Breaking News

ಆದಿ ರೇಣುಕಾಚಾರ್ಯರ ತತ್ವಗಳಿಗೆ ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ: ಗದ್ದಿಗೌಡರ

Spread the love

ಬಾಗಲಕೋಟೆ: ವೀರಶೈವ ಧರ್ಮದ ಸಂಸ್ಥಾಪಕರಾದ ಆದಿ ಜಗದ್ಗುರು ರೇಣುಕಾಚಾರ್ಯರು, ಇವರ ತತ್ವ, ಬದುಕಿನ ಚರಿತ್ರೆ, ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ತಾಲೂಕ ಜಂಗಮರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ಯ ರವಿವಾರ ಬೀಳೂರ ಅಜ್ಜನ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ರೇಣುಕಾಚಾರ್ಯ ಭಾವಚಿತ್ರ ಮೇರವಣಿಗೆಗೆ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು. ಅವಮಾನಿತ ವರ್ಗಗಳನ್ನು ಪ್ರೀತಿಸಿ, ಅವರಿಗೆ ತತ್ವಶಾಸ್ತ್ರದ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಿ.”ಸಮಾನತೆ” ಎಂಬ ತತ್ವಕ್ಕೆ ಮಹತ್ವ ತಂದು, ಅದರಲ್ಲಿ ಎಲ್ಲಾ ವರ್ಣಗಳೂ ಸಮಾನವೆಂಬ ನಂಬಿಕೆಯನ್ನು ಹರಡಿದರು.ಪರಮಶಿವನ ಆರಾಧನೆಗೆ ಶುದ್ಧ ಮನಸ್ಸಿನಿಂದ ಪೂಜಿಸುವ ತತ್ವವನ್ನು ತಿಳಿಸಿದರು ಎಂದರು.


ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಮಾತನಾಡಿ ಜಗದ್ಗುರು ರೇಣುಕಾಚಾರ್ಯರ ತತ್ವಗಳು ಇಂದು ಸಮಾಜದ ಸಮಾನತೆ, ಧಾರ್ಮಿಕ ಸಾಮರಸ್ಯತೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಆಧುನಿಕ ದಾರಿದೀಪದಂತಿವೆ ಎಂದರು. ಬಿಲ್ಕೆರೂರಿನ ಬಿಲ್ವಾಶ್ರಮದ ಪೂಜ್ಯಶ್ರೀ ಸಿದ್ದಲಿಂಗಮಹಾಸ್ವಾಮಿಗಳ ಮಾತನಾಡಿ ಜಗದ್ಗುರು ರೇಣುಕಾಚಾರ್ಯರು ಸಿದ್ದಾಂತ ಶಿಖಾಮಣಿ ಮೂಲಕ ಸಮಾಜದಲ್ಲಿ ಸಮಾನತೆಯ ತತ್ವವನ್ನು ಸಾರಿದರು, ಅವರ ತತ್ವಜ್ಞಾನವನ್ನು ಆಧ್ಯಾತ್ಮಿಕ ಅನುಭವದೊಂದಿಗೆ ಬೆಸೆದು ಬದುಕು ಕಟ್ಟಿಕೊಳ್ಳಬೇಕು ಎಂದರು.
ಅ.ಭಾ.ವೀ.ಲಿಂ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಪ್ರಭುಸ್ವಾಮಿ ಸರಗಣಾಚಾರಿ, ಗುರುಬಸವ ಸೂಳಿಬಾವಿ, ಮುರಗೇಪ್ಪ ನಾರಾ, ಶರಣಪ್ಪ ಗುಳೆದ, ಕುಮಾರ ಯಳ್ಳಿಗುತ್ತಿ, ಬಾಬಣ್ಣ ನಿಡಗುಂದಿ, ಸಂಗಣ್ಣ ಶಿರೂರ, ರಾಮಣ್ಣ ಜುಮನಾಳ, ಜಂಗಮ ಸಮಾಹದ ಅಧ್ಯಕ್ಷರಾದ ವೀರೇಶ ಚೌಕಿಮಠ, ಬಸವರಾಜ ಹಿರೇಮಠ, ಮುರಗಯ್ಯ ನಿಂಬಲಗುಂದಿ, ಬಸವರಾಜ ಪರ್ವತಿಮಠ, ಚೆನ್ನಯ್ಯ ಹಿರೇಮಠ, ಚೆನ್ನಯ್ಯ ಬಳೂಲಮಠ, ವಿಜಕೂಮಾರ ಅಂಗಡಿ, ಮಹೇಶ ಅಂಗಡಿ, ಯಲ್ಲಪ್ಪ ಬೆಂಡಿಗೇರ, ಮಲ್ಲಿಕಾರ್ಜುನ ಮಠ, ಸಂಗಯ್ಯ ಚೌಕಿಮಠ, ಬಿ.ಆರ್.ಬೋಳಿಶೆಟ್ಟಿ, ಸುರೇಶ ವಸ್ತ್ರದ, ಸಂಗಣ್ಣ ಕಲಾದಗಿ.ಎ.ಎಸ್ ಪಾವಟೆ, ವೀರಭದ್ರಯ್ಯ ಹಿರೇಮಠ, ಎಂ.ಎನ್. ಪುರಾಣಿಕಮಠ, ಪರಶುರಾಮ ದಾವಣಗೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಭವ್ಯ ಮೇರವಣಿಗೆ : ಆದಿ ರೇಣುಕಾಚಾರ್ಯರ ಭಾವಚಿತ್ರ ಮೇರವಣಿಗೆ ನಗರ ಬೀಳೂರ ಅಜ್ಜನ ದೇವಸ್ಥಾನದಿಂದ ಪ್ರಾರಂಭವಾಗಿ ಕಾಲೇಜು ರಸ್ತೆ, ಬಸವೇಶ್ವರ ವೃತ್ತಕ್ಕೆ ಆಗಮಿಸಿ ಅಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪನೆ ಮಾಡಿ ನಂತರ ಎಂ.ಜಿ.ರಸ್ತೆ, ಮೂಲಕ ವಲ್ಲಭಾಯಿ ಚೌಕ, ಅಡತ ಬಜಾರ, ಟೀಕಿನ ಮಠ ಮುಖಾಂತರ ಮರಳಿ ಬೀಳೂರ ಅಜ್ಜನ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.


Spread the love

About Laxminews 24x7

Check Also

ಬಾಗಲಕೋಟ ಘಟನೆ ಖಂಡಿಸಿ ವಿಜಯಪುರದಲ್ಲಿ ಮರಾಠಾ ಸಮಾಜದ ವತಿಯಿಂದ ಖಂಡನಾ ಪ್ರತಿಭಟನೆ; ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

Spread the loveಬಾಗಲಕೋಟೆ ಜಿಲ್ಲೆಯಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯಲ್ಲಿ ಪೋಲಿಸ ಮೇಲೆ ಕಲ್ಲೇಶದ ದುಷ್ಕರ್ಮಿಗಳ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ