ಹಾಸನ: ಜಿಲ್ಲೆ ಗ್ರೀನ್‍ಝೋನ್‍ಗೆ ಸೇರಿದರೂ ಕೂಡ ವಾರದಲ್ಲಿ ಮೂರು ದಿನ ಮಾತ್ರ ಮದ್ಯ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಎಂದಿನಂತೆ ಲಾಕ್‍ಡೌನ್ ಮೇ 17ರವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾತನಾಡಿರುವ ಜಿಲ್ಲಾಧಿಕಾರಿ ಆರ್.ಗಿರೀಶ್, ಮಂಗಳವಾರ, ಗುರುವಾರ, ಶನಿವಾರ ಮಾತ್ರ ಹಾಸನದಲ್ಲಿ ಮದ್ಯ, ದಿನಸಿ ವಸ್ತು ಸೇರಿದಂತೆ ಇತರೆ ವಸ್ತು ಕೊಳ್ಳಲು ಅಂಗಡಿಗಳನ್ನು ತೆರೆಯಬಹುದು. ಉಳಿದ ದಿನಗಳು ಎಂದಿನಂತೆ ಲಾಕ್‍ಡೌನ್ ಮುಂದುವರಿಯಲಿದೆ. ಮೇ …
Read More »ನಾಳೆ ಬಾರ್ ಓಪನ್ – ಇಂದೇ ಮದ್ಯದಂಗಡಿಗೆ ಆರತಿ ಎತ್ತಿ, ಕಾಯಿ ಒಡೆದ ಮದ್ಯಪ್ರಿಯಾ……….
ಚಿಕ್ಕಮಗಳೂರು/ಚಿತ್ರದುರ್ಗ/ಕೋಲಾರ: ಮೇ 4ರಿಂದ ರಾಜ್ಯದ ಹಲವು ಭಾಗದಲ್ಲಿ ಲಾಕ್‍ಡೌನ್ ಸಡಿಲಿಕೆಗೊಳಿಸಿ ಮದ್ಯ ಮಾರಾಟಕ್ಕೆ ಷರತ್ತು ವಿಧಿಸಿ ಅವಕಾಶ ನೀಡಲಾಗಿದೆ. ಇಷ್ಟು ದಿನ ಎಣ್ಣೆ ಇಲ್ಲದೇ ನಿರಾಶೆಗೆ ಒಳಗಾಗಿದ್ದ ಮದ್ಯಪ್ರಿಯರು ನಾಳೆ ಮದ್ಯದಂಗಡಿ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದಾರೆ. ಈ ನಡುವೆ ಕೋಲಾರದಲ್ಲಿ ಮದ್ಯಪ್ರಿಯನೋರ್ವ ಅಂಗಡಿಗೆ ಬಾಗಿಲು ತೆರೆಯುವ ಮುನ್ನವೇ ಆರತಿ ಎತ್ತಿ ಪೂಜೆ ಮಾಡಿ, ಕಾಯಿ ಒಡೆದು ಖುಷಿಪಟ್ಟಿದ್ದಾನೆ. ಸೋಮವಾರ ಬಾರ್ ಓಪನ್ ಆಗುವ ಹಿನ್ನೆಲೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ …
Read More »ವಿಷಯ: ರೈತರಿಗೆ ಸ್ಪಂದಿಸುತ್ತಿರುವ ತೊಟಗಾರಿಕೆ ಅಧಿಕಾರಿ
ಕೊಣ್ಣೂರ :ಮಾಹಾಮಾರಿ ಕೊರಾನಾ ಇಡಿ ವೀಶ್ವವನ್ನೆ ಆತಂಕದಲ್ಲಿ ಕೆಡವಿ ಲೆಕ್ಕಕ್ಕೆ ಬಾರದಷ್ಟು ಸಾವುನ್ನು ಪಡೆದುಕೊಳ್ಳತ್ತಾ ಇದೆ ಅದರಲ್ಲೂ ದೇಶದ ಬೆನ್ನೆಲುಬು ಅನಿಸಿಕೊಂಡಿರುವ ರೈತನ ಪಾಡಂತು ಹೇಳೊಕೆ ಆಗೊಲ್ಲಾ ಹೌದು ಕೊರಾನಾ ಇವತ್ತು ಯಾರನ್ನು ಬಿಟ್ಟಿಲ್ಲ, ಅಂತದರಲ್ಲಿ ಮಳೆ,ಬಿಸಿಲು ಅನ್ನದೆ ಬೇರೆಯವರ ಹತ್ತಿರ ಸಾಲ ಮಾಡಿ ಹೊಲದಲ್ಲಿ ಬೆಳೆದ ಬೆಳೆಗೆ ಸರಿಯಾಗಿ ನಿಗದಿತ ಬೆಲೆ ಸಿಗದ ಪರಿಸ್ಥಿತಿ ಒಂದು ಕಡೆಯಾದರೆ ಕೊರಾನಾ ಲಾಕಡೌನ್ ನಿಂದ ಸಾರಿಗೆ, ಹೋಟೆಲ್ ,ದಾಭಾ,ಮದುವೆಗಳು ಬಂದು …
Read More »ಕಾರ್ಮಿಕರ ಉಚಿತ ಪ್ರಯಾಣಕ್ಕೆ ಕೆಪಿಸಿಸಿ ವತಿಯಿಂದ 1 ಕೋಟಿ ನೆರವು
ಬೆಂಗಳೂರು,ಮೇ 3- ವಲಸೆ ಕಾರ್ಮಿಕರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿ ವತಿಯಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಒಂದು ಕೋಟಿ ರೂ. ಚೆಕ್ ನೀಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಸದೆ ಇರುವುದರಿಂದ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲಾಗದೆ ಪರದಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಅನೇಕ ಮಂದಿ ಊಟ, ತಿಂಡಿ ವ್ಯವಸ್ಥೆ ಬಸ್ ಇಲ್ಲದೆ ಬಸ್ ನಿಲ್ದಾಣದಲ್ಲಿ ಅನಾಥರಾಗಿ …
Read More »ಕಲಬುರಗಿಯಲ್ಲಿ ಒಬ್ಬಂಟಿಯಾದ ಡಿಸಿಎಂ ಗೋವಿಂದ ಕಾರಜೋಳ
ಕಲಬುರಗಿ: ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಒಬ್ಬಂಟಿಯಾದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಜಿಲ್ಲಾ ಉಸ್ತುವಾರಿಯಾದ್ರೂ ಕಲಬುರಗಿಗೆ ಕಾರಜೋಳ ಅವರು ಬಂದಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಮಜರ್ ಖಾನ್ ತರಾಟೆಗೆ ತೆಗೆದುಕೊಂಡರು ಬಿಜೆಪಿಯ ಯಾವ ನಾಯಕರು ಕಾರಜೋಳ ಅವರ ಪರ ಮಾತನಾಡದೇ ಮೌನವಾಗಿದ್ದರು. ಕೊನೆಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಗರದಲ್ಲಿನ ಕಂಟೈನ್‍ಮೆಂಟ್ ಝೋನ್‍ಗಳ ಪರಿಸ್ಥಿತಿ ಹಾಗೂ ಅಲ್ಲಿನ ಸ್ಥಳೀಯರಿಗೆ ಇನ್ನು ಒದಗಿಸಬೇಕಾದ ಸೌಕರ್ಯಗಳ ಮಾಹಿತಿ …
Read More »ಫುಡ್ ಬಾಕ್ಸ್‌ನಲ್ಲಿ ಗಾಂಜಾ ಸಾಗಿಸಿ ಪೊಲೀಸರನ್ನೇ ಯಾಮಾರಿಸಿದ ಡೆಲಿವರಿ ಬಾಯ್……
ಚೆನ್ನೈ: ಕೊರೊನಾ ವೈರಸ್ ಭೀತಿಗೆ ಆನ್‍ಲೈನ್‍ನಲ್ಲಿ ಹೆಚ್ಚು ಮಂದಿ ಫುಡ್ ಆರ್ಡರ್ ಮಾಡುವುದನ್ನ ನಿಲ್ಲಿಸಿದ್ದಾರೆ. ಹೀಗಾಗಿ ಕೆಲಸ ಕಡಿಮೆ ಆಯ್ತು ಎಂದು ಡೆಲಿವರಿ ಬಾಯ್‍ಯೋರ್ವ ಫುಡ್ ಬಾಕ್ಸ್‌ನಲ್ಲಿ ಗಾಂಜಾ ಸಾಗಾಟ ಮಾಡಿ, ಗ್ರಾಹಕರ ಮನೆಗೆ ಡೆಲಿವರಿ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ. ತಮಿಳುನಾಡಿನ ಪೆರುಂಗುಡಿಯ ನಿವಾಸಿ ಗುಣಶೇಖರನ್(25) ಗಾಂಜಾ ಡೆಲಿವರಿ ಮಾಡಿದ ಆರೋಪಿ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ …
Read More »ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ: ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ….
ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ: ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಬೆಳಗಾವಿ, ಮೇ 3(ಕರ್ನಾಟಕ ವಾರ್ತೆ): ಕೋವಿಡ್-೧೯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ(ಆರೇಂಜ್ ಝೋನ್)ದಲ್ಲಿ ಗುರುತಿಸಲ್ಪಟ್ಟಿರುತ್ತದೆ. ಆದ್ದರಿಂದ ಈ ವಲಯಕ್ಕೆ ಅನ್ವಯವಾಗುವ ಮಾರ್ಗಸೂಚಿ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಮೇ 4 ರಿಂದ ಎರಡು ವಾರಗಳ ಕಾಲ ಲಾಕ್ ಡೌನ್ ಅನ್ನು ಜಾರಿಗೊಳಿಸಲಾಗುತ್ತದೆ. ಕಿತ್ತಳೆ ವಲಯದಲ್ಲಿ ಅನುಸರಿಸಬೇಕಾದ …
Read More »ಕೊರೊನಾ ವಿರುದ್ಧದ ಹೋರಾಟಗಾರರಿಗೆ ದೇಶ ಕಾಯುವ ಸೈನಿಕರಿಂದ ಗೌರವ ಸಮರ್ಪಣೆ
ಕೊರೊನಾ ವಿರುದ್ಧದ ಹೋರಾಟಗಾರರಿಗೆ ದೇಶ ಕಾಯುವ ಸೈನಿಕರಿಂದ ಗೌರವ ಸಮರ್ಪಣೆ ಇಡೀ ಪ್ರಪಂಚಕ್ಕೆ ಮಹಾಮಾರಿಯಾಗಿ ಒಕ್ಕರಿಸಿ ಮಾನವಕುಲಕ್ಕೆ ಕಂಠಕ ತಂದಿರುವ ಕೋವಿಡ್ -19ರ ವಿರುದ್ಧ ವೈದ್ಯಲೋಕ ಸೇರಿದಂತೆ ಪೊಲೀಸ್ ವ್ಯವಸ್ಥೆ, ಸಾಮಾಜಿಕ ಕಾರ್ಯಕರ್ತರು, ಸರಕಾರ, ಅಧಿಕಾರಿಗಳು ಸಮರ ಸಾರಿದ್ದಾರೆ. ಕೊರಾನು ವೈರಾಣು ವಿರುದ್ಧ ಎದುರಿಗೆ ನಿಂತು ಹೋರಾಟ ನಡೆಸುವ ವೈದ್ಯಲೋಕದ ಸಾಹಸ ಅದ್ಭತವಾದದ್ದು. ಅಂಥ ವೈದ್ಯಲೋಕದ ಅನುಪಮ ಸೇವೆಯನ್ನು ಸ್ಮರಿಸಿ ಗೌರವಿಸುವ ಮಹತ್ ಕಾರ್ಯವನ್ನು ವೈರಿಗಳನ್ನು ಸದೆಬಡೆದು ದೇಶಕಾಯುವ ಸೈನಿಕ …
Read More »ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?
ಶಿವಮೊಗ್ಗ: ನಾಳೆಯಿಂದ ಕಂಟೈನ್‍ಮೆಂಟ್ ಜೋನ್‍ಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಮದ್ಯದಂಗಡಿಗಳು ತೆರೆಯಲಿವೆ. ಆದರೆ ಮದ್ಯ ಖರೀದಿಗೆ ಸರ್ಕಾರ ಕೆಲ ಷರತ್ತುಗಳು ಮತ್ತು ಮಿತಿಯನ್ನು ಹೇರಿದೆ. ಕೊರೊನಾ ಲಾಕ್‍ಡೌನ್ ನಿಂದ ಹಲವಾರು ದಿನಗಳಿಂದ ಮುಚ್ಚಿದ್ದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರವೂ ಕೆಲ ನಿಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಜೊತೆಗೆ ಒಂದು ದಿನಕ್ಕೆ ಒಬ್ಬರಿಗೆ ಇಂತಿಷ್ಟೇ ಮದ್ಯ ನೀಡಬೇಕು ಎಂದು ನಿಗದಿ ಮಾಡಿದೆ. ಪ್ರತಿಯೊಬ್ಬ …
Read More »ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಇನ್ನಿಲ್ಲ……
ಬೆಂಗಳೂರು: ಕನ್ನಡ ಹಿರಿಯ ಸಾಹಿತಿ ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಗಳಿಸಿದ್ದ ಕೆ.ಎಸ್ ನಿಸಾರ್ ಅಹಮದ್(84) ಇಂದು ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಿಸಾರ್ ಅಹಮದ್ ಈ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಿಸಾರ್ ಅಹಮದ್‍ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ. 10ನೇ ವಯಸ್ಸಿನಲ್ಲೇ …
Read More »
Laxmi News 24×7