ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯಿಂದ ಇದುವರೆಗೆ ರಾಜ್ಯ ಸೇರಿದಂತೆ ರಾಜಧಾನಿಯ ಅನೇಕ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ಮತ್ತೊಂದು ಹೆಜ್ಜೆ ಎನ್ನುವಂತೆ ಕೆ ಎಸ್ ಆರ್ ಟಿ ಸಿ ಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ಮಾರ್ಗದಲ್ಲಿ ಪ್ಲೈ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಈ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಾಯಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಪ್ಲೈ ಬಸ್ ಸಾರಿಗೆಗಳನ್ನು ದಿನಾಂಕ 10-09-2020 ರಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ.
ಇಂತಹ ಬಸ್ ಸೇವೆಯ ವೇಳಾ ಪಟ್ಟಿ ಮತ್ತು ಪ್ರಯಾಣದ ದರ ವಿವರ ಈ ಕೆಳಗಿನಂತಿದೆ.
ಬೆಂಗಳೂರು ಟು ಮೈಸೂರು ಪ್ಲೈ ಬಸ್ ಸಾರಿಗೆ ದಿನಾಂಕ 10-09-2020ರಿಂದ ಆರಂಭವಾಗಲಿದೆ. ಈ ಬಸ್ ಪ್ರಯಾಣ ದರ ರೂ.750 ಆಗಿರುತ್ತದೆ. ಕೆಐಎಎಲ್ ನಿಂದ 9.30, 11.30,18.30 ಮತ್ತು 20.30ಕ್ಕೆ ಹೊರಟು ಮೈಸೂರನ್ನು 13.30, 15.30, 22.30 ಮತ್ತು 00.30 ಸಮಯಕ್ಕೆ ತಲುಪಲಿದೆ.
ಇನ್ನೂ ಮೈಸೂರಿನಿಂದ ನೇರವಾಗಿ ಕೆಂಪೇಗೌಡ ಅಂತಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 04.00, 14.00, 16.00 ಮತ್ತು 00.15 ಸಮಯಕ್ಕೆ ಹೊರಟು, ಕೆಐಎಎಲ್ ವಿಮಾನ ನಿಲ್ದಾಣವನ್ನು 08.00, 18.00, 20.00 ಮತ್ತು 04.00 ಸಮಯಕ್ಕೆ ತಲುಪಲಿದೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??