಿದ್ದಾರೆ. ಅದರಲ್ಲಿ ಹನ್ನೆರಡು ಮಂದಿ ಪೊಲೀಸ್ ಸಿಬ್ಬಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಾರ್ಯಾಲಯದಿಂದ ಬಿಡುಗಡೆ ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ 1268 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 736 ಮಂದಿ ಮನೆಗಳಲ್ಲಿ ಕ್ವಾರೆಂಟೈನ್ ಒಳಗಾಗಿದ್ದಾರೆ. ಹದಿನಾಲ್ಕು …
Read More »ಕೊರೋನಾಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಠಾಗೂರ್
ಬೆಂಗಳೂರು,ಮೇ.12- ದಕ್ಷತೆಗೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಠಾಗೂರ್(70) ಅವರು ಕೊರೊನಾಗೆ ಬಲಿಯಾಗಿದ್ದಾರೆ. ದಿ. ಮಾಜಿ ವಿಧಾನ ಪರಿಷತ್ ಸದಸ್ಯ ವೀರಣ್ಣ ಗೌಡ ಅವರ ಪುತ್ರರಾದ ಕೆ.ವಿ.ಆರ್. ಠಾಗೂರ್ ಅವರು ಸದಾ ಹಸನ್ಮುಖಿಯಾಗಿ, ಉತ್ಸಾಹದಿಂದಲೇ ಎಲ್ಲರನ್ನು ಬೆನ್ನುತಟ್ಟಿ ಬೆಳೆಸುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸರಳ,ಸಜ್ಜನ ಅಧಿಕಾರಿಯೆಂದೇ ಗುರುತಿಸಿ ಕೊಂಡಿದ್ದ ಠಾಗೂರರು ಸಾಹಿತ್ಯ …
Read More »ಮೈಸೂರು ತಲುಪಿದ ಆಮ್ಲಜನಕ ಟ್ಯಾಂಕ್
ಮೈಸೂರು: ಕೇಂದ್ರ ಸರ್ಕಾರವು ಆಮ್ಲಜನಕ ಎಕ್ಸ್‌ಪ್ರೆಸ್‌ನಲ್ಲಿ ಮಂಗಳವಾರ ಬೆಂಗಳೂರಿಗೆ ಸಾಗಿಸಿದ್ದ ಆಮ್ಲಜನಕದ ಒಂದು ಕಂಟೈನರ್ ಅನ್ನು (ಟ್ಯಾಂಕ್) ಬುಧವಾರ ಬೆಳಿಗ್ಗೆ ಮೈಸೂರಿಗೆ ತರಲಾಯಿತು. ಈ ಕಂಟೈನರ್‌ನಲ್ಲಿ 20 ಸಾವಿರ ಲೀಟರ್ ಆಮ್ಲಜನಕ ತುಂಬಿದೆ. ಈ ಆಮ್ಲಜನಕವನ್ನು ಸ್ಥಳೀಯವಾಗಿ ಶೇಖರಿಸಿ ಕೂಡಲೇ ಕಂಟೈನರ್ ಹಿಂದಿರುಗಿಸಬೇಕಿತ್ತು. ಆದರೆ, ಇಷ್ಟು ಆಮ್ಲಜನಕವನ್ನು ಸಂಗ್ರಹಿಸಲು ಬೇಕಾದ ಶೇಖರಣಾ ಘಟಕ ಮೈಸೂರು ಜಿಲ್ಲೆಯಲ್ಲಿ ಇರಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಿಕೋಪ ನಿರ್ವಹಣೆ ಕಾಯ್ದೆ ಪ್ರಯೋಗಿಸಿ …
Read More »ಓಲಾ ಕ್ಯಾಬ್ ಮೂಲಕ ಮನೆ ಬಾಗಿಲಿಗೆ ಆಮ್ಲಜನಕ:
ಬೆಂಗಳೂರು, ಮೇ12-ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು (Oxygen Concentrator) ಒದಗಿಸುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು. ಮೊದಲು ಬೆಂಗಳೂರಿನಲ್ಲಿ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಈ ಕೆಲಸದಲ್ಲಿ ಸರ್ಕಾರದ ಜತೆ ಗಿವ್ ಇಂಡಿಯಾ ಹಾಗೂ ಓಲಾ ಕ್ಯಾಬ್ ಕಂಪನಿಗಳು ಕೈಜೋಡಿಸಿವೆ.ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಇಡೀ ರಾಜ್ಯದಲ್ಲಿಯೇ ಮೊತ್ತ …
Read More »ಮಾಧ್ಯಮಗಳ ಮೇಲೆ ನಿರ್ಭಂಧ ಸಾದ್ಯವಿಲ್ಲ ಎಂದ ಕೋರ್ಟ್
ಬೆಂಗಳೂರು: ಕರೊನಾದ ಭೀಕರತೆಯ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿರುವುದರಿಂದ ಟಿ.ವಿ ಚಾನೆಲ್‌ಗಳನ್ನೇ ದೂಷಿಸಿ ದಿನನಿತ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುವುದು ಹೊಸತೇನಲ್ಲ. ಯಾವುದೇ ವಿಷಯಗಳನ್ನು ಮಾಧ್ಯಮಗಳು ವರದಿ ಮಾಡಿದಾಗಲೂ ಇಂಥ ಟೀಕೆಗಳು ಬರುತ್ತವೆ.ಕರೊನಾದ ಕರಾಳ ಮುಖವನ್ನು ಬಿಚ್ಚಿಡುವ ಚಾನೆಲ್‌ಗಳನ್ನು ಎಡಬಿಡದೇ ನೋಡುತ್ತಾ ಅದರ ವಿರುದ್ಧ ದೂಷಿಸುವವರೇ ಹೆಚ್ಚಾಗಿ ಈ ರೀತಿಯ ಕಮೆಂಟ್‌ಗಳನ್ನು ಮಾಡುವುದು ತಿಳಿದ ವಿಷಯವೇ. ಹೀಗೆ ಮಾಧ್ಯಮಗಳನ್ನು ದೂಷಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಈ ರೀತಿಯ …
Read More »ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡದ ‘ಆಯುಷ್ಮಾನ್ ಭಾರತ್’ ಯಾವ ಪುರುಷಾರ್ಥಕ್ಕೆ.? ಕುಮಾರಸ್ವಾಮಿ ಆಕ್ರೋಶ
ಬೆಂಗಳೂರು: ಕೊರೊನಾ ಸೋಂಕಿತರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶವಿಲ್ಲವೆಂದ ಮೇಲೆ ಕೇಂದ್ರದ ಆಯುಷ್ಮಾನ್ ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಸರಾಗವಾಗಿ ಕೊರೋನಾ ಉಚಿತ ಚಿಕಿತ್ಸೆ ಕೊಡುವುದಿಲ್ಲ ಎಂದಾದರೆ ಈ ಯೋಜನೆ ಇರುವುದು ಮತ್ತಿನ್ಯಾವ ಪುರುಷಾರ್ಥಕ್ಕೆ? ಕೇಂದ್ರ ಸರ್ಕಾರ ತಕ್ಷಣ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಕೊರೊನಾ ಸೋಂಕಿತರು ಉಚಿತವಾಗಿ …
Read More »ತಜ್ಞರ ಎಚ್ಚರಿಕೆ ಕಡೆಗಣಿಸಿ ಜನರನ್ನು ಸಾವಿನ ದವಡೆಗೆ ನೂಕಿದ ಸರ್ಕಾರ; ಲಸಿಕೆ ಕೊಡುವಲ್ಲೂ ವಿಫಲ: ಬದುಕು ಹಸನಾಗುವುದಿರಲಿ ಸತ್ತರೂ ಸಂಸ್ಕಾರವಿಲ್ಲದ ಸ್ಥಿತಿ; ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಎದುರಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್, ಆಕ್ಸಿಜನ್, ಐಸಿಯು ಆಯ್ತು ಈಗ ವ್ಯಾಕ್ಸಿನ್ ಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಜ್ಞರ ಎಚ್ಚರಿಕೆ ಕಡೆಗಣಿಸಿ ಜನರನ್ನು ಸಾವಿನ ದವಡೆಗೆ ದೂಡಿದ್ದೂ ಅಲ್ಲದೇ ಲಸಿಕೆ ಹಂಚಿಕೆಯಲ್ಲಿಯೂ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದೆ. ಆಕ್ಸಿಜನ್, ಐಸಿಯು, ರೆಮಿಡಿಸಿವಿರ್, ಬೆಡ್, ಚಿಕಿತ್ಸೆ ಕೊಡಲಾಗದೆ ಜನರನ್ನು ಹಾದಿ ಬೀದಿಯಲ್ಲಿ ಕೊಲ್ಲುತ್ತಿರುವ ರಾಜ್ಯ ಸರ್ಕಾರ ಲಸಿಕೆ ವೈಫಲ್ಯದ …
Read More »‘ನರೇಗಾ’ ಕಾರ್ಮಿಕರಿಗೆ ಮುಖ್ಯ ಮಾಹಿತಿ: ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಳ ಹಿನ್ನಲೆ ಮೇ 24 ರವರೆಗೆ ಕೆಲಸ ಸ್ಥಗಿತ
ಬೆಂಗಳೂರು: ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೇ 24 ರವರೆಗೆ ನರೇಗಾ ಕೆಲಸವನ್ನು ಸ್ಥಗಿತಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಮೇ 24ರ ವರೆಗೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಹೆಚ್ಚು ಜನ ಗುಂಪುಗೂಡಬಾರದೆಂದು ಆದೇಶ ಹೊರಡಿಸಲಾಗಿದೆ. ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಜನ ತೆರಳಿದ್ದು, ಬಹುತೇಕರು ನರೇಗಾ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳ ಆತಂಕ ಹಿನ್ನೆಲೆಯಲ್ಲಿ ಮೇ 24ರ ವರೆಗೆ …
Read More »ಬಡವರು, ವಲಸಿಗರು, ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಮೇ 24 ರವರೆಗೆ ಉಚಿತ ಊಟ, ತಿಂಡಿ, ಇಂದಿರಾ ಕ್ಯಾಂಟೀನ್ ನಲ್ಲಿ ಮೂರು ಹೊತ್ತು ಆಹಾರ
ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಉಚಿತವಾಗಿ ಆಹಾರ ಒದಗಿಸಲು ಆದೇಶಿಸಲಾಗಿದೆ. ಕೂಲಿ ಕಾರ್ಮಿಕರು, ಬಡವರು, ವಲಸಿಗರು, ದುರ್ಬಲ ವರ್ಗದವರಿಗೆ ಹಸಿವು ನೀಗಿಸಲು ಮೇ 24 ರ ವರೆಗೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಆಹಾರ ಒದಗಿಸಲಾಗುವುದು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ 170ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಗಳು, ಬೆಂಗಳೂರಿನಲ್ಲಿರುವ 150 ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್ ಗಳು ಮತ್ತು 30 ಕ್ಕೂ ಅಧಿಕ …
Read More »ಕೈಗಾರಿಕೆಗಳಿಗೆ ವಿಧಿಸುವ ಸಮ್ಮತಿ ಶುಲ್ಕದ ಪರಿಷ್ಕರಣೆಗೆ ನೂತನ ಸೂತ್ರ ಸಿದ್ಧ: ಶೆಟ್ಟರ್
ಬೆಂಗಳೂರು : ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೈಗಾರಿಕೆಗಳಿಗೆ ವಿಧಿಸುವ ಸಮ್ಮತಿ ಶುಲ್ಕದ ಪರಿಷ್ಕರಣೆಗೆ ಈಗಾಗಲೇ ನೂತನ ಸೂತ್ರವನ್ನು ರಚಿಸಿದ್ದು, ಕೆಲವೇ ದಿನಗಳಲ್ಲಿ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು. ಇಂದು ಬೆಂಗಳೂರಿನಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ವತಿಯಿಂದ ಆಯೋಜಿಸಿದ್ದ ವೆಬಿನಾರ್ ನಲ್ಲಿ …
Read More »