ಬೆಂಗಳೂರು: ಇಂದು 14 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.
ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಮಂಡ್ಯ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1, ಹಾವೇರಿ 1, ಆಂಧ್ರದ ಮೂಲದ ವ್ಯಕ್ತಿಯಿಂದ ಆತನ ಪತ್ನಿಗೆ, ಬೆಂಗಳೂರಿನಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.
ಸೋಂಕಿತರ ವಿವರ:
ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್
1. ರೋಗಿ-849: ಕಲಬುರಗಿಯ 38 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ-850: ದಾವಣಗೆರೆಯ 33 ವರ್ಷದ ಪುರುಷ. ರೋಗಿ 662ರ ಸಂಪರ್ಕ
3. ರೋಗಿ-851: ದಾವಣಗೆರೆಯ 30 ವರ್ಷದ ಮಹಿಳೆ. ರೋಗಿ 663ರ ಸಂಪರ್ಕ
4. ರೋಗಿ-852: ದಾವಣಗೆರೆಯ 56 ವರ್ಷದ ಮಹಿಳೆ. ರೋಗಿ 667ರ ದ್ವಿತೀಯ ಸಂಪರ್ಕ
5. ರೋಗಿ-853: ಹಾವೇರಿಯ ಶಿಗ್ಗಾವಿಯ 26 ವರ್ಷದ ಯುವಕ. ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
6. ರೋಗಿ-854: ಬಾಗಲಕೋಟೆಯ ಬನಹಟ್ಟಿಯ 20 ವರ್ಷದ ಯುವಕ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
7. ರೋಗಿ-855: ಬಾಗಲಕೋಟೆಯ ಬದಾಮಿಯ 28 ವರ್ಷದ ಪುರುಷ. ರೋಗಿ 688ರ ಸಂಪರ್ಕ
8. ರೋಗಿ-856: ವಿಜಯಪುರದ 20 ವರ್ಷದ ಮಹಿಳೆ. ರೋಗಿ 511ರ ಸಂಪರ್ಕ
9. ರೋಗಿ-857: ಬೀದರ್‍ನ 50 ವರ್ಷದ ಪುರುಷ. ರೋಗಿ 644ರ ಸಂಪರ್ಕ
10. ರೋಗಿ-858: ಬೀದರ್‍ನ 27 ವರ್ಷದ ಯುವಕ. ರೋಗಿ 644ರ ಸಂಪರ್ಕ
ಸಂಜೆ ಬಿಡುಗಡೆಯಾದ ಬುಲೆಟಿನ್
11. ರೋಗಿ-859: ಆಂಧ್ರಪ್ರದೇಶದ ಅನಂತಪುರದ ಮೂಲದ ವ್ಯಕ್ತಿಯ ಪತ್ನಿಗೆ ಸೋಂಕು. ರೋಗಿ 796ರ ಸಂಪರ್ಕ
12. ರೋಗಿ-860: ಬೆಂಗಳೂರಿನ 26 ವರ್ಷದ ಯುವಕ. ರೋಗಿ 796ರ ಸಂಪರ್ಕ
13. ರೋಗಿ-861: ಹಾಸನದ 30 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನೆಲೆ
14. ರೋಗಿ-862: ಮಂಡ್ಯದ 38 ವರ್ಷದ ಪುರುಷ. ಮುಂಬೈ ಪ್ರವಾಸದ ಹಿನ್ನೆಲೆ
ಹಾಸನ ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಸೋಂಕಿತ ಮಹಿಳೆ (ರೋಗಿ 861)ಮುಂಬೈ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದು, ನಿಗಧಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೇಖರ್ ಆಸ್ಪತ್ರೆಯ ವಾರ್ಡ್ ಬಾಯ್ (ರೋಗಿ 860) ಗೆ ಕೊರೊನಾ ಸೋಂಕು ತಗುಲಿದೆ. ಈತ ರೋಗಿ 790ರ ಸಂಪರ್ಕದಲ್ಲಿದ್ದನು,