Breaking News

ಬಿ.ವೈ. ಪವಾರಗೆ ‘ತಾಂತ್ರಿಕ ರತ್ನ’ ಪ್ರಶಸ್ತಿ

Spread the love

ಬೆಳಗಾವಿ: ‘ದೇಶ ಕಟ್ಟುವ ಪ್ರಯತ್ನದಲ್ಲಿ ಸಿವಿಲ್ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ’ ಎಂದು ಬೆಂಗಳೂರಿನ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಭಾ ಪುರಸ್ಕಾರ ಪ್ರತಿಷ್ಠಾನ ಟ್ರಸ್ಟ್‌ ಅಧ್ಯಕ್ಷ ಆರ್. ನಾಗರಾಜ್ ಹೇಳಿದರು.

ಇಲ್ಲಿ ಲೋಕೋಪಯೋಗಿ ಇಲಾಖೆಯ ಎಸ್‌ಇ ಬಿ.ವೈ. ಪವಾರ ಅವರಿಗೆ ‘ತಾಂತ್ರಿಕ ರತ್ನ’ ಪ್ರಶಸ್ತಿ ನೀಡಿ ಮಾತನಾಡಿದರು.

‘ಸಿವಿಲ್‌ ಎಂಜಿನಿಯರ್‌ಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ, ಸದೃಢವಾದ ರಾಷ್ಟ್ರವನ್ನು ನಿರ್ಮಾಣ ಮಾಡಬಹುದು’ ಎಂದರು.

‘ಪ್ರತಿಷ್ಠಾನದಿಂದ ಸರ್ಕಾರದ ಅನುಮೋದನೆ ಮೇರೆಗೆ ಪ್ರಶಸ್ತಿ ನೀಡಲಾಗಿದೆ. ಕೊರೊನಾ ವೈರಸ್‌ ಕಾರಣದಿಂದಾಗಿ ಅವರರ ಕಚೇರಿಯಲ್ಲೇ ಪ್ರದಾನ ಮಾಡಲಾಗಿದೆ’ ಎಂದು ತಿಳಿಸಿದರು.

ಎಇ ಸಂಜೀವಕುಮಾರ ಹುಲಕಾಯಿ, ವಿ.ಎನ್. ಪಾಟೀಲ, ತಾಂತ್ರಿಕ ಸಹಾಯಕ ಎಂ.ಬಿ. ಗಸ್ತಿ, ನಿಬಂಧಕ ಶಿರೀಷ ಜೋಶಿ ಇದ್ದರು.


Spread the love

About Laxminews 24x7

Check Also

ಅಪಘಾತ ಬ್ಲಾೃಕ್‌ಸ್ಪಾಟ್ ಕುರಿತು ಸುಧಾರಣಾ ಕ್ರಮ ಕೈಗೊಳ್ಳಲು ಸತೀಶ ಜಾರಕಿಹೊಳಿ ಸೂಚನೆ

Spread the loveಬೆಳಗಾವಿ: ವಾಕರಸಾ ಸಂಸ್ಥೆ ವ್ಯಾಪ್ತಿಯ 6 ಕಂದಾಯ ಜಿಲ್ಲೆಗಳ ಒಟ್ಟು 118 ಅಪಘಾತ ಕಪ್ಪು ಸ್ಥಳಗಳ(ಬ್ಲಾೃಕ್‌ಸ್ಪಾಟ್) ಕುರಿತು ಅಲ್ಪಾವಧಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ