Breaking News

Laxminews 24x7

ಜಿಎಸ್‌ಟಿ ವಂಚನೆ: ಉದ್ಯಮಿಗಳಿಗೂ ಕಂಟಕ

ಬೆಳಗಾವಿ: ಬೆಳಗಾವಿ ಕೇಂದ್ರಿತವಾಗಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಪ್ರಕರಣದಲ್ಲಿ ರಾಜ್ಯದ ದೊಡ್ಡ ಉದ್ಯಮಿಗಳು, ಪ್ರಭಾವಿಗಳು ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರಕರಣದ ಆರೋಪಿ ಒಬ್ಬನೇ ಇದ್ದರೂ ಆತ ಹಲವು ಪ್ರಭಾವಿಗಳ ಹೆಸರು, ಜಿಎಸ್‌ಟಿ ಸಂಖ್ಯೆಗಳನ್ನು ಅಕ್ರಮಕ್ಕೆ ಬಳಸಿದ್ದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ನಕೀಬ್ ನಜೀಬ್ ಮುಲ್ಲಾ (24) ಎಂಬ ಆರೋಪಿಯನ್ನು ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ₹132 ಕೋಟಿಯ ನಕಲಿ ವ್ಯವಹಾರದ …

Read More »

ಮೊದಲ ದಿನವೇ ನೆಲಕಚ್ಚಿದ ‘ಇಂಡಿಯನ್ 2’ ಚಿತ್ರ

ಕಮಲ್ ಹಾಸನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಾಡಿದ ಪಾತ್ರ ಗಮನ ಸೆಳೆದಿತ್ತು. ಈ ಬೆನ್ನಲ್ಲೇ ಅವರ ನಟನೆಯ ‘ಇಂಡಿಯನ್ 2’ ಸಿನಿಮಾ ರಿಲೀಸ್ ಆಗಿದೆ. ಆದರೆ, ಈ ಚಿತ್ರ ಹೀನಾಯ ಸೋಲು ಕಾಣುವ ಸೂಚನೆ ಸಿಕ್ಕಿದೆ.1996ರಲ್ಲಿ ರಿಲೀಸ್ ಆದ ‘ಇಂಡಿಯನ್’ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರಕ್ಕೆ 28 ವರ್ಷಗಳ ಬಳಿಕ ಸೀಕ್ವೆಲ್ ರಿಲೀಸ್ ಆಗಿದೆ. ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಎಂದಾಗ ಸಹಜವಾಗಿಯೇ ನಿರೀಕ್ಷೆ …

Read More »

ಕಮ್ಮಿ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್! BSNL ನಿಂದ ಭರ್ಜರಿ ಆಫರ್ ಬಿಡುಗಡೆ‌ -ʼʼJio, Airtelʼʼನಿಂದ BSNLಗೆ ಸಿಮ್ ಪೋರ್ಟ್!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ JioBoycott ಅಭಿಯಾನ ಆರಂಭವಾಗಿದ್ದು, BSNLkigharwapsi (ಬಿಎಸ್‌ಎನ್‌ಎಲ್‌ ಘರ್ ವಾಪಸಿ) ಅಂತ ಬರೆದುಕೊಂಡಿದ್ದಾರೆ. ಯಾವಾಗ ಅಭಿಯಾನ ಆರಂಭವಾಯ್ತೋ ಎಚ್ಚೆತ್ತುಕೊಂಡ ಬಿಎಸ್‌ಎನ್‌ಎಲ್‌ ಟ್ವೀಟ್ ಮಾಡಿ ತನ್ನ ಹೊಸ ಆಫರ್ ಘೋಷಿಸಿದೆ. ಇದರ ಜೊತೆಗೆ ಅಮರನಾಥ ಯಾತ್ರಿಕರಿಗೆ ವಿಶೇಷವಾಗಿ 196 ರೂಗಳಿಗೆ ಹೊಸ ಸಿಮ್ ನೀಡುವ ಘೋಷಣೆ ಮಾಡಿದೆ. ಹೌದು ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು …

Read More »

ವರ್ಗಾವಣೆ ನಿಯಮ ಬದಲು ಸರ್ಕಾರದ ವಿರುದ್ಧ ಖಾಕಿ ಕೆಂಡ!

ಬೆಂಗಳೂರು ;ಪೊಲೀಸ್ ಕಾನ್​ಸ್ಟೆಬಲ್​ಗಳ ಅಂತರ ಜಿಲ್ಲಾ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ವರ್ಗಾವಣೆ ಬಯಸುವವರಿಗೆ ಈಗಿರುವ 7 ವರ್ಷ ಸೇವಾವಧಿ ಪೂರ್ಣಗೊಳಿಸಬೇಕೆಂಬ ನಿಯಮವನ್ನು 10 ವರ್ಷ ಅವಧಿಗೆ ಹೆಚ್ಚಳ ಮಾಡುವ ಸಿದ್ಧತೆ ನಡೆಸಿರುವ ಮಾಹಿತಿ ಹಿನ್ನೆಲೆಯಲ್ಲಿ ನಾಲ್ಕು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪೊಲೀಸ್ ಕಾನ್​ಸ್ಟೆಬಲ್​ಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬ ಸಮೇತ ಪ್ರತಿಭಟನೆಗಿಳಿಯುವ ಎಚ್ಚರಿಕೆ ಕೊಟ್ಟಿದ್ದಾರೆ. ಮೊದಲಿಗೆ ಎರಡೂವರೆ ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಿದರೆ ಕಾನ್​ಸ್ಟೆಬಲ್​ಗಳನ್ನು …

Read More »

ಧಾರಾಕಾರ ಮಳೆ-148 ಅಡಿ ಎತ್ತರದ ಮಂದಿರ ಮುಳುಗಡೆ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿ ಮೂಲಕ ಹಿಡಕಲ್‌ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಿಡಕಲ್‌ ಜಲಾಶಯದಲ್ಲಿರುವ 148 ಅಡಿ ಎತ್ತರದ ಶ್ರೀ ವಿಠಲ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ. ಸಾವಂತವಾಡಿ, ಅಂಬೋಲಿ ಅರಣ್ಯ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿ ಮೂಲಕ ಹಿಡಕಲ್‌ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿರುವ ಶ್ರೀ ವಿಠಲ ಮಂದಿರ ಸಂಪೂರ್ಣ ಜಲಾವೃತಗೊಂಡಿದ್ದು, ಕಳೆದ 15 …

Read More »

ಒಂದನೇ ತರಗತಿಗೆ ಪ್ರವೇಶ: ಗರಿಷ್ಠ ವಯೋಮಿತಿ 8 ವರ್ಷಕ್ಕೆ ಏರಿಕೆ

ಬೆಂಗಳೂರು: ಒಂದನೇ ತರಗತಿ ಪ್ರವೇಶಕ್ಕೆ ಇದ್ದ ಮಕ್ಕಳ ಗರಿಷ್ಠ ವಯೋಮಿತಿಯನ್ನು ಎಂಟು ವರ್ಷಕ್ಕೆ ಹೆಚ್ಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. 2025 -26 ನೇ ಸಾಲಿನಿಂದ ಈ ನಿಯಮ ಅನ್ವಯವಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಕನಿಷ್ಠ ವಯೋಮಿತಿಯನ್ನು ಆರು ವರ್ಷಗಳಿಗೆ ಕಡ್ಡಾಯಗೊಳಿಸಿದ ಕಾರಣ ಗರಿಷ್ಠ ವಯೋಮಿತಿಯಲ್ಲಿಯೂ ಹೆಚ್ಚಳ ಮಾಡಲಾಗಿದೆ. ಎಲ್ಕೆಜಿ ಪ್ರವೇಶಕ್ಕೆ 4 ವರ್ಷ, ಯುಕೆಜಿಗೆ 5 ವರ್ಷ ಕನಿಷ್ಠ …

Read More »

ಇಂಡಿಯಾ’ ಒಕ್ಕೂಟಕ್ಕೆ ಕಾಂಗ್ರೆಸ್‌ ಶಾಸಕರಿಂದಲೇ ಮೋಸ! MLC ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

ಮುಂಬೈ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ , ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ (NDA Alliance) ಮಹಾರಾಷ್ಟ್ರದಲ್ಲಿ ಭಾರಿ ಹಿನ್ನಡೆ ಉಂಟಾಗಿತ್ತು. ಅದೇ ಸಮಯದಲ್ಲಿ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಭರ್ಜರಿ ಸಾಧನೆ ಮಾಡಿತ್ತು. ಆದರೆ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಆಟ ಫುಲ್ ತಲೆಕೆಳಗಾಗಿದೆ. ಹೌದು.. ಮಹಾರಾಷ್ಟ್ರದಲ್ಲಿ ನಿನ್ನೆ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ …

Read More »

ಜು. 18ರವರೆಗೆ ಇಡಿ ಕಸ್ಟಡಿಗೆ ಕಾಂಗ್ರೆಸ್ ಶಾಸಕ ನಾಗೇಂದ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 18ರವರೆಗೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಇಡಿ ಕಸ್ಟಡಿಗೆ ವಹಿಸಲಾಗಿದೆ. ನ್ಯಾ. ಸಂತೋಷ್ ಗಜಾನನ ಭಟ್ ಅವರು ಆದೇಶ ನೀಡಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಬಿ. ನಾಗೇಂದ್ರ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿನ್ನೆ ರಾತ್ರಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು. ಇಂದು ಬೆಳಿಗ್ಗೆ ಅವರನ್ನು ಬೆಂಗಳೂರಿನ …

Read More »

ಭ್ರಷ್ಟಾಚಾರ ಆರೋಪ ಮಾಜಿ ಸಚಿವ ಬಿ. ನಾಗೇಂದ್ರ ಇಡಿ ವಶಕ್ಕೆ

ಬೆಂಗಳೂರು : ವಾಲ್ಮೀಕಿ ‌ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಆರೋಪದಲ್ಲಿ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಚಿವ ಬಿ. ನಾಗೇಂದ್ರಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಳ್ಳಂ ಬೆಳಿಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರನನ್ನು ವಶಕ್ಕೆ ಪಡೆದಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ಹಣವನ್ನು ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ ಅನೇಕರು ಕೊಳ್ಳೆ ಹೊಡೆದ ಆರೋಪದಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ನಿನ್ನೆಯಿಂದ ಇಡಿ ಅಧಿಕಾರಿಗಳು ನಾಗೇಂದ್ರ …

Read More »

ಭ್ರೂಣಹತ್ಯೆ ಆರೋಪಿಗೆ ಹೂಮಳೆ ಸ್ವಾಗತ ;

ಬೆಳಗಾವಿ : ಹಣದ ಆಸೆಗಾಗಿ ಭ್ರೂಣಹತ್ಯೆ ಹಾಗೂ ಶಿಶು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದ ಕಿತ್ತೂರಿನ ನಕಲಿ ವೈದ್ಯನೆ ಊರಿನ ಜನ ಹೂ ಮಳೆ ಸ್ವಾಗತ ಕೋರಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಕಲಿ ವೈಧ್ಯಕೀಯ ವೃತ್ತಿ ನಡೆಸುತ್ತಿದ್ದ ಆರೋಪಿ ಅಬ್ದುಲ್ ಲಾಡಖಾನ್ ಎಂಬಾತ ಭ್ರೂಣಹತ್ಯೆ ನಡೆಸುತ್ತಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ತಿಗಡೊಳ್ಳಿ ಗ್ರಾಮದ ತೋಟದ ಮನೆ ಆವರಣದಲ್ಲಿ ಹೂತಿದ್ದ ಮೂರು ಭ್ರೂಣಗಳ …

Read More »