ಬಾಗಲಕೋಟೆ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ದಿಢೀರ್ ಬೆಳವಣಿಗೆಯೊಂದು ನಡೆದಿದೆ. ಕರ್ತವ್ಯ ಲೋಪದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬನಹಟ್ಟಿ ಸಿಪಿಐ ಅವರನ್ನು ಅಮಾನತ್ತುಗೊಳಿಸಿ ಉತ್ತರ ವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ. ಇಲಾಖೆಯ ಒಳಗಿನ ಈ ಹಠಾತ್ ಕ್ರಮ ಈಗ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.” ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪೊಲೀಸ್ ಠಾಣೆಯ ಸಿಪಿಐ ಹೆಚ್.ಆರ್. ಪಾಟೀಲ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಐಜಿಪಿ ಆದೇಶಿಸಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಶಿಸ್ತು ಉಲ್ಲಂಘನೆಯ …
Read More »ಧರ್ಮವೆಂದರೆ ಮೀಸಲಾತಿ ಹೋರಾಟವಲ್ಲ : ಬಸವಲಿಂಗಮಹಾಸ್ವಾಮಿಗಳು
ಬಾಗಲಕೋಟೆ: ಧರ್ಮ ಎಂದರೆ ಮೀಸಲಾತಿ ಹೋರಾಟಗಳಲ್ಲ ಅದೊಂದು ಸಾಮಾಜಮುಖಿ ಚಿಂತನೆಯ ನಡೆಯಾಗಿದ್ದು ಇತ್ತೀಚೆಗೆ ಧರ್ಮದ ಮೂಲ ಪರಿಕಲ್ಪನೆಯ ಅರಿವು ಕಡಿಮೆಯಾಗುತ್ತಿದೆ ಎಂದು ಕೊಟ್ಟೂರೇಶ್ವರ.ಹೊಸಪೇಟೆ-ಅನ್ನದಾನೀಶ್ವರ ಸಂಸ್ಥಾನಮಠದ ಹಾಲಕೆರೆಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು. ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಚರಂತಿಮಠದ ಆವರಣದಲ್ಲಿ ಶನಿವಾರ ನಡೆದ ಸಮಾಜ ಚಿಂತನ ಸಮಾರಂಭದ ದಿವ್ಯ ಸಾನಿದ್ಯವನ್ನು ವಹಿಸಿ ಹಾನಗಲ್ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನಗಳನ್ನು …
Read More »ಸಂತ್ರಸ್ತರ ಸೂರಿಗಾಗಿ ಕೊಟ್ಟ ಜಾಗದಲ್ಲಿ ಮಸೀದಿ ನಿರ್ಮಾಣ: ಬಾಗಲಕೋಟೆಯಲ್ಲಿ ಭುಗಿಲೆದ್ದ ಆಕ್ರೋಶ
ಬಾಗಲಕೋಟೆ: ಬಾಗಲಕೋಟೆ ಜನರು ಆಲಮಟ್ಟಿ ಜಲಾಶಯಕ್ಕೆ ಮನೆ ಮಠ ಆಸ್ತಿ ಪಾಸ್ತಿ ಹಿರಿಯರ ಕನಸು ಎಲ್ಲವನ್ನು ಕೃಷ್ಣಾರ್ಪಣೆ ಮಾಡಿ ಊರು ಬಿಟ್ಟವರು. ಆ ಸಂತ್ರಸ್ತರ ಪುನರ್ವಸತಿಗೆ ನಿರ್ಮಾಣವಾದ ನಗರವೇ ನವನಗರ. ಮನೆಗಳ ನಿರ್ಮಾಣಕ್ಕೆ ಅಂತ ಇರುವ ಜಾಗದಲ್ಲೂ ಮಸೀದಿ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಮೊದಲು ತಗಡಿನ ಶೆಡ್ ತರಹ ಕಟ್ಟಿ ಮುಂದೆ ಅವುಗಳನ್ನು ಮಸೀದಿಗಳನ್ನಾಗಿ ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ರೊಚ್ಚಿಗೆದ್ದ ಸಾರ್ವಜನಿಕರು ಹಾಗೂ ಹಿಂದು ಕಾರ್ಯಕರ್ತರು ಹೋರಾಟದ ಹಾದಿ ಹಿಡಿದಿದ್ದಾರೆ. …
Read More »ವಿದ್ಯೆಯ ಜೊತೆಗೆ ಅನ್ನವನ್ನು ನೀಡಿದ ಕೀರ್ತಿ ಉತ್ತರ ಕರ್ನಾಟಕದ ಮಠಗಳದ್ದು : ಡಾ.ಮಲ್ಲಿಕಾರ್ಜುನ ಮುರಘರಾಜೇಂದ್ರಮಹಾಸ್ವಾಮಿಗಳು
ಬಾಗಲಕೋಟೆ: ನಾಡಿನಲ್ಲಿ ವಿದ್ಯೆಯ ಜೊತೆಗೆ ಅನ್ನವನ್ನು ನೀಡಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಉತ್ತರ ಕರ್ನಾಟಕದ ಮಠಗಳಿಗೆ ಸಲ್ಲುತ್ತದೆ ಎಂದು ಶಿವಮೊಗ್ಗ ಆನಂದಪುರ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ನಗರದ ಚರಂತಿಮಠ ಶಿವಾನುಭವ ಮಂಟಪದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಟೆಂಗಿನಮಠ-ಟೀಕಿನಮಠದ ಶತಾಯುಸಿ ಲಿಂ.ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ರಜತ ಪುಣ್ಯಸ್ಮರಣೆ, ಹಾಗೂ ಲಿಂ.ಶ್ರೀ ರೇವಣಸಿದ್ದ ಮಹಾಸ್ವಾಮಿಗಳವರ ದಶಮ ಪುಣ್ಯಸ್ಮರಣೆಯ ನಿಮಿತ್ಯ ಗುರುಸ್ಮರಣೆ ಸಮಾರಂಭದಲ್ಲಿ ಟೀಕಿನಮಠದ ಶ್ರೀಗಳು ಹಾಗೂ …
Read More »ವೀರಶೈವ ಲಿಂಗಾಯತ ಧರ್ಮ ಸಮನ್ವಯತೆಯ ಧರ್ಮ : ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
ವೀರಶೈವ ಲಿಂಗಾಯತ ಧರ್ಮ ಸಮನ್ವಯತೆಯ ಧರ್ಮ : ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಬಾಗಲಕೋಟೆ: ಸಮಾನತೆಯನ್ನು ಭೋದಿಸುವ ಮೂಲಕ ಎಲ್ಲ ಸಮುದಾಯಗಳೊಡನೆ ಸಮನ್ವಯವನ್ನು ಸಾಧಿಸಿದ ಶಿಕ್ಷಣ, ಅನ್ನ, ಉದ್ಯೋಗ ನೀಡುವ ಮೂಲಕ ಎಲ್ಲರ ಪ್ರಗತಿಗೆ ಕಾರಣವಾಗಿರುವ ಸಮಾಜ ವೀರಶೈವ ಲಿಂಗಾಯತ ಸಮಾಜ ಎಂದು ಸವದತ್ತಿಯ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ನಿಮಿತ್ಯ ಚರಂತಿಮಠದ ಆವರಣದಲ್ಲಿ ಶುಕ್ರವಾರ ನಡೆದ ಧರ್ಮತತ್ವ ಚಿಂತನೆ …
Read More »ಬಾಗಲಕೋಟೆ | ಅತಿಥಿ ಉಪನ್ಯಾಸಕರ ವಿರುದ್ಧ ನಕಲಿ PhD ಪ್ರಮಾಣ ಪತ್ರ ಸಲ್ಲಿಕೆ ಆರೋಪ
ಬಾಗಲಕೋಟೆ: ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ವಿರುದ್ಧ ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ಸಲ್ಲಿಸಿ ನೌಕರಿ ಪಡೆದ ಆರೋಪ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿರುವ 18 ಸರ್ಕಾರಿ ಕಾಲೇಜಗಳಲ್ಲಿ 100ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅದ್ರಲ್ಲಿ ಶೇ.60 ರಷ್ಟು ಅತಿಥಿ ಉಪನ್ಯಾಸಕರು ಹೊರ ರಾಜ್ಯದಿಂದ ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ಪಡೆದು ಕೆಲಸ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಒಂದೊಂದು ಪ್ರಮಾಣಪತ್ರಕ್ಕೆ 3-4 ಲಕ್ಷ ಹಣ …
Read More »ತತ್ವ ಶ್ರೀಮಂತಿಕೆ ವೀರಶೈವ ಸಮಾಜದ ಶಕ್ತಿ : ಅನ್ನದಾನೀಶ್ವರ ಮಹಾಸ್ವಾಮಿಗಳು
ಬಾಗಲಕೋಟೆ: ವೀರಶೈವ-ಲಿಂಗಾಯತ ಎರಡು ಒಂದೆಯಾಗಿದ್ದು ತತ್ವ ಶ್ರೀಮಂತಿಕೆ ವೀರಶೈವ ಸಮಾಜದ ಶಕ್ತಿಯಾಗಿದೆ,ಲಿಂಗದ ಪ್ರಾಣವೇ ಜಂಗಮರು ಎಂದು ಸಾರುವ ಮೂಲಕ ಎಲ್ಲರನ್ನು ಏಕತೆಯಿಂದ ನೋಡುವ ಏಕೈಕ ಧರ್ಮವಾಗಿದೆ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನಮಠದ ಮನ್ನಿರಂಜನ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಸಮಾರಂಭ ನಿಮಿತ್ಯ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಗುರುವಾರ ನಡೆದ ಕಾರಣಿಕ ಯುಗಪುರುಷ ಲಿಂ.ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ 159 ನೆಯ …
Read More »ಉದ್ಯೋಗ ಅರಿಸದೇ ಆಯ್ಕೆಯ ಸಾಮರ್ಥ್ಯ ಬೆಳಸಿಕೊಳ್ಳಿ
ಬಾಗಲಕೋಟೆ: ಕಲಾ ಅಧ್ಯಯನದಿಂದ ಹೇರಳ ಅವಕಾಶಗಳಿವೆ. ವಿಸ್ತೃತ ಅಧ್ಯಯನ ಶೈಲಿಯಿಂದ ಉದ್ಯೋಗವನ್ನು ಅರಿಸುವ ಬದಲು ಆಯ್ಕೆಮಾಡಿಕೊಳ್ಳುವ ಸಾಮರ್ಥ್ಯ ಬೆಳಸಿಕೊಳ್ಳಲು ಸಾಧ್ಯ ಎಂದು ಬಸವೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕೆ.ಎಚ್ ಹೊಸೂರ ಹೇಳಿದರು. ನಗರದ ಬಸವೇಶ್ವರ ಪದವಿಪೂರ್ವ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ , ವಾರ್ಷಿಕ ಸಂಚಿಕೆ ಬಿಡುಗಡೆ, ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಕ್ರೀಡಾ ಸಾಂಸ್ಕೃತಿಕ, ಎನ್.ಸಿ.ಸಿ, ಎನ್.ಎಸ್.ಎಸ್ ರೋವರ್ ರೇಂಜರ್ ಚಟುವಟಿಕೆಗಳ …
Read More »ಮೂರು ಮಕ್ಕಳನ್ನು ಕೊಲೆಗೈದು ವಿಷ ಸೇವಿಸಿದ ತಾಯಿ!
ಬಾಗಲಕೋಟೆ: ತಾಯಿಯೊಬ್ಬಳು ಭಾನುವಾರ ಮೂರು ಮಕ್ಕಳಿಗೆ ನೇಣು ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ರೂಪಾ ಹನುಮಂತ ಗೌಡರ (28) ಕೃತ್ಯ ಎಸಗಿದ ತಾಯಿ. ಸಮೃದ್ಧಿ ಹನುಮಂತಪ್ಪ ಗೌಡರ (5), ಪ್ರೀತಂ ಹನುಮಂತಪ್ಪ ಗೌಡರ (4), ಸುಕ್ಷೀತ ಹನುಮಂತಪ್ಪ ಗೌಡರ (2) ಮೃತ ಮಕ್ಕಳು. ಮೂವರು ಮಕ್ಕಳನ್ನು ಮನೆಯಲ್ಲಿಯೇ ನೇಣು ಹಾಕಿ ಸಾಯಿಸಿದ್ದಾಳೆ. ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ರೂಪಾ …
Read More »ಡಾ. ಸಿದ್ದರಾಮಯ್ಯನವರಿಗೆ ಸಂಗೀತ ರತ್ನ ಪ್ರಶಸ್ತಿ
ಬಾಗಲಕೋಟೆ : ಬಿ.ವಿ.ವಿ. ಸಂಘದ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಪಕ ಮತ್ತು ನಾಡಿನ ಹಿಂದೂಸ್ತಾನಿ ಸಂಗೀತಗಾರರಾದ ಡಾ. ಪಂಡಿತ ಸಿದ್ದರಾಮಯ್ಯ ಮಠಪತಿ ( ರುದ್ರಮಠ ) ಗೊರಟಾ ಅವರಿಗೆ ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೊಡದ ಹಿರೇಮಠ ಚೆನ್ನಬಸವೇಶ್ವರ ಸಂಸ್ಥಾನವು ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ನೀಡಿದೆ . ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದನ್ನು ಒಳಗೊಂಡಿದ್ದೆ. ಡಾ. ಪಂಡಿತ ಸಿದ್ದರಾಮಯ್ಯ ಮಠಪತಿ ಅವರು ಕಳೆದ …
Read More »
Laxmi News 24×7