Breaking News

‘ಪ್ರತ್ಯೇಕ ಸಭೆ ನಡೆಸಿದ್ದು ನಿಜ’ : ಉಲ್ಟಾ ಹೊಡೆದ ಶಾಸಕ ಯತ್ನಾಳ್…………

Spread the love

ಬೆಂಗಳೂರು, ಮೇ 29- ನಾವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಾಯಕತ್ವದ ವಿರುದ್ಧವಾಗಲಿ ಅಥವಾ ಸರ್ಕಾರವನ್ನು ಪತನಗೊಳಿಸಲು ಪ್ರತ್ಯೇಕ ಸಭೆ ನಡೆಸಿಲ್ಲ ಎಂದು ವಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಒಂದೇ ದಿನದಲ್ಲೇ ಉಲ್ಟಾ ಹೊಡೆದಿದ್ದಾರೆ.

ನಾವೆಲ್ಲರೂ ಪ್ರತ್ಯೇಕ ಸಭೆ ನಡೆಸಿದ್ದು ನಿಜ. ಅಲ್ಲಿ ಏನೇನು ಮಾತುಕತೆ ನಡೆದಿದೆ ಎಂಬುದರ ಬಗ್ಗೆ ಮಾಧ್ಯದವರ ಮುಂದೆ ಬಹಿರಂಗ ಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ಈ ಹಿಂದಿಗಿಂತಲೂ ತುಂಬಾ ಸ್ಟ್ರಾಂಗ್ ಇದೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಲೇಬೇಕು. ಹೈಕಮಾಂಡ್ ನಿರ್ಧಾರವನ್ನು ಯಾರೊಬ್ಬರೂ ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿದರು.

ಸಮಾನ ಮನಸ್ಕ ಶಾಸಕರು. ನಮ್ಮ ನಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳ ಬಗ್ಗೆ ಮಾತುಕತೆ ನಡೆಸಿದ್ದು ನಿಜ. ಅಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಾಗಲಿ, ಇಲ್ಲವೇ ಬಿಎಸ್‍ವೈ ಅವರ ನಾಯಕತ್ವವನ್ನು ಬದಲಿಸುವ ಬಗ್ಗೆ ಯಾವ ಮಾತುಕತೆ ನಡೆಸಿಲ್ಲ ಎಂದು ಪುನರುಚ್ಚರಿಸಿದರು.

ಹೈಕಮಾಂಡ್ ಈಗಲೂ ಯಡಿಯೂರಪ್ಪ ಅವರನ್ನೇ ಮುಂದಿನ ಮೂರು ವರ್ಷಗಳ ಅವಗೆ ಅವರೇ ಮುಂದುವರೆಯಲಿ ಎಂದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.

ನನಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಮ್ಮ ನಾಯಕರು. ಯಡಿಯೂರಪ್ಪ ಅವರು ನಮಗೆ ಮುಖ್ಯಮಂತ್ರಿಯಷ್ಟೇ ಎಂದು ಸೂಚ್ಯವಾಗಿ ಹೇಳಿದರು.

ನನಗೆ ಸಚಿವ ಸ್ಥಾನ ಕೊಟ್ಟರೂ ವಹಿಸಿಕೊಳ್ಳಲು ಸಿದ್ದನಿಲ್ಲ. ಯಡಿಯೂರಪ್ಪ ಸರ್ಕಾರ ಇರುವವರೆಗೂ ಈ ಸರ್ಕಾರದಲ್ಲಿ ನಾನು ಮಂತ್ರಿಯಾಗಬಾರದು ಎಂದು ತೀರ್ಮಾನಿಸಿದ್ದೇನೆ. ನನಗೆ ಯಾವುದೇ ಪದವಿಯ ಆಸೆ ಇಲ್ಲ. ಈಗಾಗಲೇ ಒಂದು ಬಾರಿ ಕೇಂದ್ರದಲ್ಲಿ ಸಚಿವನಾಗಿದ್ದೇನೆ ಎಂದರು.

ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಏನು ಸೂಚಿಸುತ್ತದೆಯೋ ಅದನ್ನು ಪಾಲನೆ ಮಾಡುವುದಷ್ಟೇ ನಮ್ಮ ಕರ್ತವ್ಯ. ಯಡಿಯೂರಪ್ಪ ಮುಂದುವರೆಯಲಿ ಎಂದರೂ ತೊಂದರೆ ಇಲ್ಲ. ನಾಯಕತ್ವ ಬದಲಾವಣೆ ಮಾಡುತ್ತೇನೆ ಎಂದರೂ ನಮ್ಮದೇನು ತಕರಾರು ಇಲ್ಲ. ವರಿಷ್ಠರ ತೀರ್ಮಾನಕ್ಕೆ ತಲೆ ಬಾಗುವುದಾಗಿ ತಿಳಿಸಿದರು.

ನಾವು ಸಭೆ ನಡೆಸಿದ ತಕ್ಷಣ ಇದನ್ನು ಬ್ಲಾಕ್‍ಮೇಲ್ ಎಂದು ಭಾವಿಸಬಾರದು. ನಾನು ಎಂದಿಗೂ ಅಕಾರಕ್ಕಾಗಿ ಯಾರ ಮನೆಯನ್ನೂ ಎಡತಾಕಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಗತ್ಯ ವಿದ್ದಾಗ ಮಾತ್ರ ಭೇಟಿ ಮಾಡಿ ಮಾನಾಡಿಸಿದ್ದೇನೆ.

ಉಳಿದಂತೆ ಮಂತ್ರಿ ಸ್ಥಾನಕ್ಕಾಗಿ ಅಂಗಲಾಚುವ ರಾಜಕಾರಣಿ ನಾನಲ್ಲ ಎಂದು ಹೇಳಿದರು.ಮಾಜಿ ಸಚಿವ ಉಮೇಶ್‍ಕತ್ತಿ ತಮ್ಮ ಸಹೋದರನನ್ನು ರಾಜ್ಯಸಭೆಗೆ ಕಳುಹಿಸುವಂತೆ ಯಾರ ಮೇಲೂ ಒತ್ತಡ ಹಾಕಿಲ್ಲ. ವರಿಷ್ಠರು ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನಿಸುತ್ತಾರೆ.

ಉಳಿದಂತೆ ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದರೂ ಶೀಘ್ರದಲ್ಲಿ ಪರಿಹಾರವಾಗುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾನು ಸಣ್ಣಪುಟ್ಟ ಶಾಸಕನಲ್ಲ. ಯಾರ ಎದುರು ಕೈ ಕಟ್ಟಿ ಕೂರುವ ಜಾಯಮಾನದವನಲ್ಲ.

ಇರುವುದನ್ನು ನೇರವಾಗಿ ಹೇಳುವ ಸ್ವಭಾವದವನು. ನನ್ನ ಅರ್ಹತೆ ಇದ್ದರೆ ಮಂತ್ರಿ ಸ್ಥಾನ ಸಿಗುತ್ತದೆ. ಕೈ-ಕಾಲು ಹಿಡಿದು ಮಂತ್ರಿ ಸ್ಥಾನ ಪಡೆಯಬೇಕೇ ಎಂದು ಯತ್ನಾಳ್ ಪ್ರಶ್ನಿಸಿದರು.


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ